Bollywoodನಲ್ಲಿ ಒಂದೇ ದಿನ ಪ್ರಕಟವಾಯ್ತು 14 ಹೊಸ ಸಿನಿಮಾಗಳ ರಿಲೀಸ್​ ದಿನಾಂಕ

ಮಹಾರಾಷ್ಟ್ರದಾದ್ಯಂತ ಬಂದ್​ ಆಗಿರುವ ಚಿತ್ರಮಂದಿರಗಳು ಅಕ್ಟೋಬರ್ 22ರಿಂದ ಬಾಗಿಲು ತೆರೆಯಲಿವೆ. ನಿರ್ದೇಶಕ ರೋಹಿತ್ ಶೆಟ್ಟಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆ ಸಾಕಷ್ಟು ಸಲ ಮಾತುಕತೆ ನಡೆಸಿದ್ದರು. ಕಡೆ ಇವರ ಮಾತುಕತೆ ಸಫಲವಾಗಿದ್ದು, ಈಗ ಚಿತ್ರ ಮಂದಿರಗಳು ಬಾಗಿಲು ತೆರೆಯಲು ಸಜ್ಜಾಗಿವೆ. ಇದರ ಜೊತೆಗೆ ಚಿತ್ರತಂಡಗಳು ಸಾಲು ಸಾಲು ಸಿನಿಮಾಗಳು ರಿಲೀಸ್​ ದಿನಾಂಕವನ್ನೂ ಪ್ರಕಟಿಸಿವೆ.

ರಿಲೀಸ್​ ಆಗಲಿರುವ ಹಿಂದಿ ಸಿನಿಮಾಗಳು

ರಿಲೀಸ್​ ಆಗಲಿರುವ ಹಿಂದಿ ಸಿನಿಮಾಗಳು

  • Share this:
ಕೊರೋನಾ ಎರಡನೇ ಅಲೆಯಿಂದಾಗಿ  (Covid-19 Second Wave)ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಸಿನಿಮಾ ಮಂದಿರಗಳ ಬಾಗಿಲು (Movie theaters closed) ಮಚ್ಚಲಾಗಿತ್ತು. ಕರ್ನಾಟಕದಲ್ಲಿ ಕೆಲ ಸಮಯದ ಹಿಂದೆ ಚಿತ್ರಮಂದಿರಗಳ ಬಾಗಿಲು ತೆರೆಯಲಾಗಿತ್ತಾದರೂ, ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ (Maharashtra) ಇಲ್ಲಿಯವರೆಗೂ ಮಲ್ಟಿಪ್ಲೆಕ್ಸ್​ ಹಾಗೂ ಚಿತ್ರಮಂದಿರಗಳ ಬಾಗಿಲು ತೆರೆದಿರಲಿಲ್ಲ. ಆದರೆ, ಶನಿವಾರ ಮಹಾರಾಷ್ಟ್ರದಲ್ಲಿ ಸಿನಿಮಾ ಮಂದಿರಗಳನ್ನು ತೆರೆಯಲು (Theaters Re-open) ಅಲ್ಲಿನ ರಾಜ್ಯ ಸರ್ಕಾರ ಕಡೆಗೂ ಅನುಮತಿ ನೀಡಿತು. ಇದರಿಂದಾಗಿ ಸಂತಸಗೊಂಡ ಬಾಲಿವುಡ್​ ಮಂದಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಸಾಮಾಜಿಕ ಜಾಲತಾಣದ ಮೂಲಜ ಧನ್ಯವಾದ ತಿಳಿಸಿದ್ದರು. ನಂತರ ಬಾಲಿವುಡ್​ ಅಂಗಳದಿಂದ ದೊಡ್ಡ ಸುದ್ದಿಗಳು ಹೊರ ಬಿದ್ದವು.

ಹೌದು, ಮಹಾರಾಷ್ಟ್ರದಾದ್ಯಂತ ಬಂದ್​ ಆಗಿರುವ ಚಿತ್ರಮಂದಿರಗಳು ಅಕ್ಟೋಬರ್ 22ರಿಂದ ಬಾಗಿಲು ತೆರೆಯಲಿವೆ. ನಿರ್ದೇಶಕ ರೋಹಿತ್ ಶೆಟ್ಟಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಜೊತೆ ಸಾಕಷ್ಟು ಸಲ ಮಾತುಕತೆ ನಡೆಸಿದ್ದರು. ಕಡೆ ಇವರ ಮಾತುಕತೆ ಸಫಲವಾಗಿದ್ದು, ಈಗ ಚಿತ್ರ ಮಂದಿರಗಳು ಬಾಗಿಲು ತೆರೆಯಲು ಸಜ್ಜಾಗಿವೆ. ಇದರ ಜೊತೆಗೆ ಚಿತ್ರತಂಡಗಳು ಸಾಲು ಸಾಲು ಸಿನಿಮಾಗಳು ರಿಲೀಸ್​ ದಿನಾಂಕವನ್ನೂ ಪ್ರಕಟಿಸಿವೆ.


View this post on Instagram


A post shared by Taran Adarsh (@taranadarsh)


ಇನ್ನು, ಕೊರೋನಾ ಮೊದಲ ಅಲೆ ಆರಂಭದಲ್ಲೇ ರಿಲೀಸ್ ಆಗಬೇಕಿದ್ದ ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾ ಕಡೆಗೂ ರಿಲೀಸ್ ಆಗಲು ಸಜ್ಜಾಗಿದೆ. ಹೌದು, ಅಕ್ಷಯ್​ ಕುಮಾರ ಅಭಿನಯದ ಸೂರ್ಯವಂಶಿ ಸಿನಿಮಾ ಇದೇ ವರ್ಷ ದೀಪಾವಳಿಗೆ ತೆರೆ ಕಾಣಲಿದೆ. ಈ ಹಿಂದೆ ಕೊರೋನಾ ಮೊದಲ ಅಲೆಯ ಆರಂಭದಲ್ಲಿ ಮುಂಬೈನಲ್ಲಿ ಚಿತ್ರಮಂದಿರಗಳು 24 ಗಂಟೆ ತೆರೆದಿರುತ್ತವೆ ಎಂಬ ಆದೇಶ ಹೊರಡಿಸಿದ್ದಾಗ ರಿಲೀಸ್​ ಆಗಬೇಕಿದ್ದ ಮೊದಲ ಚಿತ್ರ ಇದಾಗಿತ್ತು. ಆದರೆ, ಕೊರೋನಾ ಕಾರಣದಿಂದ ಎಲ್ಲ ಲೆಕ್ಕಾಚಾರ ತಲೆಕೆಳಗಾಯಿತು.
View this post on Instagram


A post shared by Taran Adarsh (@taranadarsh)


2021ರಲ್ಲಿ ಅಂದರೆ ಈ ವರ್ಷ ದೀಪಾವಳಿಗೆ ಸೂರ್ಯವಂಶಿ, ನೋ ಮೀನ್ಸ್​ ನೋ, ಬಂಟಿ ಔರ್​ ಬಬ್ಲಿ 2 ನವೆಂಬ್​ 19ಕ್ಕೆ ಭಾವೈ ಅಕ್ಟೋಬರ್ 1ಕ್ಕೆ, ಸತ್ಯಮೇವ ಜಯತೆ 2 ನವೆಂಬರ್​ 26ಕ್ಕೆ, ತಡಪ್ ಡಿಸೆಂಬರ್​ 3ಕ್ಕೆ, ಚಂಡೀಘಡ್​ಕೆ ಆಶಿಕ್​ 10ನೇ ಡಿಸೆಂಬರ್​, ಕ್ರಿಸ್ಮಸ್​ಗೆ ರಣವೀರ್ ಸಿಂಗ್ ಅಭಿನಯದ 83, ಪುಷ್ಪ ಭಾಗ 1, ಜೆರ್ಸಿ ಡಿಸೆಂಬರ್​ 31 ರಿಲೀಸ್ ಆಗಲಿವೆ.
View this post on Instagram


A post shared by Taran Adarsh (@taranadarsh)


ಉಳಿದಂತೆ ಮುಂದಿನ ವರ್ಷ ಅಂದರೆ, 2022ರಲ್ಲಿ ಕನ್ನಡ ಹಾಗೂ ಇತರೆ ಭಾಷೆಗಳಲ್ಲಿ ತೆರೆ ಕಾಣಲಿರುವ ಕೆಜಿಎಫ್ ಚಾಪ್ಟರ್ 2, ರಾಧೆ ಶ್ಯಾಮ್​ (ಜನವರಿ 14), ಯಶ್​ ರಾಜ್ ಫಿಲಂಸ್​ ಬ್ಯಾನರ್​ ಅಡಿ ಆದಿತ್ಯ ಚೋಪ್ರಾ ಅವರು ನಿರ್ಮಿಸಿರುವ ಅಕ್ಷಯ್​ ಕುಮಾರ್​ ಅಭಿನಯದ ಪೃಥ್ವಿರಾಜ್​ (ಜನವರಿ 21), ರಣವೀರ್ ಸಿಂಗ್​ ಅಭಿನಯದ ಜಯೇಶ್​ ಭಾಯ್​ ಜೋರ್ದಾರ್​ (ಫೆಬ್ರವರಿ 25), ಪ್ರೇಮಿಗಳ ದಿನದಂದು ಆಮೀರ್ ಖಾನ್ ಅಭಿನಯದ ಲಾಲ್​ ಸಿಂಗ್​ ಚಡ್ಡಾ, ಬಚ್ಚನ್ ಪಾಂಡೆ ಮಾರ್ಚ್​ 4ಕ್ಕೆ, 18 ಮಾರ್ಚ್​ಗೆ ಶಂಶೇರ, ಮಾರ್ಚ್​ 25ಕ್ಕೆ ಭೂಲ್​ ಭುಲಯ್ಯ 2, ಏಪ್ರಿಲ್​ 29ಕ್ಕೆ ಅಜಯ್ ದೇವಗನ್ ನಿರ್ದೇಶನದ ಮೇ ಡೇ, ಮೇ 6ಕ್ಕೆ ಹೀರೋಪಂಥಿ 2, ಆಗಸ್ಟ್​ 11ಕ್ಕೆ ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್​, ಸೆ. 30ಕ್ಕೆ ವಿಕ್ರಮ್​​ ವೇದ ರೀಮೇಕ್​, 2022ರ ದೀಪಾವಳಿಗೆ ಅಕ್ಷಯ್​ ಕುಮಾರ್ ಅಭಿನಯದ ರಾಮ್​ಸೇತು, ಗಣಪತ್​ ಡಿಸೆಂಬರ್​ 23ರಂದು ತೆರೆ ಕಾಣಲಿವೆ.

ಇದನ್ನೂ ಓದಿ:  Sandalwood: ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ: ರಿಲೀಸ್​ಗೆ ಸಜ್ಜಾಗುತ್ತಿವೆ ಸ್ಟಾರ್ ನಟರ ಸಿನಿಮಾಗಳು..!

ಹೌದು, ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆಯಲು ಸಜ್ಜಾಗುತ್ತಿದ್ದಂತೆಯೇ ಹೊಸ ಸಿನಿಮಾಗಳ ರಿಲೀಸ್ ದಿನಾಂಕದ ಮಳೆಯೇ ಆಗಿದೆ. ಇನ್ನು ಈ ಹಿಂದೆ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಬಾಗಿಲು ಹಾಕಿದ್ದರೂ, ಬೆಲ್​ ಬಾಟ್​ ಹಾಗೂ ತಲೈವಿ ತೆರೆ ಕಂಡಿತ್ತು.
Published by:Anitha E
First published: