Gandhada Gudi: 100 ದಿನ ಪೂರೈಸಿದ ಅಪ್ಪು 'ಗಂಧದ ಗುಡಿ'; ಪುನೀತ್​ ನಿಜವಾದ ನಾಯಕ ಎಂದ ಅಶ್ವಿನಿ

 ಗಂಧದ ಗುಡಿ ಪೋಸ್ಟರ್​

ಗಂಧದ ಗುಡಿ ಪೋಸ್ಟರ್​

100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ ಗಂಧದಗುಡಿ ಪಯಣ! ಎಂದು ಅಶ್ವಿನಿ ಪುನೀತ್ ರಾಜ್​ಕುಮಾರ್ ಬರೆದುಕೊಂಡಿದ್ದಾರೆ. ಅಪ್ಪು ಅವರ ಕನಸಿನ ಪಯಣವಾಗಿದ್ದ ಈ ಚಿತ್ರವು, ಕರ್ನಾಟಕದ ಅದ್ಭುತ ಕಾಡು ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ ಎಂದು ಬರೆದಿದ್ದಾರೆ.

  • Share this:

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಕನಸಿನ ಚಿತ್ರ ಗಂಧದ ಗುಡಿ, ಅಪ್ಪು (Appu) ನಿಧನರಾದ ಬಳಿಕ ತೆರೆಕಂಡ ಸಾಕ್ಷ್ಯಚಿತ್ರ ಗಂಧದ ಗುಡಿ (Gandhadagudi) ರಿಲೀಸ್​ ಆಗಿ ನೂರು ದಿನವಾಗಿದೆ. ಅಕ್ಟೋಬರ್‌ 28ರಂದು ವಿಶ್ವದಾದ್ಯಂತ ಬಿಡುಗಡೆ  ಆಗಿದ್ದ, ಈ ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ (Amoghavarsha) ನಿರ್ದೇಶನ ಮಾಡಿದ್ದರು. ಈ  ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ನಿರ್ಮಿಸಿದ್ದರು. ಈಗ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ ಕುಮಾರ್​ (Ashwini PuneethRajkumar) ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.


100 ದಿನ ಪೂರೈಸಿದ ಗಂಧದ ಗುಡಿ


ಪುನೀತ್‌ ಆಗಿಯೇ ಕಾಣಿಸಿಕೊಂಡ, ಮೊದಲ ಸಾಕ್ಷ್ಯಚಿತ್ರ ಗಂಧದ ಗುಡಿ (Gandhada Gudi) ಬಿಡುಗಡೆ ಆಗಿ 100 ದಿನವಾಯಿತು. ಅಕ್ಟೋಬರ್‌ 28ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದ್ದ, ಈ ಸಾಕ್ಷ್ಯಚಿತ್ರಕ್ಕೆ ಅಮೋಘವರ್ಷ ನಿರ್ದೇಶನ ಮಾಡಿದ್ದರು. ಈ ಕನಸಿನ ಪ್ರಾಜೆಕ್ಟ್‌ ಅನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ನಿರ್ಮಿಸಿದ್ದರು. ಈಗ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ನಿರ್ಮಾಪಕಿ ಅಶ್ವಿನಿ ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.




ನಿಜವಾದ ನಾಯಕನ ಗಂಧದಗುಡಿ ಪಯಣ!


100 ದಿನಗಳನ್ನು ಪೂರೈಸಿದ ನಿಜವಾದ ನಾಯಕನ ಗಂಧದಗುಡಿ ಪಯಣ! ಎಂದು ಅಶ್ವಿನಿ ಪುನೀತ್ ರಾಜ್​ಕುಮಾರ್ ಬರೆದುಕೊಂಡಿದ್ದಾರೆ. ಅಪ್ಪು ಅವರ ಕನಸಿನ ಪಯಣವಾಗಿದ್ದ ಈ ಚಿತ್ರವು, ಕರ್ನಾಟಕದ ಅದ್ಭುತ ಕಾಡು ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ ಎಂದು ಬರೆದಿದ್ದಾರೆ.


ಪುನೀತ್ ಹೊಸ ಪ್ರಯತ್ನಕ್ಕೆ ಸಿಗ್ತು ಜಯ


ಗಂಧದ ಗುಡಿ ಸಿನಿಮಾ ಕರ್ನಾಟಕದ ಕಾಡು-ಮೇಡನ್ನು ಪರಿಚಯಿಸುವ ಸಿನಿಮಾ ಆಗಿದೆ.  ಅಷ್ಟೇ ನೈಜವಾಗಿ ಅದನ್ನು ನಾಡಿನ ಜನತೆಗೆ ಅರ್ಪಿಸಿದ್ದರು.  ಪುನೀತ್​ನನ್ನು ತೆರೆಮೇಲೆ ಕಂಡ ಅಭಿಮಾನಿಗಳು ಸಿನಿಮಾವನ್ನು ಅಪ್ಪಿ ಮುದ್ದಾಡಿದ್ರು.  ಸ್ಯಾಂಡಲ್‌ವುಡ್‌ ಸಿನಿಮಾ ಸ್ನೇಹಿತರು, ಆಪ್ತರು ಸಹ ಚಿತ್ರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಪೋಸ್ಟ್‌ ಹಂಚಿಕೊಂಡಿದ್ದರು.


ಗಂಧದ ಗುಡಿ ಒಟಿಟಿಯಲ್ಲಿ ಯಾವಾಗ ರಿಲೀಸ್


ಅಮೋಘವರ್ಷ ನಿರ್ದೇಶನದ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ರೈಟ್ಸ್​ನನ್ನು ಅಮೆಜಾನ್‌ ಪ್ರೈಂನವರು ಖರೀದಿಸಿದೆ. ಆದರೆ ಸಿನಿಮಾ ತೆರೆಕಂಡು 100 ದಿನಗಳು ಕಳೆದರೂ ಚಿತ್ರದ ಒಟಿಟಿ ಪ್ರಸಾರ ಮಾತ್ರ ಇನ್ನೂ ಆಗಿಲ್ಲ. ಇತ್ತ ಚಿತ್ರಮಂದಿರದಲ್ಲಿ ನೋಡದ ಜನ ಒಟಿಟಿಯಲ್ಲಿ ಯಾವಾಗ ರಿಲೀಸ್‌ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಸದ್ಯಕ್ಕೆ  ಈ ಬಗ್ಗೆ ಅಶ್ವಿನಿ ಪುನೀತ್ ರಾಜ್​ ಕುಮಾರ್ ಯಾವುದೇ ಮಾಹಿತಿ ನೀಡಿಲ್ಲ.




ಪುನೀತ್ ಪತ್ನಿ ಅಶ್ವಿನಿ ಮನದಾಳದ ಮಾತು


ಗಂಧದ ಗುಡಿ ಚಿತ್ರದ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ಮಾಪಕಿ ಅಶ್ವಿನಿ ಅವರನ್ನು ಅನೇಕ ಪ್ರಶ್ನೆ ಕೇಳಿದ್ದರು. ಈ ಸಂದರ್ಶನದ ವೀಡಿಯೋ 8 ನಿಮಿಷಗಳ ಇದ್ದು, ಸಂದರ್ಶನದಲ್ಲಿ ನಿರ್ಮಾಪಕಿ ಅಶ್ವಿನಿ ಅವರು ಗಂಧದಗುಡಿ ಚಿತ್ರ ಹಾಗೂ ಪತಿ ಪುನೀತ್​ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದರು.


ಈ ಗಂಧದಗುಡಿ ಅಪ್ಪು ನೋಡಿದ ಜಗತ್ತು


ಗಂಧದಗುಡಿ ಅಪ್ಪಾಜಿ ಮತ್ತು ಶಿವಣ್ಣ ಮಾಡಿದ್ರು ಅದರಲ್ಲಿ ಒಂದು ಕತೆ ಇತ್ತು. ಈ ಗಂಧದಗುಡಿ ಅಪ್ಪು ನೋಡಿದ ಜಗತ್ತು ಹಾಗೂ ಜರ್ನಿಯಾಗಿದೆ. ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನನ್ನ ಮೂಲಕ ಈ ಸಿನಿಮಾವನ್ನು ಕನ್ನಡ ಜನತೆಗೆ ತೋರಿಸ್ಬೇಕು ಎಂದು ಅಪ್ಪು ಅವರೇ ನಿರ್ಧರಿಸಿದ್ರು.  ಈ ಚಿತ್ರದಲ್ಲಿ ಅವರಿಗೆ ಮೇಕಪ್​ ಇಲ್ಲ, ಹೆಚ್ಚು ಜನ ಇಲ್ಲ. ಇದರಲ್ಲಿ ಪುನೀತ್​ ಅವರನ್ನು ಅವರನ್ನಾಗಿಯೇ ನೋಡಬಹುದಾಗಿದೆ ಎಂದು ಅಶ್ವಿನಿ ಹೇಳಿದ್ದರು.

Published by:ಪಾವನ ಎಚ್ ಎಸ್
First published: