100 Review: ಹಲವು ಟ್ವಿಸ್ಟ್ಸ್ ಮತ್ತು ಟರ್ನ್‍ಗಳಿಂದ ಕೂಡಿರುವ 100 ಸಿನಿಮಾ

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇಯಿದೆ. ಸಾಮಾಜಿಕ ಜಾಲತಾಣವನ್ನು ಎಲ್ಲರೂ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಅದರಿಂದ ಆಗಬಹುದಾದ ಆಪತ್ತುಗಳ ಬಗ್ಗೆ ರಮೇಶ್ ಅರವಿಂದ್ ಅವರ 100 ಬೆಳಕು ಚೆಲ್ಲುತ್ತದೆ.

100 ಸಿನಿಮಾದಲ್ಲಿ ರಮೇಶ್​ ಅರವಿಂದ್​

100 ಸಿನಿಮಾದಲ್ಲಿ ರಮೇಶ್​ ಅರವಿಂದ್​

  • Share this:
ಚಿತ್ರ: 100, ನಿರ್ದೇಶನ - ರಮೇಶ್ ಅರವಿಂದ್, ತಾರಾಗಣ - ರಮೇಶ್ ಅರವಿಂದ್, ರಚಿತಾ ರಾಮ್, ಪೂರ್ಣ, ವಿಶ್ವ ಕರ್ಣ, ಪ್ರಕಾಶ್ ಬೆಳವಾಡಿ, ಬೇಬಿ ಸ್ಮಯಾ, ಶೋಭರಾಜ್, ರಾಜು ತಾಳಿಕೋಟೆ ಮುಂತಾದವರು

ತಂತ್ರಜ್ಞಾನಗಳಿಂದ ಎಷ್ಟು ಉಪಯೋಗವಿದೆಯೋ, ಅದಕ್ಕೂ ಹೆಚ್ಚು ದುರುಪಯೋಗಗಳಿವೆ. ಅದಕ್ಕೆ ಈ ಮೇಲಿನ ಘಟನೆಗಳೇ ಸಾಕ್ಷಿ. ಇಂತಹ ಅದೆಷ್ಟೋ ಘಟನೆಗಳು ಬೆಳಕಿಗೆ ಬರುವುದೇ ಇಲ್ಲ. ಅದರಲ್ಲಂತೂ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇಯಿದೆ. ಸಾಮಾಜಿಕ ಜಾಲತಾಣವನ್ನು ಎಲ್ಲರೂ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಆದರೆ ಅದರಿಂದ ಆಗಬಹುದಾದ ಆಪತ್ತುಗಳ ಬಗ್ಗೆ ರಮೇಶ್ ಅರವಿಂದ್ ಅವರ 100 ಬೆಳಕು ಚೆಲ್ಲುತ್ತದೆ.
ದಿಸ್ ಟೆಕ್ನಾಲಜಿ ಈಸ್ ಕಿಲ್ಲಿಂಗ್ ಮೀ... ಎಂದು ಹತಾಶೆಯಿಂದ ನುಡಿಯುತ್ತಾನೆ 100 ಚಿತ್ರದ ನಾಯಕ. ವಿಷ್ಣು (ರಮೇಶ್ ಅರವಿಂದ್) ಒಬ್ಬ ದಕ್ಷ ಪೊಲೀಸ್ ಆಧಿಕಾರಿ ಸಮಾಜ, ಡಿಪಾರ್ಟ್‍ಮೆಂಟ್ ಎರಡೂ ಕಡೆಗಳಲ್ಲೂ ಒಳ್ಳೆಯ ಹೆಸರು. ಪತ್ನಿ ಅನಘಾ (ಪೂರ್ಣ), ತಂಗಿ ಹಿಮಾ (ರಚಿತಾ ರಾಮ್), ಪುಟ್ಟ ಮಗಳು ಸಾನ್ವಿ (ಸ್ಮಯಾ) ಹಾಗೂ ವಿಷ್ಣು ಅಮ್ಮ, ಹೀಗೆ ನಮ್ಮ ಸಂಸಾರ ಆನಂದ ಸಾಗರ ಎಂದು ಆರಾಮಾಗಿರುತ್ತಾರೆ ವಿಷ್ಣು. ಇನ್ನು ಪೊಲೀಸ್ ಇಲಾಖೆ ಅಂದರೆ ಕೇಳಬೇಕಾ, ಪ್ರತಿದಿನ ಹೊಸ ಹೊಸ ಪ್ರಕರಣಗಳು, ಜವಾಬ್ದಾರಿಗಳು ಇದ್ದೇ ಇರುತ್ತವೆ. ಹಾಗೇ ಪೊಲೀಸ್ ಕಮೀಷನರ್ ಸದಾನಂದ (ಪ್ರಕಾಶ್ ಬೆಳವಾಡಿ), ವಿಷ್ಣುಗೆ ಕೆಲವರ ಫೋನ್ ಟ್ಯಾಪ್ ಮಾಡಿ ರಿಪೋರ್ಟ್ ನೀಡಲು ಹೇಳುತ್ತಾರೆ.

ಫೋನ್ ಕದ್ದಾಲಿಕೆ ಮಾಡಲು ಹೋದಾಗ ಶ್ರೀಮಂತ ಉದ್ಯಮಿಗಳು ಹಾಗೂ ರಾಜಕಾರಿಣಿಗಳ ನಡುವಿನ ಕೋಟಿ ಕೋಟಿ ರೂಪಾಯಿಯ ಲಂಚ, ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರ ಸೇರಿದಂತೆ ಹಲವು ವಿಷಗಳು ಹೊರಬರುತ್ತವೆ.

ಇದನ್ನೂ ಓದಿ: Sandalwood: 'ಇನ್' ಸಿನಿಮಾದ ಫಸ್ಟ್​ ಲುಕ್ ಪೋಸ್ಟರ್ ರಿಲೀಸ್​ ಮಾಡಿದ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ

ಅದರ ನಡುವೆಯೇ ಶ್ರೀಮಂತ ಉದ್ಯಮಿಯ ಪತ್ನಿಗೆ ಹರ್ಷ (ವಿಶ್ವ ಕರ್ಣ) ಎಂಬ ಒಬ್ಬ ಬಾಯ್‍ಫ್ರೆಂಡ್ ಕೂಡ ಇರುತ್ತಾನೆ. ಆತ ಆಕೆಗೆ ಫೇಸ್‍ಬುಕ್ ಮೂಲಕ ಫ್ರೆಂಡ್ ಆಗಿರುತ್ತಾನೆ. ಫೇಸ್‍ಬುಕ್ ಹಾಗೂ ಇನ್ಸ್‍ಟಾಗ್ರಾಮ್ ಮೂಲಕ ಸುಂದರ ಯುವತಿಯರನ್ನು ಪರಿಚಯ ಮಾಡಿಕೊಂಡು, ಫ್ಲರ್ಟ್ ಮಾಡಿ, ಅವರ ಜೀವ, ಜೀವನಗಳೊಂದಿಗೆ ಆಟ ಆಡುವುದೇ ಆತನ ಕೆಲಸ. ಆತನ ನಂಬರ್ ಟ್ಯಾಪ್ ಮಾಡಲು ಹೋದಾಗ ವಿಷ್ಣುಗೆ ಶಾಕ್ ಕಾದಿರುತ್ತೆ.

ಯಾಕೆಂದರೆ ಹರ್ಷ, ಹಿಮಾಗೂ ಕರೆ ಮಾಡಿ ಮಾತನಾಡುತ್ತಿರುತ್ತಾನೆ. ಮತ್ತೊಂದೆಡೆ ವಿಷ್ಣು ಪತ್ನಿ ಅನಘಾ ಜತೆಗೂ ಆತ ಮಾತನಾಡುವುದನ್ನ ವಿಷ್ಣು ನೋಡುತ್ತಾನೆ. ಅದರ ನಡುವೆಯೇ ವಿಷ್ಣು ಫೋನ್ ಕದ್ದಾಲಿಕೆಯಿಂದ ರೆಕಾರ್ಡ್ ಮಾಡಿಕೊಂಡಿದ್ದ ಅಷ್ಟೂ ವಿಐಪಿ, ವಿವಿಐಪಿಗಳ ಆಡಿಯೋ ಫೈಲ್‍ಗಳು ಲೀಕ್ ಆಗುತ್ತವೆ. ಕೆಲವು ಮಾಧ್ಯಮಗಳ ಕೈಗೂ ಸೇರುತ್ತವೆ. ಅಲ್ಲಿಗೆ ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನ ಎರಡೂ ಕಡೆಗಳಲ್ಲೂ ವಿಷ್ಣು ಇಕ್ಕಟ್ಟಿಗೆ ಸಿಲುಕುವಂತಾಗುತ್ತೆ. ಹಾಗಾದರೆ ವಿಷ್ಣು ತನ್ನ ಕುಟುಂಬವನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ ? ತನ್ನ ಕೆಲಸವನ್ನು ಹೇಗೆ ಉಳಿಸಿಕೊಳ್ಳುತ್ತಾನೆ ? ಎಂಬುದೇ ಹಲವು ಟ್ವಿಸ್ಟ್ಸ್ ಮತ್ತು ಟರ್ನ್‍ಗಳಿಂದ ಕೂಡಿರುವ 100...!


ಒಂದೊಳ್ಳೆ ಸಸ್ಪೆನ್ಸ್ ಥ್ರಿಲ್ಲರ್‍ನಲ್ಲಿ ಇರಬೇಕಾದ ಎಲ್ಲ ಅಂಶಗಳೂ 100 ಸಿನಿಮಾದಲ್ಲಿವೆ. ತಮಿಳಿನ ತಿರುಟ್ಟು ಪಾಯಲೆ 2 ಚಿತ್ರದ ರಿಮೇಕ್ ಆಗಿದ್ದರೂ, ಅದರಲ್ಲಿ ಕೆಲ ಬದಲಾವಣೆ ಮಾಡಿಕೊಂಡು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ ನಿರ್ದೇಶಕ ರಮೇಶ್ ಅರವಿಂದ್. ಕಥೆಗೆ ಅಲ್ಲಲ್ಲಿ ಬೇಕಾದ ಟ್ವಿಸ್ಟ್‍ಗಳಿವೆ, ಮುಂದೆ ಏನಾಗಬಹುದು ಅಂತ ಊಹಿಸುವುದೂ ಕಷ್ಟಸಾಧ್ಯ ಎಂಬಂತೆ ಟರ್ನ್‍ಗಳಿವೆ.

ಕ್ಲೈಮ್ಯಾಕ್ಸ್‍ನಲ್ಲಿ 3 ಅಡಿ ನೀರಿನಲ್ಲಿ 6 ಅಡಿ ಉದ್ದದ ವ್ಯಕ್ತಿಯನ್ನು ಕಟ್ಟಿಹಾಕುವ ಅಂಡರ್​ ವಾಟರ್ ಫೈಟ್ ಅಭಾಸ ಎನ್ನಿಸಬಹುದು. ರವಿ ಬಸ್ರೂರ್ ಅವರ ಸಂಗೀತಕ್ಕೆ ಹೆಚ್ಚು ಸ್ಕೋಪ್ ಇಲ್ಲ, ಆದರೆ ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿಬಂದಿದೆ. ಸತ್ಯ ಹೆಗಡೆ ಅವರ ಕ್ಯಾಮರಾ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತೆ. ರಮೇಶ್ ಅರವಿಂದ್ ಅವರ ನಟನೆ ಬಗ್ಗೆ ಹೇಳುವ ಮಾತಿಲ್ಲ, ಬಬ್ಲಿ ಪಾತ್ರದಲ್ಲಿ ಹೋಮ್ಲಿ ಹುಡುಗಿಯಾಗಿ ರಚಿತಾ ಇಷ್ಟವಾಗುತ್ತಾರೆ. ಪೂರ್ಣ ತಮ್ಮ ಪಾತ್ರಕ್ಕೆ ಸಂಪೂರ್ಣ ಒಪ್ಪಿಕೊಂಡಿದ್ದಾರೆ. ಹೊಸ ಪರಿಚಯ ವಿಶ್ವ ಕರ್ಣ ಈ ಚಿತ್ರದ ಮೈನ್ ಹೈಲೈಟ್. ಯಾಕೆಂದರೆ ಉತ್ತಮ ಖಳನಟನಾಗುವ ಎಲ್ಲ ಲಕ್ಷಣಗಳೂ ಅವರಲ್ಲಿವೆ. ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.

ಇದನ್ನೂ ಓದಿ: Ramesh Aravind ಅಭಿನಯದ 100 ಸಿನಿಮಾ ನೋಡಿ ಮೆಚ್ಚಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ

ಉಳಿದಂತೆ ಶೋಭರಾಜ್, ರಾಜು ತಾಳಿಕೋಟೆ, ಪ್ರಕಾಶ್ ಬೆಳವಾಡಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 100 ಒಂದು ಅದ್ಭುತ ಅಲ್ಲದಿದ್ದರೂ, ಅರಿವು ಮೂಡಿಸುವ ಸಿನಿಮಾ. ಹೀಗಾಗಿ ಒಮ್ಮೆ ನೋಡಲಡ್ಡಿಯಿಲ್ಲ. ನೋಡಿದ ಬಳಿಕ ಫೇಸ್‍ಬುಕ್, ಇನ್‍ಸ್ಟಾಗ್ರಾಮ್‍ನಲ್ಲಿರುವವರಿಗೆ ಸಾಮಾಜಿಕ ಜಾಲತಾಣದಲ್ಲಿ ಹೇಗಿರಬೇಕು ಎಂಬ ಜಾಗೃತಿ ಮೂಡುವುದರಲ್ಲಿ ಸಂಶಯವಿಲ್ಲ.

ದಾಖಲಾಗಿರುವ ಪ್ರಕರಣಗಳು

ಎಫ್‍ಬಿ ಗೆಳೆಯನ ಕಿರುಕುಳದಿಂದ ಮಹಿಳೆಯಿಂದ ದೂರು - 3 ಫೆಬ್ರವರಿ 2021, ಬೆಂಗಳೂರು

ಫೇಕ್ ಫೇಸ್‍ಬುಕ್ ಪ್ರೊಫೈಲ್‍ನಿಂದ ಮಹಿಳೆಗೆ ಕಿರುಕುಳ - 16 ಜನವರಿ 2017, ಗುರುಗ್ರಾಮ್
ಕಾಲೇಜ್ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಫೇಸ್‍ಬುಕ್ ಗೆಳೆಯನ ಬಂಧನ - 24 ಜನವರಿ 2019, ಇಂದೋರ್

ಫೇಸ್‍ಬುಕ್ ಗೆಳೆಯ ದೂರಾದ ಎಂದು ನೇಣಿಗೆ ಶರಣಾದ 14 ವರ್ಷದ ಹುಡುಗಿ - 7 ನವೆಂಬರ್ 2013, ಬೆಂಗಳೂರು

ಅಂತ್ಯವಾದ ಫೇಸ್‍ಬುಕ್ ಪ್ರೇಮ, ನೇಣಿಗೆ ಶರಣಾದ ಯುವಕ - 19 ನವೆಂಬರ್ 2017, ಬೆಂಗಳೂರು

ಫೇಸ್‍ಬುಕ್ ಲವರ್‍ಗಾಗಿ ಗಂಡನನ್ನು ಕೊಲ್ಲಿಸಿದ ಮಹಿಳೆ - 8 ಮೇ 2018, ಆಂಧ್ರ ಪ್ರದೇಶ
ಫೇಸ್‍ಬುಕ್ ಮೂಲಕ ಬೈಕ್ ಮಾರಾಟ ಯತ್ನ, ಟೆಸ್ಟ್ ರೈಡ್‍ಗೆ ಬಂದು ಮಾಲೀಕನನ್ನು ಕೊಂದು, ಬೈಕ್ ಕದ್ದ ದುಷ್ಕರ್ಮಿಗಳು - 31 ಮಾರ್ಚ್ 2018, ಬೆಂಗಳೂರು

ಇನ್‍ಸ್ಟಾಗ್ರಾಮ್‍ನಲ್ಲಿ ಎಕ್ಸ್ ಲವರ್ ಕಾಟ, ನೇಣಿಗೆ ಶರಣಾದ 19 ವರ್ಷದ ಯುವತಿ - 20 ಮಾರ್ಚ್ 2019, ಬೆಂಗಳೂರು

ಗರ್ಲ್‍ಫ್ರೆಂಡ್ ಅತಿಯಾದ ಫೇಸ್‍ಬುಕ್, ಇನ್ಸ್‍ಟಾ ಗೀಳು... ಫೇಸ್‍ಬುಕ್‍ನಿಂದಲೇ ಪರಿಚಯವಾದ ಬಾಯ್‍ಫ್ರೆಂಡ್‍ನಿಂದ ಯುವತಿ, ಮಗು ಹತ್ಯೆ - 31 ಜನವರಿ 2019, ಬೆಂಗಳೂರು

ಫೇಸ್‍ಬುಕ್ ಮೂಲಕ ಗೆಳೆತನ, ಪ್ರೀತಿ, ಮದುವೆಯಾದ 2 ವರ್ಷಗಳಲ್ಲೇ ಪತಿಯನ್ನು ಕೊಂಡ ಪತ್ನಿ - 3 ನವೆಂಬರ್ 2012, ಬೆಂಗಳೂರು

ಇನ್‍ಸ್ಟಾಗ್ರಾಮ್ ಗೆಳೆಯನಿಂದ ಹತ್ಯೆ ಯತ್ನ, 3 ದಿನ ಬಾವಿಯಲ್ಲಿ ಬಿದ್ದಿದ್ದ ಯುವತಿಯ ರಕ್ಷಣೆ - 16 ಅಕ್ಟೋಬರ್ 2020, ಬೆಂಗಳೂರು
Published by:Anitha E
First published: