ಕೊರೋನಾ ಕಾಲದಲ್ಲೂ ಹೊಸಬರ ಚಿತ್ರಕ್ಕೆ 25 ದಿನದ ಸಂಭ್ರಮ..!

ಹೊಸಬರೇ ಕೂಡಿ ಮಾಡಿರೋ ಹೊಸತನದ ಕಥೆಯನ್ನ ಹೊಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆಯಂತೆ. ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರತಿ ಶೋಗೆ 70 ರಿಂದ 80 ಜನರಂತೆ ದಿನವೊಂದಕ್ಕೆ  250 ರಿಂದ 300 ಜನ  ಸಿನಿಮಾ ನೋಡ್ತಿದ್ದಾರಂತೆ‌‌.

5-adi 7 angula

5-adi 7 angula

  • Share this:
ಕೊರೋನಾ ಕಾಲದಲ್ಲಿ ಹೊಸ ಸಿನಿಮಾಗಳನ್ನು ರಿಲೀಸ್ ಮಾಡೋಕೆ ಚಿತ್ರೋದ್ಯಮದ ಮಂದಿ ಹೆದರುತ್ತಿದ್ದಾರೆ. ಅದರಲ್ಲೂ ಸ್ಟಾರ್ ನಟರ ಸಿನಿಮಾಗಳೇ ಒಳ್ಳೆಯ ಕಾಲಕ್ಕಾಗಿ ಕಾದು ಕುಂತಿವೆ. ಸದ್ಯಕ್ಕೆ ಥಿಯೇಟರ್ ನಲ್ಲಿ ಒಂದಷ್ಟು ಸಿನಿಮಾಗಳು ರನ್ ಆಗುತ್ತಿವೆ ಅಂದರೆ? ಅವೆಲ್ಲಾ ಈಗಾಗಲೇ ಬಿಡುಗಡೆಯಾಗಿ, ಮತ್ತೆ ರಿ-ರಿಲೀಸ್ ಆಗಿರುವ ಸಿನಿಮಾಗಳು. ಈಗಾಗಲೇ ಓಟಿಟಿ ಫ್ಲಾಟ್ ಫಾರಂನಲ್ಲೋ, ಅಥವಾ ಕಿರುತೆರೆಯಲ್ಲೋ ಪ್ರದರ್ಶನ ಕಂಡಿರುವ ಇಂತಹ ಸಿನಿಮಾಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಜನ ಬರುತ್ತಿಲ್ಲ. ಹೀಗಾಗಿ ಚಿತ್ರರಂಗ ಆತಂಕದಲ್ಲಿದೆ. ಅಯ್ಯೋ ಇದೇ ಸ್ಥಿತಿ ಮುಂದುವರೆದರೆ ಚಿತ್ರೋದ್ಯಮದ ಕಥೆಯೇನು ಅನ್ನೋ ಭಯ ಆವರಿಸಿದೆ‌.

ಇದರ ನಡುವೆ ಕನ್ನಡದ ಚಿತ್ರವೊಂದು ಯಶಸ್ವಿ 25 ದಿನಗಳನ್ನು ಪೂರೈಸಿದೆ. 50ನೇ ದಿನದತ್ತ ಮುನ್ನಡೆದಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಕೇಕ್ ಕಟ್ ಮಾಡಿ ಸಂಭ್ರಮಿಸಿದೆ. ಹೌದು, 5 ಅಡಿ 7 ಅಂಗುಲ ಸಿನಿಮಾ ಕೊರೋನಾ ಲಾಕ್ ಡೌನ್ ನಂತರ ರಿ-ರಿಲೀಸ್ ಆಗಿದೆ.

5 ಅಡಿ 7 ಅಂಗುಲ ಚಿತ್ರತಂಡ


ಹೊಸಬರೇ ಕೂಡಿ ಮಾಡಿರೋ ಹೊಸತನದ ಕಥೆಯನ್ನ ಹೊಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆಯಂತೆ. ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರತಿ ಶೋಗೆ 70 ರಿಂದ 80 ಜನರಂತೆ ದಿನವೊಂದಕ್ಕೆ  250 ರಿಂದ 300 ಜನ  ಸಿನಿಮಾ ನೋಡ್ತಿದ್ದಾರಂತೆ‌‌. ಕೊರೋನಾ ಲಾಕ್ ಡೌನ್ ನಂತರ ಈ ಮಟ್ಟಕ್ಕೆ ಜನ ಬರುತ್ತಿರುವುದು ಗ್ರೇಟು. ಒಳ್ಳೆಯ ಸಿನಿಮಾ ಕೊಟ್ಟರೇ ಜನ ಕೈ ಹಿಡಿತಾರೆ ಅನ್ನೋದ್ರ ಸಾಕ್ಷಿ ಇದು ಅಂತಾರೆ ನಿರ್ದೇಶಕ ಕಂ ನಿರ್ಮಾಪಕ ನಿತ್ಯಾನಂದ ಪ್ರಭು.

ತ್ರಿವೇಣಿ ಅಲ್ಲದೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಹ ಸಿನಿಮಾ ಚೆನ್ನಾಗಿ ಓಡ್ತಿದೆ ಅನ್ನೋ ಅಂಬೋಣ ನಿರ್ದೇಶಕರದ್ದು. ಚಿತ್ರದಲ್ಲಿ ರಶಿಕ್ ಕುಮಾರ್ ಹಾಗೂ ಅದಿತಿ ಎಂಬ ಹೊಸ ಮುಖಗಳು ನಾಯಕ ನಾಯಕಿಯರಾಗಿ ನಟಿಸಿದ್ದಾರೆ..ವೀಣಾ ಸುಂದರ್ ಪೋಷಕ ನಟಿಯಾಗಿ ಗಮನ ಸೆಳೆದಿದ್ದಾರೆ.

Published by:zahir
First published: