Weekend Planner: ಈ ವಾರ 5 ಸಿನಿಮಾ, 3 ಸೀರೀಸ್ ಓಟಿಟಿಯಲ್ಲಿ ರಿಲೀಸ್​: ನೋಡಿ.. ಮಸ್ತ್​ ಮಜಾ ಮಾಡಿ!

ಈ ವಾರವು ಬಿಗ್​ ಬಜೆಟ್​ನ ಒಂದು ಸಿನಿಮಾ ಸೇರಿದಂತೆ ಒಟ್ಟು ಐದು ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್​ ಆಗಿದೆ. ಮೂರು ಸೀರೀಸ್​ಗಳು ಬಿಡುಗಡೆಯಾಗಿದೆ.

ಮರಕ್ಕರ್​, ಕುರುಪ್​ ಚಿತ್ರದ ಪೋಸ್ಟರ್​

ಮರಕ್ಕರ್​, ಕುರುಪ್​ ಚಿತ್ರದ ಪೋಸ್ಟರ್​

 • Share this:
  ಕೊರೊನಾ (Corona) ಬಂದಮೇಲೆ ಚಿತ್ರಮಂದಿರಗಳ ಖದರ್​ ಕಡಿಮೆಯಾಗಿದೆ. ಹಾಗಿದ್ದರೂ ಸಿನಿರಸಿಕರು ಮಾತ್ರ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ನೋಡುತ್ತಾರೆ. ಆದರೆ, ಹೆಚ್ಚು ಮಂದಿ ಓಟಿಟಿ (OTT)ಯನ್ನೇ ನೆಚ್ಚಿಕೊಂಡಿದ್ದಾರೆ. ಪ್ರತಿವಾರ ಓಟಿಟಿಯಲ್ಲಿ ಹೊಸ ಹೊಸ ಸಿನಿಮಾಗಳು, ಸೀರಿಸ್​ಗಳು ರಿಲೀಸ್​ ಆಗುತ್ತಲೇ ಇರುತ್ತವೆ. ಹೀಗಾಗಿ ಶುಕ್ರವಾರ ಬಂತು ಅಂದರೆ ಓಟಿಟಿ  ಪ್ರಿಯರಿಗೆ ಹಬ್ಬ. ಚಿತ್ರಮಂದಿರದಲ್ಲೇ ರಿಲೀಸ್​ ಆದರೂ, ಕೇವಲ 30 ದಿನದೊಳಗೆ ಓಟಿಟಿಯಲ್ಲಿ ಸಿನಿಮಾ (Movie)ಗಳು ಟೆಲಿಕಾಸ್ಟ್​ ಆಗುತ್ತವೆ. ಮೊದಲೆಲ್ಲಾ ಚಿತ್ರಮಂದಿರದಲ್ಲಿ ರಿಲೀಸ್​ ಆದ ಸಿನಿಮಾಗಳನ್ನು ಟಿವಿ(TV)ಯಲ್ಲಿ ಟೆಲಿಕಾಸ್ಟ್​ ಮಾಡುವವರೆಗೂ ಕಾಯಬೇಕಿತ್ತು. ಇದೀಗ ಎಲ್ಲವೂ ಬದಲಾಗಿದೆ. ಓಟಿಟಿಯಲ್ಲೇ ಸಿನಿಮಾಗಳು ರಿಲೀಸ್​ ಆಗುತ್ತವೆ. ಚಿತ್ರಮಂದರಿಗಳಲ್ಲೇ ರಿಲೀಸ್​ ಆದ ಚಿತ್ರವೂ ಕೇವಲ 30 ದಿನದೊಳಗೆ ಓಟಿಟಿಯಲ್ಲಿ ಲಭ್ಯವಿರುತ್ತೆ. ನೆಟ್​ಫ್ಲಿಕ್ಸ್ (Netflix)​, ಅಮೇಜಾನ್​ ಪ್ರೈಮ್​ ವಿಡಿಯೋ (Amazon Prime Video), ಜೀ 5 (Zee 5), ಸೋನಿ (Sony Live), ಡಿಸ್ನಿ ಹಾಟ್​ಸ್ಟಾರ್ (Disney Plus Hotstar)​ ಹೀಗೆ ಹತ್ತು ಹಲವು ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಹೊಸ ಹೊಸ ಚಿತ್ರಗಳು ರಿಲೀಸ್​ ಆಗುತ್ತವೆ. ಹೌದು , ಈ ವಾರವು ಬಿಗ್​ ಬಜೆಟ್​ನಒಂದು ಸಿನಿಮಾ ಸೇರಿದಂತೆ ಒಟ್ಟು ಐದು ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್​ ಆಗಿದೆ. ಮೂರು ಸೀರೀಸ್​ಗಳು ಬಿಡುಗಡೆಯಾಗಿದೆ. ಇನ್ಯಾಕೆ ತಡ ಈ ಸಿನಿಮಾಗಳನ್ನು ನೋಡುತ್ತಾ ಈ ವೀಕೆಂಡ್​ ಎಂಜಾಯ್ ಮಾಡಿ..

  01. ಮರಕ್ಕರ್ (ಮಲಯಾಳಂ) 

  2021 ರ ಅತಿದೊಡ್ಡ ಮಲಯಾಳಂ ಸಿನಿಮಾ, ಮರಕ್ಕರ್ (Marakkar) ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಈ ಚಿತ್ರದಲ್ಲಿ ಮೋಹನ್ ಲಾಲ್ (Mohanlal) ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ, ಚಿತ್ರವು ಈಗ ಹಿಂದಿ, ತಮಿಳು ಭಾಷೆಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಮತ್ತೊಂದು ಬಾಹುಬಲಿಯಂತೆ ದಾಖಲೆ ನಿರ್ಮಿಸುತ್ತೆ ಈ ಸಿನಿಮಾ ಎಂದು ಹೇಳಲಾಗಿತ್ತು.

  02. ಬಂಟಿ ಔರ್ ಬಬ್ಲಿ 2 ( ಹಿಂದಿ)

  ಸೈಫ್ ಅಲಿ ಖಾನ್, ಸಿದ್ದಾಂತ್ ಚತುರ್ವೇದಿ ಮತ್ತು ರಾಣಿ ಮುಖರ್ಜಿ ಅಭಿನಯದ ಬಂಟಿ ಔರ್ ಬಾಬ್ಲಿ (Bunty aur babli), ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಇದೊಂದು ಕಾಮಿಡಿ ಜೋನರ್​ ಇರುವಂತಹ ಸಿನಿಮಾ. ಈ ಹಿಂದೆ ಬಂಟಿ ಔಟ್​ ಬಬ್ಲಿ ಹೆಸರಿನಲ್ಲಿ ಸಿನಿಮಾ ರಿಲೀಸ್​ ಆಗಿತ್ತು, ಇದೀಗ ಆ ಸಿನಿಮಾದ ಮುಂದುವರಿದ ಭಾಗವಾಗಿ ಬಂಟಿ ಔರ್​ ಬಬ್ಲಿ 2 ರಿಲೀಸ್​ ಆಗಿದೆ.

  03. 420 ಐಪಿಸಿ ( ಹಿಂದಿ)

  ಸದಾ ಜೀ 5 ಉತ್ತಮ ಸಂದೇಶ ಇರುವ ಚಿತ್ರಗಳನ್ನೇ ಪ್ರಸಾರ ಮಾಡುತ್ತಿದೆ. ಇಂದು ಕೂಡ ಉತ್ತಮ ಸಂದೇಶ ಚಿತ್ರ ಬಿಡುಗಡೆಯಾಗಿದೆ, ಕೋರ್ಟ್‌ ರೂಮ್ ಡ್ರಾಮಾ ಫಿಲ್ಮ್ 420 IPC ಸಿನಿಮಾ ಜೀ5ನಲ್ಲಿ ಟೆಲಿಕಾಸ್ಟ್​ ಆಗುತ್ತಿದೆ. 420 ಐಪಿಸಿ ಸಿನಿಮಾ ಟ್ರೈಲರ್​ನಿಂದಲೇ ಎಲ್ಲರ ಗಮನ ಸೆಳೆದಿತ್ತು.ಇಂದಿನಿಂದ ಈ ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದು.

  04. ಫುಫಾದ್ ಜಿ (ಪಂಜಾಬಿ)

  ಪಂಜಾಬಿ ಚಲನಚಿತ್ರ ಫುಫಾದ್ ಜಿ ಕೂಡ ಜೀ 5ನಲ್ಲಿ ಇಂದು ಬಿಡುಗಡೆಯಾಗಿದೆ. ಇದು ಕೂಡ ಟ್ರೈಲರ್​ನಿಂದ ಸಖತ್​ ನಿರೀಕ್ಷೆ ಮೂಡಿಸಿತ್ತು.

  ಇದನ್ನು ಓದಿ : Samantha ಸೆಕ್ಸ್​ ಸೀನ್​ ಕಂಡು ಶಾಕ್​ ಆಗಿದ್ರಂತೆ ನಾಗಚೈತನ್ಯ: ಡಿವೋರ್ಸ್​ಗೆ ಇದೇ ಕಾರಣನಾ?

  05. ಕುರುಪ್​ (ಮಲಯಾಳಂ)

  ದುಲ್ಕರ್ ಸಲ್ಮಾನ್ ಅಭಿನಯದ ಕುರುಪ್​​ ಚಿತ್ರವು ಚಿತ್ರಮಂದಿರದಲ್ಲಿ ತೆರೆಕಂಡು ಯಶಸ್ವಿಯಾಗಿತ್ತು. ಇದೀಗ ನೆಟ್​​ಫ್ಲಿಕ್ಸ್​​ನಲ್ಲಿ ಸ್ಟ್ರೀಮ್​ ಆಗುತ್ತಿದೆ. ಉತ್ತಮ ಪ್ರತಿಕ್ರಿಯೆ ದೊರೆತಿದೆ.

  06. Decoupled ​( ಇಂಗ್ಲಿಷ್​)

  Netflix ನ ಮೂಲ ಸರಣಿ Decoupled ಇಂದು Netflix ನಲ್ಲಿ ಬಿಡುಗಡೆಯಾಗಿದೆ. ಈ ಸರಣಿಯು ಒಂದು ರೋಮ್ಯಾಂಟಿಕ್ ನಾಟಕವಾಗಿದೆ ಮತ್ತು ಇದು Netflix ನಲ್ಲಿ ಹಿಂದಿ ಆಡಿಯೋದಲ್ಲಿಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ.

  ಇದನ್ನು ಓದಿ :`ಲವ್​ ಯೂ ರಚ್ಚು’ ಟ್ರೈಲರ್​ ಲಾಂಚ್​: ಹಾಟ್​ ಲುಕ್​ನಲ್ಲಿ ರಚಿತಾ, ಕಾರ್ಯಕ್ರಮಕ್ಕೆ ಬಾರದ ಅಜಯ್​ ರಾವ್​!

  07. ದಿ ವಿಚರ್ (ಇಂಗ್ಲಿಷ್​)

  ಬಹುನಿರೀಕ್ಷಿತ ವೆಬ್ ಸರಣಿ ದಿ ವಿಚರ್‌ನ ಸೀಸನ್ 2 ಇಂದಿನಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರಿಮ್​ ಆಗುತ್ತಿದೆ. ಈ ಸೀರೀಸ್​ ಇಂಗ್ಲಿಷ್, ಹಿಂದಿ ಮತ್ತು ಇನ್ನೂ ಕೆಲವು ಡಬ್ಬಿಂಗ್ ಆವೃತ್ತಿಗಳಲ್ಲಿ ಉಪಶೀರ್ಷಿಕೆಗಳೊಂದಿಗೆ ಬಿಡುಗಡೆಯಾಗಿದೆ.

  08. 'ಎನ್ಕಾಂಟೊ' (ಇಂಗ್ಲಿಷ್​)

  ಎನ್ಕಾಂಟೊ ಎಂಬ ಅನಿಮೆಟೆಡ್​ ಸಿನಿಮಾ ಇಂದು ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗಿದೆ. ಎನ್ಕಾಂಟೊವನ್ನು ಝೂಟೋಪಿಯಾದ ಬೈರಾನ್ ಹೊವಾರ್ಡ್ ಮತ್ತು ಜೇರೆಡ್ ಬುಷ್ ನಿರ್ದೇಶಿಸಿದ್ದಾರೆ.
  Published by:Vasudeva M
  First published: