27 ವರ್ಷಗಳ ಹಿಂದೆ ಧೂಳೆಬ್ಬಿಸಿದ್ದ ಈ ಸಿನಿಮಾ ಈಗ ‌ಪಾರ್ಟ್ 2 ಅವತಾರದಲ್ಲಿ!

ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಮೊದಲಿಗೆ ತೆರೆಗೆ ಬರಲಿದ್ದು, ನಂತರ ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

ಕೆ.ಟಿ. ಕುಂಜುಮೊನ್

ಕೆ.ಟಿ. ಕುಂಜುಮೊನ್

  • Share this:
1993ರಲ್ಲಿ ತೆರೆಕಂಡಿದ್ದ ಜಂಟಲ್ ಮನ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ರೀತಿಯ ದಾಖಲೆ ನಿರ್ಮಿಸಿತ್ತು. ಈ ಚಿತ್ರದ ಮೂಲಕ ಡೈರೆಕ್ಟರ್ ಶಂಕರ್ ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿದ್ದರು. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವೃತ್ತಿಬದುಕಿಗೆ ಇದು ದೊಡ್ಡ ತಿರುವು ನೀಡಿತ್ತು. ಎ. ಆರ್ ರೆಹಮಾನ್ ಸಂಗೀತ ನಿರ್ದೇಶನದ ಹಾಡುಗಳಂತೂ ಎಲ್ಲರ ಗಮನ ಸೆಳೆದಿದ್ದವು. ಇಂಥ ಸೂಪರ್ ಹಿಟ್ ಚಿತ್ರವನ್ನು ನಿರ್ಮಿಸಿದವರು ಮೆಘಾ ಸಿನಿಮಾ ಸಂಸ್ಥೆಯ ಕೆ.ಟಿ. ಕುಂಜುಮೊನ್.

ಇದಕ್ಕೂ ಮುಂಚೆ ವಸಂತಕಾಲ ಪಾರ್ವೈ, ಸೂರ್ಯನ್ ಸಿನಿಮಾಗಳನ್ನು ನಿರ್ಮಿಸಿದ್ದ ಕುಂಜುಮೊನ್ ಜಂಟಲ್ ಮನ್​ನ ಅಮೋಘ ಯಶಸ್ಸಿನ ನಂತರ ಕಾದಲನ್, ಕಾದಲ್ ದೇಶಂ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಪ್ರತಿದಿನ ಗೋಮೂತ್ರ ಕುಡಿಯುತ್ತಾರಂತೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್ ಕುಮಾರ್!

ಮಲಯಾಳಂ ಸೂಪರ್ ಸ್ಟಾರ್ ಗಳಾದ ಮಮ್ಮೂಟಿ ಮತ್ತು ಮೋಹನ್ ಲಾಲ್ ಸೇರಿದಂತೆ ಸಾಕಷ್ಟು ಜನ ಮಾಲಿವುಡ್ ನಟರ ಸಿನಿಮಾಗಳನ್ನು ನಿರ್ಮಿಸಿರುವ ಕೀರ್ತಿ ಇವರದ್ದು. ಅಷ್ಟೇ ಅಲ್ಲದೆ, ವಿತರಕರಾಗಿಯೂ ಕಾರ್ಯನಿರ್ವಹಿಸಿ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ರಂಥಹ ದೊಡ್ಡ ನಟರ ನೂರಾರು ಸಿನಿಮಾಗಳನ್ನು ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಇದೇ ಕೆ.ಟಿ. ಕುಂಜುಮೊನ್ ಈಗ ಜಂಟಲ್ ಮನ್ -2 ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಮೊದಲಿಗೆ ತೆರೆಗೆ ಬರಲಿದ್ದು, ನಂತರ ಇತರೆ ಭಾಷೆಗಳಲ್ಲಿಯೂ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ. ಅತ್ಯಾಧುನಿಕ ಟೆಕ್ನಾಲಜಿ, ತಾಂತ್ರಿಕ ಕೌಶಲ್ಯಗಳನ್ನು ಬಳಸಿ ಈ ಚಿತ್ರವನ್ನು ದೃಶ್ಯರೂಪಕ್ಕೆ ಇಳಿಸಲು ಸಜ್ಜಾಗುತ್ತಿದ್ದಾರೆ ಕುಂಜುಮೊನ್.

Vadivel Balaji Dies: ತಮಿಳಿನ ಖ್ಯಾತ ಕಿರುತೆರೆ ಹಾಸ್ಯನಟ ವಡಿವೇಲ್ ಬಾಲಾಜಿ ಹಠಾತ್‌ ನಿಧನ!

ಸದ್ಯಕ್ಕೆ ದೊಡ್ಡ ಬ್ಯಾನರ್, ಹಲವು ನಟರು, ನಿರ್ದೇಶಕರಿಗೆ  ಲೈಫ್ ಕೊಟ್ಟ ನಿರ್ಮಾಪಕ ಅನ್ನೋ ಕಾರಣದಿಂದಲೇ ಜಂಟಲ್ ಮನ್-೨ ಸೌತ್ ಸಿನಿದುನಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಕಾಸ್ಟ್ ಮತ್ತು ಕ್ರೂ ಹಾಗೂ ಇನ್ನಿತರ ಮಾಹಿತಿ ಹೊರ ಬಿದ್ದ ನಂತರವಷ್ಟೆ ಸಿನಿಮಾ ಬಿರುಗಾಳಿ ಎಬ್ಬಿಸುತ್ತಾ? ಕಾದು ನೋಡಬೇಕು.
Published by:Vinay Bhat
First published: