ಆತ ಮತ್ತು 17 ಖಳ ನಾಯಕರು: ಭರ್ಜರಿ ಭರಾಟೆಯಲ್ಲಿ ರೋರಿಸಂ

Bharate Movie: ಖ್ಯಾತ ನಟರುಗಳಾದ ಸಾಯಿ ಕುಮಾರ್, ರವಿಶಂಕರ್ ಹಾಗೂ ಕಿರಿಯ ಸಹೋದರ ಅಯ್ಯಪ್ಪ ಈ ಚಿತ್ರದಲ್ಲಿ ಒಂದಾಗಿದ್ದಾರೆ. ಅದು ಕೂಡ ಖಳ ನಾಯಕರುಗಳಾಗಿ ಎಂಬುದು ವಿಶೇಷ.

news18-kannada
Updated:October 10, 2019, 9:31 PM IST
ಆತ ಮತ್ತು 17 ಖಳ ನಾಯಕರು: ಭರ್ಜರಿ ಭರಾಟೆಯಲ್ಲಿ ರೋರಿಸಂ
Srimurali
  • Share this:
ಸ್ಯಾಂಡಲ್​ವುಡ್​ನಲ್ಲಿ ಕಲರ್​ಫುಲ್ ಸಿನಿಮಾ ತೋರಿಸುವುದರಲ್ಲಿ ನಿರ್ದೇಶಕ ಚೇತನ್ ಕುಮಾರ್ ಎತ್ತಿದ ಕೈ. ಇದಕ್ಕೆ ಸಾಕ್ಷಿಯೇ 'ಭರ್ಜರಿ', 'ಬಹದ್ದೂರ್' ಸಿನಿಮಾಗಳು. ಈ ಪಟ್ಟಿಗೆ ಹೊಸ ಸೇರ್ಪಡೆ ರೋರಿಂಗ್ ಸ್ಟಾರ್ ಅಭಿನಯದ 'ಭರಾಟೆ' ಚಿತ್ರ. ಈಗಾಗಲೇ ಭರ ಭರ ಭರಾಟೆ...ಎಂದು ಟೈಟಲ್ ಟ್ರ್ಯಾಕ್ ಹಾಗೂ ಟೀಸರ್ ಮೂಲಕ ಭರಾಟೆ ಆರ್ಭಟಿಸಿದೆ.

ಶ್ರೀಮುರಳಿ


ಶ್ರೀಮುರುಳಿ ಅವರ ಆ್ಯಕ್ಷನ್ ಸಿನಿಮಾ ಪಟ್ಟಿಯಲ್ಲಿ ವಿಜೃಂಭಿಸಲಿರುವ 'ಭರಾಟೆ'ಯಲ್ಲಿ ಮೂವರು ಸಹೋದರರು ನಟಿಸಿರುವುದು ಗೊತ್ತಿರುವ ವಿಷಯ. ಖ್ಯಾತ ನಟರುಗಳಾದ ಸಾಯಿ ಕುಮಾರ್, ರವಿಶಂಕರ್ ಹಾಗೂ ಕಿರಿಯ ಸಹೋದರ ಅಯ್ಯಪ್ಪ ಈ ಚಿತ್ರದಲ್ಲಿ ಒಂದಾಗಿದ್ದಾರೆ. ಅದು ಕೂಡ ಖಳ ನಾಯಕರುಗಳಾಗಿ ಎಂಬುದು ವಿಶೇಷ.

ಇದನ್ನೂ ಕ್ಲಿಕ್ ಮಾಡಿ: ಪ್ರಪೋಸ್ ನಿರಾಕರಿಸಿದ್ದಕ್ಕೆ ನಟಿ ಕಂಗನಾ ರಣಾವತ್ ಅಕ್ಕನ ಮೇಲೆ ಆ್ಯಸಿಡ್ ಅಟ್ಯಾಕ್..!

ಇಲ್ಲೀತನಕ 'ಭರಾಟೆ'ಯಲ್ಲಿ ಮೂವರು ಸಹೋದರರ ಆರ್ಭಟ ಎಂದೇ ಹೇಳಲಾಗಿತ್ತು. ಆದರೀಗ ಈ ಪಟ್ಟಿಯಲ್ಲಿ ಮತ್ತಷ್ಟು ಮಂದಿ ಇರಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರತಂಡ ಮೂಲದ ಪ್ರಕಾರ 'ಭರಾಟೆ'ಯಲ್ಲಿ ಒಟ್ಟು 17 ವಿಲನ್​ಗಳು ಕಾಣಿಸಿಕೊಳ್ಳಲಿದ್ದಾರೆ.ಈ ಹಿಂದೊಮ್ಮೆ ಶ್ರೀಮುರಳಿ ಅಭಿನಯ 'ಉಗ್ರಂ' ಸಿನಿಮಾದಲ್ಲಿ ವಿಲನ್​ಗಳ ದಂಡೇ ಕಾಣಿಸಿದ್ದು ನೆನಪಿರಬಹುದು. ಇದೀಗ 'ಭರಾಟೆ'ಯಲ್ಲೂ ಸಾಯಿ ಬ್ರದರ್ಸ್ ಹೊರತು ಪಡಿಸಿ 14 ಮಂದಿ ವಿಲನ್​ಗಳ ವಿರುದ್ಧ ರೋರಿಂಗ್ ಸ್ಟಾರ್ ತೊಡೆ ತಟ್ಟಲಿದ್ದಾರೆ ಎಂದು ಹೇಳಾಗುತ್ತಿದೆ.
ಭರಾಟೆ ಮೂವಿ ಪೋಸ್ಟರ್


ಕ್ಲಾಸ್ ಪ್ರೇಕ್ಷಕರಿಗೆ ಮಾಸ್ ಕಥೆ ಹೇಳಲಿರುವ 'ಭರಾಟೆ'ಯಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಶ್ರೀಲೀಲಾ ಬಣ್ಣಹಚ್ಚಿದ್ದಾರೆ. ಇನ್ನು ಚಿತ್ರದ ಟಪ್ಪಾಂಗುಚ್ಚಿ ಸಾಂಗ್​ನಲ್ಲಿ ರಚಿತಾ ರಾಮ್.  ಕೂಡ ಕಾಣಿಸಲಿದ್ದಾರೆ. ಹಾಗೆಯೇ ವಿಲನ್​ಗಳ ಪಟ್ಟಿಯಲ್ಲಿ ಶೋಭರಾಜ್, ಅವಿನಾಶ್, ಪೆಟ್ರೋಲ್ ಪ್ರಸನ್ನ, ಶರತ್ ಲೋಹಿತಾಶ್ವ.. ಹೀಗೆ ಘಟಾನುಘಟಿಗಳು ಹೆಸರುಗಳಿವೆ.ಭರಾಟೆಯ ರೋರಿಸಂ ಅಕ್ಟೋಬರ್ 18 ರಂದು ವಿಶ್ವದಾದ್ಯಂತ ಆರಂಭವಾಗಲಿದ್ದು, ಈ ಚಿತ್ರದೊಂದಿಗೆ ಹ್ಯಾಟ್ರಿಕ್ ನಿರ್ದೇಶಕನ ಪಟ್ಟ ಚೇತನ್ ಪಾಲಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
First published: October 10, 2019, 9:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading