ಗಿಫ್ಟ್ (Gift) ಅಂದ್ರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ತುಂಬಾ ಕಡಿಮೆ ಜನ ಅನ್ಸುತ್ತೆ ‘ನಮಗೆ ಈ ಉಡುಗೊರೆ ಇಷ್ಟವಾಗೋದಿಲ್ಲ, ದಯವಿಟ್ಟು ಕೊಡಬೇಡಿ’ ಅನ್ನೋರು. ಆದರೆ ಇಲ್ಲೊಬ್ಬ 13 ವರ್ಷ ವಯಸ್ಸಿನ ನಟಿಗೆ (Actress) ಸಿಕ್ಕಿರೋ ರೀತಿಯಲ್ಲಿ ಗಿಫ್ಟ್ ಸಿಕ್ಕರೆ ಬಹುಶಃ ಯಾರೂ ಬೇಡ ಅಂತ ಹೇಳಲಿಕ್ಕಿಲ್ಲ ಅಂತ ಅನ್ನಿಸುತ್ತದೆ. ಪೋಷಕರು (Parents) ತಮ್ಮ ಮಕ್ಕಳಿಗೆ ಮತ್ತು ಮಕ್ಕಳು ತಮ್ಮ ಒಡಹುಟ್ಟಿದವರಿಗೆ ಕಾರುಗಳು ಮತ್ತು ಬೈಕುಗಳನ್ನು (Bike) ಉಡುಗೊರೆಯಾಗಿ ನೀಡಿರುವ ಅನೇಕ ವೀಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನೋಡಿದ್ದೇವೆ. ಆದರೆ ಇಂತಹದಕ್ಕೂ ಗಿಫ್ಟ್ ಸಿಗುತ್ತೆ ಅಂತ ನೀವು ಬಹುಶಃ ಕೇಳಿರಲಿಕ್ಕಿಲ್ಲ.
ನಟಿ ರಿವಾಗೆ ತನ್ನ ತಾಯಿಯಿಂದ ಎಂತಹ ದುಬಾರಿ ಗಿಫ್ಟ್ ಸಿಕ್ಕಿದೆ ನೋಡಿ
ಜನಪ್ರಿಯ ಚಲನಚಿತ್ರವಾದ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ನಲ್ಲಿ ನಟಿಸಿದ್ದ 13 ವರ್ಷದ ಹದಿಹರೆಯದ ರಿವಾ ಅರೋರಾ, ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ 10 ಮಿಲಿಯನ್ ಫಾಲೋವರ್ಸ್ ಗಳನ್ನು ಗಳಿಸಿದ್ದಕ್ಕಾಗಿ ತನ್ನ ತಾಯಿಯಿಂದ ಒಂದು ಭರ್ಜರಿ ಗಿಫ್ಟ್ ವೊಂದನ್ನು ಪಡೆದಿದ್ದಾರೆ ನೋಡಿ. ಆ ಉಡುಗೊರೆ ಎಂತದ್ದು ಅಂತ ನಿಮಗೆ ಗೊತ್ತಾದರೆ ಒಂದು ಕ್ಷಣ ಬಾಯಿ ತೆರೆದುಕೊಂಡು ‘ಓ ಮೈ ಗಾಡ್’ ಎನ್ನದೆ ಇರಲಾರಿರಿ.
ರಿವಾ ಅವರ ತಾಯಿ ನೀಡಿದ ಆ ಗಿಫ್ಟ್ ಅಂತಿಂತ ಸಾಧಾರಣವಾದ ಗಿಫ್ಟ್ ಅಲ್ಲ ಬಿಡಿ. ಅದು ಹೊಚ್ಚ ಹೊಸ ಆಡಿ ಕ್ಯೂ3 ಎಸ್‌ಯುವಿಯಾಗಿದ್ದು, ಇದರ ಆರಂಭಿಕ ಬೆಲೆ 44 ಲಕ್ಷ ರೂಪಾಯಿಯಾಗಿದೆ ಅಂತ ಹೇಳಬಹುದು.
ಗಿಫ್ಟ್ ಪಡೆದ ನಂತರ ಸೋಷಿಯಲ್ ಮೀಡಿಯಾದಲ್ಲಿ ರಿವಾ ಹೇಳಿದ್ದೇನು ಗೊತ್ತೇ?
ರಿವಾ ಅರೋರಾ ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್ ನಲ್ಲಿ ತಮ್ಮ ಹೊಸ ಕಾರಿನ ಫೋಟೋಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ ಮತ್ತು "ನನಗೆ ಗೊತ್ತು ನಾನು ತಡವಾಗಿ ಈ ಮೈಲಿಗಲ್ಲನ್ನು ತಲುಪಿದ್ದೇನೆ ಅಂತ, ಆದರೆ ಅಂತಿಮವಾಗಿ ನನ್ನ 10 ಮಿಲಿಯನ್ ಇನ್ಸ್ಟಾ ಕುಟುಂಬವನ್ನು ನನ್ನ ಹೊಸ ಉಡುಗೊರೆಯೊಂದಿಗೆ ಆಚರಿಸಿದೆ.
ತುಂಬಾ ಧನ್ಯವಾದಗಳು ಅಮ್ಮ. ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಿಮ್ಮ ಬೇಷರತ್ತಾದ ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ 10.6 ಮಿಲಿಯನ್ ಇನ್ಸ್ಟಾ ಕುಟುಂಬದಿಂದ ತುಂಬಾ ಧನ್ಯವಾದಗಳು. ಇಂತಹ ದೊಡ್ಡ ಸರ್‌ಪ್ರೈಸ್ ಗಾಗಿ ಮತ್ತು ನನ್ನ ದಿನವನ್ನು ಇನ್ನೂ ವಿಶೇಷವನ್ನಾಗಿ ಮಾಡಿದ್ದಕ್ಕೆ ಮುಂಬೈ ವೆಸ್ಟ್ ನ ಆಡಿ ಶೋ ರೂಂ ಅವರಿಗೂ ಧನ್ಯವಾದಗಳು. ಇದು ನಿಜವಾಗಿಯೂ ನನಗೆ ಮರೆಯಲಾಗದ ಕ್ಷಣ” ಎಂದು ಶೀರ್ಷಿಕೆಯಲ್ಲಿ ನಟಿ ಬರೆದುಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಯಾವೆಲ್ಲಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ ನೋಡಿ ರಿವಾ
ಪೋಸ್ಟ್ ನಲ್ಲಿ ಹಂಚಿಕೊಂಡ ಫೋಟೋಗಳು ರಿವಾ ಅರೋರಾ ತನ್ನ ಹೊಚ್ಚ ಹೊಸ ಐಷಾರಾಮಿ ಎಸ್‌ಯುವಿಯನ್ನು ಪಡೆಯುತ್ತಿರುವುದನ್ನು ತೋರಿಸುತ್ತದೆ. ರಿವಾ ಗಿಫ್ಟ್ ನಲ್ಲಿ ಪಡೆದ ಆಡಿ ಕ್ಯೂ3 ಎಸ್‌ಯುವಿ ಕಪ್ಪು ಬಣ್ಣದ್ದಾಗಿದ್ದು, ಅವರು ತಮ್ಮ ಹೊಚ್ಚ ಹೊಸ ಎಸ್‌ಯುವಿಯ ಮುಂದೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: Deepika Padukone: ದೀಪಿಕಾ ಪೋಷಕರ ಮದ್ವೆ ಬಗ್ಗೆ ನೆಟ್ಟಿಗರಿಗೆ ಯಾಕಪ್ಪಾ ಚಿಂತೆ! ಏನಿದು ಹೊಸ ಚರ್ಚೆ?
ಹೇಗಿದೆ ಗೊತ್ತಾ ಈ ಹೊಸ ಆಡಿ ಕ್ಯೂ3 ಎಸ್‌ಯುವಿ ಮಾಡೆಲ್
ಈ ಆಡಿ ಕ್ಯೂ3 ತುಂಬಾನೇ ಐಷಾರಾಮಿ ಎಸ್‌ಯುವಿಯಾಗಿದ್ದು, ಕಳೆದ ತಲೆಮಾರಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಿದೆ ಎಂದು ಹೇಳಬಹುದು. ಇದರ ವಿನ್ಯಾಸವು ಸಹ ದೊಡ್ಡ ಕ್ಯೂ7 ಎಸ್‌ಯುವಿಯಿಂದ ಪ್ರೇರಿತವಾಗಿದೆ ಮತ್ತು ನಯವಾದ ಆಲ್-ಎಲ್ಇಡಿ ಹೆಡ್ ಲೈಟ್ ಗಳು, ಮರುವಿನ್ಯಾಸಗೊಳಿಸಿದ ಮುಂಭಾಗ ಮತ್ತು ಹಿಂಭಾಗದ ಬಂಪರ್ ಗಳು ಮತ್ತು ಹೆಚ್ಚಿನದನ್ನು ಹೊಂದಿದೆ.
ಇದು 10.1-ಇಂಚಿನ ಸಂಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಡ್ಯಾಶ್ ಬೋರ್ಡ್ ಮತ್ತು ಡೋರ್ ಪ್ಯಾಡ್ ಗಳಲ್ಲಿ ಬ್ರಷ್ ಮಾಡಿದ ಅಲ್ಯೂಮಿನಿಯಂ ಸೇರ್ಪಡಿಸುವಿಕೆಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಪನೋರಮಿಕ್ ಸನ್ ರೂಫ್ ಮತ್ತು ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹೀಗೆ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಇದು ಹೊಂದಿದೆ ಅಂತ ಹೇಳಬಹುದು.
ಈ ಎಸ್‌ಯುವಿ ಪಲ್ಸ್ ಆರೆಂಜ್, ಗ್ಲೇಸಿಯರ್ ವೈಟ್, ಕ್ರೋನೋಸ್ ಗ್ರೇ, ಮೈಥೋಸ್ ಬ್ಲ್ಯಾಕ್ ಮತ್ತು ನವಾರಾ ಬ್ಲೂ ಶೇಡ್ ಗಳಲ್ಲಿ ಲಭ್ಯವಿದೆ. ಆಡಿ ಕ್ಯೂ3 ಈಗ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಮಾತ್ರ ಲಭ್ಯವಿದೆ, ಏಕೆಂದರೆ ಆಡಿ ತನ್ನ ಎಲ್ಲಾ ಡೀಸೆಲ್ ಎಂಜಿನ್ ಗಳನ್ನು ಸ್ಥಗಿತಗೊಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ