2018ನೇ ಸಾಲಿನ ರಾಜ್​ಕುಮಾರ್  ಸೌಹಾರ್ದ ಪ್ರಶಸ್ತಿ ಘೋಷಣೆ

ಗಂಧದ ಮಾಲೆ, ಪ್ರಶಸ್ತಿ ಫಲಕ, ಒಂದು ಲಕ್ಷ ರೂಪಾಯಿಯನ್ನು ಪ್ರಶಸ್ತಿ ಒಳಗೊಂಡಿದೆ. ಡಾ.ರಾಜ್​​ಕುಮಾರ್ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್​ಕುಮಾರ್​ ಸ್ಮಾರಕದ ಬಳಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

Rajesh Duggumane | news18
Updated:December 6, 2018, 4:15 PM IST
2018ನೇ ಸಾಲಿನ ರಾಜ್​ಕುಮಾರ್  ಸೌಹಾರ್ದ ಪ್ರಶಸ್ತಿ ಘೋಷಣೆ
ಪಾರ್ವತಮ್ಮ-ರಾಜ್​ಕುಮಾರ್​
Rajesh Duggumane | news18
Updated: December 6, 2018, 4:15 PM IST
ಬೆಂಗಳೂರು (ಡಿ.06): 2018ನೇ ಸಾಲಿನ ಸಾಲಿನ ರಾಜ್ ಕುಮಾರ್  ಸೌಹಾರ್ದ ಪ್ರಶಸ್ತಿ ಘೋಷಣೆಯಾಗಿದ್ದು, ನಟಿ ಬಿ.ಜಯ, ನಟ ಎಂ.ಎಸ್. ಉಮೇಶ್ ಹಾಗೂ ಸಂಕಲನಕಾರ ಎಸ್.ಮನೋಹರ್  ಅವರಿಗೆ ಪ್ರಶಸ್ತಿ ಲಭಿಸಿದೆ.

ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜಕುಮಾರ್, ಪುನೀತ್ ರಾಜ್‍ಕುಮಾರ್ ಸೇರಿದಂತೆ ರಾಜ್ ಕುಟುಂಬದ ಎಲ್ಲಾ ಸದಸ್ಯರು ಭಾಗಿಯಾಗಲಿದ್ದಾರೆ. ಡಾ.ರಾಜ್​​ಕುಮಾರ್ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್​ಕುಮಾರ್​ ಸ್ಮಾರಕದ ಬಳಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಗಂಧದ ಮಾಲೆ, ಪ್ರಶಸ್ತಿ ಫಲಕ, ಒಂದು ಲಕ್ಷ ರೂಪಾಯಿಯನ್ನು ಪ್ರಶಸ್ತಿ ಒಳಗೊಂಡಿದೆ.

ಪಾರ್ವತಮ್ಮನವರಿಗೆ ಅನಾರೋಗ್ಯ ಉಂಟಾಗಿದ್ದರಿಂದ 2016,2017ನೇ ಸಾಲಿನ ಪ್ರಶಸ್ತಿಯನ್ನು  ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆ ಪ್ರಶಸ್ತಿಯನ್ನೂ ಪಾರ್ವತಮ್ಮ ಜನ್ಮದಿನದಂದು ನೀಡಲಾಗುತ್ತಿದೆ. 2016 ನೇ ಸಾಲಿನಲ್ಲಿ ನಟಿ ಜಯಂತಿ, ನಿರ್ದೇಶಕ ವಿಜಯ ರೆಡ್ಡಿ ಹಾಗೂ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಅವರಿಗೆ ಪ್ರಶಸ್ತಿ ಲಭ್ಯವಾಗಿತ್ತು. 2017 ನೇ ಸಾಲಿನ  ನಟ ಲೋಕನಾಥ್, ನಟ ಶಿವ ಶಂಕರ್ ಹಾಗೂ ನಟ ರಾಜೇಶ್​ಗೆ ಪ್ರಶಸ್ತಿ ಲಭಿಸಿತ್ತು.
First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ