ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ (100% occupancy) ಭರ್ತಿಗೆ ಅನುಮತಿ ನೀಡುವಂತೆ ಸ್ಯಾಂಡಲ್ವುಡ್ನ (Sandalwood) ನಿರ್ಮಾಪಕರು ಇತ್ತೀಚೆಗಷ್ಟೆ ಆರೋಗ್ಯ ಸಚಿವ ಕೆ. ಸುಧಾಕರ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ನಿನ್ನೆಯಷ್ಟೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿನಿಮಾ ಮಂದಿರಗಳನ್ನು ಕೆಲವು ನಿರ್ಬಂಧಗಳೊಂದಿಗೆ ತೆರೆಯಲು ಅವಕಾಶ ನೀಡಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಸಿನಿಮಾ ರಂಗದವರಿಗೆ ಹಾಗೂ ಸಿನಿ ಪ್ರಿಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ನು ಈ ಸಿಹಿ ಸುದ್ದಿ ಹೊರ ಬೀಳುತ್ತಿದ್ದಂತೆಯೇ ರಿಲೀಸ್ಗೆ ರೆಡಿಯಾಗಿರುವ ಕನ್ನಡ ಸಿನಿಮಾಗಳು ಬಿಡುಗಡೆಯ ತಯಾರಿ ನಡೆಸಿವೆ.
ಹೌದು, ನಿನ್ನೆ ಸಭೆ ಆರಂಭವಾಗುವ ಮೊದಲೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಚಿತ್ರದ ಹೊಸ ಪೋಸ್ಟರ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿವೆ.
View this post on Instagram
View this post on Instagram
ಇದನ್ನೂ ಓದಿ: ರಿಲೀಸ್ ದಿನಾಂಕ ಪ್ರಕಟಿಸಿದ ನಿನ್ನ ಸನಿಹಕೆ ಸಿನಿಮಾ: ಪ್ರೇಕ್ಷಕರ ಮುಂದೆ ಬರಲಿದ್ದಾರೆ ರಾಜ್ಕುಮಾರ್ ಮೊಮ್ಮಗಳು Dhanya Ramkumar
ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3, ಭಜರಂಗಿ 2, ಸಲಗ, ಅರ್ಜುನ್ ಗೌಡ, ವಿಕ್ರಾಂತ್ ರೋಣ, ಕೆಜಿಎಫ್ ಚಾಪ್ಟರ್ 2 ಸೇರಿದಂತೆ ಹಲವಾರು ಸಿನಿಮಾಗಳು ರಿಲೀಸ್ ಆಗಲು ಕಾಯುತ್ತಿವೆ. ಹೀಗಿರುವಾಗಲೇ ರಾಜ್ಕುಮಾರ್ ಮೊಮ್ಮಗಳು ಧನ್ಯಾ ರಾಮ್ಕುಮಾರ್ ಅಭಿನಯದ ಸಿನಿಮಾ ಅಕ್ಟೋಬರ್ 8ಕ್ಕೆ ತೆರೆ ಕಾಣಲಿದೆ.
ಪಾಸಿಟಿವಿಟಿ ದರ ಜಾಸ್ತಿ ಆದರೆ ಸಿನಿಮಾ ಮಂದಿರಗಳೇ ಸ್ಥಗಿತ
ಸದ್ಯ ಕೋವಿಡ್ ತಜ್ಞರ ಜೊತೆ ಸಭೆ ಮಾಡಿದ್ದೇವೆ. ಪಾಸಿಟಿವ್ ರೇಟ್ ನಿಯಂತ್ರಣದಲ್ಲಿ ಇದೆ. ಅ. 1 ರಿಂದ ಪಾಸಿಟಿವ್ ರೇಟ್ 1 ಕ್ಕಿಂತ ಕಮ್ಮಿ ಇದ್ದರೆ ಸಿನಿಮಾ ಮಂದಿರದಲ್ಲಿ ಶೇ 100 ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 1 ರಿಂದ ಸಿನಿಮಾ ಥಿಯೇಟರ್ ಶೇ. 100ರಷ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಶೇ.1 ಕ್ಕಿಂತ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ. 100 ರಷ್ಟು ಸೀಟಿಂಗ್ ಅನುಮತಿ ನೀಡಲಾಗಿದೆ. ಶೇ.1 ಕ್ಕಿಂತ ಪಾಸಿಟಿವಿಟಿ ದರ ಜಾಸ್ತಿ ಇರುವ ಜಿಲ್ಲೆಗಳಲ್ಲಿ ಶೇ. 50 ಸೀಟಿಂಗ್ ಅನುಮತಿ ನೀಡಲಾಗಿದೆ. ಶೇ. 2ರಷ್ಟು ಇದ್ದರೆ ಸಿನಿಮಾ ಮಂದಿರಗಳೇ ಸ್ಥಗಿತಗೊಳಿಸಲಾಗುವುದು ಎಂದಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಇನ್ನು ಸಿನಿಮಾ ಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ಕೊಡುತ್ತಿದ್ದಂತೆಯೇ ಇಡೀ ಸಿನಿರಂಗ ಸಂತೋಷಪಟ್ಟಿದೆ. ಅಲ್ಲದೆ ನಟ ನೆನಪಿರಲಿ ಪ್ರೇಮ್ ಅವರು ಒಂದು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರಮಂದಿರಗಳಲ್ಲಿ ಶೇಕಡ 100 ಅನುಮತಿ ಯನ್ನು ನೀಡಿದ ನಮ್ಮ ರಾಜ್ಯ ಸರ್ಕಾರಕ್ಕೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸುತ್ತ, ನಿಮ್ಮೆಲ್ಲರಲ್ಲೂ ಒಂದು ಕಳಕಳಿಯ ವಿನಂತಿ🙏#STAYLOVELY pic.twitter.com/0HK6x4Ba5Q
— Prem Nenapirali (@StylishstarPrem) September 24, 2021
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ