• Home
  • »
  • News
  • »
  • education
  • »
  • Hindi MBBS: ಇನ್ಮುಂದೆ ಹಿಂದಿಯಲ್ಲೂ ಎಂಬಿಬಿಎಸ್ ಮಾಡ್ಬೋದು! ಎಲ್ಲಿ? ಹೇಗೆ? ಇಲ್ಲಿದೆ ವಿವರ

Hindi MBBS: ಇನ್ಮುಂದೆ ಹಿಂದಿಯಲ್ಲೂ ಎಂಬಿಬಿಎಸ್ ಮಾಡ್ಬೋದು! ಎಲ್ಲಿ? ಹೇಗೆ? ಇಲ್ಲಿದೆ ವಿವರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗಾಗಲೇ ಮಧ್ಯಪ್ರದೇಶ ರಾಜ್ಯವು ಎಂಬಿಬಿಎಸ್ (ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ) ಕೋರ್ಸ್ ಅನ್ನು ಹಿಂದಿಯಲ್ಲಿ ಪ್ರಾರಂಭಿಸಿದ ದೇಶದ ಮೊದಲ ರಾಜ್ಯವಾಗಿದೆ. ಮಧ್ಯಪ್ರದೇಶದ ನಂತರ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್ ಗಳಿಗಾಗಿ ಹಿಂದಿ ಭಾಷೆಯ ಪಠ್ಯಪುಸ್ತಕಗಳನ್ನು ಪರಿಚಯಿಸಲು ಸಜ್ಜಾಗಿದೆ.

ಮುಂದೆ ಓದಿ ...
  • News18 Kannada
  • Last Updated :
  • Uttar Pradesh, India
  • Share this:

ಇಂಗ್ಲೀಷ್ (English) ಭಾಷೆಯ ಜ್ಞಾನದ ಕೊರತೆಯಿಂದಾಗಿ ಎಷ್ಟೋ ಜನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು (Education) ಪಡೆಯಲು ಸಾಧ್ಯವಾಗುವುದಿಲ್ಲ. ಅವರಿಗೆ ಪಿಯುಸಿಯಲ್ಲಿ ವಿಷಯಗಳು ಅರ್ಥವಾಗಿರುತ್ತವೆ, ಆದರೆ ಆ ಅರ್ಥ ಮಾಡಿಕೊಂಡ ವಿಷಯವನ್ನು ಉತ್ತರ ಪತ್ರಿಕೆಯ ಮೇಲೆ ಇಂಗ್ಲೀಷ್ ಭಾಷೆಯಲ್ಲಿ ಸುಲಲಿತವಾಗಿ ಬರೆದು ಒಳ್ಳೆಯ ಅಂಕಗಳನ್ನು ಗಳಿಸಲು ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸುವುದು ಇಂಗ್ಲೀಷ್ ಭಾಷೆ. ಈ ಗ್ರಾಮೀಣ ಭಾಗದ ಶಾಲೆಗಳಲ್ಲಿ (School) ಇಂಗ್ಲೀಷ್ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸರಿಯಾದ ಶಿಕ್ಷಕರು ಇಲ್ಲದೆ ಇರುವುದು ಸಹ ಇದಕ್ಕೆ ಮುಖ್ಯವಾದ ಕಾರಣ. ಆದರೆ, ಈಗ ಇದೆಲ್ಲದರ ಬಗ್ಗೆ ವಿದ್ಯಾರ್ಥಿಗಳು (Students) ಹೆಚ್ಚು ತಲೆ ಕೆಡೆಸಿಕೊಳ್ಳಬೇಕಾಗಿಲ್ಲ.


ಏಕೆಂದರೆ ಈಗಾಗಲೇ ಮಧ್ಯಪ್ರದೇಶ ರಾಜ್ಯ ಸರ್ಕಾರವು ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಶುರುಮಾಡಲು ಹಿಂದಿ ಭಾಷೆಯ ಪಠ್ಯಪುಸ್ತಕಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.


ಹಿಂದಿಯಲ್ಲಿ ಎಂಬಿಬಿಎಸ್ ಶುರುಮಾಡಿದ ಮಧ್ಯಪ್ರದೇಶ ಸರ್ಕಾರ
ಹೌದು.. ಈಗಾಗಲೇ ಮಧ್ಯಪ್ರದೇಶ ರಾಜ್ಯವು ಎಂಬಿಬಿಎಸ್ (ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ) ಕೋರ್ಸ್ ಅನ್ನು ಹಿಂದಿಯಲ್ಲಿ ಪ್ರಾರಂಭಿಸಿದ ದೇಶದ ಮೊದಲ ರಾಜ್ಯವಾಗಿದೆ. ಮಧ್ಯಪ್ರದೇಶದ ನಂತರ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್ ಗಳಿಗಾಗಿ ಹಿಂದಿ ಭಾಷೆಯ ಪಠ್ಯಪುಸ್ತಕಗಳನ್ನು ಪರಿಚಯಿಸಲು ಸಜ್ಜಾಗಿದೆ.


ಮಧ್ಯಪ್ರದೇಶ ಸರ್ಕಾರದ ಹಿಂದಿ ಮಾಧ್ಯಮ ವೈದ್ಯಕೀಯ ಶಿಕ್ಷಣ ಯೋಜನೆಗೆ  ಚಾಲನೆ ನೀಡಿದ ಅಮಿತ್ ಶಾ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಪ್ರಾರಂಭಿಸಲಾಯಿತು ಮತ್ತು ಶೀಘ್ರದಲ್ಲಿಯೇ ಅದನ್ನು ಇತರ ಭಾಷೆಗಳಲ್ಲಿಯೂ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದರು.


ಇದನ್ನೂ ಓದಿ:  Nayantara: ರೂಲ್ಸ್ ಬ್ರೇಕ್ ಮಾಡಿಲ್ಲ ನಯನತಾರಾ-ವಿಘ್ನೇಶ್! ಪಬ್ಲಿಸಿಟಿಗಾಗಿ ಆಸ್ಪತ್ರೆ ಗಿಮಿಕ್?


ಈಗ, ದೇಶದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆ ಗೊತ್ತಿಲ್ಲದ ಬಗ್ಗೆ ಯಾವುದೇ ಕೀಳರಿಮೆ ಇರುವುದಿಲ್ಲ ಮತ್ತು ಅವರು ತಮ್ಮದೇ ಆದ ಭಾಷೆಯಲ್ಲಿ ಹೆಮ್ಮೆಯಿಂದ ಅಧ್ಯಯನ ಮಾಡಬಹುದು ಎಂದು ಕೇಂದ್ರ ಸಚಿವರು ಹೇಳಿದ್ದರು. ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಪ್ರಾರಂಭಿಸುವಲ್ಲಿ ದೇಶದಲ್ಲಿ ಮುಂದಾಳತ್ವ ವಹಿಸಿದ್ದಕ್ಕಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಮಿತ್ ಶಾ ಅವರು ತುಂಬಾನೇ ಶ್ಲಾಘಿಸಿದರು.


ಹಿಂದಿ ಎಂಬಿಬಿಎಸ್ ಪಠ್ಯಪುಸ್ತಕಗಳನ್ನು ಪರಿಚಯಿಸಲಿರುವ ಯೋಗಿ ಸರ್ಕಾರ
ವೈದ್ಯಕೀಯ ಶಿಕ್ಷಣ ಅಧಿಕಾರಿಗಳ ಪ್ರಕಾರ, ರಾಜ್ಯ ಸರ್ಕಾರವು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದು, ಎನ್ಇಯ ಭಾಗವಾಗಿ ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಪ್ರಾರಂಭಿಸಲಾದ ಜೀವರಸಾಯನಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ವೈದ್ಯಕೀಯ ಶರೀರಶಾಸ್ತ್ರ ಎಂಬ ಮೂರು ವಿಷಯಗಳ ಬಗ್ಗೆ ಎಂಬಿಬಿಎಸ್ ಹಿಂದಿ ಪಠ್ಯಪುಸ್ತಕಗಳನ್ನು ಪರಿಶೀಲಿಸುತ್ತಿದೆ.


ಇದಲ್ಲದೆ, ಇತರ ಎಂಬಿಬಿಎಸ್ ಪಠ್ಯಪುಸ್ತಕಗಳನ್ನು ಹಿಂದಿಗೆ ಭಾಷಾಂತರಿಸಲಾಗುತ್ತದೆ ಮತ್ತು ಸದರಿ ಸಮಿತಿಯು ಈ ಅನುವಾದವನ್ನು ಪರಿಶೀಲಿಸುತ್ತದೆ.


ಯುಪಿ ವೈದ್ಯಕೀಯ ಶಿಕ್ಷಣದ ಮಹಾನಿರ್ದೇಶಕಿ ಹೇಳಿದ್ದೇನು?
ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ಯುಪಿಯ ವೈದ್ಯಕೀಯ ಶಿಕ್ಷಣದ ಮಹಾನಿರ್ದೇಶಕಿ ಶೃತಿ ಸಿಂಗ್, "ಸುಮಾರು ಒಂದು ತಿಂಗಳ ಹಿಂದೆ, ಸಮಿತಿಯನ್ನು ರಚಿಸಲಾಯಿತು ಮತ್ತು ಮೀರತ್ ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಈ ಪುಸ್ತಕಗಳನ್ನು ಮೊದಲು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ" ಎಂದು ಹೇಳಿದರು. ಸದ್ಯಕ್ಕೆ ಹಿಂದಿ ಪಠ್ಯಪುಸ್ತಕಗಳು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿವೆ ಎಂದು ಅವರು ಹೇಳಿದರು.


ಇದನ್ನೂ ಓದಿ:  Viral Video: ಗಣಿತದ ಸೂತ್ರಗಳನ್ನು ಎಷ್ಟು ಸುಲಭವಾಗಿ ಕಲಿಸಿದ್ದಾರೆ ನೋಡಿ ಈ ಶಿಕ್ಷಕ!


"ಈ ಕ್ರಮವು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹಿಂದಿ ಮಾಧ್ಯಮದಲ್ಲಿ ಓದಿರುವವರಿಗೆ ವೈದ್ಯಕೀಯ ವಿಷಯವನ್ನು ಅವರ ಸ್ವಂತ ಭಾಷೆಯಲ್ಲಿ ಸುಲಭವಾಗಿ ಗ್ರಹಿಸಲು ಅನುಕೂಲವಾಗಲಿದೆ" ಎಂದು ಅವರು ಹೇಳಿದರು. ವೈದ್ಯಕೀಯ ಶಿಕ್ಷಣದ ಹೆಚ್ಚುವರಿ ನಿರ್ದೇಶಕ ಎನ್.ಸಿ.ಪ್ರಜಾಪತಿ ಅವರು ಮಾತನಾಡಿ ಪಠ್ಯಪುಸ್ತಕಗಳಿಂದ ವೈದ್ಯಕೀಯ ಪರಿಭಾಷೆಯನ್ನು ಭಾಷಾಂತರಿಸಲು ಸಮಿತಿಯು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

Published by:Ashwini Prabhu
First published: