• Home
  • »
  • News
  • »
  • education
  • »
  • Vidyadhan Scholarship: ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ, 15 ರಾಜ್ಯಗಳಿಗೆ ವಿದ್ಯಾಧನ್ ವಿಸ್ತರಣೆ

Vidyadhan Scholarship: ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ, 15 ರಾಜ್ಯಗಳಿಗೆ ವಿದ್ಯಾಧನ್ ವಿಸ್ತರಣೆ

ಕುಮಾರಿ ಶಿಬುಲಾಲ್ ಮತ್ತು ಎಸ್ ಡಿ ಶಿಬುಲಾಲ್

ಕುಮಾರಿ ಶಿಬುಲಾಲ್ ಮತ್ತು ಎಸ್ ಡಿ ಶಿಬುಲಾಲ್

Vidhyadhan Scholarship: ಹಿಂದುಳಿದ ವಿದ್ಯಾರ್ಥಿಗಳಿಗೆ ಧನಸಹಾಯ, ಮಾರ್ಗದರ್ಶನ ಮತ್ತು ಉನ್ನತ ಶಿಕ್ಷಣವನ್ನು ನೀಡಲು ಸಹಾಯವಾಗಲಿದೆ ವಿದ್ಯಾಧನ್ ವಿದ್ಯಾರ್ಥಿ ವೇತನ.

  • News18 Kannada
  • Last Updated :
  • New Delhi, India
  • Share this:

ವಿದ್ಯಾಧನ ವಿದ್ಯಾರ್ಥಿವೇತನ 15 ರಾಜ್ಯಗಳಿಗೆ (States) ವಿಸ್ತರಿಸಲು ಸಹಾಯ ಹಸ್ತ
ಈ ವರ್ಷ ಇನ್ಫೋಸಿಸ್‌ನ ಸಹ-ಸಂಸ್ಥಾಪಕರು ಮತ್ತು ಮಾಜಿ CEO ಗಳಾದ ಕುಮಾರಿ ಶಿಬುಲಾಲ್ ಮತ್ತು ಎಸ್‌ಡಿ ಶಿಬುಲಾಲ್ ಸ್ಥಾಪಿಸಿದ ಶಿಬುಲಾಲ್ ಫ್ಯಾಮಿಲಿ (Shibulal Family) ಫಿಲಾಂತ್ರೋಪಿಕ್ ಇನಿಶಿಯೇಟಿವ್ ವಿದ್ಯಾಧನವನ್ನು 15 ರಾಜ್ಯಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಹಿಂದುಳಿದ ವಿದ್ಯಾರ್ಥಿಗಳಿಗೆ (Backward Students) ಧನಸಹಾಯ, ಮಾರ್ಗದರ್ಶನ ಮತ್ತು ಉನ್ನತ ಶಿಕ್ಷಣವನ್ನು (Higher Education) ನೀಡಲು ಈ ವಿದ್ಯಾರ್ಥಿ ವೇತನ ಸಹಾಯಕವಾಗಲಿದೆ.


ಶನಿವಾರ ಇಲ್ಲಿ ನಡೆದ ಫಲಾನುಭವಿಗಳ ಸಭೆಯಲ್ಲಿ ವಿದ್ಯಾಧನವನ್ನು ಮುನ್ನಡೆಸುತ್ತಿರುವ ಸರೋಜಿನಿ ದಾಮೋದರನ್ ಫೌಂಡೇಶನ್ (SDF) ನ ಟ್ರಸ್ಟಿ ಎಸ್‌ಡಿ ಶಿಬುಲಾಲ್ ಮೂರು ಹೊಸ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಮತ್ತು ಪಂಜಾಬ್ ರಾಜ್ಯಗಳಿಗೂ ಸಹ ವಿದ್ಯಾರ್ಥಿ ವೇತನವನ್ನು ಹಂಚಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ. ಈರೀತಿ ಮಾಡುವುದರಿಂದಾಗಿ ಹೆಚ್ಚಿನ ಜನರಿಗೆ ಉನ್ನತ ಶಿಕ್ಷಣ ಅವಕಾಶ ದೊರೆಯುತ್ತದೆ ಎಂದು ಹೇಳಿದರು.


ಈ ವರ್ಷ 40 ಸಾವಿರ ಅರ್ಜಿಗಳು
ವಿದ್ಯಾಧನ್ ವಿದ್ಯಾರ್ಥಿ ವೇತನಕ್ಕೆ ಈ ವರ್ಷ 1,600 ಹೊಸ ಹೆಚ್ಚುವರಿ ಅರ್ಜಿಗಳ ನಿರೀಕ್ಷೆ ಇದ್ದು ವಿದ್ಯಾರ್ಥಿವೇತನಕ್ಕಾಗಿ 40,000 ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಕೆಲವು ರಾಜ್ಯಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇನ್ನೂ ಮುಕ್ತಾಯವಾಗದ ಕಾರಣ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಎಸ್‌ಡಿ ಶಿಬುಲಾಲ್ ಹೇಳಿದ್ದಾರೆ.


ಈಚ್ ಒನ್, ಟೀಚ್ ಒನ್, ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುತ್ತದೆ. ಶಿಕ್ಷಣದ ಮೂಲಕ ನೂರಾರು ಮಕ್ಕಳ ಜೀವನವನ್ನು ಪರಿವರ್ತಿಸಲು ಒಟ್ಟಾಗಿ ಕೆಲಸ ಮಾಡುತ್ತಿರುವ UST ಮತ್ತು ವಿದ್ಯಾಧನ್ ಸಹಕಾರವನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಶಿಬುಲಾಲ್ ಹೇಳಿದರು.


ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಹುದ್ದೆ ನೇಮಕಾತಿ

ಅಮಿತಾಬ್ ಕಾಂತ್ ಶ್ಲಾಘಿಸಿದ್ದಾರೆ
ಶನಿವಾರದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶೆರ್ಪಾ ಅಮಿತಾಭ್ ಕಾಂತ್ ಸಾಮಾಜದ ಮೇಲೆ ಧನಾತ್ಮಕ ಪ್ರಭಾವವನ್ನು ಉಂಟುಮಾಡುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ, ಕಾರ್ಪೊರೇಟ್‌ಗಳು ಮತ್ತು ವ್ಯಕ್ತಿಗಳು ಎಲ್ಲರೂ ಪಾತ್ರ ವಹಿಸಬೇಕು ಎಂದು ಹೇಳಿದರು.


ವಿದ್ಯಾಧನ ಫಲಾನುಭವಿಗಳು
ಇದುವರೆಗೆ ವಿದ್ಯಾಧನ್ ಸಹಾಯ ಪಡೆದ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ವಿದ್ಯಾಧನ ಫಲಾನುಭವಿಗಳು TCS, Infosys, HCL, UST, Bosch, KPMG, MRF, UNISYS, MBB ಲ್ಯಾಬ್‌ಗಳು, ಸರ್ಕಾರ ಮತ್ತು ರಕ್ಷಣಾ ಪಡೆಗಳಲ್ಲಿ ಕೆಲಸ ಮಾಡಲು ಹೋಗಿದ್ದಾರೆ. ಇನ್ನೂ ಕೆಲವರು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಅಥವಾ ಸಂಶೋಧನೆಯನ್ನು ಮಾಡುತ್ತಿದ್ದಾರೆ.


ಇದನ್ನೂ ಓದಿ: ಸಹಾಯಕ ಸಬ್​ ಇನ್ಸ್​ಪೆಕ್ಟರ್ ಹುದ್ದೆ ನೇಮಕಾತಿ


ಸಾಮಾಜಿಕ ಕಟ್ಟುಪಾಡಿನಿಂದ ಹೊರಬರುವ ಕಾರ್ಯ


ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ತಮ್ಮ ಸಮಾಜದ ಕಟ್ಟುಪಾಡುಗಳನ್ನು ತೊಡೆದುಹಾಕಿ ಉನ್ನತ ಶಿಕ್ಷಣವನ್ನು ಪಡೆಯುವ ಮೂಲಕ ಮಾದರಿಯಾಗುತ್ತಿದ್ದಾರೆ. ಈ ವಿದ್ಯಾಧನದ ಸಹಾಯ ಪಡೆದ ವಿದ್ಯಾರ್ಥಿಗಳು ಇನ್ನು ಮುಂದಿನ ದಿನಗಳಲ್ಲಿ ಇನ್ನೊಬ್ಬರಿಗೆ ಸಹಾಯ ಹಸ್ತ ನೀಡುವ ಮೂಲಕ ಈ ಸಹಾಯಕ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಶಿಬುಲಾಲ್ ಹೇಳಿದರು. ಕಷ್ಟದ ಸಮಯದಲ್ಲಿಯೂ ವಿದ್ಯಾಧನ ಕಾರ್ಯಕ್ರಮದಲ್ಲಿ UST ಅವರ ನಂಬಿಕೆ ಮತ್ತು ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಸಮರ್ಪಿಸಿದರು.


ಎಸ್.ಡಿ.ಎಫ್.ನ ಟ್ರಸ್ಟಿ ಎಸ್.ರಮಾನಂದ್ ಅವರು ವಿದ್ಯಾದನ ಸಹಾಯದ ಪಯಣದ ಕುರಿತು ಅಭಿಪ್ರಾಯ ಹಂಚಿಕೊಂಡರು. ಟ್ರಸ್ಟಿ ಶ್ರುತಿ ಶಿಬುಲಾಲ್ ಅವರು ಶಿಕ್ಷಣದ ಮೂಲಕ ಹಲವಾರು ಜನರ ಜೀವನವನ್ನು ಪರಿವರ್ತಿಸುವಲ್ಲಿ ಸಹಾಯದನ ಪಾತ್ರದ ಕುರಿತು ಯುಎಸ್‌ಟಿ, ವಿದ್ಯಾಧನ್ ತಂಡ, ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳ ಕಾರ್ಯ ಶ್ಲಾಘಿಸಿದರು.

First published: