• Home
  • »
  • News
  • »
  • education
  • »
  • Career Options: ನೀವೂ ಸಪ್ಲೈ ಚೈನ್ ಫೈನಾನ್ಸ್ ಪ್ರೊಫೆಷನಲ್ಸ್ ಆಗ್ಬೇಕಾ? ಇಲ್ಲಿದೆ ಮಾರ್ಗದರ್ಶಿ

Career Options: ನೀವೂ ಸಪ್ಲೈ ಚೈನ್ ಫೈನಾನ್ಸ್ ಪ್ರೊಫೆಷನಲ್ಸ್ ಆಗ್ಬೇಕಾ? ಇಲ್ಲಿದೆ ಮಾರ್ಗದರ್ಶಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿದ್ಯಾರ್ಥಿಗಳಿಗೆ ಸರಿಯಾದ ವೃತ್ತಿಪರ ಮಾರ್ಗವನ್ನು ಅನ್ವೇಷಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ನ್ಯೂಸ್ 18 ಸಂಸ್ಥೆ ಹೊಸ ಹೊಸ ವೃತ್ತಿ ವಿಧಾನಗಳನ್ನು ಪರಿಹಾರಗಳನ್ನು ಒದಗಿಸುತ್ತಿದೆ. ವೃತ್ತಿಜೀವನದಲ್ಲಿ ವಿಶಿಷ್ಟತೆ ಹಾಗೂ ಅದೇ ವಿಶಿಷ್ಟತೆಯೊಂದಿಗೆ ಅತ್ಯುತ್ತಮ ವೃತ್ತಿಯನ್ನು ನಿಮ್ಮದಾಗಿಸಿಕೊಳ್ಳಿ.

ಮುಂದೆ ಓದಿ ...
  • Share this:

ಬೋರ್ಡ್ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು (Students) ಶಿಕ್ಷಣದ ಮುಂದಿನ ಘಟ್ಟದ ಭಾಗವಾಗಿ ಶಾಲೆಯಿಂದ ಕಾಲೇಜಿಗೆ ಕಾಲಿಡಲು ಸಿದ್ಧರಾಗುತ್ತಾರೆ. ಇದೊಂದು ಪರಿವರ್ತನೆಯ ಸಮಯ. ಈ ಸಮಯದಲ್ಲಿ ಮೊದಲ ಹೆಜ್ಜೆ ವೃತ್ತಿಯ (Career) ಆಯ್ಕೆಯಾಗಿದೆ. ವಿದ್ಯಾರ್ಥಿಗಳಿಗೆ ಸರಿಯಾದ ವೃತ್ತಿಪರ ಮಾರ್ಗವನ್ನು ಅನ್ವೇಷಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ನ್ಯೂಸ್ 18 ಸಂಸ್ಥೆ ಹೊಸ ಹೊಸ ವೃತ್ತಿ ವಿಧಾನಗಳನ್ನು ಪರಿಹಾರಗಳನ್ನು (Solution) ಒದಗಿಸುತ್ತಿದೆ. ವೃತ್ತಿಜೀವನದಲ್ಲಿ ವಿಶಿಷ್ಟತೆ ಹಾಗೂ ಅದೇ ವಿಶಿಷ್ಟತೆಯೊಂದಿಗೆ ಅತ್ಯುತ್ತಮ ವೃತ್ತಿಯನ್ನು ನಿಮ್ಮದಾಗಿಸಿಕೊಳ್ಳಿ. ನೀವು ಯಾವುದೇ ಇತರ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ನಾವು ಅನ್ವೇಷಿಸಲು ಬಯಸುವ ಕೋರ್ಸ್ (Course) ಅಥವಾ ವೃತ್ತಿಯ ಬಗ್ಗೆ ಸಂದೇಹವಿದ್ದರೆ ಇಲ್ಲವೇ ವಿವರ ಬೇಕಾಗಿದ್ದಲ್ಲಿ @News18dotcom ನಲ್ಲಿ ಟ್ವಿಟ್ಟರ್ ಮೂಲಕ ನಮಗೆ ಸಂದೇಶ ಕಳುಹಿಸಿ.


ಸಪ್ಲೈ ಚೈನ್ ಫಿನಾನ್ಸ್ ಕ್ಷೇತ್ರದಲ್ಲಿ ಉದ್ಯೋಗ ಆಯ್ಕೆ
ಸಂಪನ್ಮೂಲ, ಸರಕುಗಳು ಅಂತೆಯೇ ಜನರನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಪರಿಣಾಮಕಾರಿಯಾಗಿ ಸಾಗಿಸುವ ಅಗತ್ಯ ಇದ್ದೇ ಇದೆ. ಇದರಿಂದ ಜನರಿಗೆ ಬೇಕಾದ ಉತ್ಪನ್ನಗಳನ್ನು ಬಳಸಿಕೊಳ್ಳಲಾಗುತ್ತದೆ.


ಇನ್ನು ಸರಕುಗಳ ಉತ್ಪಾದನೆ ಸುಲಭವಾದರೂ ಉತ್ಪಾದನೆಯನ್ನು ವರ್ಧಿಸುವುದು, ವೆಚ್ಚಗಳನ್ನು ಕಡಿತಗೊಳಿಸುವುದು, ಹಾಗೆಯೇ ಉತ್ಪನ್ನದ ವಿತರಣೆಯನ್ನು ತ್ವರಿತಗೊಳಿಸುವ ಕ್ರಿಯೆಯ ಮೇಲೆ ಗಮನಹರಿಸುವುದೂ ಮೇಲ್ವಿಚಾರಣೆ ನಡೆಸುವುದೂ ಅಗತ್ಯವಿರುತ್ತದೆ. ಇದಕ್ಕೆ ಪೂರೈಕೆ ಸರಪಳಿ ನಿರ್ವಾಹಕರು ಅಂದರೆ ಸಪ್ಲೈ ಚೈನ್ ಮ್ಯಾನೇಜರ್‌ಗಳ ಅಗತ್ಯವಿರುತ್ತದೆ.


ಸಪ್ಲೈ ಚೈನ್ ಫಿನಾನ್ಸ್ ಮಿಲಿಯಗಟ್ಟಲೆ ವ್ಯವಹಾರಸ್ಥರಿಗೆ ಪ್ರಯೋಜವನ್ನುಂಟು ಮಾಡಿದ್ದು ಅವರ ಎಷ್ಟೋ ಸಮಸ್ಯೆಗಳನ್ನು ಪರಿಹರಿಸಿದೆ. ಈ ಕ್ಷೇತ್ರದಲ್ಲಿ ವಿಫುಲ ಉದ್ಯೋಗವಕಾಶಗಳಿದ್ದು, ಖರೀದಿದಾರರು ಮತ್ತು ಪೂರೈಕೆದಾರರ ಆರ್ಥಿಕ ವಿಶ್ವಾಸಾರ್ಹತೆಯನ್ನು ಪೂರೈಕೆ ಸರಪಳಿಯಲ್ಲಿನ ಉದ್ಯಮಗಳ ಕಾರ್ಯಕ್ಷಮತೆಯು ಆಧರಿಸಿರುವುದರಿಂದ, ಈ ಕ್ಷೇತ್ರದಲ್ಲಿ SCF ತಜ್ಞರ ಅಗತ್ಯವಿದೆ. ಈ ಉದ್ಯೋಗಕ್ಕೆ ಬೇಕಾದ ಅಗತ್ಯ ಕೌಶಲ್ಯಗಳನ್ನು ನಾವಿಲ್ಲಿ ಪ್ರಸ್ತುತಪಡಿಸಿದ್ದೇವೆ.


ಬಜೆಟ್
SCF ಪರಿಣಿತರು ಮಾಡಬೇಕಾದ ಪಟ್ಟಿಯು ಈ ಅಂಶಗಳನ್ನು ಒಳಗೊಂಡಿರುತ್ತದೆ. ಬ್ಯಾಲೆನ್ಸ್ ಶೀಟ್‌ಗಳೊಂದಿಗೆ ಹೊಂದುವ ಹಣಕಾಸು ಒದಗಿಸುವುದು. ಇದು ಪೂರೈಕೆದಾರರಿಗೆ ಹಣಕಾಸು ಒದಗಿಸುವಾಗ ಖರ್ಚು ವಿವರಗಳನ್ನು ಬಜೆಟ್‌ನಲ್ಲಿ ದಾಖಲಿಸಲು ಅನುವು ಮಾಡಿಕೊಡುತ್ತದೆ ಅಂತೆಯೇ ಉದ್ದೇಶವನ್ನು ಕಂಪೆನಿಗೆ ಒದಗಿಸುತ್ತದೆ.


ಇದನ್ನೂ ಓದಿ: Career in Fashion Journalism: ನೀವೂ ಫ್ಯಾಷನ್ ಪತ್ರಕರ್ತರಾಗ್ಬಹುದು, ಈ ಕೋರ್ಸ್ ಮಾಡಿರಬೇಕು ಅಷ್ಟೇ


ಎಮ್‌ಬಿಎ ಪ್ರೊಗ್ರಾಮ್‌ಗಳು, ಫಿನಾನ್ಶಿಯಲ್ ಅನಾಲಿಸ್ಟ್ ಡಿಗ್ರಿ ಪ್ರೊಗ್ರಾಮ್‌ಗಳು, ಬ್ಯುಸಿನೆಸ್ ಪ್ರೊಗ್ರಾಮ್‌ಗಳು ಬಜೆಟಿಂಗ್ ಕೌಶಲ್ಯಗಳನ್ನು ಸುಧಾರಿಸುವಲ್ಲಿ ಸಹಕಾರಿಯಾಗಿವೆ.


ಸಮಾಲೋಚನೆ
ಚಾತುರ್ಯ ಹಾಗೂ ಪರಿಶ್ರಮ, ಸಮಾಲೋಚನೆಗೆ ಅತ್ಯಗತ್ಯವಾಗಿದೆ. ಸಂವಹನ, ತಂತ್ರಗಾರಿಕೆ, ಯೋಜನೆ ಮತ್ತು ಸಹಕಾರವು ನಿಮ್ಮನ್ನು ಉತ್ತಮ ಸಮಾಲೋಚಕರನ್ನಾಗಿ ಮಾಡುತ್ತದೆ. ನೀವು ನಿರ್ದಿಷ್ಟ ಪ್ರಮಾಣೀಕರಣ ಕೋರ್ಸ್‌ಗಳನ್ನು ಅಥವಾ ವ್ಯಕ್ತಿಗತ ಅಥವಾ ಆನ್‌ಲೈನ್ ಕಾರ್ಯಾಗಾರಗಳ ಮೂಲಕ ಇದರಲ್ಲಿ ಕೌಶಲ್ಯ ಸಾಧಿಸಬಹುದು.


ನೆಟ್‌ವರ್ಕಿಂಗ್
ಮಧ್ಯಸ್ಥಗಾರರ ಸ್ಥಿರವಾದ ಸಂವಹನ ಅಗತ್ಯವಿರುವುದರಿಂದ ಆಂತರಿಕ ವರದಿಮಾಡುವ ಅವಶ್ಯಕತೆಗಳನ್ನು SCF ಪರಿಣತಿ ಡೊಮೇನ್ ಒಳಗೊಂಡಿರುತ್ತದೆ. ಹಣಕಾಸಿನ ವಹಿವಾಟುಗಳು, ಆದಾಯ, ವೆಚ್ಚಗಳು ಮತ್ತು ಯೋಜನೆಯನ್ನು ವರದಿ ಮಾಡಲು ಸಂಶೋಧನೆಗಳನ್ನು ಸಿದ್ಧಪಡಿಸುವುದು ಮತ್ತು ಪ್ರಸ್ತುತಪಡಿಸುವ ಅಗತ್ಯವಿದೆ.


ಜೊತೆಗಾರಿಕೆ
ತಂಡದ ನಾಯಕನಿಗೆ ಉತ್ತಮ ನಿರ್ವಹಣಾ ಕೌಶಲ್ಯಗಳಿದ್ದರೆ ಮಾತ್ರವೇ ಆ ತಂಡ ಯಶಸ್ವಿಯಾಗುತ್ತದೆ. ನಿಮ್ಮ ಅಧೀನದಲ್ಲಿರುವ ಅಧಿಕಾರಿಗಳಿಂದ ನಿರ್ಣಾಯಕ ಮಧ್ಯಸ್ಥಗಾರರವರೆಗೆ ಪ್ರತಿಯೊಬ್ಬರ ಪಾತ್ರ ನಿರ್ಣಾಯಕವಾದುದು. ಹಾಗಾಗಿ ಉತ್ತಮ ಬಾಂಧವ್ಯವನ್ನು ಹೊಂದಿರುವುದು ಮುಖ್ಯವಾಗಿದೆ.


ಆರ್ಥಿಕ ಸ್ಥಿತಿ ವಿಶ್ಲೇಷಣೆ
ತಂತ್ರಜ್ಞಾನದ ಬಳಕೆಯೊಂದಿಗೆ SCF ಕ್ರೆಡಿಟ್ ವಿಶ್ಲೇಷಣೆ ಕೂಡ ಬದಲಾಗುತ್ತಿದೆ. ಮೆಶೀನ್ ಲರ್ನಿಂಗ್ ತಂತ್ರಜ್ಞಾನ ಒಳಗೊಂಡಂತೆ ಟೆಕ್ ಆಧಾರಿತ ಕ್ರೆಡಿಟ್ ಸ್ಕೋರಿಂಗ್ ಕೌಶಲ್ಯದಲ್ಲಿ ಕೆಲಸ ಮಾಡುವುದೂ ಈಗ ಸಾಧ್ಯವಿದೆ.


ಗ್ರೀನ್ ಫಿನಾನ್ಸ್
ಬ್ಯಾಂಕುಗಳು ಮತ್ತು ಸಾಲದಾತರು ನಿವ್ವಳ-ಶೂನ್ಯ ಗುರಿಗಳನ್ನು ತಲುಪುವ ದಿಸೆಯಲ್ಲಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಕೆಲಸ ನಿರ್ವಹಿಸಲು ಹೆಚ್ಚು ಹೆಚ್ಚು ಆಸಕ್ತಿ ತೋರಿಸುತ್ತಿದ್ದು ಕಲ್ಲಿದ್ದಲನ್ನು ಬಳಸುವಂತಹ ತೀವ್ರ ಕಾರ್ಬನ್ ಅವಲಂಬಿತ ಮಾದರಿಗಳಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಪೂರೈಕೆ ಸರಪಳಿಗಳ ಆರ್ಥಿಕ ಸ್ಥಿತಿಯನ್ನು ಬದಲಾಯಿಸುತ್ತಿದ್ದಾರೆ.


ಇದನ್ನೂ ಓದಿ:  Career Growth: ಈ ರೀತಿ ಕೋರ್ಸ್​ ಆಯ್ಕೆ ಮಾಡಿಕೊಂಡ್ರೆ ನಿಮ್ಮ ಕೆರಿಯರ್ ಚೆನ್ನಾಗಿರುತ್ತೆ


ಸಪ್ಲೈ ಚೈನ್ ಫಿನಾನ್ಸ್‌ನಲ್ಲಿ ವೃತ್ತಿಜೀವನದ ನಿರ್ಮಾಣ
ಬ್ಯಾಂಕಿಂಗ್, ಫಿನಾನ್ಸ್ ಕ್ಷೇತ್ರದಲ್ಲಿ ಪದವಿ ಹೊಂದಿರುವುದರ ಜೊತೆಗೆ ಆರ್ಥಿಕ ಅನುಭವವನ್ನು ಹೊಂದಿರಬೇಕು. ಈ ಕ್ಷೇತ್ರದಲ್ಲಿ ನಿರ್ವಹಣೆಯ ಸಮಗ್ರ ಜ್ಞಾನ ಹೊಂದಿರಬೇಕು.

Published by:Ashwini Prabhu
First published: