• Home
  • »
  • News
  • »
  • entertainment
  • »
  • Bollywood Celebrities: ಶೂಟಿಂಗ್ ಸೆಟ್​ನಲ್ಲಿ ಲವ್ ಆಗಿ ಮದುವೆಯಾದ ಜೋಡಿಗಳಿವರು!

Bollywood Celebrities: ಶೂಟಿಂಗ್ ಸೆಟ್​ನಲ್ಲಿ ಲವ್ ಆಗಿ ಮದುವೆಯಾದ ಜೋಡಿಗಳಿವರು!

ದೆಬಿನಾ ಬ್ಯಾನರ್ಜಿ- ಗುರ್ಮೀತ್ ಚೌಧರಿ

ದೆಬಿನಾ ಬ್ಯಾನರ್ಜಿ- ಗುರ್ಮೀತ್ ಚೌಧರಿ

ಕಿರುತೆರೆ ಹಾಗೂ ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ನಿಜ ಜೀವನದಲ್ಲಿ ಮದುವೆಯಾದ ಜೋಡಿಗಳು ಬಹಳಷ್ಟಿದ್ದಾರೆ. ಟಾಪ್ 10 ಜೋಡಿಗಳ ಇಂಟ್ರೆಸ್ಟಿಂಗ್ ಡೀಟೆಲ್ಸ್ ಇಲ್ಲಿದೆ.

  • Trending Desk
  • Last Updated :
  • Bangalore, India
  • Share this:

ಈ ಸಿನಿಮಾ (Cinema) ಮತ್ತು ಸೀರಿಯಲ್ (Serial) ಎಂದರೆ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡುವವರು ಅನೇಕರು ಅಲ್ಲಿಯೇ ಅವರ ಜೊತೆಗೆ ಕೆಲಸ ಮಾಡುವವರನ್ನು ಪ್ರೀತಿ (Love) ಮಾಡಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ಈ ಹಿಂದಿ ಚಾನಲ್ ಗಳಲ್ಲಿ (Channel) ಮೂಡಿ ಬರುವಂತಹ ಸೀರಿಯಲ್ ಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಎಷ್ಟೋ ನಟ ಮತ್ತು ನಟಿಯರು (Actress) ಪ್ರೀತಿ ಮಾಡಿ ನಿಜ ಜೀವನದಲ್ಲಿ ಗಂಡ-ಹೆಂಡತಿ ಆಗಿರುವ ಉದಾಹರಣೆಗಳು ನಮ್ಮಲ್ಲಿ ತುಂಬಾನೇ ಇವೆ.


ಈ ಸೀರಿಯಲ್ ಗಳಲ್ಲಿ ಬರುವ ಪ್ರತಿ ದೃಶ್ಯವನ್ನು ವಾಸ್ತವಿಕವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು ಸೆಲೆಬ್ರಿಟಿಗಳು ತಮ್ಮ ಅತ್ಯುತ್ತಮ ಪ್ರಯತ್ನಗಳನ್ನು ನೀಡುತ್ತಾರೆ. ಹಿತವಾದ ಹಾಡುಗಳು, ವೈಭವೋಪೇತ ಸೆಟ್ ಗಳು ಮತ್ತು ನಟ ಮತ್ತು ನಟಿಯ ನಡುವೆ ಇರುವ ಆ ಕೆಮಿಸ್ಟ್ರಿ ಹೀಗೆ ಎಲ್ಲಾ ವಿಭಾಗಗಳಲ್ಲಿಯೂ ನಟ-ನಟಿಯರು ವಾಸ್ತವಿಕ ಜೀವನಕ್ಕೆ ತುಂಬಾನೇ ಹತ್ತಿರವೆಂಬಂತೆ ನಟಿಸುತ್ತಾರೆ.


ಇಲ್ಲಿ ನಟ-ನಟಿಯರು ತಮ್ಮ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ. ಇದರಿಂದಾಗಿ ಅವರ ರೀಲ್-ಲೈಫ್ ಬಂಧವು ರಿಯಲ್ ಲೈಫ್ ಬಂಧವಾಗಿ ಬದಲಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.


ಇಬ್ಬರು ಸಹ ನಟರು ನಿಜ ಜೀವನದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ನಂತರ ಮದುವೆಯಾಗಿ ಮತ್ತೆ ಅದೇ ಕೆಲಸದಲ್ಲಿ ಮುಂದುವರೆದಿರುವುದನ್ನು ನಾವು ನೋಡುತ್ತೇವೆ. ಇಲ್ಲಿ ಚಿತ್ರೀಕರಣದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದು ನಂತರ ನಿಜ ಜೀವನದಲ್ಲಿ ಇಬ್ಬರು ಸತಿ-ಪತಿಗಳಾಗಿರುವ 10 ಸೆಲೆಬ್ರಿಟಿ ಜೋಡಿಗಳ ಬಗ್ಗೆ ಇಲ್ಲಿದೆ ನೋಡಿ ವಿವರ.


1. ಧೀರಜ್ ಧೂಪರ್-ವಿನ್ನಿ ಅರೋರಾ


ಧೀರಜ್ ಧೂಪರ್ ಮತ್ತು ವಿನ್ನಿ ಅರೋರಾ ಜೋಡಿ ಟಿವಿ ಉದ್ಯಮದಲ್ಲಿ ಹೆಚ್ಚು ಇಷ್ಟಪಡುವ ಜೋಡಿಗಳಲ್ಲಿ ಒಂದು. ಅವರು 2009 ರಲ್ಲಿ ತಮ್ಮ ಕಾರ್ಯಕ್ರಮವಾದ ‘ಮಾತಾ ಪಿತಾ ಕೆ ಚರ್ಣೋ ಮೇ ಸ್ವರ್ಗ್’ ನ ಸೆಟ್ ಗಳಲ್ಲಿ ಭೇಟಿಯಾದರು. ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿಯಾಯಿತು. ಅವರ ಆಫ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಲ್ಲಗಳೆಯಲಾಗದು.


ಈ ದಂಪತಿಗಳು ಸುಮಾರು 7 ವರ್ಷಗಳ ಸುದೀರ್ಘ ಅವಧಿಯವರೆಗೆ ಡೇಟಿಂಗ್ ಮಾಡಿದರು. ನಂತರ ಮದುವೆಯೊಂದಿಗೆ ತಮ್ಮ ಬಂಧವನ್ನು ಶಾಶ್ವತವಾಗಿಸಲು ನಿರ್ಧರಿಸಿದರು. ನಂತರ ಅವರು 2016 ರಲ್ಲಿ ವಿವಾಹವಾದರು. ಆಗಸ್ಟ್ 10, 2022 ರಂದು, ಅವರು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಅವನಿಗೆ ಝೈನ್ ಎಂದು ಹೆಸರಿಟ್ಟರು.


2. ಗುರ್ಮೀತ್ ಚೌಧರಿ-ದೆಬಿನಾ ಬ್ಯಾನರ್ಜಿ


ನಟಿ ದೆಬಿನಾ ಬ್ಯಾನರ್ಜಿ ಮತ್ತು ನಟ ಗುರ್ಮೀತ್ ಚೌಧರಿ ಮನರಂಜನಾ ಉದ್ಯಮದ ಅತ್ಯಂತ ಜನಪ್ರಿಯ ದಂಪತಿಗಳಲ್ಲಿ ಒಬ್ಬರು. ಇವರಿಬ್ಬರ ಪ್ರೇಮಕಥೆಯ ಬಗ್ಗೆ ಮಾತನಾಡಿದರೆ, ದೆಬಿನಾ ಮತ್ತು ಗುರ್ಮೀತ್ ರಾಮಾಯಣ ಧಾರಾವಾಹಿಗಾಗಿ ಒಟ್ಟಿಗೆ ಕೆಲಸ ಮಾಡುವಾಗ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯಿತಂತೆ. ಈ ಪೌರಾಣಿಕ ಧಾರವಾಹಿಯಲ್ಲಿ, ಗುರ್ಮೀತ್ ರಾಮನ ಪಾತ್ರವನ್ನು ನಿರ್ವಹಿಸಿದರೇ, ದೆಬಿನಾ ಅವರು ಸೀತೆಯ ಪಾತ್ರವನ್ನು ನಿರ್ವಹಿಸಿದ್ದರಂತೆ.


ನಂತರ ಫೆಬ್ರವರಿ 2011 ರಲ್ಲಿ ಸರಳವಾದ ಸಮಾರಂಭದಲ್ಲಿ ವಿವಾಹವಾದರು. 2022 ರಲ್ಲಿ, ಗುರ್ಮೀತ್ ಮತ್ತು ದೆಬಿನಾ ಏಪ್ರಿಲ್ 3 ರಂದು ತಮ್ಮ ಮೊದಲ ಮಗು, ಬೇಬಿ ಲಿಯಾನಾ ಅವರನ್ನು ಸ್ವಾಗತಿಸಿದರು. ಅಂದಿನಿಂದ, ಅವರು ತಮ್ಮ ರಾಜಕುಮಾರಿಯೊಂದಿಗೆ ಪೋಷಕರಾದ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರೆ. ಆಗಸ್ಟ್ 16, 2022 ರಂದು, ದೆಬಿನಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೊಂದು ರೋಮಾಂಚಕಾರಿ ಸುದ್ದಿಯನ್ನು ಹಂಚಿಕೊಂಡರು. ಅವರು ಮತ್ತೊಮ್ಮೆ ತಾಯಿಯಾಗಲಿದ್ದಾರೆ ಅಂತ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Rajeev Sen-Charu Asopa: ಮನೆಯಲ್ಲಿ ಸಿಸಿಟಿವಿ! ಹೆಂಡ್ತಿ ಮೇಲೆ ವಿಪರೀತ ಸಂಶಯ, ಸುಶ್ಮಿತಾ ಸಹೋದರನ ವಿರುದ್ಧ ಆರೋಪ


3. ಸನಾಯಾ ಇರಾನಿ-ಮೋಹಿತ್ ಸೆಹಗಲ್


ನಟಿ ಸನಾಯಾ ಇರಾನಿ ಮತ್ತು ನಟ ಮೋಹಿತ್ ಸೆಹಗಲ್ ಅವರು ಹಿಟ್ ಯೂತ್ ಆಧಾರಿತ ‘ಮಿಲೀ ಜಬ್ ಹಮ್ ತುಮ್’ ಶೋ ನ ಭಾಗವಾಗಿದ್ದರು. ಅವರು ಸೆಟ್ ನಲ್ಲಿ ಪರಸ್ಪರರ ಆಸಕ್ತಿಗಳನ್ನು ಹಂಚಿಕೊಂಡರು ಮತ್ತು ಅವರ ಆನ್-ಸ್ಕ್ರೀನ್ ಪ್ರಣಯವು ಕಡಿಮೆ ಅವಧಿಯಲ್ಲಿ ಆಫ್-ಸ್ಕ್ರೀನ್ ಗೆ ಬದಲಾಯಿತು. ‘ಮಿಲೆ ಜಬ್ ಹಮ್ ತುಮ್’ ಶೋ ನ ಚಿತ್ರೀಕರಣದ ಕೊನೆಯ ದಿನವಾದ ನವೆಂಬರ್ 19, 2010 ರಂದು ಇವರಿಬ್ಬರು ತಮ್ಮ ಸಂಬಂಧವನ್ನು ಘೋಷಿಸಿದರು.


ಡಿಸೆಂಬರ್ 2015 ರಲ್ಲಿ, ಸನಾಯಾ ಮತ್ತು ಮೋಹಿತ್ ನಿಶ್ಚಿತಾರ್ಥವನ್ನು ಮಾಡಿಕೊಂಡರು. 25 ಜನವರಿ 2016 ರಂದು ಇಬ್ಬರೂ ವಿವಾಹವಾದರು. ಮೋಹಿತ್ ಮತ್ತು ಸನಾಯಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ನೆಟ್ಟಿಗರು ಅವರ ಕೆಮಿಸ್ಟ್ರಿಯನ್ನು ತುಂಬಾನೇ ಇಷ್ಟ ಪಡುತ್ತಾರೆ.


4. ದಿವ್ಯಾಂಕಾ ತ್ರಿಪಾಠಿ-ವಿವೇಕ್ ದಹಿಯಾ


ನಟಿ ದಿವ್ಯಾಂಕಾ ತ್ರಿಪಾಠಿ ಮತ್ತು ನಟ ವಿವೇಕ್ ದಹಿಯಾ ಶೋಬಿಜ್ ಉದ್ಯಮದಲ್ಲಿ ಅತ್ಯಂತ ಪ್ರೀತಿಪಾತ್ರ ಜೋಡಿಯಾಗಿದ್ದಾರೆ. ಇಬ್ಬರೂ ಹಿಟ್ ಶೋ ‘ಯೇ ಹೈ ಮೊಹಬ್ಬತೇ’ ಯಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಅವರ ಕೆಲಸದ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿತು. ನಂತರ ದಂಪತಿಗಳು 16 ಜನವರಿ 2016 ರಂದು ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ನಂತರ ಜುಲೈ 8, 2016 ರಂದು ಭೋಪಾಲ್ ನಲ್ಲಿ ವಿವಾಹವಾದರು.


ಇದನ್ನೂ ಓದಿ: Varun Dhawan-Vestibular Hypofunction: ದೇಹದ ಬ್ಯಾಲೆನ್ಸ್ ತಪ್ಪಿಸೋ ರೋಗ! ವರುಣ್ ಧವನ್ ಆರೋಗ್ಯ ಸಮಸ್ಯೆ ಏನು?


5. ಕಿಶ್ವರ್ ಮರ್ಚೆಂಟ್-ಸುಯ್ಯಾಶ್ ರೈ


ಕಿಶ್ವರ್ ಮರ್ಚೆಂಟ್ ಮತ್ತು ಸುಯ್ಯಾಶ್ ರೈ ಇಬ್ಬರು ನಟರು ‘ಪ್ಯಾರ್ ಕಿ ಯೇ ಏಕ್ ಕಹಾನಿ’ ಸೆಟ್ ನಲ್ಲಿ ಮೊದಲ ಬಾರಿಗೆ ಭೇಟಿಯಾದರು ಮತ್ತು ಅಲ್ಲಿಯೇ ಉತ್ತಮ ಸ್ನೇಹಿತರು ಸಹ ಆದರು. 2010 ರಲ್ಲಿ, ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು 16 ಡಿಸೆಂಬರ್ 2016 ರಂದು, ದಂಪತಿಗಳು ವಿವಾಹವಾದರು.


ಮಾರ್ಚ್ 2021 ರಲ್ಲಿ, ದಂಪತಿಗಳು ತಮ್ಮ ಗರ್ಭಧಾರಣೆಯನ್ನು ಘೋಷಿಸಿದರು. 27 ಆಗಸ್ಟ್ 2021 ರಂದು, ದಂಪತಿಗಳು ಒಂದು ಗಂಡು ಮಗುವಿಗೆ ಪೋಷಕರಾದರು ಮತ್ತು ಅವನಿಗೆ ನಿರ್ವೇರ್ ಎಂದು ಹೆಸರಿಟ್ಟರು.


6. ನೇಹಾ ಸಕ್ಸೇನಾ-ಶಕ್ತಿ ಅರೋರಾ


ನೇಹಾ ಸಕ್ಸೇನಾ ಮತ್ತು ಶಕ್ತಿ ಅರೋರಾ ಸಹ ಶೋಬಿಜ್ ಜಗತ್ತಿನಲ್ಲಿ ಪ್ರಸಿದ್ಧ ಸೆಲೆಬ್ರಿಟಿ ದಂಪತಿಗಳು. ಇವರಿಬ್ಬರು ದೀರ್ಘಕಾಲದ ಸಂಬಂಧದಲ್ಲಿದ್ದರು. ನಂತರ ಈ ಇಬ್ಬರು 6 ಏಪ್ರಿಲ್ 2018 ರಂದು ವಿವಾಹವಾದರು.


7. ರವಿ ದುಬೆ-ಸರ್ಗುನ್ ಮೆಹ್ತಾ


ನಟ ರವಿ ದುಬೆ ಮತ್ತು ನಟಿ ಸರ್ಗುನ್ ಮೆಹ್ತಾ ಅವರು 2009 ರಲ್ಲಿ ‘12/24 ಕರೋಲ್ ಬಾಗ್’ ಎಂಬ ಹಿಟ್ ಶೋ ನಲ್ಲಿ ನಟಿಸುವಾಗ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ದೀರ್ಘಕಾಲದವರೆಗೆ ಡೇಟಿಂಗ್ ಮಾಡಿದ ನಂತರ, ಈ ಜೋಡಿ ಡಿಸೆಂಬರ್ 2013 ರಲ್ಲಿ ವಿವಾಹವಾದರು. ಇಬ್ಬರೂ ಮನರಂಜನಾ ಜಗತ್ತಿನಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ ಮತ್ತು ಇವರಿಬ್ಬರ ಸುಂದರವಾದ ಕೆಮಿಸ್ಟ್ರಿಯಿಂದಾಗಿ ಅಪಾರ ಅಭಿಮಾನಿಗಳನ್ನು ಸಹ ಇವರು ಹೊಂದಿದ್ದಾರೆ ಎಂದು ಹೇಳಬಹುದು.


8. ಶರದ್ ಕೇಲ್ಕರ್-ಕೀರ್ತಿ ಗಾಯಕ್ವಾಡ್


ನಟ ಶರದ್ ಕೇಲ್ಕರ್ ಮತ್ತು ನಟಿ ಕೀರ್ತಿ ಗಾಯಕ್ವಾಡ್ ಅವರು ಪ್ರೇಕ್ಷಕರು ಮೆಚ್ಚುವ ಇನ್ನೊಂದು ಸೆಲೆಬ್ರಿಟಿ ಜೋಡಿ. ಶರದ್ ಮತ್ತು ಕೀರ್ತಿ ಜನಪ್ರಿಯ ಹಿಟ್ ಶೋ ‘ಸಾತ್ ಫೆರೆ: ಸಲೋನಿ ಕಾ ಸಫರ್’ ನಲ್ಲಿ ಕೆಲಸ ಮಾಡುವಾಗ ಭೇಟಿಯಾದರು. ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ ನಂತರ, ದಂಪತಿಗಳು ಜೂನ್ 3, 2005 ರಂದು ವಿವಾಹವಾದರು.


9. ಸಂಜೀವ್ ಸೇಠ್-ಲತಾ ಸಬರ್ವಾಲ್


ಸಂಜೀವ್ ಸೇಠ್ ಮತ್ತು ಲತಾ ಸಬರ್ವಾಲ್ ಅವರು ಟಿವಿ ಉದ್ಯಮದಲ್ಲಿ ಅತ್ಯಂತ ಪ್ರೀತಿಪಾತ್ರ ದಂಪತಿಗಳಲ್ಲಿ ಒಬ್ಬರು. ಸಂಜೀವ್ ಮತ್ತು ಲತಾ ಅವರು ‘ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ’ ನ ಸೆಟ್ ನಲ್ಲಿ ಭೇಟಿಯಾದರು. ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತು ಮತ್ತು ನಂತರ 2010 ರಲ್ಲಿ ವಿವಾಹವಾದರು. ಅವರಿಗೆ ಒಬ್ಬ ಮಗ ಆರವ್ ಸೇಠ್ ಇದ್ದಾರೆ, ಅವರು ಮೇ 2013 ರಲ್ಲಿ ಜನಿಸಿದರು.


10. ಹಿತೇನ್ ತೇಜ್ವಾನಿ-ಗೌರಿ ಪ್ರಧಾನ್


ಟಿವಿ ಜಗತ್ತಿನ ಮತ್ತೊಂದು ಜನಪ್ರಿಯ ಜೋಡಿ ಎಂದರೆ ಅದು ಹಿತೇನ್ ತೇಜ್ವಾನಿ ಮತ್ತು ಗೌರಿ ಪ್ರಧಾನ್ ಅವರದು ಅಂತ ಹೇಳಬಹುದು. ಈ ಜೋಡಿ ಕುಟುಂಬ್ ಎಂಬ ಹಿಟ್ ಶೋ ನ ಸೆಟ್ ಗಳಲ್ಲಿ ಭೇಟಿಯಾದರು ಮತ್ತು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಹಿತೇನ್ ಮತ್ತು ಗೌರಿ 29 ಏಪ್ರಿಲ್ 2004 ರಂದು ವಿವಾಹವಾದರು. ಅವರು 11 ನವೆಂಬರ್ 2009 ರಂದು ಅವಳಿ ಮಕ್ಕಳಾದ ನೆವಾನ್ ಮತ್ತು ಕಾತ್ಯಾಗೆ ಪೋಷಕರಾದರು.

Published by:Divya D
First published: