• Home
  • »
  • News
  • »
  • entertainment
  • »
  • Actress: ಮೂಲ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರಗೊಂಡ ದಕ್ಷಿಣ ಭಾರತದ 5 ನಟಿಯರಿವರು

Actress: ಮೂಲ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರಗೊಂಡ ದಕ್ಷಿಣ ಭಾರತದ 5 ನಟಿಯರಿವರು

ಮೂಲ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡ ನಟಿಯರು

ಮೂಲ ಧರ್ಮದಿಂದ ಬೇರೆ ಧರ್ಮಗಳಿಗೆ ಮತಾಂತರಗೊಂಡ ನಟಿಯರು

ದಕ್ಷಿಣ ಭಾರತದ ನಟಿಯರ ವಿಚಾರಕ್ಕೆ ಬರುವುದಾದರೆ, ತಮ್ಮ ಜೀವನದಲ್ಲಿ ಶಾಂತಿ ಅಥವಾ ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಮ್ಮ ಮೂಲ ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಬೇರೆ ಧರ್ಮಕ್ಕೆ ಮತಾಂತರಗೊಂಡ ದಕ್ಷಿಣ ಭಾರತದ ನಟಿಯರು ತಮ್ಮ ವೈಯಕ್ತಿಕ ಕಾರಣಗಳಿಂದ ತಮ್ಮ ಧರ್ಮವನ್ನು ಪರಿವರ್ತಿಸಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಈಗಾಗಲೇ ಬಹಳಷ್ಟು ಬಾಲಿವುಡ್ (Bollywood) ಮತ್ತು ದಕ್ಷಿಣದ ಸೆಲೆಬ್ರಿಟಿಗಳು ತಮ್ಮ ಮೂಲ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ (Conversion) ಅಥವಾ ಬೇರೆ ಬೇರೆ ಧರ್ಮಗಳ ನೀತಿ-ನಿಯಮಗಳನ್ನು ಆಚರಿಸುತ್ತಿದ್ದಾರೆ. ಇದೇನು ಅಂತಹ ದೊಡ್ಡ ವಿಷಯವಲ್ಲ. ಸೆಲೆಬ್ರಿಟಿಗಳು (Celebrity) ಧರ್ಮ ಮತ್ತು ಭಾಷೆಗೆ ಯಾವುದೆ ಗಡಿ ಇಲ್ಲ ಎಂದು ಆಗಾಗ ಈ ರೀತಿ ಕೆಲಸಗಳನ್ನು ಮಾಡುವುದರ ಮೂಲಕ ಭಾರತ ಸರ್ವಧರ್ಮ ಸಹಿಷ್ಣುತೆಯ ದೇಶ ಎಂದು ತಿಳಿಸುತ್ತಲೇ ಇರುತ್ತಾರೆ. ಇನ್ನು ದಕ್ಷಿಣ ಭಾರತದ ನಟಿಯರ (Actress) ವಿಚಾರಕ್ಕೆ ಬರುವುದಾದರೆ, ತಮ್ಮ ಜೀವನದಲ್ಲಿ ಶಾಂತಿ ಅಥವಾ ಆಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಮ್ಮ ಮೂಲ ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಬೇರೆ ಧರ್ಮಕ್ಕೆ ಮತಾಂತರಗೊಂಡ ದಕ್ಷಿಣ ಭಾರತದ (South India) ನಟಿಯರು ತಮ್ಮ ವೈಯಕ್ತಿಕ ಕಾರಣಗಳಿಂದ ತಮ್ಮ ಧರ್ಮವನ್ನು ಪರಿವರ್ತಿಸಿಕೊಂಡಿದ್ದಾರೆ.


ವಿವಿಧ ಧರ್ಮಗಳಿಗೆ ಮತಾಂತರಗೊಂಡ ದಕ್ಷಿಣ ಭಾರತದ ನಟಿಯರ ಪಟ್ಟಿ ಇಲ್ಲಿದೆ:
ನಯನತಾರಾ
ಮಲಯಾಳಿ ಸಿರಿಯನ್ ಕ್ರಿಶ್ಚಿಯನ್ ಪೋಷಕರಿಗೆ ಜನಿಸಿದ ಕಾಲಿವುಡ್‌ನ ಸೂಪರ್ ಸ್ಟಾರ್ ನಟಿ ನಯನತಾರಾ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರು 7ನೇ ಆಗಸ್ಟ್ 2011 ರಂದು ಚೆನ್ನೈನ ಆರ್ಯ ಸಮಾಜ ದೇವಸ್ಥಾನದಲ್ಲಿ ಹಿಂದೂ ಧರ್ಮದ ನೀತಿ ನಿಯಮಗಳನ್ನು ಆಚರಿಸಿದ್ದಾರೆ. ಆಕೆಯ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್.


ಜ್ಯೋತಿಕಾ
ಟ್ಯಾಗೋರ್, ಮಾಸ್ ಮತ್ತು ಶಾಕ್‌ ಚಲನಚಿತ್ರಗಳೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಜ್ಯೋತಿಕಾ ಅವರ ತಂದೆ ಪಂಜಾಬಿ ಮತ್ತು ತಾಯಿ ಮುಸ್ಲಿಂ ಸಮುದಾಯದವರು. ಇವರ ಮೂಲ ಹೆಸರು ಸಾಧನಾ ಎಂದಾಗಿತ್ತು. ಇವರ ಮಲಅಕ್ಕ  ನಟಿ ನಗ್ಮಾ ಆಗಿದ್ದಾರೆ. ಇವರು ತಮಿಳಿನ ಖ್ಯಾತ ನಟ ಸೂರ್ಯ ಅವರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾದ ಕಾರಣ ಎಲ್ಲಾ ಧರ್ಮಗಳಲ್ಲಿಯೂ ನಂಬಿಕೆ ಇಟ್ಟು ಎಲ್ಲ ಧರ್ಮಗಳ ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. ಆದರೆ ಕಾನೂನಿನಲ್ಲಿ ಇವರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಯಾವುದೇ ಮಾಹಿತಿ ಇಲ್ಲ.


ಇದನ್ನೂ ಓದಿ: OTT Platform: ಓಟಿಟಿಯಲ್ಲಿ ನೀವು ನೋಡಬಹುದಾದ ಈ ವಾರದ ಸಿನಿಮಾ-ವೆಬ್ ಸೀರಿಸ್ ಗಳಿವು


ಖುಷ್ಬು ಸುಂದರ್
ಖುಷ್ಬು ಸುಂದರ್ ಅವರು ನಖತ್ ಖಾನ್ ಆಗಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಆಕೆಗೆ ಆಕೆಯ ತಂದೆ-ತಾಯಿಗಳು ಖುಷ್ಬು ಎಂಬ ಮೂಲ ಹೆಸರನ್ನು ಇಟ್ಟಿದ್ದರು. ನಂತರ ಖುಷ್ಬೂ ಅವರು ಸುಂದರ್ ಸಿ ಅವರನ್ನು ಮದುವೆಯಾದರು. ಅವರನ್ನು ಮದುವೆಯಾದ ಮೇಲೆ ಈ ನಟಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಮತ್ತು ಸುಂದರ್ ಅನ್ನು ತಮ್ಮ ಹೆಸರನ್ನು ಈಗ ಖೂಷ್ಬು ಸುಂದರ್‌ ಎಂದು ಬಳಸುತ್ತಿದ್ದಾರೆ.


ನಗ್ಮಾ
ಚಿರಂಜೀವಿ ಜೊತೆಗಿನ ಘರಾನಾ ಮೊಗುಡು ಮತ್ತು ನಾಗಾರ್ಜುನ ಅಕ್ಕಿನೇನಿ ಜೊತೆಗಿನ ಅಲ್ಲರಿ ಅಲ್ಲುಡು ತೆಲುಗು ಚಿತ್ರಗಳಿಗೆ ಹೆಸರುವಾಸಿಯಾದ ನಗ್ಮಾ, ಇವರ ಮೂಲ ಹೆಸರು ನಂದಿತಾ ಅರವಿಂದ್ ಮೊರಾರ್ಜಿ ಎಂದಾಗಿತ್ತು. ಇವರು ನಂತರದ ದಿನಗಳಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಿ ನಂಬಿಕೆಯನ್ನು ಕಂಡುಕೊಂಡ ನಂತರ 2007 ರಲ್ಲಿ ಕ್ರಿಶ್ಚಿಯನ್‌ ಧರ್ಮದ ಬ್ಯಾಪ್ಟಿಸಮ್‌ಗೆ ಮತಾಂತರಗೊಂಡರು.


ಮೋನಿಕಾ
ಮೋನಿಕಾ ಹಿಂದೂ ತಂದೆ ಮತ್ತು ಕ್ಯಾಥೋಲಿಕ್ ಧರ್ಮದ ತಾಯಿಗೆ ಜನಿಸಿದರು. ಆದರೆ, ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ತನ್ನ ಹೆಸರನ್ನು ಎಂ.ಜಿ.ರಹೀಮಾ ಎಂದು ಬದಲಿಸಿಕೊಂಡಿದ್ದೇನೆ. ತಾನು ಇಸ್ಲಾಂ ತತ್ವಗಳನ್ನು ಇಷ್ಟಪಡುತ್ತೇನೆ, ಆದ್ದರಿಂದ ಈ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಬಹಿರಂಗಪಡಿಸಿದಳು.


ಇದನ್ನೂ ಓದಿ: Rashmika Mandanna: ಮನೆಗೆ ಹೊಸ ಅತಿಥಿ ಕರೆ ತಂದ ರಶ್ಮಿಕಾ! ಸದ್ಯಕ್ಕೆ ಇದೇ ಈಕೆಯ ಕ್ರಶ್​ ಅಂತೆ


ಈ ನಟಿಯರಷ್ಟಲ್ಲದೇ ಸಿನಿಮಾ ರಂಗದಲ್ಲಿ ಇನ್ನು ಅನೇಕ ನಟ-ನಟಿಯರು ತಮ್ಮ ಮೂಲ ಧರ್ಮದಿಂದ ವಿವಿಧ ಧರ್ಮಗಳಿಗೆ ಮತಾಂತರಗೊಂಡ ಘಟನೆಗಳು ನಡೆದಿವೆ, ಮುಂದೆನೂ ನಡೆಯುತ್ತಲೆ ಇರುತ್ತವೆ ಎನ್ನಬಹುದು.

Published by:Ashwini Prabhu
First published: