• Home
 • »
 • News
 • »
 • entertainment
 • »
 • Vijay Deverakonda: 2022ರಲ್ಲಿ ಹೈಲೈಟ್ ಆದ ವಿಜಯ್ ದೇವರಕೊಂಡ ಅವರ 5 ವೈರಲ್ ಕ್ಷಣಗಳಿವು

Vijay Deverakonda: 2022ರಲ್ಲಿ ಹೈಲೈಟ್ ಆದ ವಿಜಯ್ ದೇವರಕೊಂಡ ಅವರ 5 ವೈರಲ್ ಕ್ಷಣಗಳಿವು

ನಟ ವಿಜಯ್ ದೇವರಕೊಂಡ

ನಟ ವಿಜಯ್ ದೇವರಕೊಂಡ

ತೆಲುಗು ನಟ ವಿಜಯ್ ದೇವರಕೊಂಡ ಎಂದರೆ ಸಾಕು ಅಭಿಮಾನಿಗಳಿಗೆ ಮೊದಲು ನೆನಪಾಗುವುದು ಅವರ ಅರ್ಜುನ್ ರೆಡ್ಡಿ ಚಿತ್ರದ ಪಾತ್ರ ಅಂತ ಹೇಳಬಹುದು. ಹಲವಾರು ವರ್ಷಗಳಿಂದ ಅಭಿಮಾನಿಗಳಿಗೆ ವಿಜಯ್ ಒಬ್ಬ 'ಒಳ್ಳೆಯ ಹೃದಯದ ಕೆಟ್ಟ ಹುಡುಗ' ಅಂತಾನೆ ಇಮೇಜ್ ಬೆಳೆಸಿಕೊಂಡ ನಟ ಅಂತ ಹೇಳಬಹುದು. ಅವರ ಅಭಿಮಾನಿಗಳು ಸಹ ಅವರ ಆ ಇಮೇಜ್ ನನ್ನೆ ತುಂಬಾ ಇಷ್ಟ ಪಡೋದು ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಮುಂದೆ ಓದಿ ...
 • Share this:

  ತೆಲುಗು ನಟ ವಿಜಯ್ ದೇವರಕೊಂಡ ( Telugu Actor Vijay Devarakonda) ಎಂದರೆ ಸಾಕು ಅಭಿಮಾನಿಗಳಿಗೆ (Fans) ಮೊದಲು ನೆನಪಾಗುವುದು ಅವರ ಅರ್ಜುನ್ ರೆಡ್ಡಿ (Arjun Reddy) ಚಿತ್ರದ ಪಾತ್ರ ಅಂತ ಹೇಳಬಹುದು. ಹಲವಾರು ವರ್ಷಗಳಿಂದ ಅಭಿಮಾನಿಗಳಿಗೆ ವಿಜಯ್ ಒಬ್ಬ 'ಒಳ್ಳೆಯ ಹೃದಯದ ಕೆಟ್ಟ ಹುಡುಗ' ಅಂತಾನೆ ಇಮೇಜ್ (Image) ಬೆಳೆಸಿಕೊಂಡ ನಟ ಅಂತ ಹೇಳಬಹುದು. ಅವರ ಅಭಿಮಾನಿಗಳು ಸಹ ಅವರ ಆ ಇಮೇಜ್ ನನ್ನೆ ತುಂಬಾ ಇಷ್ಟ (Like) ಪಡೋದು ಅಂತ ಹೇಳಿದರೆ ತಪ್ಪಾಗುವುದಿಲ್ಲ.


  2022 ರ ವರ್ಷವು ಈ ನಟನ ಸಿನೆಮಾ ವೃತ್ತಿಜೀವನದಲ್ಲಿ ಒಂದು ರೋಲರ್ ಕೋಸ್ಟರ್ ತರಹ ಇತ್ತು ಅಂತ ಹೇಳಿದರೆ ಸುಳ್ಳಲ್ಲ. ಏಕೆಂದರೆ ಇವರ ಸಿನಿ ಪ್ರಯಾಣ ತುಂಬಾನೇ ಏರಿಳಿತಗಳಿಂದ ತುಂಬಿತ್ತು ಅಂತ ಹೇಳಬಹುದು.


  ಇವರು ಅಭಿನಯಿಸಿದ ಮೊದಲ ಹಿಂದಿ ಚಿತ್ರ 'ಲೈಗರ್' ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೊಂದು ಹಣ ಗಳಿಸದೆ ಇರುವ ಕೆಲವು ಪ್ರೋತ್ಸಾಹದಾಯಕವಲ್ಲದ ಕ್ಷಣಗಳಿಂದ ಹಿಡಿದು ಕಾಶ್ಮೀರದಲ್ಲಿ ಖುಷಿ ಚಿತ್ರದ ಸಹನಟಿ ಸಮಂತಾ ಅವರ ಜನ್ಮದಿನವನ್ನು ಆಚರಿಸುವಂತಹ ಹೆಚ್ಚು ಸಕಾರಾತ್ಮಕ ವಿಷಯಗಳವರೆಗೆ ನಟ ವಿಜಯ್ ತುಂಬಾನೇ ವೈರಲ್ ಆದ ನಟರಲ್ಲಿ ಒಬ್ಬರು ಅಂತ ಹೇಳಬಹುದು.


  ಈ ವರ್ಷ ನಟ ವಿಜಯ್ ದೇವರಕೊಂಡ ಅವರ ಕೆಲವು ಪ್ರಮುಖ ವೈರಲ್ ಕ್ಷಣಗಳನ್ನು ನಾವು ನಿಮ್ಮ ಮುಂದೆ ತಂದಿದ್ದೇವೆ ನೋಡಿ.


  1. ಲೈಗರ್ ಬಾಕ್ಸ್ ಆಫೀಸ್ ನಲ್ಲಿ ವಿಫಲವಾದ ಸಂದರ್ಭ


  ನಟ ವಿಜಯ್ ಅವರು ಅನನ್ಯಾ ಪಾಂಡೆ ಅವರೊಂದಿಗೆ ಪುರಿ ಜಗನ್ನಾಥ್ ಅವರ ಲೈಗರ್ ಚಿತ್ರದ ಮೂಲಕ ಪ್ಯಾನ್-ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಉತ್ತಮವಾದ ಪ್ರಚಾರಗಳ ಹೊರತಾಗಿಯೂ, ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ನೀಡಲಿಲ್ಲ.


  ಟಿಕೆಟ್ ಕೌಂಟರ್ ಗಳಲ್ಲಿ ಚಿತ್ರದ ಹಣೆಬರಹ ಮುದ್ರೆಯೊತ್ತುತ್ತಿದ್ದಂತೆಯೇ ವಿಜಯ್ ಅವರ ಹಳೆಯ ಟ್ವೀಟ್ ವೈರಲ್ ಆಗಿತ್ತು. ಈ ಚಿತ್ರವು ಚಿತ್ರಮಂದಿರಗಳಲ್ಲಿಯೇ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನುಗಳಿಸಲಿದೆ ಎಂದು ಅವರು ಟ್ವೀಟ್​ನಲ್ಲಿ ಹೇಳಿಕೊಂಡಿದ್ದರು.


  5 Viral Moments Of Vijay Deverakonda Highlighted In 2022
  ನಟ ವಿಜಯ್ ದೇವರಕೊಂಡ


  ಏತನ್ಮಧ್ಯೆ, ಮಾಧ್ಯಮದ ಜೊತೆಗಿನ ವಿಶೇಷ ಸಂವಾದದಲ್ಲಿ, ಅವರೊಬ್ಬ ಅಸಾಧಾರಣ ವ್ಯಕ್ತಿ ಎಂದು ಬಹಿರಂಗಪಡಿಸಿದರು. "ಯಾರಾದರೂ ನನ್ನ ಪ್ರದರ್ಶನದ ಬಗ್ಗೆ ಮಾತನಾಡಿದಾಗ, ನಾನು ಸಂತೋಷಗೊಳ್ಳುವುದಿಲ್ಲ. ನನಗೆ ಅದು ಅವಮಾನ ಮಾಡಿದಂತೆ" ಎಂದು ಹೇಳಿದ್ದರು.


  2. ವಿಜಯ್ ನನ್ನು 'ಅಹಂಕಾರಿ' ಅಂತ ಕರೆದಾಗ..


  ವಿಜಯ್ ದೇವರಕೊಂಡ ಅವರು ಲೈಗರ್ ಚಿತ್ರದ ಮೇಲೆ ಸಾಕಷ್ಟು ಭರವಸೆ ಮೂಡಿಸಿದ್ದರ ಮತ್ತು ಚಿತ್ರದ ಪ್ರಚಾರವನ್ನು ಮಾಡುವಲ್ಲಿ ಯಾವುದೇ ಅವಕಾಶವನ್ನು ಬಿಟ್ಟಿರಲಿಲ್ಲ.


  ಪ್ರಚಾರದ ಕಾರ್ಯಕ್ರಮವೊಂದರಲ್ಲಿ, ಅರ್ಜುನ್ ರೆಡ್ಡಿ ಸ್ಟಾರ್ ಅವರನ್ನು ಉದ್ಯಮದಲ್ಲಿ ನಡೆಯುತ್ತಿರುವ 'ಬಹಿಷ್ಕಾರ' ಪ್ರವೃತ್ತಿಯ ಬಗ್ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು "ಯಾರು ನಿಲ್ಲಿಸುತ್ತಾರೆ, ನಾವು ನೋಡುತ್ತೇವೆ" ಎಂದು ಹೇಳಿದ್ದರು.


  ಚಲನಚಿತ್ರ ಕಾರ್ಯನಿರ್ವಾಹಕ ಮನೋಜ್ ದೇಸಾಯಿ ಅವರು ನಟನ ಈ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿ ಅವರನ್ನು "ದುರಹಂಕಾರಿ" ಎಂದು ಕರೆದಿದ್ದರು.


  ಆನಂತರ ಲೈಗರ್ ಸ್ಟಾರ್ ವಿಜಯ್ ಅವರು ಮನೋಜ್ ದೇಸಾಯಿ ಅವರನ್ನು ಭೇಟಿಯಾಗಲು ಹೈದರಾಬಾದ್ ಗೆ ತೆರಳಿದರು. ವಿಡಿ ಅವರ ಹಾವಭಾವದಿಂದ ವಿನಮ್ರರಾದ ಚಲನಚಿತ್ರ ಕಾರ್ಯನಿರ್ವಾಹಕರು ಭಾವುಕರಾದರು ಮತ್ತು ವೀಡಿಯೋವನ್ನು ಸಹ ಹಂಚಿಕೊಂಡರು.


  "ಅವರು ನಿಜವಾಗಿಯೂ ತುಂಬಾ ಒಳ್ಳೆಯ ವ್ಯಕ್ತಿ, ಡೌನ್ ಟು ಅರ್ಥ್. ಅವನಿಗೆ ಉಜ್ವಲ ಭವಿಷ್ಯವಿದೆ ಮತ್ತು ನಾನು ಈ ಮೂಲಕ ಭರವಸೆ ನೀಡುತ್ತೇನೆ, ನಾನು ಅವನ ಎಲ್ಲಾ ಚಿತ್ರಗಳನ್ನು ತೆಗೆದುಕೊಳ್ಳುತ್ತೇನೆ. ನಾನು ಅವರಿಗೆ ಶುಭ ಹಾರೈಸುತ್ತೇನೆ.


  ನಾನು ವಿಜಯ್ ಅವರನ್ನು ಭೇಟಿಯಾದಾಗ ಅವರು ತಮ್ಮ ಚಿತ್ರಗಳ ಇಡೀ ತಂಡದ ಬಗ್ಗೆ ಯೋಚಿಸುತ್ತಾರೆ ಎಂದು ನಾನು ಅರಿತುಕೊಂಡೆ" ಎಂದು ಮನೋಜ್ ಹೇಳಿದರು. "ನಾನು ಅಮಿತಾಭ್ ಬಚ್ಚನ್ ಮತ್ತು ಈಗ ವಿಜಯ್ ದೇವರಕೊಂಡ ಇಬ್ಬರಿಗೆ ಮಾತ್ರ ಕ್ಷಮೆಯಾಚಿಸಿದ್ದೇನೆ" ಎಂದು ಅವರು ಹೇಳಿದರು.


  3. ನಟಿ ಸಮಂತಾಗೆ ಹುಟ್ಟುಹಬ್ಬದ ಸರ್‌ಪ್ರೈಸ್ ನೀಡಿದ ವಿಜಯ್


  ನಿಮಗೆ ಈಗಾಗಲೇ ತಿಳಿದಿರುವಂತೆ, ವಿಜಯ್ ದೇವರಕೊಂಡ ಅವರು ಯಶೋಧಾ ಚಿತ್ರದ ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ಶಿವ ನಿರ್ವಾಣ ಅವರ ಮುಂಬರುವ ರೊಮ್ಯಾಂಟಿಕ್ ಎಂಟರ್ಟೈನರ್ ಖುಷಿ ಚಿತ್ರದಲ್ಲಿ ತೆರೆಯನ್ನು ಹಂಚಿಕೊಳ್ಳಲಿದ್ದಾರೆ.


  5 Viral Moments Of Vijay Deverakonda Highlighted In 2022
  ನಟ ವಿಜಯ್ ದೇವರಕೊಂಡ


  ವಿಜಯ್ ಅವರು ಚಿತ್ರದ ಕಾಶ್ಮೀರ ಚಿತ್ರೀಕರಣದ ಸಮಯದಲ್ಲಿ ಸಮಂತಾ ಅವರ ಜನ್ಮದಿನದಂದು ಅವರಿಗೆ ಸರ್ಪ್ರೈಸ್ ನೀಡುವುದರ ಮೂಲಕ ಸುದ್ದಿಯಾದರು. ನಂತರ ವಿಜಯ್ ಚಿತ್ರತಂಡದೊಂದಿಗೆ ಭಾವನಾತ್ಮಕ ದೃಶ್ಯವನ್ನು ಸಹ ವೀಡಿಯೋ ಮಾಡಿದರು.


  ಈ ದೃಶ್ಯದಲ್ಲಿ ಸಮಂತಾ ಅವರ ಸಂಭಾಷಣೆಗೆ ಪ್ರತಿಕ್ರಿಯಿಸುವಾಗ, ವಿಜಯ್ ನಟಿಯನ್ನು ಪಾತ್ರದ ಹೆಸರಿನ ಬದಲು ಅವರ ನಿಜವಾದ ಹೆಸರಿನಿಂದ ಸಂಬೋಧಿಸಿದರು.


  ವಿಜಯ್ ಅವರು ಸಮಂತಾ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದಾಗ ಸಮಂತಾಗೆ ನಿಜವಾಗಲೂ ಆಶ್ಚರ್ಯವಾಯಿತು. ನಂತರ, ಹುಟ್ಟುಹಬ್ಬದ ತಾರೆಯು ಚಿತ್ರತಂಡದವರೊಂದಿಗೆ ಕೇಕ್ ಕತ್ತರಿಸುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.


  ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದ ವಿಜಯ್ "ಹ್ಯಾಪಿ ಬರ್ತ್ ಡೇ ಸಮಂತಾ” ಅಂತ ಬರೆದು ಕೆಂಪು ಬಣ್ಣದ ಹೃದಯದ ಎಮೋಜಿಗಳನ್ನು ಹಾಕಿಕೊಂಡಿದ್ದರು. ನೀವು ಸದಾ ಸಂತೋಷವಾಗಿರಿ ಅಂತ ಹಾರೈಸುತ್ತೇನೆ" ಎಂದು ಬರೆದಿದ್ದರು.


  4. ತನ್ನ ಬಾಡಿಗಾರ್ಡ್ ನ ಹುಟ್ಟುಹಬ್ಬ ಆಚರಿಸಿದ ವಿಜಯ್


  ಇತ್ತೀಚೆಗೆ, ವಿಡಿ ತನ್ನ ಅಂಗರಕ್ಷಕನ ಜನ್ಮದಿನವನ್ನು ತನ್ನ ವ್ಯಾನಿಟಿ ವ್ಯಾನ್ ನಲ್ಲಿ ಆಚರಿಸಿದರು. ಅವನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಂತೆ ತನ್ನ ಬಾಡಿಗಾರ್ಡ್ ಅಲ್ಲಿಯೇ ಕೇಕ್ ಕತ್ತರಿಸುವಂತೆ ಮಾಡಿದರು.


  ಈ ಮುದ್ದಾದ ಹಾವಭಾವವನ್ನು ನೋಡಿದ ನೆಟ್ಟಿಗರು ನಟನನ್ನು ಶ್ಲಾಘಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಚಿತ್ರಗಳಲ್ಲಿ, ವಿಜಯ್ ದೇವರಕೊಂಡ ಮತ್ತು ಅವರ ತಾಯಿ ಬಾಡಿಗಾರ್ಡ್ ಕೇಕ್ ಕತ್ತರಿಸುತ್ತಿದ್ದರೆ ಪಕ್ಕದಲ್ಲಿಯೇ ನಿಂತಿದ್ದನ್ನು ನೋಡಬಹುದಾಗಿತ್ತು.


  5. ವಿಜಯ್ ಮತ್ತು ರಶ್ಮಿಕಾ ಅವರ ಈ ಫೋಟೋ ವೈರಲ್ ಆಗಿತ್ತು..


  ಬಹಳ ಸಮಯದಿಂದ, ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿದ್ದವು. ಆದಾಗ್ಯೂ, ಇವರಿಬ್ಬರು ಯಾವಾಗಲೂ ತಾವಿಬ್ಬರೂ "ಜಸ್ಟ್ ಫ್ರೆಂಡ್ಸ್" ಅಂತಾನೆ ಹೇಳುತ್ತಿದ್ದರು.


  ಸಹನಟರು ಒಟ್ಟಿಗೆ ಬರಬೇಕೆಂದು ಅಭಿಮಾನಿಗಳು ಹುರಿದುಂಬಿಸುತ್ತಿದ್ದರೆ, ವಿಜಯ್ ದೇವರಕೊಂಡ ಅವರ ಅಭಿಮಾನಿ ಪುಟವು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯನ್ನು ವಧು-ವರರಾಗಿ ಹೊಂದಿರುವ ಫೋಟೋವನ್ನು ಬಿಡುಗಡೆ ಮಾಡಿತ್ತು.


  ಫ್ಯಾನ್ ಎಡಿಟ್ ಮಾಡಿದ ಫೋಟೋದಲ್ಲಿ ವಿಡಿ ಬಿಳಿ ಶೇರ್ವಾನಿಯಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ರಶ್ಮಿಕಾ ತಿಳಿ ಚಿನ್ನದ ಬಣ್ಣದ ಲೆಹೆಂಗಾದಲ್ಲಿ ಮೋಡಿ ಮಾಡಿದ್ದರು. ಈ ಫೋಟೋ ಅಂತರ್ಜಾಲದಲ್ಲಿ ತುಂಬಾನೇ ಸುದ್ದಿ ಮಾಡಿತ್ತು ಅಂತ ಹೇಳಬಹುದು.


  6. ಮುಂಬೈಯಲ್ಲಿ ಲೋಕಲ್ ಟ್ರೈನ್ ಹತ್ತಿದ್ರು ವಿಜಯ್


  ಲೈಗರ್ ಚಿತ್ರದ ಪ್ರಚಾರದ ಸಮಯದಲ್ಲಿ ಮುಂಬೈ ನಗರದಲ್ಲಿ ವಿಜಯ್ ದೇವರಕೊಂಡ ಮತ್ತು ನಾಯಕಿ ಅನನ್ಯಾ ಪಾಂಡೆ ಕಾರ್ಯಕ್ರಮವೊಂದಕ್ಕೆ ಹೋಗುವಾಗ ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸಿದರು.


  ಇದನ್ನೂ ಓದಿ: Vijay Devarakonda: ರೌಡಿ ವಿಜಯ್​ ದೇವರಕೊಂಡ ಖರೀದಿಸಿದ ಹೊಸ ಮನೆಯ ಬೆಲೆ ಕೇಳಿದ್ರೆ ದಂಗಾಗ್ತೀರಾ..!


  ವಿಡಿ ಕಪ್ಪು ಟಿ-ಶರ್ಟ್ ಮತ್ತು ನೀಲಿ ಡೆನಿಮ್ ಅನ್ನು ಆರಿಸಿಕೊಂಡರೆ, ಅನನ್ಯಾ ಪಾಂಡೆ ನೀಲಿ ಡೆನಿಮ್ ಜೊತೆಗೆ ಹಳದಿ ಕಾರ್ಸೆಟ್ ಕ್ರಾಪ್ ಟಾಪ್ ನೊಂದಿಗೆ ಸ್ಟೈಲ್ ಆಗಿ ಕಾಣಿಸಿಕೊಂಡಿದ್ದರು.


  ಅವರಿಬ್ಬರ ಈ ಸ್ಮರಣೀಯ ಸವಾರಿಯ ಸಮಯದಲ್ಲಿ, ಅವರು ಅನನ್ಯಾ ಪಾಂಡೆ ಅವರ ತೊಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿತು, ಇದು ಒಂದು ಮುದ್ದಾದ ದೃಶ್ಯ ಅಂತಾನೆ ಹೇಳಬಹುದು.


  ನಟ ವಿಜಯ್ ಮುಂದಿನ ಚಿತ್ರಗಳಿವು..


  ವಿಜಯ್ ದೇವರಕೊಂಡ ಅವರು ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ನಟಿಸಿದ ‘ಖುಷಿ’ ಚಿತ್ರ ಮುಂದಿನ ದಿನಗಳಲ್ಲಿ ತೆರೆ ಕಾಣಲಿದೆ. ಅನೇಕ ಕಾರಣಗಳಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ ಎಂದು ನಟ ಇತ್ತೀಚೆಗೆ ಬಹಿರಂಗಪಡಿಸಿದ್ದರು.


  ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ನಾವು ಸುಮಾರು 60 ಪ್ರತಿಶತದಷ್ಟು ಚಿತ್ರೀಕರಣವನ್ನು ಮುಗಿಸಿದ್ದೇವೆ. ನಾವು ಮೂಲತಃ ಚಿತ್ರವನ್ನು ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದ್ದೆವು.
  ಆದರೆ ಈಗ ಕೆಲವು ಕಾರಣಗಳಿಂದಾಗಿ ಅದನ್ನು ಮುಂದಿನ ವರ್ಷಕ್ಕೆ ತಳ್ಳಲಾಗಿದೆ. ಸದ್ಯಕ್ಕೆ ನಾವು ಫೆಬ್ರವರಿ 2023 ರಲ್ಲಿ ಬಿಡುಗಡೆ ಮಾಡಲು ಅಂದುಕೊಂಡಿದ್ದೇವೆ" ಎಂದು ಅವರು ಹೇಳಿದರು.


  ನಿರ್ದೇಶಕ ಪುರಿ ಜಗನ್ನಾಥ್ ಅವರ ಆಕ್ಷನ್ ಎಂಟರ್ಟೈನರ್ ‘ಜನ ಗಣ ಮನ’ ಚಿತ್ರದಲ್ಲಿಯೂ ಸಹ ವಿಜಯ್ ದೇವರಕೊಂಡ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಬಹುನಿರೀಕ್ಷಿತ ಚಿತ್ರ ಇನ್ನೂ ಸೆಟ್ಟೇರಬೇಕಿದೆ ಎಂದು ಹೇಳಲಾಗುತ್ತಿದೆ.

  Published by:Gowtham K
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು