ಜೋರ್ಡಾನ್​ನಲ್ಲಿ 3 ತಿಂಗಳು ಲಾಕ್; ತವರಿಗೆ ವಾಪಾಸ್ಸಾದ ಸ್ಟಾರ್ ನಟನಿಗೆ ಕ್ವಾರಂಟೈನ್

ಕೊಚ್ಚಿಗೆ ಬರುತ್ತಲೇ ಪೃಥ್ವಿರಾಜ್ ಸುಕುಮಾರನ್, ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿಕೊಂಡು, 15 ದಿನಗಳ ಸೆಲ್ಫ್ ಕ್ವಾರಂಟೈನ್​ಗೆ ತೆರಳಿದ್ದಾರೆ. ಪತಿಯಿಲ್ಲದೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಪತ್ನಿ ಸುಪ್ರಿಯಾ ಕೂಡ ಪೃಥ್ವಿರಾಜ್ ಮತ್ತೆ ಬಂದಿದ್ದನ್ನು ನೋಡಿ ಸಂತಸಗೊಂಡಿದ್ದಾರೆ.

ಪೃಥ್ವಿರಾಜ್ ಸುಕುಮಾರನ್

ಪೃಥ್ವಿರಾಜ್ ಸುಕುಮಾರನ್

  • Share this:
ಮಲಯಾಳಂ ಸೂಪರ್​ಸ್ಟಾರ್ ಪೃಥ್ವಿರಾಜ್ ಸುಕುಮಾರನ್, ಆಡುಜೀವಿತಮ್ ಸಿನಿಮಾ ಶೂಟಿಂಗ್​ಗಾಗಿ ಜೋರ್ಡಾನ್​ಗೆ ತೆರಳಿದ್ದರು. ಬ್ಲೆಸ್ಸಿ ನಿರ್ದೇಶನವಿರುವ ಈ ಚಿತ್ರದ ಶೂಟಿಂಗ್ ಪ್ರಾರಂಭದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಡೆಯಿತು. ಆದರೆ ಕೊರೋನಾ ಕಾಡ್ಗಿಚ್ಚಿನಂತೆ ವಿಶ್ವದೆಲ್ಲೆಡೆ ಹಬ್ಬಿದ ಪರಿಣಾಮ ಜೋರ್ಡಾನ್​​ನಲ್ಲಿ ಮಾರ್ಚ್ 27ರಿಂದ ಶೂಟಿಂಗ್ ಸ್ಥಗಿತಗೊಳಿಸಲಾಯಿತು. ಕೆಲ ದಿನಗಳಲ್ಲೇ ಎಲ್ಲವೂ ಸರಿ ಹೋಗುತ್ತೆ, ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭಿಸಲು ಚಿಂತಿಸಿದ ಚಿತ್ರತಂಡ ಅಲ್ಲಿಯೇ ಉಳಿದಿತ್ತು.

ಆದರೆ ಎರಡೂವರೆ ತಿಂಗಳಾದರೂ ಮತ್ತೆ ಶೂಟಿಂಗ್ ಶುರುವಾಗುವ ಸೂಚನೆಯೇ ಸಿಗಲಿಲ್ಲ. ಅದರಿಂದಾಗಿ ಕೆಲಸವೂ ಇಲ್ಲದೇ, ಹಣವೂ ಖಾಲಿಯಾಗಿ ಬರೋಬ್ಬರಿ 58 ಜನರ ದೊಡ್ಡ ಟೀಂ ಜೋರ್ಡಾನ್​ನಲ್ಲಿ ಸಿಕ್ಕಿಕೊಂಡಿತ್ತು. ಇತ್ತ ಪೃಥ್ವಿರಾಜ್ ಸೇರಿದಂತೆ ಚಿತ್ರತಂಡದ ಎಲ್ಲ ಸದಸ್ಯರ ಕುಟುಂಬದವರೂ ಚಿಂತಿತರಾಗಿದ್ದರು.

ಪ್ರದರ್ಶನ ಪ್ರಾರಂಭಿಸಲು ಮಲ್ಟಿಪ್ಲೆಕ್ಸ್ ಗಳು ರೆಡಿ, ಬಿಡುಗಡೆಗೆ ಸಿದ್ಧವಾಗಿವೆ ಸ್ಟಾರ್​ ನಟರ ಚಿತ್ರಗಳು

  
View this post on Instagram
 

BACK! #OffToQuarantineInStyle


A post shared by Prithviraj Sukumaran (@therealprithvi) on


ಕಳೆದ ಏಪ್ರಿಲ್ 25 ರಂದು ಪೃಥ್ವಿರಾಜ್ ಹಾಗೂ ಸುಪ್ರಿಯಾ ದಂಪತಿಯ ವಿವಾಹ ವಾರ್ಷಿಕೋತ್ಸವವಿತ್ತು. ಆಗಲೂ ಪೃಥ್ವಿರಾಜ್ ಭಾರತಕ್ಕೆ ವಾಪಸ್ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಜೋರ್ಡಾನಿನ ಭಾರತೀಯ ರಾಯಭಾರ ಕಛೇರಿ ಅಲ್ಲಿ ಸಿಲುಕಿಕೊಂಡಿದ್ದ 187 ಮಂದಿ ಭಾರತೀಯರನ್ನು ವಾಪಸ್ ಸ್ವದೇಶಕ್ಕೆ ಕಳುಹಿಸಿದೆ. ಅವರಲ್ಲಿ 58 ಮಂದಿ ಆಡುಜೀವಿತಮ್ ಟೀಂ ಕೂಡ ಸೇರಿದೆ. ನಿನ್ನೆಯಷ್ಟೇ ದೆಹಲಿ ಹಾಗೂ ಕೊಚ್ಚಿಗೆ ತಲುಪಿದ್ದಾರೆ.

ಕೊಚ್ಚಿಗೆ ಬರುತ್ತಲೇ ಪೃಥ್ವಿರಾಜ್ ಸುಕುಮಾರನ್, ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿಕೊಂಡು, 15 ದಿನಗಳ ಸೆಲ್ಫ್ ಕ್ವಾರಂಟೈನ್​ಗೆ ತೆರಳಿದ್ದಾರೆ. ಪತಿಯಿಲ್ಲದೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಪತ್ನಿ ಸುಪ್ರಿಯಾ ಕೂಡ ಪೃಥ್ವಿರಾಜ್ ಮತ್ತೆ ಬಂದಿದ್ದನ್ನು ನೋಡಿ ಸಂತಸಗೊಂಡಿದ್ದಾರೆ.

ಟಾಲಿವುಡ್​​ ಸಿನಿ ರಂಗಕ್ಕೆ ಸಿಹಿ ಸುದ್ದಿ; ಶೀಘ್ರದಲ್ಲೇ ಶೂಟಿಂಗ್​ಗೆ ಅವಕಾಶ

  
View this post on Instagram
 

He’s back! 😊


A post shared by Supriya Menon Prithviraj (@supriyamenonprithviraj) on


ಇನ್ನು ಆಡುಜೀವಿತಮ್ ಸಿನಿಮಾ ವಿಷಯಕ್ಕೆ ಬರೋದಾದರೆ, ಇದು ಸರ್ವೈವಲ್ ಡ್ರಾಮಾ. ಸೌದಿ ಅರೇಬಿಯಾಗೆ ಕೆಲಸ ಅರಸಿಕೊಂಡು ಹೋಗುವ ಭಾತೀಯನೊಬ್ಬ, ಅಲ್ಲಿನ ಮರುಭೂಮಿಯಲ್ಲಿ ಕಳೆದುಹೋಗುತ್ತಾನೆ. ನಂತರ ಹೇಗೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ ಎಂಬುದೇ ಚಿತ್ರದ ಸ್ಟೋರಿ. ಪೃಥ್ವಿರಾಜ್ ಸುಕುಮಾರನ್​ಗೆ ಅಮಲಾ ಪೌಲ್ ನಾಯಕಿಯಾಗಿದ್ದು, ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತವಿದೆ.

  
View this post on Instagram
 

#Aadujeevitham Schedule Pack up! 😊❤️


A post shared by Prithviraj Sukumaran (@therealprithvi) on
First published: