Suhana Khan ಬ್ಯಾಗ್​ ಬೆಲೆ ಕೇಳಿದ್ರೆ ಶಾಕ್​ ಆಗೋದು ಗ್ಯಾರೆಂಟಿ-ಬಾಲಿವುಡ್​ ಬಾದ್​ ಶಾ ಮಗಳ ಸ್ಟೈಲಿಶ್​ ಲುಕ್ ನೋಡಿ

ಸುಹಾನಾ ಖಾನ್ ಕ್ಯಾಶುವಲ್ ಲುಕ್ ನಲ್ಲಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಶುವಲ್ ಬಟ್ಟೆಯಲ್ಲೇ ಐಷಾರಾಮಿ ಜೀವನಶೈಲಿಯನ್ನು ತೋರಿಸಿದ್ದಾರೆ. ಸುಹಾನಾ ಖಾನ್ ಎರಡು ಲಕ್ಷ ರೂ ಶೂ ಮತ್ತು ಒಂದು ಲಕ್ಷ ರೂ ಬ್ಯಾಗ್‌ ಧರಿಸಿ ಮನೆಯಿಂದ ಹೊರ ಬಂದಿದ್ದಾರೆ.

ಸುಹಾನಾ ಖಾನ್

ಸುಹಾನಾ ಖಾನ್

 • Share this:
  ಈಗ ಏನಿದ್ದರೂ ಫ್ಯಾಷನ್ (fashion) ಗೆ ಬಹು ಬೇಡಿಕೆ. ಬಣ್ಣದ ಬಣ್ಣದ ಕಾಸ್ಟ್ಲಿ (costly) ವಿನ್ಯಾಸದ (design) ಬಟ್ಟೆಗಳನ್ನ ತೊಟ್ಟು, ಅದಕ್ಕೆ ತಕ್ಕಂತೆ ಅಲಂಕಾರ (makeup) ಮಾಡಿಕೊಂಡು ಮಿಂಚೋದು ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ. ಎಲ್ಲರೂ ಫ್ಯಾಷನ್ ಗೆ ಹೆಚ್ಚು ಒತ್ತು ಕೊಡುತ್ತಾರೆ. ಅದರಲ್ಲೂ ಹುಡುಗಿಯರು, ದಿನವೂ ಯಾವ ಡ್ರೆಸ್ (dress), ಹೊಸದಾಗಿ ಯಾವ ಕಲೆಕ್ಷನ್ (collection) ಬಂದಿದೆ ಎಂಬುದರ ಅಪ್ ಡೇಟ್ (update) ಪಡೆಯುತ್ತಲೇ ಇರುತ್ತಾರೆ. ನಟ-ನಟಿಯರು ಹಾಕು ಬಟ್ಟೆ, ಅವರು ಹಾಕುವ ಬ್ಯಾಗ್, ವಾಚ್, ಹೇರ್ ಸ್ಟೈಲ್, ನೆಕ್ಲೇಸ್, ಸ್ಯಾರಿ ಹೀಗೆ ಎಲ್ಲ ವಿಷಯವನ್ನು ಅಭಿಮಾನಿಗಳು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಅಷ್ಟೇ ಅಲ್ಲ ಅವರಂತೆ ಬಟ್ಟೆ ಹಾಕುವುದು, ಫೋಟೋ (photo) ತೋರಿಸಿ ಅಂತಹುದೇ ಬಟ್ಟೆ, ಬ್ಯಾಗ್ ಗಳನ್ನು ಖರೀದಿ ಮಾಡುತ್ತಾರೆ. ಅಲ್ಲದೇ ನಟ ನಟಿಯರಿಗೆ ಅವರು ಖರೀದಿಸುವ ವಸ್ತುಗಳು ಕಾಸ್ಟ್ಲಿಆಗಿರಬೇಕು. ತಮ್ಮ ಐಷಾರಾಮಿ (luxury) ಜೀವನದ ಬಗ್ಗೆ ಪ್ರದರ್ಶಿಸುತ್ತಾರೆ.  ಪಾರ್ಟಿ (party), ಸಮಾರಂಭ (Function) ಗಳಲ್ಲಿ ದುಬಾರಿ ಬೆಲೆಯ ಕಾರ್ , ಬಟ್ಟೆ, ಬ್ಯಾಗ್, ಶೂ, ಚೈನ್ ಧರಿಸಿ ಹೋಗುವುದು. ಅದರಿಂದಲೇ ಸುದ್ದಿಯಾಗುವುದು ಈಗ ಟ್ರೆಂಡ್ ಆಗಿದೆ.

  ಈಗ ನಟ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ತಾವು ಧರಿಸಿದ ಶೂ ಮತ್ತು ಕೈಲಿ ಹಿಡಿದಿರುವ ಬ್ಯಾಗ್ ನಿಂದಾಗಿ ಫುಲ್ ಟ್ರೆಂಡ್ ಆಗಿದ್ದಾರೆ.  ನಟ ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್, ಬರೋಬ್ಬರಿ ಎರಡು ಲಕ್ಷ ರೂ. ಶೂ ಮತ್ತು ಒಂದು ಲಕ್ಷ ರೂ. ಬ್ಯಾಗ್‌ ಧರಿಸಿದ್ದು, ಕ್ಯಾಶುವಲ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  ಸುಹಾನಾ ಖಾನ್ ಐಷಾರಾಮಿ ಜೀವನಶೈಲಿ:

  ನಟ ಶಾರುಖ್ ಖಾನ್ ಅವರ ಮುದ್ದು ಮಗಳು ಸುಹಾನಾ ಖಾನ್,  ಐಷಾರಾಮಿ ಜೀವನಶೈಲಿಯನ್ನು ತುಂಬಾ ಇಷ್ಟಪಡುತ್ತಾರೆ. ಶಾರುಖ್ ತಮ್ಮ ಮಗಳನ್ನು ತುಂಬಾ ಪ್ರೀತಿ ಮತ್ತು ಮುದ್ದಾಗಿ ಬೆಳೆಸಿದ್ದಾರೆ. ಶಾರೂಖ್ ಅವರ ಮಗಳು ತೊಟ್ಟಿರುವ ಬಟ್ಟೆ, ದುಬಾರಿ ಬೆಲೆಯ ಶೂ ಮತ್ತು ಬ್ಯಾಗ್ ಮತ್ತು ಧರಿಸಿದ ಬಟ್ಟೆಗಳು ಇದಕ್ಕೆ ಸಾಕ್ಷಿಯಾಗಿದೆ.  ನಟ ಶಾರುಖ್ ತಮ್ಮ ಮಗಳ ಸಣ್ಣ ಸಣ್ಣ ಎಲ್ಲಾ ಆಸೆಗಳನ್ನು ಈಡೇರಿಸಿದ್ದಾರೆ. ಸುಹಾನಾ ಕೇಳಿದ್ದನ್ನೆಲ್ಲಾ ಕೊಡಿಸಿದ್ದಾರೆ. ಐಷಾರಾಮಿ ವಾಹನ, ಐಷಾರಾಮಿ ಬಟ್ಟೆ, ಕಾರು ಹೀಗೆ ಎಲ್ಲಾ ವಸ್ತುಗಳಿಗೆ ಯಾವುದೇ ಕೊರತೆ ಇಲ್ಲದಂಥೆ ನೋಡಿಕೊಂಡಿದ್ದಾರೆ.

  ಇದನ್ನೂ ಓದಿ: ದೀಪಿಕಾ ಹೆಸರು ಹೇಳಿದ ಪತ್ರಕರ್ತನ ಜೊತೆ ಕಂಗನಾ ಜಗಳ, ಆಗಿದ್ದೇನು ?

  ತುಂಬಾ ದಿನಗಳ ನಂತರ ಸುಹಾನಾ ಖಾನ್ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದಾರೆ. ಸುಹಾನಾ ಖಾನ್, ಕ್ಯಾಶುವಲ್ ಲುಕ್ ನಲ್ಲಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಶುವಲ್ ಬಟ್ಟೆಯಲ್ಲೇ ಐಷಾರಾಮಿ ಜೀವನಶೈಲಿಯನ್ನು ತೋರಿಸಿದ್ದಾರೆ. ಸುಹಾನಾ ಖಾನ್, ಎರಡು ಲಕ್ಷ ರೂ. ಶೂ ಮತ್ತು ಒಂದು ಲಕ್ಷ ರೂ. ಬ್ಯಾಗ್‌ ಧರಿಸಿ ಮನೆಯಿಂದ ಹೊರ ಬಂದಿದ್ದಾರೆ.

  ದುಬಾರಿ ಬೆಲೆಯ ಶೂ, ಬ್ಯಾಗ್

  ಸುಹಾನಾ ಖಾನ್ ರ ವಾರ್ಡ್  ರೋಬ್ ನಲ್ಲಿ ಐಷಾರಾಮಿ ಬಟ್ಟೆಗಳು, ದುಬಾರಿ ಬೆಲೆಯ ಶೂ, ಬ್ಯಾಗ್ ಗಳಿವೆ. ಫೇಮಸ್ ಬ್ರ್ಯಾಂಡ್  ನ ಬಟ್ಟೆಗಳನ್ನೇ ಸುಹಾನಾ ಧರಿಸುತ್ತಾರೆ. ಇತ್ತೀಚೆಗೆ ಸುಹಾನಾ ಖಾನ್, ನಿರ್ದೇಶಕಿ ಜೋಯಾ ಅಖ್ತರ್ ಅವರ ಕಚೇರಿಗೆ ಹೋಗುತ್ತಿದ್ದರು. ಆಗ ಕ್ಯಾಶುಯಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಸುಹಾನಾ ಅವರ ಕ್ಯಾಶುವಲ್ ಶೈಲಿಯೇ ಐಷಾರಾಮಿಯಾಗಿತ್ತು. ದುಬಾರಿ ಬೆಲೆಯ ಶೂ, ಬ್ಯಾಗ್ ಅಭಿಮಾನಿಗಳನ್ನು ಆಕರ್ಷಿಸಿವೆ.

  ಇದನ್ನೂ ಓದಿ: ಕಮೆಂಟ್​ಗೆಲ್ಲ ಬಗ್ಗಲ್ಲ.. ಟ್ರೋಲ್​​ಗೆಲ್ಲ ಜಗ್ಗಲ್ಲ.. ಇವ್ಳೇ ಬೇರೆ, ಇವ್ಳ ಸ್ಟೈಲೇ ಬೇರೆ ಸಾರ್​!

  ಅಭಿಮಾನಿಗಳಲ್ಲಿ ಅಚ್ಚರಿ

  ಸುಹಾನಾ, ಬಿಳಿ ಕ್ರಾಪ್ ಟಾಪ್ ಧರಿಸಿದ್ದು, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದರು. ಈ ವೇಳೆ 2, 04, 338 ರೂ. ಮೌಲ್ಯದ ಶೂ ಧರಿಸಿದ್ದರು. ಶೂಗಳಷ್ಟೇ ಅಲ್ಲ ಅವರ ಬ್ಯಾಗ್ ಬೆಲೆಯೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಸುಹಾನಾ 1,08,236 ರೂ. ಮೌಲ್ಯದ ಬ್ಯಾಗ್ ಹಿಡಿದುಕೊಂಡಿದ್ದರು.
  Published by:renukadariyannavar
  First published: