18 ವರ್ಷದ ನಂತರ ಕನ್ನಡಕ್ಕೆ ರಿಮೇಕ್ ಆಗುತ್ತಿದೆ ತೆಲುಗಿನ ಈ ಸಿನಿಮಾ?

ನಟ ನಿತಿನ್​ ಮತ್ತು ಸದಾ ನಟನೆಯ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ತೇಜ ನಿರ್ದೇಶನ ಮಾಡಿದ್ದರು. ಚಿತ್ರಂ ಮೂವೀಸ್​ ಬ್ಯಾನರ್​ ರಿಲೀಸ್​ ಆಗಿತ್ತು. ಗೋಪಿಚಂದ್​ ಸುಮನ್​ ಶೆಟ್ಟಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದರು.

.

.

 • Share this:
  ಕನ್ನಡದ ಸಾಕಷ್ಟು ಸಿನಿಮಾಗಳು ಬೇರೆ ಭಾಷೆಯಲ್ಲಿ ರಿಮೇಕ್​ ಆಗಿವೆ. ಪರಭಾಷೆಯ ಸಿನಿಮಾಗಳು ಕೂಡ ಕನ್ನಡದಲ್ಲಿ ರಿಮೇಕ್​ ಆಗಿದೆ. ಇದೀಗ 18 ವರ್ಷದ ಹಳೆಯ ಸಿನಿಮಾವೊಂದು ಕನ್ನಡದಲ್ಲಿ ರಿಮೇಕ್​ ಆಗುತ್ತಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

  ಹೌದು. ಹಿಗೋಂದು ಮಾಹಿತಿ ಸ್ಯಾಂಡಲ್​​​ವುಡ್​ನಲ್ಲಿ ಹರಿದಾಡುತ್ತಿದೆ. 2002ರಲ್ಲಿ ಬಿಡುಗಡೆಗೊಂಡ ತೆಲುಗು ಬ್ಲಾಕ್​ ಬ್ಲಸ್ಟರ್​ ಸಿನಿಮಾ‘ ಜಯಂ’  ಕನ್ನಡ ಭಾಷೆಯಲ್ಲಿ ರಿಮೇಕ್​ ಆಗುತ್ತಿದೆಯಂತೆ.

  ನಟ ನಿತಿನ್​ ಮತ್ತು ಸದಾ ನಟನೆಯ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ತೇಜ ನಿರ್ದೇಶನ ಮಾಡಿದ್ದರು. ಚಿತ್ರಂ ಮೂವೀಸ್​ ಬ್ಯಾನರ್​ ರಿಲೀಸ್​ ಆಗಿತ್ತು. ಗೋಪಿಚಂದ್​ ಸುಮನ್​ ಶೆಟ್ಟಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದರು.

  ‘ ಜಯಂ’


  ಇನ್ನು ಈ ಸಿನಿಮಾ ತೆಲುಗಿನಲ್ಲಿ ಹಿಟ್​ ಆದಂತೆ ತಮಿಳು ಭಾಷೆಗೂ ರಿಮೇಕ್​ ಆಯಿತು. 2003ರಲ್ಲಿ ಕಾಲಿವುಡ್​ನಲ್ಲಿ ರಿಲೀಸ್​ ಆಯಿತು. ತಮಿಳಿನಲ್ಲಿ ನಟ ರವಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ. ನಾಯಕಿಯಾಗಿ ಸದಾ ನಟಿಸಿದರು.

  ಇದೀಗ ಈ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್​​ ಮಾಡಲು ಚಿಂತನೆ ನಡೆಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 18 ವರ್ಷಗಳ ಬಳಿಕ ‘ಜಯಂ‘ ಸಿನಿಮಾವನ್ನು ರಿಮೇಕ್​ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.  ಆದರೆ ಕನ್ನಡದಲ್ಲಿ ಈ ಸಿನಿಮಾವನ್ನು ರಿಮೇಕ್ ಆಗಲಿದೆಯಾ?​ ಯಾರು ನಿರ್ದೇಶನ ಮಾಡುತ್ತಿದ್ದಾರೆ.? ಈ ಸಿನಿಮಾಗೆ ನಟ-ನಟಿ ಯಾರು? ಎಂಬ ಬಗ್ಗೆ ಸೂಕ್ತ ಮಾಹಿತಿ ಹೊರಬರಬೇಕಿದೆ.

  ಇದನ್ನೂ ಓದಿ: Nokia: ನೋಕಿಯಾ ಸ್ಮಾರ್ಟ್​ವಾಚ್​ ಬಿಡುಗಡೆ; ಇದರಲ್ಲಿದೆ ಇಷ್ಟೆಲ್ಲಾ ಫೀಚರ್

   

   
  First published: