• Home
  • »
  • News
  • »
  • education
  • »
  • UPSC CSE ಪರೀಕ್ಷೆಗಳ ವೇಳಾಪಟ್ಟಿ ಇಲ್ಲಿದೆ ನೋಡಿ! ಫೆಬ್ರವರಿ 1 ರಿಂದ ಪ್ರಿಲಿಮ್ಸ್ ಪರೀಕ್ಷೆಗೆ ನೋಂದಾಯಿಸಿ

UPSC CSE ಪರೀಕ್ಷೆಗಳ ವೇಳಾಪಟ್ಟಿ ಇಲ್ಲಿದೆ ನೋಡಿ! ಫೆಬ್ರವರಿ 1 ರಿಂದ ಪ್ರಿಲಿಮ್ಸ್ ಪರೀಕ್ಷೆಗೆ ನೋಂದಾಯಿಸಿ

UPSC

UPSC

ವೇಳಾಪಟ್ಟಿ ಪ್ರಕಾರ, ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್ಇ) ಅಧಿಸೂಚನೆಯನ್ನು ಫೆಬ್ರವರಿ 1 ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದೆ.

  • News18 Kannada
  • Last Updated :
  • New Delhi, India
  • Share this:

ಯುಪಿಎಸ್‌ಸಿ ಪರೀಕ್ಷೆಗಳಿಗೆ ಲಕ್ಷಾಂತರ ವಿದ್ಯಾರ್ಥಿಗಳು (Students) ಸುಮಾರು ವರ್ಷಗಳಿಂದ ತಯಾರಿ ನಡೆಸಿರುತ್ತಾರೆ. ಇವರೆಲ್ಲಾ ಕಾತುರದಿಂದ ಕಾಯುವುದು ಆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವಾಗ ನಡೆಸಲಾಗುತ್ತದೆ ಅಂತ. ಅನೇಕ ವರ್ಷಗಳಿಂದ (year) ಯುಪಿಎಸ್‌ಸಿ ಪರೀಕ್ಷೆಗಳಿಗೆ (UPSC Exa) ತಯಾರಿ ನಡೆಸಿರುವಂತಹ ವಿದ್ಯಾರ್ಥಿಗಳಿಗೆ ಇಲ್ಲೊಂದು ಸಿಹಿ ಸುದ್ದಿ (Good News) ಇದೆ ನೋಡಿ. ಹೌದು ಯುಪಿಎಸ್‌ಸಿ ಎಂದರೆ ಕೇಂದ್ರ ಲೋಕಸೇವಾ ಆಯೋಗ 2023 ರಲ್ಲಿ ನಡೆಸಲಾಗುವ ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಈಗ ಪ್ರಕಟಿಸಿದೆ.


ವೇಳಾಪಟ್ಟಿ ಪ್ರಕಾರ, ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್ಇ) ಅಧಿಸೂಚನೆಯನ್ನು ಫೆಬ್ರವರಿ 1 ರಂದು ಬಿಡುಗಡೆ ಮಾಡಲಾಗುವುದು ಮತ್ತು ಪರೀಕ್ಷೆಗಳನ್ನು ಮೇ 28 ರಂದು ನಡೆಸಲಾಗುವುದು. ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ಮೂರು ಹಂತಗಳಲ್ಲಿ ನಡೆಯಲಿದೆ ಪರೀಕ್ಷೆ
ಸಿಎಸ್ಇ ಮೂರು ಹಂತಗಳ ಪರೀಕ್ಷೆಯನ್ನು ಹೊಂದಿದ್ದು, ಇದು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸೆಪ್ಟೆಂಬರ್ 15 ರಂದು ನಡೆಯುವ ಮುಖ್ಯ ಪರೀಕ್ಷೆಗೆ ಕುಳಿತುಕೊಳ್ಳಬಹುದು, ನಂತರ ಸಂದರ್ಶನ ನಡೆಯಲಿದೆ, ಇದರ ದಿನಾಂಕಗಳನ್ನು ಮುಖ್ಯ ಪರೀಕ್ಷೆಗಳ ಫಲಿತಾಂಶಗಳ ನಂತರ ಬಹಿರಂಗಪಡಿಸಲಾಗುತ್ತದೆ.


ವಿವಿಧ ಪರೀಕ್ಷೆಗಳ ವೇಳಾಪಟ್ಟಿಗಳು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯ
ಕಂಬೈನ್ಡ್ ಜಿಯೋ-ಸೈಂಟಿಸ್ಟ್ (ಪ್ರಿಲಿಮಿನರಿ) ಪರೀಕ್ಷೆಯು ಫೆಬ್ರವರಿ 19, 2023 ರಂದು ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ. ಯುಪಿಎಸ್‌ಸಿ ಸಿಎಸ್ಇ, ಭಾರತೀಯ ಅರಣ್ಯ ಸೇವೆಗಳ ಪರೀಕ್ಷೆ, ಎನ್‌ಡಿಎ, ಸಿಡಿಎಸ್, ಇಂಡಿಯನ್ ಎಂಜಿನಿಯರಿಂಗ್ ಸರ್ವೀಸಸ್ ಪರೀಕ್ಷೆ, ಸಿಐಎಸ್ಎಫ್ ಎಸಿ (ಇಎಕ್ಸ್ಇ) ಎಲ್‌ಡಿಸಿಇ-2023 ಪರೀಕ್ಷೆಗಳ ಮತ್ತು ಇತರ ವಿವಿಧ ಪರೀಕ್ಷೆಗಳ ವೇಳಾಪಟ್ಟಿಗಳು ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ ನಲ್ಲಿ ಲಭ್ಯವಿದೆ.


ಇದನ್ನೂ ಓದಿ: ಫೇಲ್ ಆದ್ರೂ ಡಿಗ್ರಿ, ಮಾಸ್ಟರ್ ಡಿಗ್ರಿ ಪಡೆಯೋಕೆ ಸಖತ್ ಚಾನ್ಸ್!


ನೇಮಕಾತಿ ವಿವರ
ಭಾರತೀಯ ರಕ್ಷಣಾ ಪಡೆಗಳಿಗೆ ಆಕಾಂಕ್ಷಿಗಳನ್ನು ನೇಮಕ ಮಾಡುವ ಎನ್‌‌ಡಿಎ/ಎನ್ಎ ಮತ್ತು ಸಿಡಿಎಸ್ ಪರೀಕ್ಷಾ ಅಧಿಸೂಚನೆಯನ್ನು ಯುಪಿಎಸ್‌ಸಿ ಈ ವರ್ಷದ ಡಿಸೆಂಬರ್ 21 ರಂದು ಬಿಡುಗಡೆ ಮಾಡುತ್ತದೆ ಮತ್ತು ಅರ್ಜಿಗಳನ್ನು ಜನವರಿ 10, 2023 ರವರೆಗೆ ಸ್ವೀಕರಿಸಲಾಗುತ್ತದೆ. ಪ್ರಿಲಿಮ್ಸ್ ಪರೀಕ್ಷೆಯನ್ನು ಮುಂದಿನ ವರ್ಷ ಏಪ್ರಿಲ್ 16 ರಂದು ರಾಷ್ಟ್ರದಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಸಲಾಗುವುದು.


ಯುಪಿಎಸ್ಸಿ ಸಿಎಸ್ಇ 2023 ಪರೀಕ್ಷೆಗಳ ವೇಳಾಪಟ್ಟಿ


  • ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆ 2023 - ಫೆಬ್ರವರಿ 9

  • ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ 2023 - ಸೆಪ್ಟೆಂಬರ್ 15

  • ಎಂಜಿನಿಯರಿಂಗ್ ಸರ್ವೀಸಸ್ (ಪ್ರಿಲಿಮಿನರಿ) ಪರೀಕ್ಷೆ 2023 - ಫೆಬ್ರವರಿ 19

  • ಕಂಬೈನ್ಡ್ ಜಿಯೋ-ಸೈಂಟಿಸ್ಟ್ (ಪ್ರಿಲಿಮಿನರಿ) ಪರೀಕ್ಷೆ 2023 - ಫೆಬ್ರವರಿ 19

  • ಭಾರತೀಯ ಅರಣ್ಯ ಸೇವೆ (ಪ್ರಿಲಿಮಿನರಿ) ಪರೀಕ್ಷೆ 2023 - ಮೇ 28

  • ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆ 2023 - ನವೆಂಬರ್ 26


ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಆರ್ಥಿಕ ಸೇವೆ / ಭಾರತೀಯ ಅಂಕಿಅಂಶ ಸೇವಾ ಪರೀಕ್ಷೆ, 2022 ರ ವ್ಯಕ್ತಿತ್ವ ಸಂದರ್ಶನ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 19 ರಿಂದ ಈ ಸಂದರ್ಶನಗಳು ಪ್ರಾರಂಭವಾಗುತ್ತವೆ. ಸಂದರ್ಶನಗಳನ್ನು ಪ್ರತಿದಿನ ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ.


ಪರೀಕ್ಷಾ ಸಮಯದ ವಿವರ
ಬೆಳಿಗ್ಗೆ 9 ರಿಂದ ಮೊದಲ ಪಾಳಿ ಮತ್ತು ಮಧ್ಯಾಹ್ನ 1 ರಿಂದ ಎರಡನೇ ಪಾಳಿಗಳಲ್ಲಿ ಸಂದರ್ಶನ ನಡೆಯುತ್ತದೆ. ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಸ್ಥಿತಿ ಮತ್ತು ಹಿಂದಿನ ವರ್ಷಗಳಲ್ಲಿ ಅನುಸರಿಸಿದ ಅಭ್ಯಾಸವನ್ನು ಪರಿಗಣಿಸಿ, ಯುಪಿಎಸ್‌ಸಿ ಪ್ರಾಧಿಕಾರವು ಸಂದರ್ಶನಗಳಿಗೆ ಹಾಜರಾಗಲು ಅಭ್ಯರ್ಥಿಗಳಿಗೆ ವಿಮಾನ ಶುಲ್ಕವನ್ನು ಮರುಪಾವತಿಸಲು ನಿರ್ಧರಿಸಿದೆ.

First published: