ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಯುವ ನಟ: ಒಂದೇ ವರ್ಷದಲ್ಲಿ ಆರು ಸಾವು..!

Actor Mysterious Death: ಆತನಿಗೆ ಇನ್ನೂ 27 ವರ್ಷ. ಸಿನಿ ರಂಗದಲ್ಲಿ ತಮ್ಮ ಸಿನಿಮಾಗಳ ಮೂಲಕ ಖ್ಯಾತಿ ಪಡೆಯುತ್ತಿದ್ದ ನಟ. ಆದರೆ ಇದ್ದಕ್ಕಿದಂತೆ ಈತನ ಸಾವಿನ ಸುದ್ದಿ ಬಂದಿದೆ. ಅದರಲ್ಲೂ ಈತ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ. 

Anitha E | news18-kannada
Updated:December 4, 2019, 5:54 PM IST
ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಯುವ ನಟ: ಒಂದೇ ವರ್ಷದಲ್ಲಿ ಆರು ಸಾವು..!
ಸಾಂದರ್ಭಿಕ ಚಿತ್ರ
  • Share this:
ಇತ್ತೀಚೆಗಷ್ಟೆ ಕೆನಡಿಯನ್​ ನಟನೋರ್ವ ಚಿತ್ರೀಕರಣದ ವೇಳೆಯೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿತ್ತು. ಇದು ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೋರ್ವ ನಟನ ಸಾವಿನ ಸುದ್ದಿ ಬಂದಿದೆ.

ಆತನಿಗೆ ಇನ್ನೂ 27 ವರ್ಷ. ಸಿನಿ ರಂಗದಲ್ಲಿ ತಮ್ಮ ಸಿನಿಮಾಗಳ ಮೂಲಕ ಖ್ಯಾತಿ ಪಡೆಯುತ್ತಿದ್ದ ನಟ. ಆದರೆ ಇದ್ದಕ್ಕಿದಂತೆ ಈತನ ಸಾವಿನ ಸುದ್ದಿ ಬಂದಿದೆ. ಅದರಲ್ಲೂ ಈತ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ.

South Korean Actor Cha In Haa Death
ದಕ್ಷಿಣ ಕೊರಿಯಾದ ನಟ ಚಾ ಇನ್ ಹಾ


ದಕ್ಷಿಣ ಕೊರಿಯಾದಲ್ಲಿ ಕೆಲ ಸಮಯದಿಂದ ಸಾಲಾಗಿ ಸಿನಿ ರಂಗಕ್ಕೆ ಸೇರಿದವರ ಸಾವು ಸಂಭವಿಸುತ್ತಿದೆ. ಕೆಲವರು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೆ ಕೆಲವರು ಒತ್ತಡದಿಂದಾಗಿ ಅನಾರೋಗ್ಯಕ್ಕೀಡಾಗಿ ಮರಣ ಹೊಂದುತ್ತಿದ್ದಾರೆ. ಅದೇ ರೀತಿ ಈಗ ಮತ್ತೊರ್ವ ನಟ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇದು ಸೇರಿದಂತೆ ಒಂದು ವರ್ಷದಲ್ಲಿ ಸಿನಿ ರಂಗಕ್ಕೆ ಸೇರಿದ ಆರು ಮಂದಿ ಮರಣ ಹೊಂದಿದ್ದಾರೆ.

'ದಿ ಬ್ಯಾಂಕರ್', '​ಲವ್​ ವಿತ್​ ಫ್ಲಾಸ್'​ ನಂತಹ ಡ್ರಾಮಾ ಶೋಗಳಲ್ಲಿ ನಟಿಸಿರುವ ಚಾ ಇನ್ ಹಾ  ಅವರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರದ್ದು ಆತ್ಮಹತ್ಯೆನಾ ಅಥವಾ ಹತ್ಯೆನಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

South Korean Actor Cha In Haa Death
ದಕ್ಷಿಣ ಕೊರಿಯಾದ ನಟ ಚಾ ಇನ್ ಹಾ


ಈ ಹಿಂದೆ ಕೊರಿಯನ್​ ಪಾಪ್​ ಸ್ಟಾರ್​ ಸೂಲಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲಿನ ಕಲಾವಿದರು ಮಾನಸಿಕ ಸ್ಥಿತಿಯ ಕಾರಣದಿಂದಾಗಿ ಸಾವಿನ ಮನೆ ಸೇರುತ್ತಿದ್ದಾರೆ ಎಂದು ಕೊರಿಯನ್​ ಸಿನಿರಂಗ ಕಂಬನಿ ಮಿಡಿಯುತ್ತಿದೆ. ಸೂಲಿ ಸಾವಿನ ಆರು ತಿಂಗಳ ನಂತರ ನಟ ಗೊ ಹಾರ ಎಂಬ ನಟನ ಶವ ಅಪಾರ್ಟ್​ಮೆಂಟ್​ವೊಂದರಲ್ಲಿ ಸಿಕ್ಕಿತ್ತು. ಈಗ ಚಾ ಇನ್​ ಹಾ ಅವರ ಸಾವಿನಿಂದಾಗಿ ಅಲ್ಲಿನ ಚಿತ್ರರಂಗ ನೋವಿನ ಜತೆ ಶಾಕ್​ನಲ್ಲಿದೆ.Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ