ಫೋಟೋ ಫ್ಲಾಶ್‍ಬ್ಯಾಕ್: 41 ವರ್ಷಗಳ ಹಿಂದೆ ತೆಗೆದ ಫೋಟೋದಲ್ಲಿ ಡಾ.ರಾಜ್​ ಜತೆ ಇರುವವರು ಯಾರು? 

news18
Updated:July 13, 2018, 3:39 PM IST
ಫೋಟೋ ಫ್ಲಾಶ್‍ಬ್ಯಾಕ್: 41 ವರ್ಷಗಳ ಹಿಂದೆ ತೆಗೆದ ಫೋಟೋದಲ್ಲಿ ಡಾ.ರಾಜ್​ ಜತೆ ಇರುವವರು ಯಾರು? 
news18
Updated: July 13, 2018, 3:39 PM IST
- ಆನಂದ್​ ಸಾಲುಂಡಿ, ನ್ಯೂಸ್​ 18 ಕನ್ನಡ 

ಹಳೆ ಪೋಟೋಗಳನ್ನ ನೋಡೋದೆ ಒಂದು ಖುಷಿ. ಅದರಲ್ಲೂ ಆ ಫೋಟೋಗಳ ಹಿಂದಿನ ಕಥೆ ಹಾಗೂ ರಹಸ್ಯಗಳ ಬಗ್ಗೆ ಹೇಳುತ್ತಾ ಹೋದರಂತೂ... ಕೇಳುತ್ತಲೇ ಕೂರಬೇಕು ಅನ್ನಿಸುತ್ತದೆ.

ಇವತ್ತು ನಾವು ಕನ್ನಡ ಕಣ್ಮಣಿ ಡಾ.ರಾಜ್‍ಕುಮಾರ್ ಅವರ ಒಂದು ಅಪರೂಪದ ಫೋಟೋ ಹೊತ್ತು ತಂದಿದ್ದೇವೆ. ಅಂದಹಾಗೆ ಈ ಫೋಟೋ ತೆಗೆದಿದ್ದು 41 ವರ್ಷಗಳ ಹಿಂದೆ. ಹಿರಿಯ ಪತ್ರಕರ್ತ ಜೆ.ಕುಮಾರ್ ಎಂಬುವವರು ಈ ಫೋಟೋ ತೆಗೆದಿರೋದು.

ಈ ಫೋಟೋ ತೆಗೆದ ಸಮಯದಲ್ಲಿ ಡಾ.ರಾಜ್‍ಕುಮಾರ್ ಕುಟುಂಬ, ಚೆನ್ನೈನ ಟಿ.ನಗರದಲ್ಲಿ ವಾಸಿಸ್ತಾ ಇತ್ತು.

ಒಂದು ಭಾನುವಾರ ಜೆ.ಕುಮಾರ್ ಅಣ್ಣಾವರ ಮನೆಗೆ ಊಟಕ್ಕೆಂದು ಹೋಗಿದ್ದರಂತೆ. ಮಧ್ಯಾಹ್ನದ ಊಟ ಮುಗಿಸಿ ಎಲ್ಲರೂ ಟಿವಿ ಹಾಲ್‍ನಲ್ಲಿ ಟಿವಿ ನೋಡೋದು ಅಣ್ಣಾವರ ಕುಟುಂಬದ ಪ್ರತೀತಿ. ಅದರಂತೆ ಅವತ್ತೂ ಕೂಡ ಮನೆಮಂದಿ ಎಲ್ಲ ಟಿವಿ ಹಾಲ್‍ನಲ್ಲಿ ಕೂತು ಟಿವಿ ನೋಡುತ್ತಾ ಇದ್ದಾರೆ. ಕನ್ನಡಿಗರ ಕಣ್ಮಣಿ ಡಾ.ರಾಜ್‍ಕುಮಾರ್ ನೋಡಿ ಎಷ್ಟು ಸರಳವಾಗಿ ನಿಂತಿದ್ದಾರೆ. ಅವರು ತೆರೆಯ ಮೇಲೆ, ಬಾಂಡ್ ಆಗಿ ಕಂಡಿದ್ದಾರೆ, ರಾಜನಾಗಿ ರಾರಾಜಿಸಿದ್ದಾರೆ. ಆದರೆ ನಿಜ ಜೀವನದಲ್ಲಿ ಅವರು ಯಾವತ್ತೂ ಈ ಫೊಟೋದಲ್ಲಿರುವಷ್ಟೆ ಅಷ್ಟೇ ಸರಳ. ಇನ್ನು ಈ ಫೋಟೋದಲ್ಲಿ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಮಗಳು ಲಕ್ಷ್ಮೀ ಇದಾರೆ.

ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹೇರ್ ಸ್ಟೈಲ್ ನೋಡಿ. ಅದು ಹಿಪ್ಪಿ ಕಟ್ಟಿಂಗ್ ಅಂತ. ಆಗಿನ ಕಾಲಕ್ಕೆ ಅದು ಟ್ರೆಂಡ್ ಆಗಿತ್ತು. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಕತೆಗಳು ಪ್ರತಿಯೊಂದು ಫೋಟೋ ಹಿಂದೆನೂ ಇರುತ್ತೆ. ನಾಳೆ ಇನ್ನೊಂದು ಫೋಟೋ ತರುತ್ತೇವೆ ನೋಡುತ್ತಾ ಇರಿ.

 
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ