Bollywood: ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆಗಿಳಿದ 6 ದಕ್ಷಿಣ ಭಾರತ ಸಿನಿಮಾ ನಿರ್ದೇಶಕರು

South Indian Directors: ದಕ್ಷಿಣ ಭಾರತದ ಹಲವಾರು ಸಿನಿಮಾ ನಿರ್ದೇಶಕರು 2021ರಲ್ಲಿ ಬಾಲಿವುಡ್‍ನಲ್ಲಿ ಪ್ರಪ್ರಥಮ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ದಾರೆ.

ಪುರಿ ಜಗನ್ನಾಥ್

ಪುರಿ ಜಗನ್ನಾಥ್

  • Share this:

ಹೆಚ್ಚಿನ ಜನಪ್ರಿಯ ಬಾಲಿವುಡ್ ತಾರೆಯರು ಆರಂಭದಲ್ಲಿ ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿಮಾ ಜಗತ್ತನ್ನು ಪ್ರವೇಶಿಸಿದ್ದಾರೆ. ಹಾಗೆಯೇ ಬಹಳಷ್ಟು ಬಾಲಿವುಡ್ ತಾರೆಯರು ದಕ್ಷಿಣ ಭಾರತೀಯ ಚಿತ್ರಗಳಿಗೆ ಜಿಗಿಯುತ್ತಿರುವ ಹೊಸ ಟ್ರೆಂಡ್ ಹುಟ್ಟಿಕೊಳ್ಳುತ್ತಿದೆ. ಪ್ಯಾನ್ –ಇಂಡಿಯನ್ ಸಿನಿಮಾಗಳ ಬೆಳವಣಿಗೆಯಿಂದ , ಹಲವಾರು ತಾರೆಯರು ಮತ್ತು ನಿರ್ದೇಶಕರು ಭಾಷೆ ಹಾಗೂ ಗಡಿ ಮೀರಿ ಪರಸ್ಪರ ಸಹಕಾರ ನೀಡುತ್ತಿದ್ದಾರೆ.ಅದೇ ರೀತಿ ದಕ್ಷಿಣ ಭಾರತದ ಹಲವಾರು ಸಿನಿಮಾ ನಿರ್ದೇಶಕರು 2021ರಲ್ಲಿ ಬಾಲಿವುಡ್‍ನಲ್ಲಿ ಪ್ರಪ್ರಥಮ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ದಾರೆ. ಹಿಂದಿ ಅಥವಾ ಬಹು ಭಾಷಾ ಸಿನಿಮಾಗಳ ಮೂಲಕ ಈ ನಿರ್ದೇಶಕರು , ತಮ್ಮ ವಿಶೇಷ ಪ್ರತಿಭೆಯ ಮೂಲಕ ಬಾಲಿವುಡ್‍ನಲ್ಲಿ ಹೆಸರು ಮಾಡಬಹುದು ಎಂಬ ನಿರೀಕ್ಷೆ ಇದೆ. ಅಂತವರಲ್ಲಿ 6 ಮಂದಿಯ ಮಾಹಿತಿ ಇಲ್ಲಿದೆ.


ವಿಷ್ಣುವರ್ಧನ್
ಆಗಸ್ಟ್ 12ಕ್ಕೆ ವಿಷ್ಣುವರ್ಧನ್ ಚೊಚ್ಚಲ ನಿರ್ದೇಶನದ ಬಾಲಿವುಡ್ ಸಿನಿಮಾ ಶೇರ್‌ಶಾ ಬಿಡುಗಡೆ ಆಗಿದೆ. ಕಾರ್ಗಿಲ್ ಯುದ್ಧದ ಹೀರೋ ಮತ್ತು ಹುತಾತ್ಮ ವಿಕ್ರಮ್ ಬಾತ್ರ ಜೀವನ ಕಥೆ ಆಧಾರಿತ ಈ ಸಿನಿಮಾ ವೀಕ್ಷಕರ ಮನ ಗೆಲ್ಲುವಲ್ಲಿ ಸಫಲವಾಗಿದೆ. ಆರಂಭ್ ಮತ್ತು ಬಿಲ್ಲಾ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಜನಪ್ರಿಯರಾಗಿದ್ದ ಅವರು, ಈಗ ಶೇರ್‌ಶಾ ನಿರ್ದೇಶಿಸಿ ಮತ್ತೆ ಶಹಬ್ಭಾಸ್‍ಗಿರಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರ ಮತ್ತು ಕೈರಾ ಅಡ್ವಾನಿ ಮುಖ್ಯ ಪಾತ್ರದಲ್ಲಿದ್ದು, ಚಿತ್ರ ಅಮೆಜಾನ್ ಪ್ರೈಮ್‍ನಲ್ಲಿ ವೀಕ್ಷಣೆಗೆ ಲಭ್ಯವಿದೆ.


ಪೂರಿ ಜಗನ್ನಾಥ್
ಐಸ್ಮಾರ್ಟ್ ಶಂಕರ್ ಮತ್ತು ಪೋಕಿರಿಯಂತಹ ಸಿನಿಮಾಗಳ ಮೂಲಕ ಮನ್ನಣೆ ಗಳಿಸಿರುವ ಪೂರಿ ಜಗನ್ನಾಥ್ ಬಹುಭಾಷಾ ಸಿನಿಮಾ ಲೈಗರ್ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಮುಖ್ಯ ಪಾತ್ರದಲ್ಲಿ ಇದ್ದಾರೆ. ಈ ಚಿತ್ರವನ್ನು ಧರ್ಮ ಪ್ರೊಡಕ್ಷನ್ ಅಡಿಯಲ್ಲಿ ಕರಣ್ ಜೋಹರ್ ನಿರ್ಮಿಸಿದ್ದಾರೆ.


ಇದನ್ನೂ ಓದಿ: ಇದೇ ಮೊದಲ ಬಾರಿಗೆ ಭಾರತದ ಖ್ಯಾತ ನಟನ ಧ್ವನಿ ಅಮೆಜಾನ್​ ಅಲೆಕ್ಸಾದಲ್ಲಿ! ಅಮಿತಾಭ್​ ಬಚ್ಚನ್​ ವಾಯ್ಸ್​ ಅಳವಡಿಸುವುದು ಹೇಗೆ?

ಗೌತಮ್ ತೆನ್ನನೌರಿ
ನಾನಿ ನಾಯಕನಾಗಿ ನಟಿಸಿದ್ದ ತೆಲುಗು ಸಿನಿಮಾ ಜೆರ್ಸಿ ನಿರ್ದೇಶಕ ಗೌತಮ್ ತಿನ್ನನೌರಿ, ಈಗ ಆ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲು ಹೊರಟಿದ್ದಾರೆ. ಜೆರ್ಸಿಯ ಹಿಂದಿ ಅವತರಣಿಕೆಯಲ್ಲಿ ಶಾಹಿದ್ ಕಪೂರ್ ಮತ್ತು ಮೃನಾಲ್ ಠಾಕೂರ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ತನ್ನ ಮಗನಿಗೆ ಕೊಟ್ಟ ಮಾತಿನ ಪ್ರಕಾರ, ಮಧ್ಯ ವಯಸ್ಕ ಕ್ರಿಕೆಟಿಗನೊಬ್ಬ ಮರಳಿ ಕ್ರೀಡಾಪಟು ಆಗುವ ಕಥೆಯನ್ನು ಈ ಚಿತ್ರ ಹೊಂದಿದೆ.


ಅಟ್ಲಿ
ಜನಪ್ರಿಯ ತಮಿಳು ನಿರ್ದೇಶಕ ಅಟ್ಲಿ, ತಮಿಳು ನಾಯಕ ನಟ ವಿಜಯ್ ಜೊತೆಗಿನ ಸಹಯೋಗದಲ್ಲಿ ನಿರ್ಮಿಸಿರುವ ಬಿಗಿಲ್, ಮರ್ಸಲ್ ಮತ್ತು ತೇರಿ ಚಿತ್ರಗಳಿಗೆ ಹೆಸರುವಾಸಿ. ಅವರ ಚೊಚ್ಚಲ ಬಾಲಿವುಡ್ ಚಿತ್ರದಲ್ಲಿ ನಟಿಸಲಿರುವುದು ಬಾಲಿವುಡ್ ಬಾದ್‍ಶಾಹ್ ಶಾರುಖ್ ಖಾನ್. ಈ ಸಿನಿಮಾದಲ್ಲಿ ನಯನ ತಾರ ಮತ್ತು ಸಾನ್ಯ ಮಲ್ಹೋತ್ರ ಕೂಡ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.


ನಾಗ್ ಅಶ್ವಿನ್
2018ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ಮಹಂತಿಯನ್ನು ನಿರ್ದೇಶಿಸಿರುವ ಸದ್ಯದಲ್ಲೇ ಬಾಲಿವುಡ್‍ಗೆ ಕಾಲಿಡಲಿದ್ದು, ಅವರು ನಿರ್ದೇಶಿಸಲಿರುವ ಪ್ರಾಜೆಕ್ಟ್‌ ಕೆ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಅಮಿತಾಭ್‌ ಬಚ್ಚನ್ ನಟಿಸಲಿದ್ದಾರೆ.
ಶಂಕರ್
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ನಿರ್ದೇಶಕ ಶಂಕರ್, ಬಾಲಿವುಡ್‍ನಲ್ಲಿ ತಮ್ಮ ಅನ್ನಿಯನ್ ಚಿತ್ರವನ್ನು ರೀಮೇಕ್ ಮಾಡಲಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ರಣ್‍ವೀರ್ ಸಿಂಗ್ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರ ನಿರ್ಮಾಣವನ್ನು ಘೋಷಿಸಲಾಗಿದ್ದು, ತಮಿಳಿನಲ್ಲಿ ವಿಕ್ರಮ್ ನಟಿಸಿದ್ದ ಅನ್ನಿಯನ್ ಸೂಪರ್ ಹಿಟ್ ಆಗಿತ್ತು.


Published by:Sandhya M
First published: