• Home
 • »
 • News
 • »
 • education
 • »
 • ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: Fellowship, Scholarship ಹಣವನ್ನು ಹೀಗೆ ವಿತರಿಸಲಿರುವ UGC

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: Fellowship, Scholarship ಹಣವನ್ನು ಹೀಗೆ ವಿತರಿಸಲಿರುವ UGC

ಪ್ರಾತಿನಿಧಿಕ ಚಿತ್ರ (ಫೋಟೋ ಕೃಪೆ: google)

ಪ್ರಾತಿನಿಧಿಕ ಚಿತ್ರ (ಫೋಟೋ ಕೃಪೆ: google)

ಬ್ಯಾಂಕ್ ಪೋರ್ಟಲ್ ಮೂಲಕ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ವಿದ್ಯಾರ್ಥಿವೇತನದ ಮೊತ್ತವನ್ನು ವಿತರಿಸುತ್ತಿದೆ ಎಂದು ಸಮಿತಿಯ ಅಧ್ಯಕ್ಷರಾದ ಜಗದೇಶ್ ಕುಮಾರ್ ತಿಳಿಸಿದ್ದಾರೆ.

 • Share this:

  ವಿಶ್ವವಿದ್ಯಾನಿಲಯ (University) ಧನಸಹಾಯ ಆಯೋಗವು ಸ್ಕಾಲರ್‌ಶಿಪ್ (Scholarship) ಹಾಗೂ ವಿದ್ಯಾರ್ಥಿವೇತನದ ಮೊತ್ತವನ್ನು ವಿತರಿಸಲು ಬ್ಯಾಂಕ್ ಪೋರ್ಟಲ್‌ನೊಂದಿಗೆ ಸಂಯೋಜಿಸಿದ್ದು, ವಿದ್ಯಾರ್ಥಿಗಳು ಪೋರ್ಟಲ್‌ನ (Portal) ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅಧ್ಯಕ್ಷರಾದ ಜಗದೇಶ್ ಕುಮಾರ್ ತಿಳಿಸಿದ್ದಾರೆ. ನೇರ ಲಾಭ ವರ್ಗಾವಣೆ ಪಾವತಿಗಳಿಗಾಗಿ (DBT) ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯೊಂದಿಗೆ ಸಂಯೋಜಿಸಲಾದ ಬ್ಯಾಂಕ್ ಪೋರ್ಟಲ್ ಮೂಲಕ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ಸ್ಕಾಲರ್‌ಶಿಪ್ ಹಾಗೂ ವಿದ್ಯಾರ್ಥಿವೇತನದ ಮೊತ್ತವನ್ನು ವಿತರಿಸುತ್ತಿದೆ ಎಂದು ಸಮಿತಿಯ ಅಧ್ಯಕ್ಷರಾದ ಜಗದೇಶ್ ಕುಮಾರ್ ತಿಳಿಸಿದ್ದಾರೆ. ಫಂಡ್ ವಿತರಣೆಗಾಗಿ ಕೆನರಾ ಬ್ಯಾಂಕ್ ಸ್ಕಾಲರ್‌ಶಿಪ್ ಮತ್ತು ಫೆಲೊಶಿಪ್ ಮ್ಯಾನೇಜ್‌ಮೆಂಟ್ ಪೋರ್ಟಲ್ (SFMP) ಅನ್ನು ರಚಿಸಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.


  ಬ್ಯಾಂಕ್ ಪೋರ್ಟಲ್ ಮೂಲಕ ಸ್ಕಾಲರ್‌ಶಿಪ್ ಹಾಗೂ ವಿದ್ಯಾರ್ಥಿವೇತನ ವಿತರಣೆ


  ಇತ್ತೀಚೆಗೆ ಯುಜಿಸಿಯು ಪೋರ್ಟಲ್‌ನಲ್ಲಿ ಹೊಸ ಸೌಲಭ್ಯಗಳನ್ನು ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು ವಿದ್ಯಾರ್ಥಿಗಳ ಮೂಲಕ ಲಿಂಕ್‌ ಆರಂಭ ಮಾಡುವುದು, ವಿದ್ಯಾರ್ಥಿಗಳ ಮೂಲಕ ಮಾಸಿಕ ಪಾವತಿ ದೃಢೀಕರಣ ಪ್ರಾರಂಭಿಸುವುದು, ಮಾಡ್ಯುಲ್ ಟ್ರ್ಯಾಕ್ ಮಾಡುವುದು, ಕುಂದುಕೊರತೆ ಮಾಡ್ಯೂಲ್ ರಚನೆ, ಶೈಕ್ಷಣಿಕ ಬಳಕೆದಾರರ ಪ್ರಕ್ರಿಯೆ ಮೊದಲಾದ ಸೇರ್ಪಡೆಗಳ ಬಗ್ಗೆ ಜಗದೇಶ್ ತಿಳಿಸಿದ್ದಾರೆ. ವಿದ್ಯಾರ್ಥಿಗಳೇ ಪೋರ್ಟಲ್‌ನ ಬಳಕೆಯನ್ನು ಉಪಯುಕ್ತ ರೀತಿಯಲ್ಲಿ ಮಾಡುವಂತೆ ಪೋರ್ಟಲ್‌ ಅನ್ನು ನಿರ್ಮಿಸಲಾಗಿದೆ ಎಂಬುದು ಜಗದೇಶ್ ಹೇಳಿಕೆಯಾಗಿದೆ.


  ಸ್ಕಾಲರ್‌ಶಿಪ್ ಪುರಸ್ಕೃತರಾದವರಿಗೆ ಪೋರ್ಟಲ್‌ನಲ್ಲಿ ಪಾವತಿಗಳು ಸ್ವಯಂಚಾಲಿತವಾಗಿ ರಚನೆಗೊಳ್ಳುತ್ತದೆ ಹಾಗೂ ವಿಶ್ವವಿದ್ಯಾಲಯ, ಸಂಸ್ಥೆ, ಕಾಲೇಜುಗಳಿಂದ ಲಿಂಕ್ ಮಾಡಿದ ಪ್ರಶಸ್ತಿ ಪುರಸ್ಕೃತರಿಗೆ canarabank.in ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ಸಂಬಂಧಿಸಿದ ವಿಶ್ವವಿದ್ಯಾಲಯ, ಸಂಸ್ಥೆ ಅಥವಾ ಕಾಲೇಜು ಅಭ್ಯರ್ಥಿಗಳ ಮಾಸಿಕ ದೃಢೀಕರಣದ ಆಧಾರದ ಮೇಲೆ ಸ್ವಯಂಚಾಲಿತವಾಗಿ ರಚನೆಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.


  ನೋಡಲ್ ಅಧಿಕಾರಿಗಳಿಗೆ ತರಬೇತಿ


  ಪೋರ್ಟಲ್‌ನ ನಿಯಮಗಳು ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿಯನ್ನೊದಗಿಸಲು ಪೋರ್ಟಲ್‌ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ನವೆಂಬರ್ 14 ರಿಂದ 18 ರವರೆಗೆ ವರ್ಚುವಲ್ ಮೋಡ್ ಮೂಲಕ ಪೋರ್ಟಲ್‌ನಲ್ಲಿ ಕೆಲಸ ಮಾಡುವ ನೋಡಲ್ ಅಧಿಕಾರಿಗಳಿಗೆ ತರಬೇತಿ ಅವಧಿ ಅಥವಾ ಕಾರ್ಯಾಗಾರವನ್ನು ನಡೆಸಲು ಆಯೋಗವು ನಿರ್ಧರಿಸಿದೆ ಎಂದು ಯುಜಿಸಿ ಮುಖ್ಯಸ್ಥರು ತಿಳಿಸಿದ್ದಾರೆ. ಎಲ್ಲಾ ಸಂಸ್ಥೆಗಳು ಸಂಬಂಧಿಸಿದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ವಿನಂತಿಸಲಾಗಿದೆ ಹಾಗೂ ನೋಡಲ್ ಅಧಿಕಾರಿಗಳು (ತಯಾರಕ/ಪರಿಶೀಲಕ) ಈ ಕಾರ್ಯಾಗಾರಾದಲ್ಲಿ ಕಡ್ಡಯಾವಾಗಿ ಭಾಗವಹಿಸಬೇಕು ಎಂದು ಕುಮಾರ್ ತಿಳಿಸಿದ್ದಾರೆ SFMP ನಲ್ಲಿ ಕಡ್ಡಾಯವಾಗಿ ಕಾರ್ಯಾಗಾರಕ್ಕೆ ಹಾಜರಾಗುವುದಕ್ಕಾಗಿ ವರ್ಚುವಲ್ ಮೀಟ್‌ನ ಲಿಂಕ್ ಅನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಶ್ರೀ ಕುಮಾರ್ ತಿಳಿಸಿದ್ದಾರೆ.


  ಉನ್ನತ ಶಿಕ್ಷಣದ ವಿಶಾಲ ನೀತಿಗೆ ಅನುಸಾರವಾಗಿ ನಿಯಮಗಳು


  ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಶುಕ್ರವಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರಲ್ಲಿ ಒಳಗೊಂಡಿರುವ ಉನ್ನತ ಶಿಕ್ಷಣದ ವಿಶಾಲ ನೀತಿಗಳಿಗೆ ಅನುಗುಣವಾಗಿ ವಿಶ್ವವಿದ್ಯಾನಿಲಯಗಳೆಂದು ಪರಿಗಣಿಸಲು ಮಾರ್ಪಡಿಸಿದ ನಿಯಮಾವಳಿಗಳನ್ನು ಪ್ರಕಟಿಸಿದೆ.


  ಪರಿಷ್ಕೃತ ನಿಯಮಗಳ ಪ್ರಕಾರ, ಕನಿಷ್ಠ ಐದು ವಿಭಾಗಗಳನ್ನು ಹೊಂದಿರುವ ಸಂಸ್ಥೆಗಳು (ಎರಡೂ UG/ PG/ ಇಂಟಿಗ್ರೇಟೆಡ್/ ಸಂಶೋಧನೆ ಅಥವಾ ಇವುಗಳ ಸಂಯೋಜನೆ) ಅಥವಾ ಒಂದೇ ನಗರ/ಪಟ್ಟಣದಲ್ಲಿರುವ ಕನಿಷ್ಠ ಐದು ವಿಭಾಗಗಳನ್ನು ಒದಗಿಸುವ ಸಂಸ್ಥೆಗಳ ಸಮೂಹವು ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸಲು ಅರ್ಹವಾಗಿರುತ್ತದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಈಗ UGC ಆಫ್-ಕ್ಯಾಂಪಸ್ ಸೆಂಟರ್ (ಗಳಿಗೆ) ಅನುಮೋದನೆಯನ್ನು ನೀಡುತ್ತದೆ ಮತ್ತು ಶಿಕ್ಷಣ ಸಚಿವಾಲಯ (MoE) ಅಲ್ಲ ಎಂಬುದು ವರದಿಯಾಗಿದೆ.


  ಪಾರದರ್ಶಕವಾಗಿ ಶುಲ್ಕ ನಿಗದಿ


  ಸರಕಾರವು ನಡೆಸುವ ಪ್ರವೇಶ ಪರೀಕ್ಷೆಯಲ್ಲಿನ ಅರ್ಹತೆಯ ಆಧಾರದ ಮೇಲೆ ಪ್ರವೇಶಗಳನ್ನು ನೀಡಲಾಗುತ್ತದೆ ಮತ್ತು ಲಾಭರಹಿತ/ವಾಣಿಜ್ಯೇತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶುಲ್ಕವನ್ನು ಪಾರದರ್ಶಕವಾಗಿ ನಿಗದಿಪಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

  Published by:Kavya V
  First published: