Animal Movies: ಈ ಸಿನಿಮಾಗಳಿಗೆ ಪ್ರಾಣಿಗಳೇ ಹೀರೋ, ಈ 5 ಮೂವಿಯನ್ನು ಮಿಸ್​ ಮಾಡದೇ ನೋಡಿ

ಪ್ರಾಣಿ ಸಿನಿಮಾಗಳು

ಪ್ರಾಣಿ ಸಿನಿಮಾಗಳು

ಹಲವಾರು ಭಾರತೀಯ ಮತ್ತು ಹಾಲಿವುಡ್ ಚಲನಚಿತ್ರಗಳು ಪ್ರಾಣಿಗಳನ್ನು ಕೇಂದ್ರಿಕರಿಸಿ ಅದ್ಭುತ ಕಥೆ ಇರುವ ಸಿನಿಮಾ ಮಾಡಿವೆ. ಹಾಗಾದರೆ ಪ್ರಾಣಿಗಳೇ ಹೀರೋ ಆಗಿರುವ ಈ 5 ಚಲನಚಿತ್ರಗಳನ್ನು ತಪ್ಪದೇ ನೋಡಿ.

  • Trending Desk
  • 2-MIN READ
  • Last Updated :
  • Karnataka, India
  • Share this:

ಭೂಮಿ ಮೇಲೆ ಮನುಷ್ಯರಿಗೆ ಬದುಕುವ, ಜೀವಿಸುವ ಹಕ್ಕು ಎಷ್ಟು ಇದೆಯೋ ಅದೇ ರೀತಿಯ ಹಕ್ಕು ಸಕಲ ಕೋಟಿ ಜೀವಿ ಮತ್ತು ಸಸ್ಯ ಸಂಕುಲಕ್ಕೂ ಇದೆ. ಹೀಗಾಗಿ ವನ್ಯಜೀವಿ (World Wildlife ) ಸಸ್ಯ ಸಂಕುಲ ಹಾಗೂ ಪ್ರಾಣಿ-ಪಕ್ಷಿ ಸಂಕುಲದ ಕುರಿತಾಗಿ ಜನರಲ್ಲಿ ಜಾಗೃತಿ (Awareness) ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್‌ 3 ರಂದು ವಿಶ್ವ ವನ್ಯಜೀವಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಹಲವಾರು ಭಾರತೀಯ ಮತ್ತು ಹಾಲಿವುಡ್ ಚಲನಚಿತ್ರಗಳು (Hollywood Movie) ಪ್ರಾಣಿಗಳನ್ನು ಕೇಂದ್ರಿಕರಿಸಿ ಅದ್ಭುತ ಕಥೆ ಇರುವ ಸಿನಿಮಾ ಮಾಡಿವೆ.


ವಿಶ್ವ ವನ್ಯಜೀವಿಗಳ ದಿನ


ಭೂಮಿಯ ಮೇಲಿನ ಜೀವವೈವಿಧ್ಯತೆಯನ್ನು ಪ್ರಶಂಸಿಸಲು ಮತ್ತು ಅವುಗಳನ್ನು ಸಂರಕ್ಷಿಸಲು ಕ್ರಮ ತೆಗೆದುಕೊಳ್ಳಲು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವನ್ಯಜೀವಿ ದಿನವನ್ನು "ವನ್ಯಜೀವಿ ಸಂರಕ್ಷಣೆಗಾಗಿ ಪಾಲುದಾರಿಕೆಗಳು" ಎಂಬ ವಿಷಯದಡಿಯಲ್ಲಿ ಆಚರಿಸಲಾಗುತ್ತಿದೆ. ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಸಸ್ಯ ಸಂಕುಲಗಳ ಜಾತಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಛಾಯಚಿತ್ರಗಳನ್ನು ಹಂಚಿಕೊಂಡು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಥೀಮ್‌ ಅನ್ನು ವಿಶ್ವಸಂಸ್ಥೆ ಅಧಿಕೃತಗೊಳಿಸಿದೆ.


ವಿಶ್ವ ವನ್ಯಜೀವಿಗಳ ದಿನ: ಪ್ರಾಣಿಗಳು ಪ್ರಮುಖ ಪಾತ್ರದಲ್ಲಿರುವ ಈ ಚಿತ್ರಗಳನ್ನು ವೀಕ್ಷಿಸಿ


ಮಾನವನ ಚಟುವಟಿಕೆಗಳಿಂದ ವೃಕ್ಷ ಮತ್ತು ಪ್ರಾಣಿ ಜೀವ ಸಂಕುಲಕ್ಕೆ ಆಗುತ್ತಿರುವ ಹಾನಿ ಬಗ್ಗೆ ವಿವರಣೆ ನೀಡಿ ಅರಿವು ಮೂಡಿಸುವ ಮೂಲಕ ಕೂಡ ಈ ದಿನವನ್ನು ಆಚರಿಸಲಾಗುತ್ತದೆ. ಅದೇ ರೀತಿ ಈ ದಿನವನ್ನು ಆಚರಿಸಲು ನಾವು ನಿಮಗೆ ಪ್ರಾಣಿಗಳ ಬಗೆಗಿನ ಕೆಲವು ಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಹಲವಾರು ಭಾರತೀಯ ಮತ್ತು ಹಾಲಿವುಡ್ ಚಲನಚಿತ್ರಗಳು ಪ್ರಾಣಿಗಳನ್ನು ಕೇಂದ್ರಿಕರಿಸಿ ಅದ್ಭುತ ಕಥೆ ಇರುವ ಸಿನಿಮಾ ಮಾಡಿವೆ. ಹಾಗಾದರೆ ಈ ವಿಶ್ವ ವನ್ಯಜೀವಿ ದಿನದಂದು ಪ್ರಾಣಿಗಳೇ ಹೀರೋ ಆಗಿರುವ ಈ 5 ಚಲನಚಿತ್ರಗಳನ್ನು ವೀಕ್ಷಿಸಿ.


* ಡನ್ಸ್ಟನ್ ಚೆಕ್ ಇನ್


ಇದೊಂದು ಕೆನಡಿಯನ್-ಅಮೆರಿಕನ್ ಮಕ್ಕಳ ಇಂಗ್ಲಿಷ್‌ ಭಾಷೆಯ ಹಾಸ್ಯ ಚಲನಚಿತ್ರವಾಗಿದ್ದು, ಕೆನ್ ಕ್ವಾಪಿಸ್ ನಿರ್ದೇಶಿಸಿದ ಈ ಚಿತ್ರದಲ್ಲಿ ಕಪಿ ಜಾತಿಗೆ ಸೇರಿದ ಒರಾಂಗುಟನ್ ಪ್ರಾಣಿಯೇ ನಾಯಕ. ತರಬೇತಿ ಪಡೆದ ಒರಾಂಗುಟನ್ ಸ್ಯಾಮಿ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದೆ. ಹೋಟೆಲ್‌‌, ಮಕ್ಕಳು ಮತ್ತು ಒರಾಂಗುಟನ್ ಸುತ್ತ ಸುತ್ತವ ಈ ಸಿನಿಮಾ ಪ್ರಾಣಿ ಪ್ರಿಯರಿಗೆ ಇಷ್ಟವಾಗುವ ಸಿನಿಮಾ.


* ಸ್ಟುವರ್ಟ್ ಲಿಟಲ್
ಸ್ಟುವರ್ಟ್ ಲಿಟಲ್ 1999ರ ಅಮೇರಿಕನ್ ಲೈವ್ ಆಕ್ಷನ್/ಕಂಪ್ಯೂಟರ್-ಆನಿಮೇಟೆಡ್ ಹಾಸ್ಯ ಚಲನಚಿತ್ರವಾಗಿದ್ದು, ಇ.ಬಿ. ವೈಟ್ ಅವರ ಅದೇ ಹೆಸರಿನ 1945 ರ ಕಾದಂಬರಿ ಆಧಾರಿತ ಸಿನಿಮಾ. ಅನಾಥಾಶ್ರಮದಲ್ಲಿ ದಂಪತಿಗಳಿಂದ ದತ್ತು ಪಡೆದ ಸ್ಟುವರ್ಟ್ ಎಂಬ ಇಲಿಯ ಸುತ್ತ ಸ್ಟುವರ್ಟ್ ಲಿಟಲ್ ಸಿನಿಮಾ ಹಣೆದುಕೊಂಡಿದೆ. ಸ್ಟುವರ್ಟ್ (ಡಿಜಿಟಲ್ ಆಗಿ ನಿರೂಪಿಸಲಾದ ಪ್ರಮುಖ ಪಾತ್ರ) ವೀಕ್ಷಿಸಲು ಅದ್ಭುತವಾಗಿದೆ.


* 101 ಡಾಲ್ಮೇಟಿಯನ್ಸ್
101 ಡಾಲ್ಮೇಷಿಯನ್ಸ್ 1996ರ ಅಮೇರಿಕನ್ ಆಕ್ಷ್ಯನ್‌ ಮತ್ತು ಕಾಮಿಡಿ ಚಲನಚಿತ್ರವಾಗಿದೆ. ಇದು ಸ್ವತಃ ಡೋಡಿ ಸ್ಮಿತ್ ಅವರ 1956ರ ಕಾದಂಬರಿ ದಿ ಹಂಡ್ರೆಡ್ ಅಂಡ್ ಒನ್ ಡಾಲ್ಮೇಟಿಯನ್ಸ್‌ ಆಧಾರಿತ ಸಿನಿಮಾವಾಗಿದೆ. ನಾಯಿಗಳೇ ಈ ಚಿತ್ರದ ಜೀವಾಳವಾಗಿದ್ದು, ಅವುಗಳ ಸುತ್ತವೇ ಸಿನಿಮಾ ಮೂಡಿ ಬಂದಿದೆ. ನಾಯಿ ಪ್ರಿಯರಿಗೆ ಇದೊಂದು ನೋಡಬಹುದಾದ ಉತ್ತಮ ಸಿನಿಮಾ.


* ಹಾಥಿ ಮೇರೆ ಸಾಥಿ


ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಮತ್ತು ತನುಜಾ ಅಭಿನಯದ ಸೂಪರ್‌ಹಿಟ್ ಹಿಂದಿ ಚಲನಚಿತ್ರ ಇದಾಗಿದ್ದು, ಈ ಚಲನಚಿತ್ರದ ಜೀವಾಳವೇ ಆನೆ. ತನ್ನ ಯಜಮಾನ ಮತ್ತು ಹೆಂಡತಿಯನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿದ ಆನೆಯೇ ಈ ಚಿತ್ರದ ಪ್ರಮುಖ ಪಾತ್ರಧಾರಿ. ಆನೆಯನ್ನು ಮುಗ್ದ ಪ್ರಾಣಿ ಎಂದು ಹಲವರು ಭಾವಿಸುತ್ತಾರೆ. ಆನೆ ಪ್ರಿಯರು ಈ ದಿನ ನೋಡಿ ಖುಷಿ ಪಡುವ ಸಿನಿಮಾ ಇದು ಎನ್ನಬಹುದು.


ಇದನ್ನೂ ಓದಿ: Poonam Pandey: ನನ್ನ ಗಂಡ ನನಗೆ ಪ್ರಾಣಿಗೆ ಹೊಡೆದಂತೆ ಹೊಡೆಯುತ್ತಿದ್ದ, ಮೇಕಪ್ ಮೂಲಕ ಗಾಯ ಮುಚ್ಚಿಟ್ಟಿದ್ದೇನೆ ಎಂದ ನಟಿ ಪೂನಂ!


* ಕಾಡನ್


ರೋಸ್ ಇಂಟರ್‌ನ್ಯಾಶನಲ್ ನಿರ್ಮಾಣದ ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ, ವಿಷ್ಣು ವಿಶಾಲ್, ಪುಲ್ಕಿತ್ ಸಾಮ್ರಾಟ್, ಶ್ರಿಯಾ ಪಿಲ್ಗಾಂವ್ಕರ್ ಮತ್ತು ಜೋಯಾ ಹುಸೇನ್ ನಟಿಸಿದ್ದಾರೆ. ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಆಳವಾದ ಮತ್ತು ಬಲವಾದ ಬಂಧವನ್ನು ಈ ಚಿತ್ರ ಸೂಚಿಸುತ್ತದೆ. ಆನೆಗಳ ಆವಾಸಸ್ಥಾನ ಮತ್ತು ಪರಿಸರ ವ್ಯವಸ್ಥೆಯ ಸಂರಕ್ಷಣೆಯನ್ನು ಉಳಿಸಲು ಪ್ರಯತ್ನಿಸುವ ಸುತ್ತ ಈ ಕಥೆ ಸಾಗುತ್ತದೆ.

Published by:ಪಾವನ ಎಚ್ ಎಸ್
First published: