• Home
  • »
  • News
  • »
  • entertainment
  • »
  • 10 years of English Vinglish: “ಇಂಗ್ಲಿಷ್​‌ ವಿಂಗ್ಲೀಷ್” ಸಿನಿಮಾದಲ್ಲಿ ಶ್ರೀದೇವಿ ಐಟಂ ಸಾಂಗ್‌ ಬಯಸಿದ್ದರಂತೆ ಗೌರಿ ಶಿಂಧೆ

10 years of English Vinglish: “ಇಂಗ್ಲಿಷ್​‌ ವಿಂಗ್ಲೀಷ್” ಸಿನಿಮಾದಲ್ಲಿ ಶ್ರೀದೇವಿ ಐಟಂ ಸಾಂಗ್‌ ಬಯಸಿದ್ದರಂತೆ ಗೌರಿ ಶಿಂಧೆ

ಶ್ರೀದೇವಿ ಮತ್ತು ಗೌರಿ ಶಿಂಧೆ

ಶ್ರೀದೇವಿ ಮತ್ತು ಗೌರಿ ಶಿಂಧೆ

“ಇಂಗ್ಲೀಷ್‌ ವಿಂಗ್ಲೀಷ್‌” ಚಿತ್ರ ಇದೀಗ 10 ವರ್ಷಗಳನ್ನು ಪೂರೈಸಿದೆ. ಶ್ರೀದೇವಿ ಇಂದು ನಮ್ಮೊಂದಿಗಿಲ್ಲವಾದರೂ ಈ ಚಿತ್ರದಲ್ಲಿನ ಆಕೆಯ ಅಭಿನಯ ಕಣ್ಣು ಕಟ್ಟಿದಂತಿದೆ. ಈ ಮಧ್ಯೆ ಚಿತ್ರದ ನಿರ್ದೇಶಕಿ ಗೌರಿ ಶಿಂಧೆ ಚಿತ್ರ ಮಾಡುವಾಗ ಎದುರಾದ ಸವಾಲಿನ ವಿಷಯಗಳ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

ಮುಂದೆ ಓದಿ ...
  • Share this:

“ಇಂಗ್ಲೀಷ್‌ ವಿಂಗ್ಲೀಷ್‌” (English Vinglish) ಬಾಲಿವುಡ್‌ ಕ್ಲಾಸ್‌ ಮೂವಿಗಳಲ್ಲಿ ಒಂದು. ನಟಿ ಶ್ರೀದೇವಿ (Sridevi) ನಟಿಸಿದ್ದ ಬೆಸ್ಟ್‌ ಚಿತ್ರಗಳಲ್ಲಿ ಇದೂ ಒಂದು. ಈ ಚಿತ್ರ ಇದೀಗ 10 ವರ್ಷಗಳನ್ನು ಪೂರೈಸಿದೆ. ಶ್ರೀದೇವಿ ಇಂದು ನಮ್ಮೊಂದಿಗಿಲ್ಲವಾದರೂ ಈ ಚಿತ್ರದಲ್ಲಿನ ಆಕೆಯ ಅಭಿನಯ ಕಣ್ಣು ಕಟ್ಟಿದಂತಿದೆ. ಈ ಮಧ್ಯೆ ಚಿತ್ರದ ನಿರ್ದೇಶಕಿ ಗೌರಿ ಶಿಂಧೆ (Gauri Shinde) ಚಿತ್ರ ಮಾಡುವಾಗ ಎದುರಾದ ಸವಾಲಿನ ವಿಷಯಗಳ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಗೌರಿ ಶಿಂಧೆಯವರ ಚೊಚ್ಚಲ ನಿರ್ದೇಶನದ ಚಿತ್ರ ಇಂಗ್ಲಿಷ್ ವಿಂಗ್ಲಿಷ್. ಈ ಚಿತ್ರ ಬಿಡುಗಡೆಯಾಗಿ ಭಾರೀ ಯಶಸ್ಸನ್ನು (Success) ಕಂಡಿತು. ಕೇವಲ ವಾಣಿಜ್ಯಿಕವಾಗಿ ಅಥವಾ ವಿಮರ್ಶಾತ್ಮಕವಾಗಿ ಅಲ್ಲ, ಬದಲಾಗಿ ಬಹಳಷ್ಟು ವಿಷಯಗಳಿಗೆ ಈ ಚಿತ್ರ ಪ್ರಾಮುಖ್ಯತೆ ಪಡೆಯಿತು.


ಶ್ರೀದೇವಿಯವರ ಪಾತ್ರದ ಬಗ್ಗೆ ಗೌರಿ ಶಿಂಧೆ ಏನು ಹೇಳಿದ್ದಾರೆ
ಅನೇಕ ಪೋಷಕರು ವಿದ್ಯಾರ್ಥಿಗಳನ್ನು ಕರೆತಂದು ಚಿತ್ರ ತೋರಿಸಿದರು. ಅನೇಕ ಮಹಿಳೆಯರು ಶ್ರೀದೇವಿ ಪಾತ್ರದಿಂದ ಸ್ಪೂರ್ತಿ ಪಡೆದರು. ಅಲ್ಲದೇ ಸಾಂಸ್ಕೃತಿಕವಾಗಿಯೂ ಈ ಚಿತ್ರ ಸಾಕಷ್ಟು ಪ್ರಭಾವ ಬೀರಿತು. ಹೇಳಿ ಕೇಳಿ ಇದೊಂದು ಕಲಾತ್ಮಕ ಚಿತ್ರ. 10 ವರ್ಷಗಳ ನಂತರ ಚಿತ್ರ ನಿರ್ಮಾಪಕನಿಗೆ ಇದೆಲ್ಲ ನೆನಪಿಲ್ಲವಾದರೂ, ಚಿತ್ರದ ನಿರ್ದೇಶಕರಾಗಿ ತನ್ನ ಮನಸಿನಲ್ಲಿ ಇನ್ನೂ ಹಸಿರಾಗಿದೆ ಎನ್ನುತ್ತಾರೆ ಗೌರಿ ಶಿಂಧೆ.


“ಮಹಿಳಾ ನಾಯಕಿಯೊಂದಿಗೆ ಚಿತ್ರ ಮಾಡುವ ನನ್ನ ನಿರ್ಧಾರ ಸಾಕಷ್ಟು ಪ್ರತಿರೋಧವನ್ನು ಎದುರಿಸಿತ್ತು. ಈ ಚಲನಚಿತ್ರವನ್ನು ನಿರ್ಮಿಸುವುದು ಕಠಿಣ ವಿಷಯವಾಗಿತ್ತು ಅದರಲ್ಲೂ ಸೀರೆ ಉಟ್ಟ ಮಧ್ಯವಯಸ್ಕ ಮಹಿಳೆಯ ಬಗ್ಗೆ. ಯಾವುದೇ ಹಿಂಸಾಚಾರ, ಲೈಂಗಿಕತೆ ಇಂಥ ಯಾವುದೇ ದೃಶ್ಯಗಳಿಲ್ಲದ ಸಿನಿಮಾ ಮಾಡೋವಾಗ ನಾವು ಅಕ್ಷರಶಃ ನರಕ ಅನುಭವಿಸಿದ್ದೆವು" ಎನ್ನುತ್ತಾರೆ 48 ವರ್ಷ ವಯಸ್ಸಿನ ಗೌರಿ ಶಿಂಧೆ.


ಶ್ರೀದೇವಿಯ ಐಟಂ ಸಾಂಗ್‌ ಬೇಡಿಕೆಗೆ ನೋ ಎಂದಿದ್ದ ಗೌರಿ!
ಅಷ್ಟಕ್ಕೂ ಇಂಗ್ಲೀಷ್‌ ವಿಂಗ್ಲೀಷ್‌ ಚಿತ್ರ ಗೃಹಿಣಿಯ ಸುತ್ತ ಹೆಣೆಯಲಾದ ಕಥೆ. ಅದರಲ್ಲೂ ಇಂಗ್ಲೀಷ್‌ ಬಾರದ ಆಕೆ ಗಂಡನಿಂದ ಮಕ್ಕಳಿಂದ ನಿರಂತರವಾಗಿ ಅಪಹಾಸ್ಯಕ್ಕೊಳಗಾಗಿ. ಕೊನೆಗೂ ತನ್ನದೇ ಪ್ರಯತ್ನದಲ್ಲಿ ಇಂಗ್ಲೀಷ್‌ ಕಲಿಯುವ ಕಥೆ ಇದು. ಆದರೆ ನಿರ್ಮಾಪಕರು ಇದರಲ್ಲಿ ಹಲವು ಬದಲಾವಣೆಗಳನ್ನು ಬಯಸಿದ್ದರು ಎಂದು ಶಿಂಧೆ ಹೇಳ್ತಾರೆ.


ಇದನ್ನೂ ಓದಿ: Adam Levine: ಪತ್ನಿಗೆ ತಿಳಿಯದಂತೆ ಇನ್ನೊಂದು ಸಂಬಂಧ ಇಟ್ಕೊಂಡಿದ್ರಾ ಗಾಯಕ ಆಡಮ್ ಲೆವಿನ್? ಇಲ್ಲಿದೆ ಮಾಹಿತಿ


ಈ ಚಿತ್ರದ ನಿರ್ಮಾಪಕರು ಸೂಪರ್‌ಸ್ಟಾರ್ ಒಬ್ಬರು ಅವರ ಪತಿಯ ರೋಲ್‌ ಮಾಡಬೇಕೆಂದು ಬಯಸಿದ್ದರು. ನಂತರ ನಾವು ನ್ಯೂಯಾರ್ಕ್‌ನಲ್ಲಿ ಶೂಟ್ ಮಾಡಬಾರದು ಎಂದು ಹೇಳಿದರು. ನಾನು ರಾಜಿ ಮಾಡಿಕೊಳ್ಳಬೇಕೆಂದು ಅವರು ಬಯಸಿದ್ದರು. ಇಷ್ಟಲ್ಲದೇ ಈ ಚಿತ್ರದಲ್ಲಿ ಶ್ರೀದೇವಿ ಐಟಂ ಸಾಂಗ್ ಮಾಡಬೇಕು ಎಂದು ಹೇಳಿದ್ದರು. ನಾನು ಚಿತ್ರವನ್ನಾದರೂ ಪಕ್ಕಕ್ಕಿಟ್ಟು ಬಿಡುತ್ತೇನೆ ಹೊರತು ಇದನ್ನು ಮಾಡೋದಿಲ್ಲ ಎಂದಿದ್ದಾಗಿ ಹೇಳ್ತಾರೆ ಗೌರಿ ಶಿಂಧೆ.


ನಂತರ ಚಿತ್ರವನ್ನು ಬಾಲ್ಕಿ (ಆರ್ ಬಾಲ್ಕಿ, ಚಿತ್ರನಿರ್ಮಾಪಕ-ಪತಿ) ಅದನ್ನು ನಾವೇ ನಿರ್ಮಿಸಲು ನಿರ್ಧರಿಸಿದರು ಮತ್ತು ನಮ್ಮ ನಿರ್ಮಾಣ ಸಂಸ್ಥೆಯು ಹೇಗೆ ರೂಪುಗೊಂಡಿತು ” ಎಂಬುದನ್ನು ಗೌರಿ ಶಿಂಧೆ ವಿವರಿಸ್ತಾರೆ.


ಇಂಗ್ಲೀಷ್‌ ವಿಂಗ್ಲೀಷ್‌ ಚಿತ್ರದ ಸವಿ ನೆನಪುಗಳನ್ನು ಹಂಚಿಕೊಂಡ ಗೌರಿ  
ಇನ್ನು ಇಂಗ್ಲೀಷ್‌ ವಿಂಗ್ಲೀಷ್‌ ಚಿತ್ರದ ಚಿತ್ರೀಕರಣ ಹಾಗೂ ದಿವಂಗತ ನಟಿ ಶ್ರೀದೇವಿ ಕುರಿತಾಗಿ ಹಲವು ನೆನಪುಗಳನ್ನು ಹಂಚಿಕೊಳ್ತಾರೆ ಗೌರಿ. ಶ್ರೀದೇವಿ ಅವರಿಗೆ ಬಾಲ್ಕಿ ನೀಡಿದ ಒನ್‌ ಲೈನರ್‌ ನಿಂದ ಅವರು ಆಸಕ್ತಿ ಹೊಂದಿದ್ದರು. ಶ್ರೀದೇವಿ ತುಂಬ ಸ್ಮಾರ್ಟ್.‌ ಅಲ್ಲದೇ ಅವರ ಸಹಜತೆಯಿಂದ ಅವರನ್ನು ಆನ್‌ ಬೋರ್ಡ್‌ ಗೆ ತರಲು ಕಷ್ಟವೇ ಆಗಲಿಲ್ಲ. ಒಮ್ಮೆ ನಾನು ಅವರ ಮನೆಗೆ ಹೋಗಿದ್ದೆ. ಇದು ನಮ್ಮ ಮೊದಲ ಬ್ಲೈಂಡ್ ಡೇಟ್, ನಾವು ಹಿಂದೆಂದೂ ಭೇಟಿಯಾಗಿರಲಿಲ್ಲ.


ಇದನ್ನೂ ಓದಿ:  Ramayan:‌ ರಾಮಾಯಣ್ ಧಾರಾವಾಹಿಯ ರಾಮ ಪಾತ್ರಧಾರಿ ಅರುಣ್ ಗೋವಿಲ್‌ ಅವರ ಕಾಲು ಮುಟ್ಟಿ ನಮಸ್ಕರಿಸಿದ ಮಹಿಳೆ


ಆದ್ರೆ ನಾವು ಕನೆಕ್ಟ್‌ ಆಗಿದ್ವಿ. ಆಗ ಶ್ರೀದೇವಿ ಹೇಳಿದ್ದರು, ‘ಗೌರಿ, ನಿಮ್ಮ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಾನು ಈ ಸಿನಿಮಾ ಮಾಡುತ್ತಿದ್ದೇನೆ’ ಎಂದು. ಇದು ನನ್ನ ಅತ್ಯುತ್ತಮ ನೆನಪುಗಳಲ್ಲಿ ಒಂದು ಎನ್ನುತ್ತಾರೆ ಗೌರಿ ಶಿಂಧೆ.

Published by:Ashwini Prabhu
First published: