2021 ಕಳೆದು 2022 ಬಂದಿದೆ. ಹೊಸ ವರ್ಷ (New Year)ದ ಸಂಭ್ರಮದಲ್ಲಿ ಎಲ್ಲರು ಇದ್ದಾರೆ. ಹೊಸ ವರ್ಷಕ್ಕೆ ಹೊಸದೇನೋ ಮಾಡುವ ಹಂಬಲ, ಆಸೆ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕಳೆದ ವರ್ಷವೂ ಚಿತ್ರರಂಗಕ್ಕೆ ಕೊರೋನಾ ಕಾಟ ಕೊಟ್ಟಿತ್ತು. ಅಂದುಕೊಂಡ ಹಾಗೇ ಯಾವ ಚಿತ್ರಗಳು ಯಶಸ್ಸು ಕಾಣಲಿಲ್ಲ. ಆದರೆ, 2022 ಚಿತ್ರರಂಗಕ್ಕೆ ಬಹಳ ಮುಖ್ಯವಾದ ವರ್ಷ. ಈ ವರ್ಷ ಘಟಾನುಘಟಿಗಳ ಸಿನಿಮಾ (Movie)ಗಳು ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. 2022ರಲ್ಲಿ ಸಾಕಷ್ಟು ನಿರೀಕ್ಷಿತ ಚಿತ್ರಗಳು ಇವೆ. ಸಿನಿ ಪ್ರಿಯರಿಗೆ 2022 ಸಿನಿಮಾ ಹಬ್ಬ (Film Festival)ವೇ ಆಗಿರಲಿದೆ. 2022 ನಿರೀಕ್ಷಿತ ಚಿತ್ರಗಳ ಪಟ್ಟಿ ಬಿಡುಗಡೆ ಆಗಿದೆ. ಅದರಲ್ಲಿ ಕನ್ನಡದ ಕೆಜಿಎಫ್ (KGF), ಆರ್‌ಆರ್‌ಆರ್ (RRR), ರಾಧೆ ಶ್ಯಾಮ್ (Radhe-Shyam), ಸೇರಿದಂತೆ ಹಲವು ಚಿತ್ರಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಎಲ್ಲವೂ ಅಂದು ಕೊಂಡಂತೆ ಆದರೆ 2022 ಚಿತ್ರರಂಗಕ್ಕೆ ವರವಾಗಲಿದೆ. 2022ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ (IMDB) ಸಿದ್ಧಪಡಿಸಿದೆ. ಪಾಪ್ಯುಲಾರಿಟಿ (Popularity) ಹಾಗೂ ವೋಟ್ (Vote)ಗಳ ಆಧಾರದ ಮೇಲೆ ರ‍್ಯಾಂಕ್ ನೀಡಲಾಗಿದೆ. ಇದರಲ್ಲಿ ವಿಶೇಷ ಅಂದರೆ, ಈ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ಸಿನಿಮಾ ಅಂದರೆ ಅದು ಕೆಜಿಎಫ್ 2. ಹೌದು, ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಟ್ಟರೆ ಕನ್ನಡದ (Kannada) ಮತ್ಯಾವ ಸಿನಿಮಾವೂ ಈ ಪಟ್ಟಿಯಲ್ಲಿ ಇಲ್ಲ..
ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತಿದೆ ‘ಆರ್‌ಆರ್‌ಆರ್’
ಮೊದಲ ಸ್ಥಾನದಲ್ಲಿ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಸಿನಿಮಾ ಇದೆ. RRR ಚಿತ್ರ ಹೊಸ ವರ್ಷವನ್ನು ಬರ ಮಾಡಿ ಕೊಳ್ಳುತ್ತಿದೆ. ಜನವರಿ 7ರಂದು ಆರ್‌ಆರ್‌ಆರ್ ತೆರೆ ಕಾಣುತ್ತಿದೆ. ಈ ಮೂಲಕ ಹೊಸ ವರ್ಷವ ಹರ್ಷವನ್ನು ಹೆಚ್ಚಿಸುತ್ತಿದೆ. ಆರ್‌ಆರ್‌ಆರ್ ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡದಲ್ಲಿ ತೆರೆಕಾಣುತ್ತಿದೆ. ರಾಮ್ ಚರಣ್ ತೇಜ, ಜೂನಿಯರ್ ಎನ್ ಟಿ ಆರ್, ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ಇರುವ ಈ ಚಿತ್ರಕ್ಕೆ ಎಸ್, ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಿನಿಮಾ ಮೇಲಿರುವ ನಿರೀಕ್ಷೆ ಹುಟ್ಟಿಸಿದೆ. ಟ್ರೈಲರ್, ಸಾಂಗ್ಗಳಿಂದಲೇ ಆರ್‌ಆರ್‌ಆರ್ ಸಿನಿಮಾ ಎಲ್ಲರ ಮನಗೆದ್ದಿದೆ.
ಇದನ್ನು ಓದಿ: ನಾಳೆ ಸಿಲಿಕಾನ್ ಸಿಟಿಯಲ್ಲಿ `ಆರ್‌ಆರ್‌ಆರ್‘ ಪ್ರೀ ರಿಲೀಸ್ ಇವೆಂಟ್: ಅಬ್ಬಬ್ಬಾ.. ಇವ್ರೆಲ್ಲಾ ಹೋಗ್ತಿದ್ದಾರೆ!
ಮೂರನೇ ಸ್ಥಾನದಲ್ಲಿ ಕೆಜಿಎಫ್ - 2!
ಎರಡನೇ ಸ್ಥಾನವನ್ನು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಪಡೆದುಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಮೂರನೇ ಸ್ಥಾನದಲ್ಲಿದೆ. ಸಂಜಯ್ ದತ್ ಸಿನಿಮಾದಲ್ಲಿ ಪ್ರಮುಖ ಖಳನಾಗಿ ಕಾಣಿಸಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬವಾಗಿದೆ. ಬಹುನಿರೀಕ್ಷಿತ ಪಟ್ಟಿಯಲ್ಲಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ. ಕೆಜಿಎಫ್ ಚಿತ್ರತಂಡ ಸದ್ಯ ಬಾಕಿ ಇರುವ ಚಿತ್ರದ ಕೆಲಸಗಳನ್ನು ಮಾಡಿ ಮುಗಿಸುತ್ತಿದೆ. ರಿಲೀಸ್ ಹತ್ತಿರ ಆಗುತ್ತಿದ್ದಂತೆ. ಚಿತ್ರದ ಪ್ರಚಾರ ಕಾರ್ಯಗಳು ಆರಂಭ ಆಗಲಿವೆ.
ಇದನ್ನು ಓದಿ: ಅಬ್ಬಬ್ಬಾ.. ಏನ್ ಟ್ರಾನ್ಸ್ಫರ್ಮೇಶನ್ ಗುರೂ..ವಿಜಯ್ ದೇವರಕೊಂಡ ನೀವು ಬೀಸ್ಟ್ ಎಂದ ನೆಟ್ಟಿಗರು!
4ನೇ ಸ್ಥಾನದಲ್ಲಿ ‘ರಾಧೆ-ಶ್ಯಾಮ್’, 5ನೇ ಸ್ಥಾನದಲ್ಲಿ ‘ಲಾಲ್ ಸಿಂಗ್ ಛಡ್ಡಾ’!
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಒಟ್ಟಾಗಿ ಕಾಣಿಸಿಕೊಂಡಿರುವ ‘ರಾಧೆ ಶ್ಯಾಮ್’ ಚಿತ್ರ ಜನವರಿ 14ಕ್ಕೆ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ‘ಕೆಜಿಎಫ್ 2’ ಜತೆ ರೇಸ್ನಲ್ಲಿರುವ ಆಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಐದನೇ ಸ್ಥಾನದಲ್ಲಿದೆ. ಉಳಿದಂತೆ, ‘ಆದಿಪುರುಷ್’ (6), ‘ಬೀಸ್ಟ್’ (7), ‘ಗಂಗೂಬಾಯಿ ಕಾಠಿಯಾವಾಡಿ’ (8), ‘ಧಾಕಡ್’ (9), ‘ಹೀರೋಪಂತಿ 2’ (10) ಸ್ಥಾನ ಗಿಟ್ಟಿಸಿಕೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ