SIIMA Awards 2021: ಕನ್ನಡದ 3 ಚಿತ್ರಗಳು ನಾಮಿನೇಟ್​; ನಿಮ್ಮ ನೆಚ್ಚಿನ ಚಿತ್ರಕ್ಕೆ ವೋಟ್ ಮಾಡೋದು ಹೇಗೆ?

ಕನ್ನಡದಲ್ಲಿ 2021ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತ್ಯುತ್ತಮ ಚಿತ್ರ  ಪ್ರಶಸ್ತಿಗೆ ತರುಣ್​ ನಿರ್ದೇಶನದ ರಾಬರ್ಟ್​, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’, ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’, ಚಿತ್ರಗಳು ನಾಮ ನಿರ್ದೇಶನಗೊಂಡಿದೆ.

ಕನ್ನಡದ 3 ಚಿತ್ರಗಳು ನಾಮಿನೇಟ್

ಕನ್ನಡದ 3 ಚಿತ್ರಗಳು ನಾಮಿನೇಟ್

  • Share this:
ಪ್ರತಿಷ್ಠಿತ ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅಥವಾ ‘ಸೈಮಾ 2021’ನೇ (SIIMA 2021) ಸಾಲಿನ ನಾಮನಿರ್ದೇಶನ ಪಟ್ಟಿ ಬಿಡುಗಡೆ ಆಗಿದೆ. ಸೈಮಾ 10ನೇ ಆವೃತ್ತಿ (2021) ಬೆಂಗಳೂರಿನಲ್ಲಿ ಇದೇ ಸೆ.10 ಹಾಗೂ 11ರಂದು ನಡೆಯಲಿದ್ದು, ಬುಧವಾರ ಸೈಮಾ ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ವಿವಿಧ ಸಿನಿಮಾಗಳು ಇಲ್ಲಿ ನಾಮನಿರ್ದೇಶನಗೊಂಡಿವೆ. ಕನ್ನಡದಿಂದ ಮೂರು ಚಿತ್ರಗಳು ನಾಮಿನೇಟ್ ಆಗಿವೆ. 

ಕನ್ನಡದ ಮೂರು ಚಿತ್ರಗಳು ನಾಮಿನೇಟ್​

ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡದಲ್ಲಿ ನಾಮನಿರ್ದೇಶನಗೊಂಡ ಸಿನಿಮಾಗಳ ವಿವರವನ್ನು ಸೈಮಾ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ. ಕನ್ನಡದಲ್ಲಿ 2021ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತ್ಯುತ್ತಮ ಚಿತ್ರ  ಪ್ರಶಸ್ತಿಗೆ ತರುಣ್​ ನಿರ್ದೇಶನದ ರಾಬರ್ಟ್​, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’, ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’, ಚಿತ್ರಗಳು ನಾಮ ನಿರ್ದೇಶನಗೊಂಡಿದೆ.

Puneeth Rajkumar Yuvarathnaa Film award best Kannada entertainment film of 2021 award in Bengaluru International Film Festival
ಯುವರತ್ನ


ಸಿನಿಮಾಗಳಿಗೂ ನೀವು  ವೋಟ್​ ಮಾಡಿ

ರಾಬರ್ಟ್​,  ಯುವರತ್ನ, ರಾಜ್‌ ಬಿ.ಶೆಟ್ಟಿ , ನಿರ್ದೇಶಿಸಿರುವ ಗರುಡ ಗಮನ ವೃಷಭ ವಾಹನ ಚಿತ್ರಗಳು ನಾಮ ನಿರ್ದೇಶನಗೊಂಡಿದೆ. ಜನರು www.siima.inಗೆ ಲಾಗ್‌ಇನ್‌ ಆಗಿ ತಮ್ಮ ನೆಚ್ಚಿನ ಸಿನಿಮಾಗೆ ವೋಟ್‌ ಮಾಡಬಹುದಾಗಿದೆ.

ಇನ್ನು ಕನ್ನಡದಲ್ಲಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಸಿನಿಮಾಗಳ ಪೈಕಿ ರಾಬರ್ಟ್‌ ಮುಂಚೂಣಿಯಲ್ಲಿದೆ. 10 ವಿಭಾಗಗಳಲ್ಲಿ ಈ ಸಿನಿಮಾ ನಾಮನಿರ್ದೇಶನಗೊಂಡಿದೆ. ಗರುಡ ಗಮನ ವೃಷಭ ವಾಹನ ಸಿನಿಮಾ 8 ವಿಭಾಗಗಳಲ್ಲಿ ಹಾಗೂ ಯುವರತ್ನ ಏಳು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.

ಇದನ್ನೂ ಓದಿ: Gaalipata 2: ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಹಾರಾಡ್ತಿದೆ ಗಾಳಿಪಟ-2; 3ನೇ ದಿನವೂ ಭರ್ಜರಿ ಕಲೆಕ್ಷನ್​

ಅಲ್ಲು ಅರ್ಜುನ್‌ ನಟನೆಯ ಪುಷ್ಪ ಸಿನಿಮಾ, 12 ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳುವ ಮೂಲಕ, ಅತಿ ಹೆಚ್ಚು ವಿಭಾಗದಲ್ಲಿ ನಾಮನಿರ್ದೇಶನಗೊಂಡ ಸಿನಿಮಾ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮಲಯಾಳಂನಲ್ಲಿ ‘ಮಿನ್ನಲ್‌ ಮುರುಳಿ’ ಹಾಗೂ ನಂದಮೂರಿ ಬಾಲಕೃಷ್ಣ ನಟನೆಯ ತೆಲುಗು ಸಿನಿಮಾ ‘ಅಖಂಡ’, ತಮಿಳಿನಲ್ಲಿ ಧನುಷ್‌ ನಟನೆಯ ‘ಕರ್ಣನ್‌’ ತಲಾ 10 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ತೆಲುಗಿನಲ್ಲಿ ಪುಷ್ಪ 12 ಕ್ಯಾಟಗರಿಯಲ್ಲಿ ನಾಮಿನೇಟ್​

‘ಪುಷ್ಪ’ ಚಿತ್ರ 2021ರ ಅಂತ್ಯಕ್ಕೆ ತೆರೆಗೆ ಬಂತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಈ ಚಿತ್ರ 12 ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದೆ. ಬಾಲಯ್ಯ ಅವರ ‘ಅಖಂಡ’ ಸಿನಿಮಾಗೂ ಮನ್ನಣೆ ಸಿಕ್ಕಿದ್ದು, 10 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಕೃತಿ ಶೆಟ್ಟಿ ನಟನೆಯ ‘ಉಪ್ಪೇನ’ ಚಿತ್ರ 8 ವಿಭಾಗದಲ್ಲಿ ಆಯ್ಕೆ ಆಗಿದೆ.

ಇದನ್ನೂ ಓದಿ: Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

ಉಳಿದಂತೆ ತಮಿಳಿನಲ್ಲಿ ಕರ್ಣನ್​, ಡಾನ್​, ಡಾಕ್ಟರ್, ಮಾಸ್ಟರ್ ಚಿತ್ರಗಳು ವಿವಿಧ ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಮಲಯಾಳಂನಲ್ಲಿ ಮಿನ್ನಲ್​ ಮುರಳಿ, ಕುರುಪ್, ಮಲಿಕ್, ಜೋಜಿ ಚಿತ್ರಗಳು ನಾಮ ನಿರ್ದೇಶನಗೊಂಡಿವೆ.
Published by:Pavana HS
First published: