NEET Graduates: ಈಗಿನ ವೈದ್ಯರು NEET ಪದವೀಧರರೇ ಹೊರತು, ರೋಗ ಪತ್ತೆಮಾಡುವ ಸಿದ್ಧಹಸ್ತರಲ್ಲ! ಕಾರಣ?

ವೈದ್ಯರೆಂದರೆ ದೇವರ ಪ್ರತಿರೂಪ ಎಂಬ ಮಾತೊಂದಿದೆ. ವೈದ್ಯ ವೃತ್ತಿ ಅಷ್ಟೊಂದು ಪೂಜನೀಯವಾದುದು ಹಾಗೂ ವೈದ್ಯರೂ ಕೂಡ ಪೂಜನೀಯರು ಎಂಬುದು ಈ ಮಾತಿನ ತಾತ್ಪರ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾರಾಣಾಂತರಗಳಿಂದ ಇದೇ ವೈದ್ಯರು ಸೂಕ್ತ ಚಿಕಿತ್ಸೆಗಳನ್ನು, ಪರೀಕ್ಷೆಗಳನ್ನು ನಡೆಸುವಲ್ಲಿ ಎಡವುತ್ತಿದ್ದಾರೆ, ಇದಕ್ಕೆ ಕಾರಣಗಳೇನು ಎಂಬುದನ್ನು ಕುರಿತು ಲೇಖನ ಬೆಳಕು ಚೆಲ್ಲುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಕಾರಾಣಾಂತರಗಳಿಂದ ವೈದ್ಯರು (Doctors) ಸೂಕ್ತ ಚಿಕಿತ್ಸೆಗಳನ್ನು, ಪರೀಕ್ಷೆಗಳನ್ನು (Exams) ನಡೆಸುವಲ್ಲಿ ಎಡವುತ್ತಿದ್ದಾರೆ, ಇದಕ್ಕೆ ಕಾರಣಗಳೇನು ಎಂಬುದನ್ನು ಕುರಿತು ಲೇಖನ ಬೆಳಕು ಚೆಲ್ಲುತ್ತದೆ. ಸ್ಟ್ರೋಕ್‌ನಂತಹ ಜೀವಹಾನಿ ಕಾಯಿಲೆಗಳು (disease) ಬಂದರೂ ಅದನ್ನು ಪತ್ತೆಹಚ್ಚುವಲ್ಲಿ ಇಂದಿನ ಯುವ ವೈದ್ಯರು ಎಡವುತ್ತಿದ್ದಾರೆ. ತಲೆತಿರುಗುವುದು, ಧ್ವನಿಯಲ್ಲಿ ಅಸ್ಪಷ್ಟತೆ ಉಂಟಾಗುವುದು ಪಾರ್ಶ್ವವಾಯುವಿನ ಸಂಕೇತಗಳಿದ್ದರೆ ಯಾವುದೇ ವೈದ್ಯರು ಕೂಡ ಇದನ್ನು ಪರಿಶೀಲಿಸಿ ಕೂಡಲೇ ಎಮ್‌ಆರ್‌ಐ ಮಾಡುವಂತೆ ಸಲಹೆ ನೀಡುತ್ತಾರೆ. ಆದರೆ ಖಾಸಗಿ ಆಸ್ಪತ್ರೆಗೆ (Private hospital) ತೆರಳಿದರೂ ಕೂಡ ಅಲ್ಲಿನ ವೈದ್ಯಾಧಿಕಾರಿ ಈ ಲಕ್ಷಣಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆಯೇ ಆತಂಕಪಡುವ ಅಗತ್ಯವಿಲ್ಲವೆಂದು ಮರಳಿ ಕಳುಹಿಸಿರುವ ಹಲವಾರು ಉದಾಹರಣೆಗಳಿವೆ.

ಇಂದು ಹೆಚ್ಚಿನ ರೋಗಲಕ್ಷಣಗಳನ್ನು ಜನಸಾಮಾನ್ಯರು ಪತ್ತೆಹಚ್ಚುವಷ್ಟು ನಿಷ್ಣಾತರಾಗಿದ್ದಾರೆ. ಹೃದಯ ಸಮಸ್ಯೆಗಳು, ಕ್ಯಾನ್ಸರ್, ಮೇಲೆ ತಿಳಿಸಿದ ಪಾರ್ಶ್ವವಾಯುವಿನ ಸಂಕೇತಗಳನ್ನು ಸಾಮಾನ್ಯರು ಕೂಡ ಪತ್ತೆಹಚ್ಚಿ ಇತರರಿಗೆ ಹೆಚ್ಚಿನ ವೈದ್ಯಕೀಯ ನೆರವು ನೀಡುತ್ತಿದ್ದಾರೆ. ಆದರೆ ಉನ್ನತ ವೈದ್ಯಕೀಯ ಶಿಕ್ಷಣ ಹಾಗೂ ಅನುಭವಸ್ಥ ವೈದ್ಯರೂ ಲಕ್ಷಣಗಳನ್ನು ಗುರುತಿಸುವ ಹಂತದಲ್ಲಿ ಕೂಡ ಇಲ್ಲ, ಹಾಗಿದ್ದರೆ ಇದಕ್ಕೆ ಹೊಣೆ ಯಾರು? ನೀಟ್ (NEET) ಪ್ರಕ್ರಿಯೆಯೇ?

ನೀಟ್ (NEET) ಕೋಚಿಂಗ್ ಕೇಂದ್ರಗಳು ಹಾಗೂ ಉತ್ತರ ಪತ್ರಿಕೆಗಳು
ಭಾರತದ ನೀತಿ ನಿರೂಪಕರು ಹೆಚ್ಚಿನ ವೈದ್ಯಕೀಯ ಪದವೀಧರರನ್ನು ನೇಮಕಗೊಳಿಸುವ ಸಲುವಾಗಿ ತಂತ್ರಗಾರಿಕೆಯನ್ನು ರೂಪಿಸುತ್ತಾರೆ ಇದಕ್ಕೆ ತಕ್ಕಂತೆ ರಾಷ್ಟ್ರೀಯ ಬೋಧನಾ ಆಯೋಗ ಬೋಧನಾ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ರೋಗಿಗಳನ್ನು ಪರಿಶೀಲಿಸುವಂತೆ ಒತ್ತಡ ಹೇರಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಎರಡು ಮುಖ್ಯ ಅಂಶಗಳಿವೆ.

ಇದನ್ನೂ ಓದಿ: Explained: ಭಾರತದಲ್ಲಿ ಮಗುವಿನ ಪಾಲನೆ-ಪೋಷಣೆ ದುಬಾರಿ ಏಕೆ? ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚ ಎಷ್ಟು ಗೊತ್ತಾ?

ಹಳ್ಳಿಗಳಲ್ಲಿ ವೈದ್ಯಕೀಯ ಪದವೀಧರರಿಗೆ ಅಭ್ಯಾಸ ಮಾಡಲು ಅವಕಾಶ ಇಲ್ಲದೇ ಇರುವುದು ಹಾಗೂ ಅಭ್ಯಾಸ ಮಾಡಲು ಯಾವುದೇ ಅಗತ್ಯ ಮಾನದಂಡಗಳನ್ನು ಸಿದ್ಧಪಡಿಸದೇ ಇರುವುದು. ನಗರ ಪ್ರದೇಶದಲ್ಲಿ ಇಂತಹ ಕೊರತೆ ಇಲ್ಲ. ಪದವೀಧರರು ಕೂಡ NMC ಯ ತರಬೇತಿ ಕುರಿತು ತಲೆಕೆಡಿಸಿಕೊಳ್ಳದೆ NEET ಪರೀಕ್ಷೆಯನ್ನು ಉತ್ತಮವಾಗಿಸುವ ಗುರಿಯತ್ತ ಮಾತ್ರವೇ ದೃಷ್ಟಿ ನೆಟ್ಟಿರುತ್ತಾರೆ. ಈ NEET ಎಂಬುದು ಸ್ನಾತಕೋತ್ತರ ಸೀಟುಗಳ ಪ್ರವೇಶ ದ್ವಾರವಾಗಿದೆ. ಮೊದಲೆಲ್ಲಾ ಐದು ವರ್ಷಗಳ ಕಾಲ ಅಧ್ಯಯನ ನಡೆಸಲು ಅಂತೆಯೇ ಇಂಟರ್ನ್‌ಶಿಪ್ ಸಮಯದಲ್ಲಿ ವಾರ್ಡ್‌ಗಳಲ್ಲಿ ಕೆಲಸ ಮಾಡಲು ಇದಾದ ನಂತರವೇ ಪ್ರವೇಶ ಪರೀಕ್ಷೆಗೆ ತಯಾರಾಗಲು ಸೂಚಿಸಲಾಗುತ್ತಿತ್ತು. ಇತ್ತೀಚಿನ ಕ್ಲಿನಿಕಲ್ ಪ್ರಶ್ನೆಗಳನ್ನು ಆಧರಿಸಿದ NEET ಪರೀಕ್ಷೆಗಳು ಆನ್‌ಲೈನ್ ಮೋಡ್ ಪ್ರಶ್ನೆಗಳಾಗಿವೆ ಮತ್ತು MBBS ವಿದ್ಯಾರ್ಥಿಗಳಿಗೆ ಉತ್ತರಿಸಲು ಸಹಾಯ ಮಾಡಲು ಕೋಚಿಂಗ್ ಸಂಸ್ಥೆಗಳು ವಿಸ್ತಾರವಾದ ತರಗತಿಗಳನ್ನು ಹೊಂದಿವೆ.

ಇನ್ನೊಂದು ಕೆಟ್ಟ ವಿಷಯವೆಂದರೆ ವಿದ್ಯಾರ್ಥಿಗಳು ತಮ್ಮ ಎಂಬಿಬಿಎಸ್ ಕಲಿಕಾ ವರ್ಷಗಳಲ್ಲಿ ಈ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳ ಟಿಪ್ಪಣಿಗಳು ಮತ್ತು ಆನ್‌ಲೈನ್ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಾರೆ ಹಾಗೆಯೇ ಆನ್‌ಲೈನ್ ಉಪನ್ಯಾಸಗಳತ್ತ ಗಮನ ಹರಿಸುತ್ತಾರೆ. ಆನ್‌ಲೈನ್ ಉಪನ್ಯಾಸಕರಲ್ಲಿ ಹೆಚ್ಚಿನವರು ಬಹುಶಃ ಸರ್ಕಾರಿ ಕಾಲೇಜು ಅಧ್ಯಾಪಕರು ಕ್ಲಿನಿಕಲ್ ಪರಿಣತಿಯ ಹತ್ತನೇ ಒಂದು ಭಾಗದಷ್ಟು ಅನುಭವವನ್ನು ಹೊಂದಿರುತ್ತಾರೆ ಆದರೆ NEET ಪರೀಕ್ಷೆಗಳಲ್ಲಿ ಏನು ಕೇಳಲಾಗುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ.

ರೋಗಿಗಳ ರೋಗ ಮಾಹಿತಿ ಇರುವುದಿಲ್ಲ
ವೈದ್ಯರಲ್ಲಿ ಇರಬೇಕಾದ ಮುಖ್ಯ ಗುಣಗಳೆಂದರೆ ಪರಾನುಭೂತಿ, ಸಂವಹನ ಮತ್ತು ಸ್ಪರ್ಶವಾಗಿದ್ದು ಎಂಬಿಬಿಎಸ್ ಸಮಯದಲ್ಲಿ ಪಡೆದ ಜ್ಞಾನಕ್ಕಿಂತ ಇದು ಹೆಚ್ಚುವರಿಯಾಗಿದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ. ರೋಗಿಗಳೊಂದಿಗೆ ಇರಬೇಕಾಗಿರುವ ಅನುಭೂತಿಯ ಗುಣವೇ ಇಂದು ವೈದ್ಯರಲ್ಲಿಲ್ಲ ಎಂಬುದು ಪ್ರಸ್ತುತ ವೈದ್ಯಕೀಯ ಲೋಕದ ವಿಷಾದನೀಯ ಅಂಶವಾಗಿದೆ. ರೋಗಿಗಳೊಂದಿಗೆ ನಿಕಟ ಸಂವಹನ, ಪರಾನುಭೂತಿ ಇದ್ದಾಗ ಅವರ ರೋಗವನ್ನು ಪ್ರಾಥಮಿಕ ಅಂಶದಿಂದಲೇ ಪತ್ತೆಹಚ್ಚಬಹುದಾಗಿದೆ.

ಇದನ್ನೂ ಓದಿ: Student Visa: ಮಂಕಾದ ಕೊರೋನಾ, 2 ವರ್ಷದ ಬಳಿಕ ಭಾರತೀಯ ವಿದ್ಯಾರ್ಥಿಗಳಿಗೆ ಚೀನಾ ವೀಸಾ!

ಪ್ರಸ್ತುತ NEET ಶಿಕ್ಷಣ ವ್ಯವಸ್ಥೆಯು ಕ್ಲಿನಿಕಲ್ ಕುಶಾಗ್ರಮತಿ ಇಲ್ಲದೇ ಇರುವ ಪದವೀಧರರನ್ನು ಸಮಾಜಕ್ಕೆ ನೀಡುತ್ತಿದೆ. ಪ್ರಸ್ತುತ ನಮ್ಮೊಡನಿರುವುದು NEET ತರಬೇತಿ ಪಡೆದ ವೈದ್ಯರೇ ಹೊರತು ವೃತ್ತಿ ಅನುಭವವಿರುವವರಲ್ಲ. ಹಾಗಾಗಿಯೇ MBBS ವಿದ್ಯಾರ್ಥಿಗಳು ಚೀನಾ, ಉಕ್ರೇನ್ ಅಥವಾ ಭಾರತ ಮೂಲದವರೇ ಆಗಿದ್ದರೂ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ ಏಕೆಂದರೆ ಅಂತಿಮವಾಗಿ ಇವರೆಲ್ಲರೂ ಪದವಿ ಎಂಬುದು NEET ಪರೀಕ್ಷೆಗಿರುವ ಒಂದು ಮೆಟ್ಟಿಲು ಎಂಬುದಾಗಿ ಪರಿಗಣಿಸುತ್ತಾರೆ.
Published by:Ashwini Prabhu
First published: