Radhika Pandit: ಹಳೆಯ ಫೋಟೋ ಶೇರ್ ಮಾಡಿಕೊಂಡು ಈ ಸಿನಿಮಾ ನನಗೆ ಎಲ್ಲ ಕೊಟ್ಟಿದೆ ಎಂದ ರಾಧಿಕಾ ಪಂಡಿತ್

Rocking Star Yash: ಅಲ್ಲದೇ, ಇ.ಕೆ ಸರ್, ಗಂಗಾಧರ್ ಸರ್, ಚಂದ್ರು ಸರ್, ಮನೋ ಸರ್ ಮತ್ತು ಮುಖ್ಯವಾಗಿ ಈ ಸಿನಿಮಾ ನಿರ್ದೇಶಕ ಶಶಾಂಕ್ ಸರ್ ನಮ್ಮ ಮೇಲೆ ನಂಬಿಕೆ ಇಟ್ಟು ಈ ಅದ್ಭುತ ಸಿನಿಮಾದ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದಗಳು.

ಮೊಗ್ಗಿನ ಮನಸು

ಮೊಗ್ಗಿನ ಮನಸು

  • Share this:
ಸ್ಯಾಂಡಲ್​ವುಡ್​ (Sandalwood) ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಹಾಗೆಯೇ ಅವರ ಪತಿ ರಾಕಿಂಗ್ ಸ್ಟಾರ್ ಯಶ್​ (Rocking Star Yash) ಪ್ಯಾನ್​ ಇಂಡಿಯಾ (Pan India) ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಎಲ್ಲೆಡೆ ಅವರ ಹವಾ ಜೋರಾಗಿದೆ. ಈ ಜೋಡಿಯನ್ನು ತೆರೆಯ ಮೇಲೆ ನೋಡುವುದು ಅಭಿಮಾನಿಗಳಿಗೆ ಬಹಳ ಇಷ್ಟ. ಈ ಜೋಡಿಯನ್ನು ಮೊದಲ ಬಾರಿಗೆ ಸ್ಯಾಂಡಲ್ವುಡ್​ನಲ್ಲಿ ಜನ ನೋಡಿ ಮೆಚ್ಚಿಕೊಂಡಿದ್ದು ಮೊಗ್ಗಿನ ಮನಸು ಸಿನಿಮಾದಲ್ಲಿ. ಈ ಸಿನಿಮಾ ನಿನ್ನೆಗೆ 14 ವರ್ಷ ಪೂರೈಸಿದೆ.

ಸಿನಿಮಾ ಬಿಡುಗಡೆಯಾಗಿ 14 ವರ್ಷ

ಹೌದು, ಮೊಗ್ಗಿನ ಮನಸು, ಈ ಸಿನಿಮಾವನ್ನು ಯಾರೂ ಮರೆಯಲು ಸಾಧ್ಯವಾಗುವುದಿಲ್ಲ. ನಾಲ್ಕು ಜನ ಹುಡುಗಿಯರ ಜೀವನದ ಕಥೆ ಈ ಸಿನಿಮಾ. ಕಾಲೇಜು ದಿನಗಳಲ್ಲಿ ಮನಸಿನ ಭಾವನೆಗಳು ಹೇಗಿರಲಿದೆ, ಏನೆಲ್ಲಾ ಬದಲಾವಣೆಯಾಗಲಿದೆ ಎಂಬುದನ್ನ ಈ ಸಿನಿಮಾ ತೋರಿಸಿದೆ. ಇದರಲ್ಲಿ ಯಶ್​ ಹಾಗೂ ರಾಧಿಕಾ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಮೂಲಕವೇ ಅವರಿಬ್ಬರ ಜೋಡಿ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಇದೀಗ ಜುಲೈ 19ಕ್ಕೆ ಈ ಸಿನಿಮಾ ಬಿಡುಗಡೆಯಾಗಿ 14 ವರ್ಷವಾಗಿದೆ. ಈ ಸಿಹಿ ನೆನಪಿಗಾಗಿ ನಟಿ ರಾಧಿಕಾ ಪಂಡಿತ್ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ.ಸಿನಿಮಾದ ದೃಶ್ಯಗಳ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋದಲ್ಲಿ ನೀವು ನೋಡುತ್ತಿರುವ ಈ ಇಬ್ಬರು 14 ವರ್ಷಗಳ ಹಿಂದೆ ಈ ಸಿನಿಮಾ ಮೂಲಕವೇ ತಮ್ಮ ಸಿನಿ ಪ್ರಯಾಣವನ್ನು ಪ್ರಾರಂಭಿಸಿದ್ದರು.  ಅದರಲ್ಲೂ ವೈಯಕ್ತಿಕವಾಗಿ, ಈ ಚಿತ್ರ ನನ್ನ ಜೀವನದಲ್ಲಿ ಬಹಳ ಮುಖ್ಯ, ನನಗೆ ತುಂಬಾ ನೀಡಿದೆ.ಈ ಸಿನಿಮಾ ಫಿಲ್ಮ್‌ಫೇರ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ಜೀವನ ಸಂಗಾತಿಯನ್ನು ಸೇರಿ ಎಲ್ಲವನ್ನು ನೀಡಿದೆ. ಇದಕ್ಕಿಂತ ಹೆಚ್ಚಾಗಿ ನಾವು ಏನನ್ನೂ ಕೇಳಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.


ಅಲ್ಲದೇ, ಇ.ಕೆ ಸರ್, ಗಂಗಾಧರ್ ಸರ್, ಚಂದ್ರು ಸರ್, ಮನೋ ಸರ್ ಮತ್ತು ಮುಖ್ಯವಾಗಿ ಈ ಸಿನಿಮಾ ನಿರ್ದೇಶಕ ಶಶಾಂಕ್ ಸರ್ ನಮ್ಮ ಮೇಲೆ ನಂಬಿಕೆ ಇಟ್ಟು ಈ ಅದ್ಭುತ ಸಿನಿಮಾದ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದಗಳು. ‘ಮೊಗ್ಗಿನ ಮನಸು’ ಸಿನಿಮಾ ನಮಗೆ ಸದಾ ವಿಶೇಷವಾಗಿರುತ್ತದೆ ಎಂದು ಹೇಳಿದ್ದಾರೆ.  ಕಳೆದ ವರ್ಷ ಅಂದರೆ 2021ರಲ್ಲಿ ಈ ಸಿನಿಮಾ ಬಿಡುಗಡೆಯಾಗಿ 13 ವರ್ಷವಾದಾಗ ಸಹ ಅಭಿಮಾನಿಗಳು ಯಶಿಸಂ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡಿದ್ದರು.ಇದನ್ನೂ ಓದಿ: ಕನ್ನಡದ ಖ್ಯಾತ ನಟಿಯ ಲಿಪ್​ಲಾಕ್ ಫೋಟೋ ವೈರಲ್​! ನೀವೂ ರಚ್ಚು ಹಾದಿ ಹಿಡಿದುಬಿಟ್ರಾ ಎಂದ ಫ್ಯಾನ್ಸ್​

ರಾಧಿಕಾ ಸಿನಿ ಜೀವನದಲ್ಲಿ ಬಹು ಮುಖ್ಯವಾದ ಸಿನಿಮಾ

2008ರ ಜುಲೈನಲ್ಲಿ ತೆರೆಕಂಡ  ಮೊಗ್ಗಿನ ಮನಸ್ಸು ಸಿನಿಮಾಗೆ ಈಗ  14 ವರ್ಷಗಳು. ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ಯಶ್​ ಹಾಗೂ ರಾಧಿಕಾ ಪಂಡಿತ್​ ಮೊಗ್ಗಿನ ಮನಸು ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದರು.  ಮೊಗ್ಗಿನ ಮನಸು ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಯಶ್​ ಹಾಗೂ ರಾಧಿಕಾ ಅವರ ಸಿನಿ ಜೀವನಕ್ಕೆ ಸಹ 14 ವರ್ಷ.ಮೊಗಮೊಗ್ಗಿನ ಮನಸ್ಸು ಸಿನಿಮಾಗೆ ಐದು ವಿಭಾಗಗಳಲ್ಲಿ ಫಿಲಂ ಫೇರ್​ ಪ್ರಶಸ್ತಿ ಲಭಿಸಿತ್ತು. ಯಶ್​ ಅವರಿಗೆ ಅತ್ಯುತ್ತಮ ಪೋಷಕ ನಟ, ರಾಧಿಕಾ ಅವರಿಗೆ ಅತ್ಯುತ್ತಮ ಬನಟಿ, ಶುಭಾ ಪೂಂಜಾ ಅವರಿಗೆ ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತ್ತು. ಅತ್ಯುತ್ತಮ ನಟಿ ವಿಭಾಗದಲ್ಲಿ 2008-09ನೇ ಸಾಲಿನಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸಹ ರಾಧಿಕಾ ಪಂಡಿತ್​ ಅವರಿಗೆ ಲಭಿಸಿತ್ತು.

14 years to moggina manasu film radhika pandit shares photos
ಮೊಗ್ಗಿನ ಮನಸು


ಇದನ್ನೂ ಓದಿ: ಮತ್ತೆ ಸೂಪರ್ ಸಾಂಗ್​ಗೆ ಸೊಂಟ ಬಳುಕಿಸಲಿದ್ದಾರಂತೆ ಸಮಂತಾ

ಈ ಸಿನಿಮಾಗೂ ಮುಂಚೆ ಯಶ್​ 2007ರಲ್ಲಿ ತೆರೆಕಂಡಿದ್ದ ಜಂಭದ ಹುಡುಗಿ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಯಶ್ ಹಾಗೂ ರಾಧಿಕಾ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ನವೀನ್​ ಗೌಡ ಆಗಿದ್ದ ಯಶ್​ ಈಗ ಸ್ಯಾಂಡಲ್​ವುಡ್ ರಾಕಿ ಭಾಯ್​. ಇನ್ನು ತೆರೆಯ ಮೇಲೆ ಮೋಡಿ ಮಾಡಿದ್ದ ಜೋಡಿ ಈಗ ಮದುವೆಯಾಗಿ ಇಬ್ಬರ ಮಕ್ಕಳ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ.
Published by:Sandhya M
First published: