• Home
  • »
  • News
  • »
  • entertainment
  • »
  • ಜನಪ್ರಿಯವಾಗಿರುವ 11 Iconic TV​ Shows ಆರಂಭದ ದಿನಗಳಲ್ಲಿ ರದ್ದಾಗುವ ಭೀತಿಯಲ್ಲಿದ್ದವು..!

ಜನಪ್ರಿಯವಾಗಿರುವ 11 Iconic TV​ Shows ಆರಂಭದ ದಿನಗಳಲ್ಲಿ ರದ್ದಾಗುವ ಭೀತಿಯಲ್ಲಿದ್ದವು..!

11 ಐಕಾನಿಕ್​ ಟಿವಿ ಶೋಗಳು (ಪ್ರಾತಿನಿಧಿಕ ಚಿತ್ರ)

11 ಐಕಾನಿಕ್​ ಟಿವಿ ಶೋಗಳು (ಪ್ರಾತಿನಿಧಿಕ ಚಿತ್ರ)

ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಈ 11 ಜನಪ್ರಿಯ ಕಾರ್ಯಕ್ರಮಗಳು ಆರಂಭದಲ್ಲೇ ಬಹುತೇಕ ರದ್ದಾಗಿದ್ದವು ಅಥವಾ ರದ್ದಾಗುವ ಭೀತಿಯಲ್ಲಿದ್ದವು. ಇಲ್ಲಿದೆ ಅವುಗಳ ವಿವರ.

  • Trending Desk
  • 5-MIN READ
  • Last Updated :
  • Share this:

ಕೆಲ ವರ್ಷಗಳಿಂದ ಇಂಟರ್‌ನೆಟ್‌ನಲ್ಲಿ ವೆಬ್‌ ಸೀರಿಸ್‌, ಸಿನಿಮಾಗಳು, ಟಿವಿ ಶೋಗಳನ್ನು ನೋಡುವುದು ಹೆಚ್ಚಾಗಿದೆ. ಕೋವಿಡ್ - 19 ಪ್ರೇರಿತ ಲಾಕ್‌ಡೌನ್‌, ವರ್ಕ್ ಫ್ರಂ ಹೋಂ ಸಹ ಇದಕ್ಕೊಂದು ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರಖ್ಯಾತ ಟಿವಿ ಶೋಗಳನ್ನು ಒಂದೇ ಸಮನೆ ಕುಳಿತುಕೊಂಡು ಎಲ್ಲ ಎಪಿಸೋಡ್‌ಗಳನ್ನು ಒಟ್ಟಿಗೆ ನೋಡುವವರಿಗೇನೂ ಕಡಿಮೆ ಇಲ್ಲ. ನಮಗೆ ಬೇಸರವಾದಾಗ FRIENDS ಶೋ ನೋಡುವವರೂ ಇದ್ದಾರೆ. Game Of Thrones, Breaking Bad, ಪ್ರಿಯರಿಗೆನೂ ಕಡಿಮೆ ಇಲ್ಲ. ಇವೆಲ್ಲ ಈಗ ಐಕಾನಿಕ್‌ ಟಿವಿ ಶೋಗಳಾಗಿದೆ. ಆದರೆ, ಈ ಪ್ರಖ್ಯಾತ ಶೋಗಳು ಆರಂಭವಾಗುವ ಮುನ್ನವೇ ರದ್ದಾಗುವ ಹಂತವನ್ನು ತಲುಪಿದ್ದವು ಎಂದರೆ ನೀವು ನಂಬ್ತೀರಾ..?


ಹೌದು, ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಈ 11 ಜನಪ್ರಿಯ ಕಾರ್ಯಕ್ರಮಗಳು ಆರಂಭದಲ್ಲೇ ಬಹುತೇಕ ರದ್ದಾಗಿದ್ದವು ಅಥವಾ ರದ್ದಾಗುವ ಭೀತಿಯಲ್ಲಿದ್ದವು. ಇಲ್ಲಿದೆ ಅವುಗಳ ವಿವರ.


ಮನಿ ಹೈಸ್ಟ್ (Money Heist)


ಮನಿ ಹೈಸ್ಟ್ (Money Heist):  ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳುವ ಮೊದಲು, ಸ್ಪ್ಯಾನಿಷ್ ಸರಣಿಯಾದ Money Heist ಅನ್ನುಸ್ಪೇನ್‌ನ ಸ್ಥಳೀಯ ಟಿವಿ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಯಿತು. ಕಾರ್ಯಕ್ರಮಕ್ಕೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತರೂ, ನಂತರ ಕಳಪೆ ರೇಟಿಂಗ್‌ಗಳಿಂದಾಗಿ ಇದು ಫ್ಲಾಪ್ ಶೋ ಆಗಿ ಬದಲಾಯಿತು.


ನೆಟ್‌ಫ್ಲಿಕ್ಸ್ ಇದಕ್ಕೆ ತನ್ನ ಹಕ್ಕುಗಳನ್ನು ಪಡೆದುಕೊಳ್ಳುವವರೆಗೆ ಇದು ಫ್ಲಾಪ್‌ ಎಂದು ಪಾತ್ರವರ್ಗ ಹಾಗೂ ಸಿಬ್ಬಂದಿಯೇ ಒಪ್ಪಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ಕಾರ್ಯಕ್ರಮವನ್ನು ಆಯ್ಕೆ ಮಾಡಿದ ನಂತರ, ಇದು ವಿಶ್ವಾದ್ಯಂತ ಜನಪ್ರಿಯತೆ ಪಡೆದುಕೊಂಡಿತು. ನೆಟ್‌ಫ್ಲಿಕ್ಸ್‌ಗಾಗಿ 15-ಎಪಿಸೋಡ್‌ನ ಶೋ ಅನ್ನು 22 ಚಿಕ್ಕ ಎಪಿಸೋಡ್‌ಗಳಾಗಿ ಕತ್ತರಿಸಲಾಗಿದೆ. ಇದಕ್ಕೆ ಕಾರಣ ಶೋನ ಜನಪ್ರಿಯತೆ. ತಯಾರಕರು ಕಥೆಯನ್ನು ಮುಂದಕ್ಕೆ ಕೊಂಡೊಯ್ಯಬೇಕಾಯ್ತು ಮತ್ತು ಹೆಚ್ಚಿನ ಸೀಸನ್‌ಗಳನ್ನು ರಚಿಸಬೇಕಾಗಿತ್ತು.


ಫ್ರೆಂಡ್ಸ್ (FRIENDS): ಎನ್‌ಬಿಸಿ ಇದನ್ನು ರದ್ದುಗೊಳಿಸಿದ್ದರೆ FRIENDS ಶೋವನ್ನು ನೀವು ನೋಡಲು ಸಾಧ್ಯವಾಗುತ್ತಿರಲಿಲ್ಲ. ಹೌದು, ಆರಂಭದಲ್ಲಿ ಅಂದರೆ ಪೈಲಟ್‌ ಶೋ ಎನ್‌ಬಿಸಿಗೆ ಇಷ್ಟವಾಗಿರಲಿಲ್ಲ.ಮತ್ತು ಅದು "ಒಳ್ಳೆಯ ಎಂಟರ್‌ಟೈನಿಂಗ್‌ ಆಗಲಿಲ್ಲ, ಒರಿಜಿನಲ್‌ ಆಗಿಲ್ಲ ಹಾಗೂ ಹೆಚ್ಚು ಬುದ್ಧಿವಂತಿಕೆಯಿಂದ ಕೂಡಿಲ್ಲ" ಎಂದು ಭಾವಿಸಿತ್ತು. ಅಲ್ಲದೆ, ಈ ಕಾರ್ಯಕ್ರಮವು ತುಂಬಾ-ಯುವ (ಜೆನರೇಷನ್‌ Z) ಪ್ರೇಕ್ಷಕರಿಗೆ ಮೀಸಲಾಗಿದೆ. ಲೈಂಗಿಕ ಒಳನೋಟಗಳು ಮತ್ತು ಹೆಚ್ಚೂ ಅಲ್ಲದೆ ಇತ್ತ ಕಡಿಮೆಯೂ ಅಲ್ಲದೆ ಇಷ್ಟವಾಗುವ ಪಾತ್ರಗಳನ್ನು ಹೊಂದಿದೆ ಎಂದೂ ನೆಟ್‌ವರ್ಕ್‌ ಭಾವಿಸಿತ್ತು.


ಇದನ್ನೂ ಓದಿ: Rathnan Prapancha ಚಿತ್ರದಲ್ಲಿ ನಾಯಕಿಯಾಗೋ ಅವಕಾಶ ಮಿಸ್​ ಮಾಡಿದ ರಮ್ಯಾ


ಗೇಮ್‌ ಆಫ್‌ ಥ್ರೋನ್ಸ್‌ (Game of Thrones):  ಗೇಮ್ ಆಫ್ ಥ್ರೋನ್ಸ್‌ನ ಪೈಲಟ್ ಸಂಚಿಕೆ ಎಷ್ಟು ಕೆಟ್ಟದಾಗಿದೆ ಎಂದರೆ HBO ಅದನ್ನು ತಿರಸ್ಕರಿಸಿತ್ತು. ಎಷ್ಟರಮಟ್ಟಿಗೆ ಎಂದರೆ ಸೃಷ್ಟಿಕರ್ತರಾದ ಡೇವಿಡ್ ಬೆನಿಯೋಫ್ ಮತ್ತು ಡಿ.ಬಿ. ವೈಸ್ ಅದನ್ನು ರೀಶೂಟ್ ಮಾಡಬೇಕಿತ್ತು. ಹೊಸ ನಿರ್ದೇಶಕ ಟಾಮ್ ಮೆಕಾರ್ಥಿಯನ್ನು ನೇಮಿಸಿ, ತಮ್ಜಿನ್ ಮರ್ಚೆಂಟ್ ಬದಲಿಗೆ ಎಮಿಲಿಯಾ ಕ್ಲಾರ್ಕ್ ಮತ್ತು ಜೆನ್ನಿಫರ್ ಎಹ್ಲೆ ಅವರನ್ನು ಮಿಶೆಲ್ ಫೇರ್ಲೆ (ಕ್ಯಾಟ್ಲಿನ್ ಸ್ಟಾರ್ಕ್) ನೊಂದಿಗೆ ಬದಲಾಯಿಸಿ ಮತ್ತು 90 ಪ್ರತಿಶತದಷ್ಟು ಭಾಗವನ್ನು ಮರು-ಚಿತ್ರೀಕರಿಸಬೇಕಾಯಿತು.


ಗೇಮ್‌ ಆಫ್‌ ಥ್ರೋನ್ಸ್‌


ಬ್ರೇಕಿಂಗ್ ಬ್ಯಾಡ್ (Breaking Bad): ಬ್ರೇಕಿಂಗ್ ಬ್ಯಾಡ್ ಟಿವಿಗೆ ಬರಲು ತುಂಬಾ ಕಷ್ಟಪಡಬೇಕಾಯಿತು. HBO ಸೇರಿದಂತೆ ಹಲವಾರು ಪ್ರಮುಖ ನೆಟ್‌ವರ್ಕ್‌ಗಳು ಪ್ರದರ್ಶನವನ್ನು ತಿರಸ್ಕರಿಸಿದವು. ಅದಕ್ಕೆ ಕಾರಣ ಶೋನ ಪ್ರದರ್ಶನವು Weeds ಅನ್ನು ಹೋಲುತ್ತದೆ ಎಂದು ಭಾವಿಸಿತ್ತು. ಬಳಿಕ AMCಯಲ್ಲಿ ಸ್ಥಾನ ಕಂಡುಕೊಂಡು ಹಿಟ್‌ ಆಯಿತು.


ಇದನ್ನೂ ಓದಿ: Amit Shah ಹುಟ್ಟುಹಬ್ಬಕ್ಕೆ ಟ್ವೀಟ್​ ಮಾಡಿ ಟ್ರೋಲ್​ ಆದ Sara Ali Khan..!


ಬಿಗ್ ಬ್ಯಾಂಗ್ ಥಿಯರಿ (The Big Bang Theory): 12 ಸೀಸನ್‌ಗಳಲ್ಲಿ ನಡೆದ ಪ್ರದರ್ಶನ ಮತ್ತು ಅನೇಕ ಎಮ್ಮಿ ಪ್ರಶಸ್ತಿಗಳನ್ನು ಪಡೆದ ಬಿಗ್‌ ಬ್ಯಾಂಗ್‌ ಥಿಯರಿ ತನ್ನ ಪೈಲಟ್ ಸಂಚಿಕೆಯಿಂದ ಯಾರನ್ನೂ ಮೆಚ್ಚಿಸಲು ಸಾಧ್ಯವಾಗಲಿಲ್ಲ. ಇದು ನೆಟ್‌ವರ್ಕ್‌ಗಳಿಗೆ ಇಷ್ಟವಾಗಿರಲಿಲ್ಲ ಮತ್ತು ಈ ಶೋನ ಸೃಷ್ಟಿಕರ್ತ ಚಕ್ ಲೊರೆ ಮತ್ತೊಮ್ಮೆ ಕತೆಯನ್ನು ಬದಲಾಯಿಸಿದರು. ಮೂಲ ಪೈಲಟ್‌ ಎಪಿಸೋಡ್‌ನಲ್ಲಿ, ಪೆನ್ನಿ (Penny) ಎಂಬ ಪಾತ್ರ ಅಸ್ತಿತ್ವದಲ್ಲಿರಲಿಲ್ಲ.


ಲೂಸಿಫರ್ (Lucifer): ಕಳಪೆ ರೇಟಿಂಗ್‌ಗಳಿಂದಾಗಿ ಲೂಸಿಫರ್ ಅನ್ನು 2018ರಲ್ಲಿ ಫಾಕ್ಸ್ ರದ್ದುಗೊಳಿಸಿತ್ತು. ಆದರೆ, ಆ ಶೋ ಕೊನೆಗೊಂಡಾಗ ತೀವ್ರ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆ, ಆ ಶೋನ ಉತ್ಕಟ ಅಭಿಮಾನಿಗಳನ್ನು ಅರಿತ ನೆಟ್‌ಫ್ಲಿಕ್ಸ್‌, ಒಂದು ವರ್ಷದ ನಂತರ, ಹೊಸ 10-ಕಂತುಗಳ ಸೀಸನ್ ಅನ್ನು ಬಿಡುಗಡೆ ಮಾಡಿತು. ಕಾರ್ಯಕ್ರಮದ ಕೊನೆಯ ಸೀಸನ್ ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.


ಬೇವಾಚ್ (Baywatch): ಬೇವಾಚ್ ಎಷ್ಟು ಪ್ರತಿಷ್ಠಿತವಾಗಿದೆ ಎಂದರೆ ಅದು 2017ರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ ಚಲನಚಿತ್ರವಾಗಿ ಬದಲಾಯಿತು. ಆದರೆ, ಕಳಪೆ ರೇಟಿಂಗ್‌ಗಳಿಂದಾಗಿ ಈ ಟಿವಿ ಕಾರ್ಯಕ್ರಮವನ್ನು ಬಹುತೇಕ ರದ್ದುಗೊಳಿಸಲಾಗಿತ್ತು ಎಂದು ನಿಮಗೆ ತಿಳಿದಿದೆಯೇ? ಆ ವೇಳೆ ಡೇವಿಡ್ ಹ್ಯಾಸೆಲ್‌ಹಾಫ್ ಮತ್ತು ಕಾರ್ಯಕ್ರಮದ ರಚನೆಕಾರರು ಸಿಂಡಿಕೇಷನ್‌ ಮಾಡಿದರು. ನಂತರ, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳ ಆಸಕ್ತಿ ಹೆಚ್ಚಿಸಿತು ಮತ್ತು 11 ಸೀಸನ್‌ಗಳವರೆಗೆ ಓಡಿತು.


ಬೇವಾಚ್


ಸ್ಟಾರ್ ಟ್ರೆಕ್ (Star Trek): ಎರಡು ಸೀಸನ್‌ಗಳ ನಂತರ NCB ಬಹುತೇಕ ಸ್ಟಾರ್ ಟ್ರೆಕ್ ಅನ್ನು ತೆಗೆದುಹಾಕಿತ್ತು. ಆದರೆ, ಇದರಿಂದ ಅಭಿಮಾನಿಗಳು ಬೇಸರಗೊಂಡು, ನೆಟ್‌ವರ್ಕ್‌ಗೆ ಪತ್ರ ಬರೆದು ಕ್ಯಾಂಪೇನ್‌ ಆರಂಭಿಸಿದ್ದರು. ನಂತರ ಮೂರನೇ ಸೀಸನ್ ಬೇಡಿಕೆಯ ಮೇರೆಗೆ ಬಂದಿತು, ಆದರೆ ಪ್ರದರ್ಶನವನ್ನು ಮತ್ತೆ ರದ್ದುಗೊಳಿಸಲಾಯಿತು. ಬಳಿಕ 1970ರ ದಶಕದಲ್ಲಿ, ಇದು ಸಿಂಡಿಕೇಶನ್ ಆಗಿ ಹೋಯಿತು ಮತ್ತು ಭಾರಿ ಹಿಟ್ ಆಯಿತು.


ಬ್ರೂಕ್ಲಿನ್ ನೈನ್‌ - ನೈನ್‌ (Brooklyn Nine-Nine): ಹಿಟ್ ಶೋ ಆಗಿದ್ದರೂ, ಫಾಕ್ಸ್ ಚಾನಲ್‌ Brooklyn Nine-Nine ಅನ್ನುರದ್ದುಗೊಳಿಸಲು ನಿರ್ಧರಿಸಿದರು. ಏಕೆಂದರೆ "ಈ ವರ್ಷ ಅದನ್ನು ನಿಗದಿಪಡಿಸಲು ಸರಿಯಾದ ಸ್ಥಳವಿಲ್ಲ ಎಂದು". ನಂತರ ಎನ್‌ಬಿಸಿಗೆ ಈ ಕಾರ್ಯಕ್ರಮವು ಸಂಪೂರ್ಣವಾಗಿ ಉಲ್ಲಾಸದಾಯಕವಾಗಿತ್ತು ಎಂದು ತಿಳಿದಿತ್ತು ಮತ್ತು ಆದ್ದರಿಂದ ಅದು ಖರೀದಿ ಮಾಡಿತು.


ಇದನ್ನೂ ಓದಿ: Video: ಕಿರಿಕಿರಿ ಮಾಡೀರಾ ಹುಷಾರ್​...! ಹೇಗೆ ಜಾಡಿಸ್ತಾರೆ ಗೊತ್ತಾ Rashmika Mandanna


ಡೆಸ್ಪರೇಟ್‌ ಹೌಸ್‌ವೈವ್ಸ್‌ (Desperate Housewives): Sex and the City ಕಾರ್ಯಕ್ರಮದ ಮೇಲೆ ಕೇಂದ್ರೀಕರಿಸಲು ಬಯಸಿ Desperate Housewives ಅನ್ನು HBO ರದ್ದುಗೊಳಿಸಿತ್ತು. ನಂತರ ಬ್ರೇಕಿಂಗ್ ಬ್ಯಾಡ್‌ನಂತೆಯೇ, ಡೆಸ್ಪರೇಟ್ ಹೌಸ್‌ವೈವ್ಸ್ ಕೂಡ AMCಯಲ್ಲಿ ಸ್ಥಾನ ಕಂಡುಕೊಂಡು, ಹಿಟ್ ಶೋ ಆಗಿ ಮಾರ್ಪಟ್ಟಿತು.


ಫ್ಯಾಮಿಲಿ ಗಯ್‌ (Family Guy): ಮೂರನೇ ಸೀಸನ್‌ ನಂತರ, ಫಾಕ್ಸ್ ಫ್ಯಾಮಿಲಿ ಗಯ್‌ ಕಾರ್ಟೂನ್‌ ಕಾರ್ಯಕ್ರಮವನ್ನು ರದ್ದುಗೊಳಿಸಿತು. ಆದರೆ, ಈ ಕಾರ್ಯಕ್ರಮಕ್ಕಿದ್ದ ತೀವ್ರವಾದ ಅಭಿಮಾನಿಗಳು ಡಿವಿಡಿಗಳನ್ನು ಖರೀದಿಸುವುದನ್ನು ಮತ್ತು ಕಾರ್ಟೂನ್ ನೆಟ್‌ವರ್ಕ್‌ನಲ್ಲಿ ಬರುತ್ತಿದ್ದ ಹಳೆಯ ಶೋವನ್ನೇ ವೀಕ್ಷಿಸುವುದನ್ನು ಮುಂದುವರೆಸಿದರು. ಬಳಿಕ, ಜನಪ್ರಿಯತೆಯನ್ನು ಪೂರೈಸಲು, ನೆಟ್ವರ್ಕ್ ವಯಸ್ಕ ಕಾರ್ಟೂನ್ ಹಾಸ್ಯ ಪ್ರದರ್ಶನವನ್ನು 2005ರಲ್ಲಿ ಪುನರುತ್ಥಾನಗೊಳಿಸಲು ನಿರ್ಧರಿಸಿತು.

First published: