Happy Birth Day Prabhas: 40 ವರ್ಷದ ನಟ ಪ್ರಭಾಸ್​ ಹಿಂದೆ ಬಿದ್ದಿದ್ದಾರಂತೆ 6 ಸಾವಿರ ಹುಡುಗಿಯರು..!

Happy Birth Day Prabhas: ವಯಸ್ಸು 40 ಆದರೂ ಇನ್ನೂ ಅವಿವಾಹಿತ ನಟ. ಆದರೂ ಅವಕಾಶಗಳ ಕೊರತೆ ಇಲ್ಲ. ಅವರೇ ಟಾಲಿವುಡ್​ ಡಾರ್ಲಿಂಗ್​ ಪ್ರಭಾಸ್​. ಇಂದು ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನದಂದು ಅವರ ಕುರಿತಾದ ಕೆಲವು ಆಸಕ್ತಿಕರ ವಿಷಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.  

Anitha E | news18-kannada
Updated:October 23, 2019, 2:05 PM IST
Happy Birth Day Prabhas: 40 ವರ್ಷದ ನಟ ಪ್ರಭಾಸ್​ ಹಿಂದೆ ಬಿದ್ದಿದ್ದಾರಂತೆ  6 ಸಾವಿರ ಹುಡುಗಿಯರು..!
ಪ್ರಭಾಸ್​
  • Share this:
ವಿವಾಹವಾದ ನಂತರ ನಟಿಯರಿಗೆ ಅವಕಾಶಗಳು ಕಡಿಮೆಯಾಗುತ್ತವೆ ಅನ್ನೋದು ಗೊತ್ತಿರುವ ಸಂಗತಿ. ಆದರೆ ನಟರ ವಿಷಯದಲ್ಲಿ ಹಾಗಿಲ್ಲ. ವಯಸ್ಸು 50ರ ಗಡಿ ದಾಟಿದರೂ ನಾಯಕರಾಗಿ ಅವರು ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ಶಾರುಖ್​, ಸಲ್ಮಾನ್​. ಅಮೀರ್​ ಹಾಗೂ ಅಕ್ಷಯ್​. ತೆಲುಗಿನಲ್ಲೂ 40-50ರ ಗಡಿ ದಾಟಿದ ಬಾಲಕೃಷ್ಣ, ರಾಜಶೇಖರ್​, ರವಿತೇಜ, ಮಹೇಶ್​ಬಾಬು, ಪ್ರಭಾಸ್​ ಸೇರಿದಂತೆ ಸಾಕಷ್ಟು ಮಂದಿ ಇದ್ದಾರೆ.

ವಯಸ್ಸು 40 ಆದರೂ ಇನ್ನೂ ಅವಿವಾಹಿತ ನಟ. ಆದರೂ ಅವಕಾಶಗಳ ಕೊರತೆ ಇಲ್ಲ. ಅವರೇ ಟಾಲಿವುಡ್​ ಡಾರ್ಲಿಂಗ್​ ಪ್ರಭಾಸ್​. ಇಂದು ತಮ್ಮ 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನದಂದು ಅವರ ಕುರಿತಾದ ಕೆಲವು ಆಸಕ್ತಿಕರ ವಿಷಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

Prabhas
ಪ್ರಭಾಸ್​


ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ಜತೆಗಿನ ನಿಶ್ಚಿತಾರ್ಥ ಮುರಿದಿದ್ದೇ ಒಳ್ಳೆಯದಾಯಿತು: ರಶ್ಮಿಕಾ ಮಂದಣ್ಣ

ಪ್ರಭಾಸ್ 'ಬಾಹುಬಲಿ' ಸಿನಿಮಾಗಾಗಿ ತಮ್ಮ ಅಮೂಲ್ಯವಾದ ಐದು ವರ್ಷಗಳನ್ನು ಮುಡುಪಾಗಿಟ್ಟಿದ್ದರು. ಅದರಲ್ಲೂ ಅವರು ಆಗ ಬೇರೆ ಯಾವುದೇ ಸಿನಿಮಾಗಳನ್ನೂ ಒಪ್ಪಿಕೊಂಡಿರಲಿಲ್ಲ. 10 ಕೋಟಿ ಸಂಭಾವನೆ ಕೊಡಲು ಸಿದ್ಧವಿದ್ದ ಒಂದು ಚಿತ್ರಕ್ಕೂ ನೋ ಎಂದಿದ್ದರಂತೆ.

ಇದನ್ನೂ ಓದಿ: Ranbir-Alia Wedding Card: ಟ್ವಿಟರ್​ನಲ್ಲಿ ಹರಿದಾಡುತ್ತಿದೆ ರಣಬೀರ್​-ಅಲಿಯಾರ ಮದುವೆಯ ಲಗ್ನ ಪತ್ರಿಕೆ ಹೇಗಿದೆ ಗೊತ್ತಾ..?

'ಬಾಹುಬಲಿ 2' ಸಿನಿಮಾ ಮಾಡುವಾಗ ಪ್ರಭಾಸ್​ ಅವರಿಗೆ 6 ಸಾವಿರ ಮಂದಿ ಹುಡುಗಿಯರು ಮದುವೆಯಾಗಲು ಸಿದ್ಧರಿದ್ದರಂತೆ. ಅದರಲ್ಲೂ ಈ 6 ಸಾವಿರ ಮಂದಿಯ ಸಂಬಂಧಗಳು ಪ್ರಭಾಸ್​ ಮನೆಯ ಬಾಗಿಲಿಯೇ ಬಂದಿದ್ದವಂತೆ. ಅಷ್ಟನ್ನೂ ತಿರಸ್ಕರಿಸಿದ ನಟ, ಆಗ ಕೇವಲ ತಮ್ಮ ಸಿನಿಮಾದತ್ತ ಗಮನ ಹರಿಸಿದ್ದರಂತೆ. ಹೀಗಾಗಿ 40ರ ವಸಂತಕ್ಕೆ ಕಾಲಿಟ್ಟರೂ ಪ್ರಭಾಸ್​ ಟಾಲಿವುಡ್​ನ ದ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್​.
ಅನುಷ್ಕಾ ಶೆಟ್ಟಿ ಪ್ರಭಾಸ್​


ಆದರೂ ನಟ ಪ್ರಭಾಸ್​ ಹಾಗೂ ಅವರ ಸಹ ನಟಿ ಅನುಷ್ಕಾ ಅವರ ನಡುವಿನ ಪ್ರೇಮ ಕತೆ ಹಾಗೂ ಡೇಟಿಂಗ್​ ವಿಷಯಗಳು ತುಂಬಾ ಹರಿದಾಡಿದ್ದವು. ಅಲ್ಲದೆ ಈ ಜೋಡಿ ಸದ್ಯದಲ್ಲೇ ವಿವಾಹವಾಗಲಿದ್ದಾರೆ ಅನ್ನೋ ಸುದ್ದಿ ಸಹ ಸದ್ದು ಮಾಡಿತ್ತು. ಆದರೆ ಇದು ಇನ್ನೂ ಸುದ್ದಿಯಾಗಿಯೇ ಉಳಿದಿದೆ. 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಭಾಸ್​ ಯಾವಾಗ ತಮ್ಮ ಮದುವೆ ಸುದ್ದಿ ಕೊಡುತ್ತಾರೆ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 

Shraddha Srinath: ಹೇಗಿದ್ದ ಶ್ರದ್ಧಾ ಶ್ರೀನಾಥ್​ ಹೀಗಾಗಿದ್ದು ಹೇಗೆ ಗೊತ್ತಾ..?

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading