Shah Rukh Khan: ಬ್ಲಾಕ್​ ಬಾಸ್ಟರ್ ನಿರ್ದೇಶಕರ ಜೊತೆ ಶಾರುಖ್ ಅದೃಷ್ಟ ಪರೀಕ್ಷೆ, ಮತ್ತದೇ ಚಾರ್ಮ್ ಗೆ ಮರಳಲಿದ್ದಾರಾ ಕಿಂಗ್ ಖಾನ್?

ಶಾರುಖ್ ಸಿನಿಮಾ ಜೀವನದಲ್ಲಿ ಮತ್ತದೇ ಚಾರ್ಮ್ ತಂದುಕೊಡುವ ಬಗ್ಗೆ ಸಾಕಷ್ಟು ಪೂರಕ ವಿಚಾರಗಳು ಒಂದರ ಮೇಲೊಂದರಂತೆ ಬರುತ್ತಿವೆ.  ಈ ಮೂಲಕ ಮುಂದಿನ ವರ್ಷ ಅಂದರೆ 2023 ಶಾರುಖ್ ಖಾನ್‌ಗೆ ಗೇಮ್‌ಚೇಂಜರ್ ಆಗುತ್ತದಾ ಎಂಬ ಮಹಾದಾಸೆ ಹುಟ್ಟಿಕೊಂಡಿದೆ.

ಶಾರುಖ್ ಖಾನ್

ಶಾರುಖ್ ಖಾನ್

  • Share this:
ಬಾಲಿವುಡ್‌ನ ಬಾದ್‌ಶಾ, ಶಾರುಖ್ ಖಾನ್ (Shah Rukh Khan) ಸುಮಾರು ನಾಲ್ಕು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದು ಬಿಟ್ಟಿದ್ದಾರೆ. ಕಾರಣ ಸಾಲು ಸಾಲು ಚಿತ್ರಗಳ ಸೋಲು. ದಶಕಗಳ ಕಾಲ ಬಾಲಿವುಡ್ (Bollywood) ಅನ್ನು ಆಳಿದ ಶಾರುಖ್ ಖಾನ್, ಅಭಿಮಾನಿಗಳ ಕಿಂಗ್ ಖಾನ್ ಇತ್ತೀಚಿನ ಕೆಲ ವರ್ಷಗಳಲ್ಲಿ ಒಂದೊಳ್ಳೆ ಹಿಟ್ ಸಿನಿಮಾ (Hit Movies) ನೀಡಲಾಗದೆ ಬೆಳ್ಳಿ ತೆರೆಯಿಂದಲೇ ದೂರವಾಗಿ ಬಿಟ್ಟಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳಿಂದ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ವೀಕ್ಷಿಸದೇ ಅಭಿಮಾನಿಗಳು ಸಹ ರೋಸಿ ಹೋಗಿದ್ದಾರೆ.  ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ 2022ರಲ್ಲಿ ಶಾರುಖ್ ಖಾನ್ ಅವರಿಗೆ ಅನೇಕ ದಿಗ್ಗಜರ ಜೊತೆಗೆ ಸಿನಿಮಾ (Cinema) ಮಾಡುವ ಅವಕಾಶಗಳು ಒದಗಿ ಬಂದಿವೆ.

ಶಾರುಖ್ ಸಿನಿಮಾ ಜೀವನದಲ್ಲಿ ಮತ್ತದೇ ಚಾರ್ಮ್ ತಂದುಕೊಡುವ ಬಗ್ಗೆ ಸಾಕಷ್ಟು ಪೂರಕ ವಿಚಾರಗಳು ಒಂದರ ಮೇಲೊಂದರಂತೆ ಬರುತ್ತಿವೆ.  ಈ ಮೂಲಕ ಮುಂದಿನ ವರ್ಷ ಅಂದರೆ 2023 ಶಾರುಖ್ ಖಾನ್‌ಗೆ ಗೇಮ್‌ಚೇಂಜರ್ ಆಗುತ್ತದಾ ಎಂಬ ಮಹಾದಾಸೆ ಹುಟ್ಟಿಕೊಂಡಿದೆ. ಒಟ್ಟಿನಲ್ಲಿ ಒಂದೇ ಒಂದು ಗೆಲುವಿನ ಮೂಲಕ ಬ್ರೇಕ್ ನೀಡಲು ಕಾಯುತ್ತಿರುವ ಶಾರುಖ್ ಗೆ ಈ ಮೂರು ಸಿನಿಮಾಗಳು ಪ್ರಮುಖ ಘಟ್ಟಗಳಾಗಿವೆ.

ಸಾಲು ಸಾಲು ಸೋಲು ಕಂಡ ಶಾರುಖ್ ಸಿನಿಮಾಗಳು
2013 ರಲ್ಲಿ ಬಿಡುಗಡೆ ಆಗಿದ್ದ 'ಚೆನ್ನೈ ಎಕ್ಸ್ಪ್ರೆಸ್' ಸಿನಿಮಾದ ನಂತರ ಒಂದು ಬಿಗ್ ಹಿಟ್ ಸಿನಿಮಾ ನೀಡಲು ಶಾರುಖ್ ಖಾನ್ಗೆ ಈವರೆಗೆ ಸಾಧ್ಯವಾಗಿಲ್ಲ. ಶಾರುಖ್ ಖಾನ್ ಕೊನೆಯ ಬಾರಿಗೆ ಆನಂದ್ ಎಲ್ ರೈ ಅವರ ಝೀರೋದಲ್ಲಿ ಕಾಣಿಸಿಕೊಂಡರು, ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು. ಇತ್ತೀಚಿನ ವರ್ಷಗಳಲ್ಲಿ, ಶಾರುಖ್ ಅವರ ಚಲನಚಿತ್ರಗಳು 2014ರಲ್ಲಿ ಬಿಡುಗಡೆಯಾದ ಹ್ಯಾಪಿ ನ್ಯೂ ಇಯರ್ ಅವರ ಕೊನೆಯ ಭಾಗಶಃ ಹಿಟ್ ಆಗಿದ್ದು, ಇದು ಸಹ ಮಾರ್ಕ್‌ಗಿಂತ ಕಡಿಮೆ ಪ್ರದರ್ಶನ ನೀಡಿದೆ.

'ಫ್ಯಾನ್', 'ರಯೀಸ್' ಮೇಲೆ ದೊಡ್ಡ ನಿರೀಕ್ಷೆಯನ್ನು ಶಾರುಖ್ ಇಟ್ಟಿದ್ದರೂ ಆ ಸಿನಿಮಾಗಳು ಸಹ ಯಶಸ್ಸು ತಂದುಕೊಡಲಿಲ್ಲ. ಇನ್ನೂ 'ಜಬ್ ಹ್ಯಾರಿ ಮೆಟ್ ಸೇಜಲ್, 'ಜೀರೋ’, ಸಿನಿಮಾಗಳಂತೂ ಕಳಪೆ ಸಿನಿಮಾಗಳು ಎನಿಸಿಕೊಂಡವು. ಈ ಎಲ್ಲಾ ಚಿತ್ರಗಳು ಸಿನಿ ರಸಿಕರು ಮತ್ತು ಶಾರುಖ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡು ಕೆಲ ದಿನಗಳಲ್ಲಿಯೇ ಚಿತ್ರಮಂದಿರಗಳಲ್ಲಿ ಎತ್ತಂಗಡಿ ಕೂಡ ಆದವು. ಹೀಗಾಗಿ ಸತತ ಸೋಲ ಕಂಡ ಶಾರುಖ್ ದೊಡ್ಡ ಹಿಟ್ ನೊಂದಿಗೆ ಬರಲು ಬರೋಬ್ಬರಿ 4 ವರ್ಷ ಕಾದು ಕುಳಿತುಕೊಳ್ಳುವಂತಾಯಿತು.

ಮತ್ತದೇ ಚಾರ್ಮ್ ಗೆ ಮರಳಲಿದ್ದಾರಾ ಕಿಂಗ್ ಖಾನ್ ?
ಆದಾಗ್ಯೂ, ನಾಲ್ಕು ವರ್ಷಗಳ ಅಂತರದ ನಂತರ, ಹಿಂದಿ ಚಿತ್ರರಂಗದ ಮೆಗಾಸ್ಟಾರ್ ಅಭಿಮಾನಿಗಳಿಗೆ ಟ್ರಿಪಲ್ ಟ್ರೀಟ್ ನೀಡಲು ಸಜ್ಜಾಗುತ್ತಿದ್ದಾರೆ. ಏಕೆಂದರೆ ಶಾರುಕ್ ಅಭಿನಯದ ಒಂದಲ್ಲ ಎರಡಲ್ಲ ಮೂರು ಚಿತ್ರಗಳು 2023ರಲ್ಲಿ ತೆರೆಗೆ ಬರಲು ಸಜ್ಜಾಗಿವೆ.

ಇದನ್ನೂ ಓದಿ: 777 Charlie: ದೊಡ್ಡ ಪರದೆಯಲ್ಲಿ ತನ್ನನ್ನೇ ತಾನು ನೋಡಿ ಬೌ ಬೌ ಎಂದ ಚಾರ್ಲಿ, ವಿಡಿಯೋ ಸಖತ್ ಕ್ಯೂಟ್​

ಸೋಲಿನಿಂದ ಕಂಗೆಟ್ಟು ನಾಲ್ಕು ವರ್ಷ ನಟನೆಯಿಂದ ದೂರ ಉಳಿದ ಶಾರುಖ್ ಖಾನ್ ಈಗ 'ಪಠಾಣ್' (ಜನವರಿ 25), ಹೆಸರಿನ ಆಕ್ಷನ್ ಸಿನಿಮಾದಲ್ಲಿ, ಜವಾನ್ (ಜೂನ್ 2) ಮತ್ತು ಡುಂಕಿ (ಡಿಸೆಂಬರ್ 22) ಈ ಮೂರು ಸಿನಿಮಾಗಳು ಶಾರುಖ್ ಸಿನಿ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಗಲಿವೆ.

ಬ್ಲಾಕ್ಬಸ್ಟರ್ ನಿರ್ದೇಶಕರ ಜೊತೆ ಶಾರುಖ್ ಅದೃಷ್ಟ ಪರೀಕ್ಷೆ


  •  ಪಠಾಣ್
    ಶಾರುಖ್ ಅವರು ಈ ಎಲ್ಲಾ ಮೂರು ಚಿತ್ರಗಳಿಗೆ ಬ್ಲಾಕ್ಬಸ್ಟರ್ ಚಲನಚಿತ್ರ ನಿರ್ಮಾಪಕರೊಂದಿಗೆ ಕೈಜೋಡಿಸಿದ್ದಾರೆ. ಪಠಾಣ್ ಅನ್ನು ಸಲಾಮ್ ನಮಸ್ತೆ, ಬ್ಯಾಂಗ್ ಬ್ಯಾಂಗ್ ಮತ್ತು ವಾರ್ ಹೆಲ್ಮರ್ ಸಿನಿಮಾಗಳ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದರೆ. ಕ್ಯೂಟ್ ಜೋಡಿ ಎಂತಾಲೇ 'ಚೆನ್ನೈ ಎಕ್ಸ್ಪ್ರೆಸ್' ಸಿನಿಮಾದಿಂದ ಖ್ಯಾತಿ ಪಡೆದುಕೊಂಡಿರುವ ಶಾರುಖ್ ಮತ್ತು ದೀಪಿಕಾ ಈ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

  • ಜವಾನ್
    ಬಾಕ್ಸ್ ಆಫೀಸ್ ಅಲ್ಲಿ ಕಮಾಲ್ ಮಾಡಿದ್ದ ರಾಜಾ ರಾಣಿ, ತೇರಿ, ಮೆರ್ಸಲ್ ಮತ್ತು ಬಿಗಿಲ್ ನಂತಹ ಸಿನಿಮಾಗಳನ್ನು ನಿರ್ದೇಶಿಸಿದ ತಮಿಳು ನಿರ್ದೇಶಕ ಅಟ್ಲೀ ಶಾರುಖ್ ಅಭಿನಯದ ಜವಾನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಟ್ಲೀ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ವಿಜಯ್ ಜೊತೆ ಮೂರು ಚಿತ್ರಗಳನ್ನು ಮಾಡಿ ಗೆದ್ದಿದ್ದಾರೆ. ಹಿಟ್ ಡೈರೆಕ್ಟರ್ ಎಂದೇ ಗುರುತಿಸಿಕೊಂಡಿರುವ ಅಟ್ಲೀ ಅವರ ಜವಾನ್ ಚಿತ್ರವು ಬಾಲಿವುಡ್ ನಲ್ಲಿ ಚೊಚ್ಚಲ ಪ್ರಯತ್ನವಾಗಿದೆ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ಈಗಾಗ್ಲೇ ಸಾಕಷ್ಟು ಕೂತುಹಲ ಹುಟ್ಟಿಕೊಂಡಿದ್ದು, ಬಿಡುಗಡೆಯಾಗಿರುವ ಟೀಸರ್ ಗೆ ಕೂಡ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

  •  ಡುಂಕಿ
    ಶಾರುಖ್ ಖಾನ್ ಹೊಸ ಸಿನಿಮಾ ಡುಂಕಿಗೆ ಸಹಿ ಮಾಡಿದ್ದು ಆ ಸಿನಿಮಾವನ್ನು ಸೋಲಿಲ್ಲದ ಸರದಾರ ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಲಿದ್ದಾರೆ. ಮುನ್ನಾಭಾಯ್ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯ್, 3 ಈಡಿಯಟ್ಸ್, ಪಿಕೆ ಮತ್ತು ಸಂಜು ಮುಂತಾದ ಬಿಗ್ ಹಿಟ್ ಸಿನಿಮಾಗಳನ್ನು ನೀಡಿದ ರಾಜ್‌ಕುಮಾರ್ ಹಿರಾನಿ ಅವರ ಸಿನಿಮಾದಲ್ಲಿ ನಟ ಶಾರುಖ್ ಖಾನ್ ನಟಿಸಲಿದ್ದಾರೆ. ರಾಜ್ಕುಮಾರ್ ಹಿರಾನಿ ಸಿನಿಮಾ ಸೂಪರ್-ಡೂಪರ್ ಹಿಟ್ ಪಕ್ಕಾ ಎನ್ನುವುದು ಬಾಲಿವುಡ್ನ ಬಲವಾದ ನಂಬಿಕೆ. ಡುಂಕಿ ಸಿನಿಮಾವು ಶಾರುಖ್ ಖಾನ್ ಮತ್ತು ರಾಜ್ಕುಮಾರ್ ಹಿರಾನಿಯ ಮೊದಲ ಜೋಡಿ ಚಿತ್ರವಾಗಿದೆ.


ಹಿಟ್ ನಿರ್ದೇಶಕರ ಜೊತೆ ಕೈ ಜೋಡಿಸಿರುವ ಶಾರುಖ್ಗೆ ಈ ಭಾರಿ ಪಕ್ಕಾ ಗೆಲುವು ಸಿಗಲಿದೆ ಎಂಬ ಮಾತುಗಳು ಉದ್ಯಮದಲ್ಲಿ ಜೋರಾಗಿ ಕೇಳಿ ಬರುತ್ತಿವೆ.

ಪ್ಯಾನ್-ಇಂಡಿಯಾ ಸಿನಿಮಾಗಳು
ಪಠಾಣ್ ಮತ್ತು ಜವಾನ್ ಪ್ಯಾನ್-ಇಂಡಿಯಾ ಬಿಡುಗಡೆಯನ್ನು ಹೊಂದಿರುತ್ತದೆ. ಸಿದ್ಧಾರ್ಥ್ ಮಲ್ಹೋತ್ರಾ ನಿರ್ದೇಶನದ ಪಠಾಣ್ ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಅಟ್ಲೀ ಆಕ್ಷನ್ ಚಿತ್ರ ಜವಾನ್ ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಡಬ್ಬಿಂಗ್ ಆವೃತ್ತಿಗಳಲ್ಲಿ ತೆರೆಗೆ ಬರಲಿದೆ. ಈ ಚಲನಚಿತ್ರಗಳ ವ್ಯಾಪಕ ಬಿಡುಗಡೆಯು ಟಿಕೆಟ್ ವಿಂಡೋಗಳಲ್ಲಿ ಉತ್ತಮ ಉತ್ತೇಜನವನ್ನು ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.

ಹಿಟ್ ನೀಡುತ್ತವೆಯಾ 3 ಸಿನಿಮಾಗಳು?
ಈ ಮೂರು ಚಿತ್ರಗಳ ನಡುವಿನ ಸಾಮಾನ್ಯ ಅಂಶವೆಂದರೆ ಅವು ಮಸಾಲಾ ಮನರಂಜನೆ ಜೊತೆಗೆ ಒಂದೊಳ್ಳೆ ಸಿನಿಮಾಕ್ಕೆ ಸಮಯ ಕೊಡಲು ಯೋಗ್ಯವಾಗಿವೆ. ಜವಾನ್ ಮತ್ತು ಪಠಾಣ್ ಗ್ರ್ಯಾಂಡ್ ಎಂಟ್ರಿಯೊಂದಿಗೆ ಸ್ಟೈಲಿಶ್ ಆಕ್ಷನ್‌ಗಳನ್ನು ಹೊಂದಿದ್ದರೆ, ಡುಂಕಿ ಸಾಕಷ್ಟು ಕಾಮಿಡಿ ಎಂಟಟೇನರ್ ಅಲ್ಲದೇ ಟ್ರೇಡ್‌ಮಾರ್ಕ್ ಹಿರಾನಿ ಚಿತ್ರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:  Nikhil Kumaraswamy ಮಗನ ನಾಮಕರಣದ ಫೋಟೋಗಳು ವೈರಲ್, ಹೇಗಿದ್ದಾನೆ ನೋಡಿ ದೇವೇಗೌಡ್ರ ಮರಿ ಮೊಮ್ಮಗ

ಒಟ್ಟಾರೆ ಈ ಮೂರು ಸಿನಿಮಾಗಳ ಮೂಲಕ 2023 ಕಿಂಗ್ ಖಾನ್ ಗೆ ವರದಾನವಾಗುತ್ತಾ ಕಾದು ನೋಡಬೇಕಿದೆ. ಸತತ ಸೋಲಿನಿಂದ ಕಂಗೆಟ್ಟ ಶಾರುಖ್ ಖಾನ್ ಅವರನ್ನು ಅಭಿಮಾನಿಗಳು ಕೈ ಹಿಡಿದು ಎತ್ತುತ್ತಾರಾ? ಹಿಟ್ ಡೈರೆಕ್ಟರ್ ಮತ್ತು ಶಾರುಖ್ ಖಾನ್ ಜೋಡಿಯ ಸಿನಿಮಾಗಳು ಬಾಲಿವುಡ್ ದಿಕ್ಕನ್ನೇ ಬದಲಾಯಿಸುತ್ತದಾ? ಎಂಬುವುದಕ್ಕೆಲ್ಲಾ ಉತ್ತರ ಚಿತ್ರ ಬಿಡುಗಡೆಯಾದ ನಂತರವೇ ಸಿಗಲಿದೆ.
Published by:Ashwini Prabhu
First published: