• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್​ ಆಗ್ತಿತ್ತೋ..!

ಅಮ್ಮಮ್ಮಾ... ಇವ್ನ ನೋಡೋಕೆ ಜೈಲಿಗೇ ಬರ್ತಿದ್ರಂತೆ 12 ಖ್ಯಾತ ನಟಿಯರು: ಒಳಗೆ ಏನೇನ್​ ಆಗ್ತಿತ್ತೋ..!

ಜಾಕ್ವಲಿನ್​, ಸುಕೇಶ್​, ನೋರಾ

ಜಾಕ್ವಲಿನ್​, ಸುಕೇಶ್​, ನೋರಾ

ಜಾಕ್ವಲಿನ್​ ಜೊತೆ ಸುಕೇಶ್​ ಕಿಸ್(Kiss)​ ಮಾಡುತ್ತಿದ್ದ ಫೋಟೋಗಳು ಸಖತ್​ ವೈರಲ್​ ಆಗಿತ್ತು. ಇದಾದ ಮೇಲೆ ನೋರಾ ಫತೇಹಿ ಜೊತೆಯೂ ಲಿಂಕ್​ ಇದೆ ಎಂಬುದು ತಿಳಿದುಬಂದಿತ್ತು. ಇದೀಗ ಮತ್ತೊಂದು ಶಾಕಿಂಗ್​ ನ್ಯೂಸ್​ ಹೊರಬಿದ್ದಿದೆ. ಈತನ ಜೈಲಿನಲ್ಲಿದ್ದಾಗ ಇವನ ಕುಶಲೋಪರಿ ವಿಚಾರಸಿಲು 12 ಖ್ಯಾತ ನಟಿಯರು (Famous Actress) ಬರುತ್ತಿದ್ದರಂತೆ.

ಮುಂದೆ ಓದಿ ...
  • Share this:

ರಾಜಕಾರಣಿಯ (Politician) ಬಂಧು ಎಂದು ಹೇಳಿಕೊಂಡು ನೂರಾರು ಜನರಗೆ ಕೋಟ್ಯಂತರ ರೂ. ವಂಚನೆ (Fraud) ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು (Bengaluru) ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekar) ಜತೆ ಶ್ರೀಲಂಕಾ (Sri Lanka) ಮೂಲದ ಬಾಲಿವುಡ್‌ (Bollywood) ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ( Jacqueline fernandez) ಹೆಸರು ತಳುಕು ಹಾಕಿಕೊಂಡಿದ್ದು, ಎಲ್ಲರಿಗೂ ಗೊತ್ತಿದೆ. ಇವರ ಜೊತೆ ಮತ್ತೊಬ್ಬ ಬಾಲಿವುಡ್​ ನಟಿ ನೋರಾ ಫತೇಹಿ (Nora fatehi) ಅವರ ಹೆಸರು ಕೂಡ ಕೇಳಿಬಂದಿತ್ತು. ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್​ ಫರ್ನಾಂಡಿಸ್  ಹಾಗೂ ನೋರಾ ಫತೇಹಿಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಲಾಗಿತ್ತು. ಪ್ರಕರಣದ ಕಿಂಗ್​ಪಿನ್​ ಸುಕೇಶ್​ ಚಂದ್ರಶೇಖರ್ ಜತೆ ಅವರು ಲಿಂಕ್ ಹೊಂದಿದ್ದರು ಎನ್ನಲಾಗಿದೆ. ಜಾಕ್ವಲಿನ್​ ಜೊತೆ ಸುಕೇಶ್​ ಕಿಸ್(Kiss)​ ಮಾಡುತ್ತಿದ್ದ ಫೋಟೋಗಳು ಸಖತ್​ ವೈರಲ್​ ಆಗಿತ್ತು. ಇದಾದ ಮೇಲೆ ನೋರಾ ಫತೇಹಿ ಜೊತೆಯೂ ಲಿಂಕ್​ ಇದೆ ಎಂಬುದು ತಿಳಿದುಬಂದಿತ್ತು. ಇದೀಗ ಮತ್ತೊಂದು ಶಾಕಿಂಗ್​ ನ್ಯೂಸ್​ ಹೊರಬಿದ್ದಿದೆ. ಈತನ ಜೈಲಿನಲ್ಲಿದ್ದಾಗ ಇವನ ಕುಶಲೋಪರಿ ವಿಚಾರಸಿಲು 12 ಖ್ಯಾತ ನಟಿಯರು (Famous Actress) ಬರ್ತಿದ್ರಂತೆ.


ತಿಹಾರ್​ ಜೈಲಿಗೆ ಬರ್ತಿದ್ರಂತೆ 12 ಸ್ಟಾರ್​ ನಟಿಯರು!


ಸುಕೇಶ್​ ಚಂದ್ರಶೇಖರ್​ ಅವರು ತಿಹಾರ್​ ಜೈಲಿನಲ್ಲಿದ್ದಾರೆ. ಜೈಲಿನಲ್ಲಿ ಐಷಾರಾಮಿ ಸವಲತ್ತು ಪಡೆಯಲು, ಭೇಟಿಗೆ ಬರುವ ಹೀರೋಯಿನ್​ಗಳನ್ನು ಮುಕ್ತವಾಗಿ ಒಳಗೆ ಬಿಡೋಕೆ ಅಲ್ಲಿನ ಸಿಬ್ಬಂದಿಗೆ ಪ್ರತಿ ತಿಂಗಳು ಸುಕೇಶ್​ 1 ಕೋಟಿ ರೂಪಾಯಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಮಾಹಿತಿ ನೀಡಿವೆ ಎಂದು ತಿಳಿದು ಬಂದಿದೆ. ಈತನನ್ನು ನೋಡಲು ಸ್ಟಾರ್​ ನಟಿಯರು ಬರುತ್ತಿದ್ದರಂತೆ. ಅವರನ್ನು ಈತನ ಇದ್ದ ಸೆಲ್​ ಒಳಗೆ ಕಳಿಸುತ್ತಿದ್ದರಂತೆ. ಆದರೆ ಆ ನಟಿಯರಲ್ಲಿ ಇಬ್ಬರ ಹೆಸರು ಮಾತ್ರ ಹೊರಬಂದಿದೆ. ಜಾಕಲಿನ್​ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ ಎಂಬುದು ತಿಳಿದುಬಂದಿದೆ.


ಇದನ್ನು ಓದಿ : ವಂಚಕನಿಂದ 36 ಲಕ್ಷ ಮೌಲ್ಯದ ಬೆಕ್ಕು ಉಡುಗೊರೆ ಪಡೆದಿದ್ದ ಜಾಕ್ವೆಲಿನ್..!


ಉಳಿದ ನಟಿಯರ ಹೆಸರು ಇನ್ನೂ ನಿಗೂಢ!

ಜಾಕ್ವೆಲಿನ್ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ ಸಿನಿಮಾ ಹೆಸರು ಮಾತ್ರ ಸದ್ಯ ಸಿಲುಕಿದೆ. ಇವರ ಜತೆಗೆ ಇನ್ನೂ ಕೆಲವರು ಸ್ಟಾರ್​ ನಟಿಯರು ಹಾಗೂ ಮಾಡೆಲ್​ಗಳು ಜೈಲಿಗೆ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.ಜಾಕ್ವೆಲಿನ್ ಫರ್ನಾಂಡಿಸ್​ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರ ನಡುವಿನ ರೋಮ್ಯಾಂಟಿಕ್ ಪೋಟೋ ಬಿಡುಗಡೆ ಆಗಿತ್ತು. ಕೆಲ ತಿಂಗಳ ಹಿಂದಷ್ಟೇ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ. ಅಕ್ಟೋಬರ್​​ನಲ್ಲಿ ಜಾರಿ ನಿರ್ದೇಶನಾಲಯದಿಂದ ಜಾಕ್ವೆಲಿನ್ ಫರ್ನಾಂಡೀಸ್​​ಗೆ ಸಮನ್ಸ್ ನೀಡಲಾಗಿತ್ತು.


ಇದನ್ನು ಓದಿ : ಏಕಾಂಗಿ.. ಜಾಕಲಿನ್​ ಫರ್ನಾಂಡಿಸ್​ ಏಕಾಂಗಿ..: ನಟಿ ಜೊತೆ ಸಲ್ಮಾನ್​ ಖಾನ್​ ಫ್ರೆಂಡ್​ಶಿಪ್​ ಕಟ್​!


ಜಾಕ್ವೆಲಿನ್​ಗೆ 36 ಲಕ್ಷ ಬೆಲೆಯ ಬೆಕ್ಕು  ಗಿಫ್ಟ್​!


ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಂಚಕ ಸುಕೇಶ್ ವಿಚಾರಣೆ ಮಾಡುತ್ತಿದ್ದು ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದಾರೆ. ಈ ವಿಚಾರಣೆ ವೇಳೆ ಸುಕೇಶ್​ ಚಂದ್ರಶೇಖರ್​ ಅನೇಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಅಚ್ಚರಿ ಎಂದರೆ ಜಾಕ್ವೆಲಿನ್​ ಫರ್ನಾಂಡಿಸ್ ಅವರಿಗೆ 52 ಲಕ್ಷ ರೂ. ಮೌಲ್ಯದ ಕುದುರೆ ಮತ್ತು 36 ಲಕ್ಷ ರೂ. ಬೆಲೆಯ ಬೆಕ್ಕುಗಳನ್ನು ಉಡುಗೊರೆಯಾಗಿ ನೀಡಿರುವ ಬಗ್ಗೆ ಸುಕೇಶ್​ ಮಾಹಿತಿ ನೀಡಿದ್ದ. ಇನ್ನೂ ನೊರಾ  ಫತೇಹಿಗೂ ದುಬಾರಿ ಗಿಫ್ಟ್​ಗಳನ್ನು ನೀಡುತ್ತಿದ್ದ ಎಂಬ ವಿಚಾರವೂ ತಿಳಿದುಬಂದಿದೆ. ಇನ್ನೂ ಈ ವಂಚನೆಯಲ್ಲಿ ಜಾಕ್ವಲಿನ್​ ಕೈವಾಡ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿದುಬರಲಿದೆ.

Published by:Vasudeva M
First published: