ಇಷ್ಟು ವರ್ಷ ಆದರೂ ಯಾಕೆ ರಿಲೀಸ್ ಆಗುತ್ತಿಲ್ಲ 2.0 ಸಿನಿಮಾ: ಬೇಸತ್ತ ವಿತರಕರು ಮಾಡಿದ್ದೇನು..!

news18
Updated:July 22, 2018, 5:45 PM IST
ಇಷ್ಟು ವರ್ಷ ಆದರೂ ಯಾಕೆ ರಿಲೀಸ್ ಆಗುತ್ತಿಲ್ಲ 2.0 ಸಿನಿಮಾ: ಬೇಸತ್ತ ವಿತರಕರು ಮಾಡಿದ್ದೇನು..!
news18
Updated: July 22, 2018, 5:45 PM IST
ನ್ಯೂಸ್​ 18 ಕನ್ನಡ 

ರಜನಿಕಾಂತ್ ಅಭಿನಯದ ದೊಡ್ಡ ಬಜೆಟ್ ಸಿನಿಮಾ `2.0'. ಎರಡು ವರ್ಷಗಳಿಂದ ಚಿತ್ರೀಕರಣ ಆಗುತ್ತಲೇ ಇದೆ. ಸಿನಿಮಾ ಬಿಡುಗಡೆ ದಿನಾಂಕ ಮಾತ್ರ ಇವತ್ತು ನಾಳೆ ಅಂತ ಹೇಳುತ್ತಲೇ ಬಂದಿರೋ ನಿರ್ದೇಶಕ ಶಂಕರ್​​ ಅವರಿಗೆ ಮೊನ್ನೆ ವಿತರಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲ ನಾವು ಮುಂಗಡವಾಗಿ ಕೊಟ್ಟಿರುವ ಹಣ ಹಿಂತಿರುಗಿಸಿ ಅಂತ ಕೇಳಿದ್ದಾರೆ. ಇದಕ್ಕೆ ಬೇರೆ ಯಾರಾದರು ಆಗಿದ್ದರೆ ಬೆಚ್ಚಿ ಬಿದ್ದಿರುತ್ತಿದ್ದರು. ಆದರೆ ಶಂಕರ್ ಹಾಗೆ ಮಾಡ್ಲಿಲ್ಲ. ಏನು ಮಾಡಿದರು ಗೊತ್ತಾ ? ಈ ವರದಿ ಓದಿ...

2015ರಲ್ಲಿ ಶುರುವಾಗಿ ಈ ವರ್ಷ ರಿಲೀಸಾಗಿ ಮುಂದಿನ ವರ್ಷ ಗ್ಯಾರಂಟಿ, ಮುಂದಿನ ವರ್ಷ ಮಿಸ್ಸೇ ಇಲ್ಲ ಅಂತ ಹೇಳಿದ್ದೇ ಬಂತು. ಆದರೆ ಈ 500 ಕೋಟಿಯ ಅತ್ಯಂತ ದುಬಾರಿ ಬಜೆಟ್‍ನ `2.0' ರಿಲೀಸೆ ಆಗಲಿಲ್ಲ. ಕಾದು ಕಾದು ಬೇಸತ್ತಿದ್ದ ವಿತರಕರು ಶಂಕರ್​ ಅವರನ್ನು ಹುಡುಕಿ ಸೀದಾ ಬಂದೇ ಬಿಟ್ಟರಂತೆ. ಬಂದವರೇ ಹಿಂದೆ ಮುಂದೆ ನೋಡದೆ ನಮ್ಮ ಹಣ ಹಿಂತಿರುಗಿಸಿ, ನಿಮ್ಮ ಸಿನಿಮಾನೂ ಬೇಡ, ಏನೂ ಬೇಡ ಅಂತೆಲ್ಲ ಅಂದಿದ್ದಾರಂತೆ.

ಹೀಗೆ ಬಂದವರನ್ನ ನೋಡಿ ಒಂಚೂರು ಶಾಕ್ ಆಗದ ಶಂಕರ್, ಬನ್ನಿ ಸಾರ್ ಅಂತ ಕೂರಿಸಿ, ಅವರಿಗೆ ಕಾಫಿ, ಟೀ, ಕೂಲ್‍ಡ್ರಿಂಕ್ಸ್ ಬೇಕಾ ಎಂದು ವಿತರಕರಿಗೆ ನಿಮಲ್ಲಿ ಯಾರಿಗೆ ಎಷ್ಟು ಹಣ ಕೊಡಬೇಕು ಅಂತ ಕೇಳಿದ್ದಾರೆ. ಇದಾದ ನಂತರ ಅವರಿಗೆ 20 ನಿಮಿಷದ ಒಂದು ವಿಡಿಯೋ ತೋರಿಸಿದ್ದಾರೆ. ಆ ವಿಡಿಯೋ ನೋಡಿದ ವಿತರಕರು ಹಣನೂ ಬೇಡ, ಏನೂ ಬೇಡ ಅಂತ ಹೇಳಿ ಹೋಗಿದ್ದಾರಂತೆ.

ಶಂಕರ್​ ವಿತರಕರಿಗೆ ತೋರಿಸಿದ ವಿಡಿಯೋ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುವ ಫೈಟಿಂಗ್ ದೃಶ್ಯದ್ದು. ಅಲ್ಲದೆ ಸಿನಿಮಾವನ್ನು ಇದೇ ನವೆಂಬರ್​ಗೆ ತೆರೆ ಕಾಣಲಿದೆ
Loading...

 
First published:July 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...