ತೆರೆ ಕಂಡ 25 ದಿನಗಳಲ್ಲಿ 'ಉರಿ' ಬಾಚಿಕೊಂಡಿದ್ದು 250 ಕೋಟಿ..!

ದೇಶಭಕ್ತಿ ಅಥವಾ ದೇಶದ ಗಡಿ ಕಾಯುವ ಕುರಿತ ಸಿನಿಮಾಗಳನ್ನು ಮಾಡುವುದು ಸುಲಭ ಮಾತಲ್ಲ. ಇಂತಹ ಸಿನಿಮಾಗಳು ತೆರೆ ಕಂಡು ಯಶಸ್ಸು ಕಾಣುವುದು ಹಾಗೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತವೆ ಎಂದರೆ ಅದರ ಕೀರ್ತಿ ನಿರ್ದೇಶಕನಿಗೆ ಸಲ್ಲುತ್ತದೆ. ಇತ್ತೀಚೆಗೆ ತೆರೆಕಂಡ 'ಉರಿ: ದ ಸರ್ಜಿಕಲ್​ ಸ್ಟ್ರೈಕ್​' ಸಿನಿಮಾ ಕೂಡ ಯಾವುದೇ ದೊಡ್ಡ ತಾರಾಬಳಗವಿಲ್ಲದ ಹೋದರೂ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ.

Anitha E | news18
Updated:February 4, 2019, 4:28 PM IST
ತೆರೆ ಕಂಡ 25 ದಿನಗಳಲ್ಲಿ 'ಉರಿ' ಬಾಚಿಕೊಂಡಿದ್ದು 250 ಕೋಟಿ..!
'ಉರಿ' ಸಿನಿಮಾದಲ್ಲಿ ವಿಕ್ಕಿ ಕೌಶಲ್​
Anitha E | news18
Updated: February 4, 2019, 4:28 PM IST
ಸರ್ಜಿಕಲ್ ಸ್ಟ್ರೈಕ್ ಅನ್ನೇ ಆಧಾರವಾಗಿಟ್ಟುಕೊಂಡು ತೆರೆಗೆ ಬಂದಿರೋ 'ಉರಿ' ಚಿತ್ರ ಬಾಕ್ಸಾಫಿಸ್‍ನಲ್ಲಿ ಭರ್ಜರಿಯಾಗಿಯೇ ಸ್ಟ್ರೈಕ್ ಮಾಡುತ್ತಿದೆ. ಬಿಡುಗಡೆಯಾದ 25 ದಿನಗಳಲ್ಲೇ ವಿಶ್ವದಾದ್ಯಂತ 250 ಕೋಟಿಗೂ ಅಧಿಕ ಮೊತ್ತವನ್ನ ಬಾಚಿಕೊಂಡಿದೆ.

ಇದನ್ನೂ ಓದಿ: ಅಪ್ಪು ಅಭಿಮಾನಿಗಳಲ್ಲಿ 'ನಟಸಾರ್ವಭೌಮ'ನ ಫೀವರ್​: ಎರಡು ಚಿತ್ರಮಂದಿರಗಳಲ್ಲಿ ಸತತ 24 ಗಂಟೆಗಳ ಶೋ..!

'ಉರಿ', ಭಾರತೀಯ ಸೇನಾಪಡೆ ಶತ್ರು ದೇಶಕ್ಕೆ ನುಗ್ಗಿ ಉಗ್ರರ ಅಡುಗುದಾಣಗಳನ್ನ ಧ್ವಂಸ ಮಾಡಿದ ಕಥೆಯನ್ನ ಒಳಗೊಂಡಿರೋ ಸಿನಿಮಾ. ನೈಜ ಘಟನೆಯನ್ನ ಅಷ್ಟೇ ನೈಜವಾಗಿ, ರೋಚಕವಾಗಿ ತೆರೆಮೇಲೆ ತಂದಿರೋ ರೀತಿಗೆ ಚಿತ್ರರಸಿಕರು ದೊಡ್ಡ ಮಟ್ಟದಲ್ಲಿಯೇ ಸಲಾಮ್ ಅಂತಿದ್ದಾರೆ. ಪರಿಣಾಮ ಬಾಕ್ಸಾಫಿಸ್ ಸಹ `ಹೌ ಈಸ್ ದ ಜೋಶ್' ಅಂದ್ರೆ `ಹೈ ಸರ್' ಅಂತಿದೆ.

'ಉರಿ' ಸಿನಿಮಾ ಬಿಡುಗಡೆಯಾದ 25 ದಿನಗಳಲ್ಲಿ ವಿಶ್ವದಾದ್ಯಂತ 250 ಕೋಟಿಗೂ ಹೆಚ್ಚು ಅಧಿಕ ಹಣ ಬಾಚಿದೆಕೊಂಡಿದೆ. ಭಾರತದಲ್ಲಿಯೇ 175 ಕೋಟಿ ಹಣಗಳಿಸಿರೋ 'ಉರಿ' ಚಿತ್ರವನ್ನ ಸುಮಾರು 1 ಕೋಟಿ 50 ಲಕ್ಷ ಜನ ನೋಡಿದ್ದಾರಂತೆ.

ಆದಿತ್ಯಾಧರ್ ಎಂಬ ನವ ನಿರ್ದೇಶಕ, ವಿಕ್ಕಿ ಕೌಶಲ್ ಎಂಬ ಅಷ್ಟೇನು ಹೆಸರು ಮಾಡದ ನಟನನ್ನ ಇಟ್ಕೊಂಡು, ಕೇವಲ 30 ಕೋಟಿ ವೆಚ್ಚದಲ್ಲಿ ದೃಶ್ಯರೂಪಕ್ಕಿಳಿಸಿದ ಸಿನಿಮಾ 'ಉರಿ'. ಇಂತಹ ಈ ಸಿನಿಮಾ ಈಗ ದೇಶವಾಸಿಗಳ ಮನಗೆದ್ದಿದೆ.

ಇದನ್ನೂ ಓದಿ: PHOTOS: ಖ್ಯಾತ ಛಾಯಾಗ್ರಾಹಕ ಡಬೂ ರತ್ನಾನಿರ ಸೆಲೆಬ್ರಿಟಿ ಕ್ಯಾಲೆಂಡರ್​ನ 20ನೇ ಸಂಚಿಕೆಯ ಚಿತ್ರಗಳು..!
Loading...

ಸ್ವತಃ ರಕ್ಷಣಾ ಸಚಿವೆ ನಿರ್ಮಲಾ  ಸೀತಾರಾಮನ್ ಈ ಚಿತ್ರವನ್ನ ಬೆಂಗಳೂರಿನಲ್ಲಿ ನೋಡಿದ್ದಾರೆ. ಚಿತ್ರ ನೋಡಿ ಥ್ರಿಲ್ ಆಗಿ ಜೈ ಹಿಂದ್ ಅಂತ ಕೂಗಿದ್ದಾರೆ. ಒಟ್ಟಾರೆ ಬಾಲಿವುಡ್ ಬಾಕ್ಸಾಫಿಸ್ ಕಿಂಗ್ ಎನಿಸಿಕೊಂಡೋರ ಸಿನಿಮಾಗಳೇ 100 ಕೋಟಿ ಗಳಿಸೋಕೆ ಒದ್ದಾಡುತ್ತಿರುವಾಗ, ಕಂಟೆಂಟ್ ಈಸ್ ದಿ ಕಿಂಗ್ ಅನ್ನೋದನ್ನ 'ಉರಿ' ಮತ್ತೊಮ್ಮೆ ಸಾಬೀತು ಮಾಡಿದೆ.

ಬಿ-ಟೌನ್​ನಲ್ಲಿ ಈ ವರ್ಷ ನಡೆಯಲಿದೆ ಬಯೋಪಿಕ್​ ಉತ್ಸವ..

First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626