ಕಿರುತೆರೆ ನಟಿಯ ಮೇಲೆ ಅತ್ಯಾಚಾರ: ಸ್ನೇಹಿತನಿಂದಲೇ ನೀಚ ಕೃತ್ಯ..!

ಲಾಕ್​ಡೌನ್​ ಸಂದರ್ಭದಲ್ಲಿ ಫೇಸ್​ಬುಕ್ ಮೂಲಕ ಭೇಟಿ ಮಾಡಲು ವಿನಂತಿಕೊಂಡಿಸಿದ್ದನು. ಅಲ್ಲದೆ ತಾನು ನಷ್ಟದಲ್ಲಿರುವುದಾಗಿ ತಿಳಿಸಿ ಹಣ ಸಹಾಯವನ್ನು ಕೇಳಿದ್ದ. ಅದರಂತೆ ಜುಲೈ 5 ರಂದು ಅಪಾರ್ಟ್​ಮೆಂಟ್​ಗೆ ಬಂದಿದ್ದ.

news18-kannada
Updated:July 9, 2020, 9:11 PM IST
ಕಿರುತೆರೆ ನಟಿಯ ಮೇಲೆ ಅತ್ಯಾಚಾರ: ಸ್ನೇಹಿತನಿಂದಲೇ ನೀಚ ಕೃತ್ಯ..!
ಸಾಂದರ್ಭಿಕ ಚಿತ್ರ
  • Share this:
ಬೆಂಗಾಲಿಯ ಕಿರುತೆರೆ ನಟಿಯೊಬ್ಬರು ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ಸಾಥ್ ಭಾಯ್ ಚಂಪಾ ಸೇರಿದಂತೆ ಒಂದಷ್ಟು ಧಾರಾವಾಹಿ ಮತ್ತು ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ನಟಿಯ ಪರಿಚಿತನಿಂದಲೇ ಈ ಕೃತ್ಯ ನಡೆದಿದೆ. ಈ ಸಂಬಂಧ ಜಾಧವ್​ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾನು ವಾಸವಿರುವ ಬಿಜೋಗಢ್​ ಅಪಾರ್ಟ್​ಮೆಂಟ್​ಗೆ ಆರೋಪಿ ಜುಲೈ 5 ರಂದು ಭೇಟಿ ನೀಡಿದ್ದ. ಈ ವೇಳೆ ಯಾರೂ ಇಲ್ಲದಿರುವುದನ್ನು ಗಮನಿಸಿ, ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ಈ ನೀಚ ಕೃತ್ಯವನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ್ದನು. ಈ ವಿಡಿಯೋ ಇಟ್ಟುಕೊಂಡು ಬೆದರಿಸಿದ್ದಲ್ಲದೆ, ಈ ಬಗ್ಗೆ ದೂರು ನೀಡದ್ರೆ ಸುಮ್ಮನಿರಲ್ಲ ಎಂದು ಬೆದರಿಕೆಯೊಡ್ಡಿದ್ದ ಎಂದು 26ರ ನಟಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮೂಲತಃ ನಟಿ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯವರು. ಬಣ್ಣದ ಲೋಕದ ಕನಸುಗಳೊಂದಿಗೆ ಕೊಲ್ಕತ್ತಾದಲ್ಲಿ ನೆಲೆಸಿದ್ದರು. ಮಾಡೆಲಿಂಗ್​ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ನಟಿಗೆ ಕೆಲ ವರ್ಷಗಳ ಪರಿಚಿತನಾಗಿದ್ದ ಆರೋಪಿಯೊಂದಿಗೆ ಸ್ನೇಹ ಸಂಬಂಧವಿತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ದೂರವಾಗಿದ್ದರು ಎನ್ನಲಾಗಿದೆ.

ಲಾಕ್​ಡೌನ್​ ಸಂದರ್ಭದಲ್ಲಿ ಫೇಸ್​ಬುಕ್ ಮೂಲಕ ಭೇಟಿ ಮಾಡಲು ವಿನಂತಿಕೊಂಡಿಸಿದ್ದನು. ಅಲ್ಲದೆ ತಾನು ನಷ್ಟದಲ್ಲಿರುವುದಾಗಿ ತಿಳಿಸಿ ಹಣ ಸಹಾಯವನ್ನು ಕೇಳಿದ್ದ. ಅದರಂತೆ ಜುಲೈ 5 ರಂದು ಅಪಾರ್ಟ್​ಮೆಂಟ್​ಗೆ ಬಂದಿದ್ದ. ಆರಂಭದಲ್ಲಿ ಉತ್ತಮವಾಗಿಯೇ ನಡೆದುಕೊಂಡಿದ್ದ ಆತ, ಬಳಿಕ ಯಾರು ಇಲ್ಲದಿರುವುದನ್ನು ಗಮನಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿರುವ ಜಾಧವ್​​ಪುರ್ ಪೊಲೀಸರು ಅತ್ಯಚಾರ ಆರೋಪಿಯ ಹುಡುಕಾಟದಲ್ಲಿದೆ.
Published by: zahir
First published: July 9, 2020, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading