Education: ತಮ್ಮ ಕನಸು ಈಡೇರಿಸ್ತಾನೆ ಬೇರೆ ಹೆಣ್ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡ್ತಿರೋ ತೆಲಂಗಾಣದ ಯುವತಿಯರು!

ತೆಲಂಗಾಣದ ಹೆಣ್ಣು ಮಕ್ಕಳಿಗೆ ಪರ್ವತಗಳನ್ನು ಏರುವುದು ಉತ್ಸಾಹದ ಕೆಲಸ ಆಗಿದೆ. ಅವರಿಗೆ ಪರ್ವತ ಏರುವುದು ಒಂದು ಹುಚ್ಚು ಹವ್ಯಾಸ ಆಗಿದೆ. ಅವರು ಈ ಬಾರಿ ʼಶಕ್ತಿ ಯೋಜನೆʼ ಗಾಗಿ ಪರ್ವತ ಏರುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದರಿಂದ 100 ಹುಡುಗಿಯರಿಗೆ ಆಶಾದಾಯಕ ಬೆಳಕು ನೀಡಬೇಕೆಂಬ ಉತ್ಕಟ ಬಯಕೆಯನ್ನು ಹೊಂದಿದ್ಧಾರೆ. ಇದರಿಂದ ಆ ಹುಡುಗಿಯರ ಜೀವನದಲ್ಲಿ ಬದಲಾವಣೆ ತರುವ ಸದುದ್ದೇಶವನ್ನು ಹೊಂದಿದ್ಧಾರೆ.

ಪರ್ವತಾರೋಹಣ ಯಾತ್ರೆ ಕೈಗೊಂಡಿರುವ ತೆಲಂಗಾಣದ ಯುವತಿಯರು

ಪರ್ವತಾರೋಹಣ ಯಾತ್ರೆ ಕೈಗೊಂಡಿರುವ ತೆಲಂಗಾಣದ ಯುವತಿಯರು

  • Share this:
‘ನಮ್ಮ ಉತ್ತಮ ಉದ್ದೇಶ, ನಮ್ಮನ್ನು ಬೆಳೆಸುತ್ತದೆʼ ಎಂಬ ಮಾತು ಸುಳ್ಳಲ್ಲ. ಅದಕ್ಕೆ ಉದಾಹರಣೆಯಾಗಿ ತೆಲಂಗಾಣದ (Telangana) ಈ ಇಬ್ಬರು ಯುವತಿಯರು ಸಾಕ್ಷಿ ಆಗಿದ್ದಾರೆ. ಇವರು ತಮ್ಮ ಕನಸಿನ ಜೊತೆ ಬೇರೆ ಹೆಣ್ಣು (Girls) ಮಕ್ಕಳಿಗೂ ಕೂಡ ಉತ್ತಮ ಶಿಕ್ಷಣ ನೀಡಬೇಕೆಂಬ ಉತ್ತಮ ಉದ್ದೇಶ ಹೊಂದಿದ್ದಾರೆ. ಈ ತೆಲಂಗಾಣದ ಹೆಣ್ಣು ಮಕ್ಕಳಿಗೆ ಪರ್ವತಗಳನ್ನು ಏರುವುದು ಉತ್ಸಾಹದ ಕೆಲಸ ಆಗಿದೆ. ಅವರಿಗೆ ಪರ್ವತ ಏರುವುದು ಒಂದು ಹುಚ್ಚು ಹವ್ಯಾಸ (Habit) ಆಗಿದೆ. ಅವರು ಈ ಬಾರಿ ʼಶಕ್ತಿ ಯೋಜನೆʼ ಗಾಗಿ ಪರ್ವತ ಏರುವ (Mountain climbing) ಕೆಲಸಕ್ಕೆ ಕೈ ಹಾಕಿದ್ದಾರೆ. ಇದರಿಂದ 100 ಹುಡುಗಿಯರಿಗೆ ಆಶಾದಾಯಕ ಬೆಳಕು ನೀಡಬೇಕೆಂಬ ಉತ್ಕಟ ಬಯಕೆಯನ್ನು ಹೊಂದಿದ್ಧಾರೆ. ಇದರಿಂದ ಆ ಹುಡುಗಿಯರ ಜೀವನದಲ್ಲಿ ಬದಲಾವಣೆ ತರುವ ಸದುದ್ದೇಶವನ್ನು ಹೊಂದಿದ್ಧಾರೆ.

ಯಾರಿವರು ಇಬ್ಬರು ಮಹಿಳೆಯರು 

ಈ ಇಬ್ಬರು ಯುವತಿಯರಲ್ಲಿ ಕಾವ್ಯ ಮಾನ್ಯಪು ಒಬ್ಬರಾಗಿದ್ದಾರೆ. ಇವರು ಅಮೇರಿಕಾದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತೆ ಮತ್ತು ಬಾಹ್ಯಾಕಾಶ ವಿಜ್ಞಾನಿ ಆಗಿದ್ಧಾರೆ. ಹಾಗೆಯೇ ಇನ್ನೊಬ್ಬ ಯುವತಿ ಪೂರ್ಣಾ ಮಾಲವತ್ ಆಗಿದ್ದಾರೆ. ಇವರು ಮೌಂಟ್ ಎವರೆಸ್ಟ್ ಏರಿದ ಮತ್ತು ಏಳು ಶೃಂಗಗಳ ಸವಾಲನ್ನು ಪೂರ್ಣಗೊಳಿಸಿದ ಅತ್ಯಂತ ಕಿರಿಯ ಮಹಿಳೆ ಎಂದೇ ಹೆಸರು ವಾಸಿಯಾಗಿದ್ದಾರೆ. ಈಗ ಇಬ್ಬರೂ ಯುವತಿಯರು ಈ ʼಶಕ್ತಿ ಯೋಜನೆʼ ಯ ಮಹತ್ತರ ಕಾರ್ಯದ ಯೋಜನೆಗೆ ಒಟ್ಟು ರೂ. 10 ಲಕ್ಷಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ.

ಇವರಿಬ್ಬರೂ ಸೋಮವಾರದಂದು ಹೈದರಾಬಾದ್‌ನಿಂದ ಲಡಾಖ್‌ನ ಲೇಹ್‌ಗೆ ಪ್ರಯಾಣಿಸುತ್ತಿದ್ಧಾರೆ. ಮುಂದಿನ 15 ದಿನಗಳಲ್ಲಿ, ಲಡಾಖ್‌ನಲ್ಲಿ 6,200 ಮೀಟರ್ ಎತ್ತರದ ಮತ್ತು ಆ ಪರ್ವತವನ್ನು ಯಾರು ಏರದ ಮತ್ತು ಹೆಸರಿಸದ ಪರ್ವತ ಶಿಖರವನ್ನು ಇಬ್ಬರೂ ಏರಲಿದ್ಧೆವೆ ಎಂದು ಈ ಕುರಿತು ಹೇಳಿಕೆ ನೀಡಿದ್ದಾರೆನ್ನಲಾಗಿದೆ. “ಅವರು ತಮ್ಮ ಈ ʼಶಕ್ತಿ ಯೋಜನೆʼ ಯ ಉದ್ದೇಶ ಹೊತ್ತು ಪರ್ವತ ಏರಬೇಕೆಂದು ಹೋಗುತ್ತಿರುವ ಇಂತಹ ಹಲವಾರು ಪರ್ವತಾರೋಹಣಗಳಲ್ಲಿ ಇದು ಮೊದಲನೆಯದು” ಎಂದು ಪರ್ವತಾರೋಹಣದಲ್ಲಿ ಕೆಲಸ ಮಾಡಿದ ಅನುಭವಿ ಪರ್ವತಾರೋಹಿ ಶೇಖರ್ ಬಾಬು ಹೇಳುತ್ತಾರೆ.

ಹೆಣ್ಣು ಮಕ್ಕಳಿಗೆ ಉತ್ತಮ ಜೀವನ ನೀಡಬೇಕೆನ್ನುವ ಉದ್ದೇಶ

ಕಾವ್ಯ ಮತ್ತು ಪೂರ್ಣಾ ಇಬ್ಬರೂ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ತಮ್ಮ ಖಾಯಂ ನಿವಾಸಗಳನ್ನು ಹೊಂದಿದ್ದಾರೆ. 2019ರಲ್ಲಿ ಪೂರ್ಣಾ ಯುಎಸ್‌ನಲ್ಲಿ ಜರುಗಿದ್ದ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಅಲ್ಲಿ ಇವರು ಮೊದಲ ಬಾರಿಗೆ ಪೂರ್ಣಾರನ್ನು ಭೇಟಿಯಾಗಿದ್ದರು.  ತದನಂತರ, ಪರ್ವತಾರೋಹಣದಲ್ಲಿ ಇಬ್ಬರಿಗೂ ಇದ್ದ ಆಸಕ್ತಿ ಒಂದೇ ಆಗಿರುವುದರಿಂದ, ಹೆಣ್ಣು ಮಕ್ಕಳಿಗೆ ಉತ್ತಮ ಜೀವನ ನೀಡಬೇಕು, ಅದರ ಕುರಿತು ಜಾಗೃತಿ ಮೂಡಿಸಬೇಕು ಎಂದು ನಿರ್ಧರಿಸಿ ಶಕ್ತಿ ಯೋಜನೆ ರೂಪಿಸಿದರು ಹಾಗೂ ಸದ್ಯ ಈ ಯೋಜನೆಗೆ ಅವರ ಈ ಉದ್ದೇಶವೇ ಸ್ಫೂರ್ತಿಯಾಗಿದೆ.

ಇದನ್ನೂ ಓದಿ: Viral Video: ಊಟ ಚೆನ್ನಾಗಿಲ್ಲ ಅಂತ ರಸ್ತೆ ಮೇಲೆ ನಿಂತು ಕಣ್ಣೀರಿಟ್ಟ ಕಾನ್ಸ್‌ಟೇಬಲ್‌! ಪಾಪ ಇವ್ರ ಕಷ್ಟ ಯಾರಿಗೂ ಬೇಡ

“ಯೋಜನೆ ಶಕ್ತಿಯ ಭಾಗವಾಗಿ, ನಾವು ಪರ್ವತಾರೋಹಣವನ್ನು ವೇದಿಕೆಯಾಗಿ ಆರಿಸಿಕೊಂಡಿದ್ದೇವೆ. ಏಕೆಂದರೆ ಇದು ಮಹಿಳೆಯ ವೃತ್ತಿ ಅಥವಾ ಅನ್ವೇಷಣೆಯ ಅತ್ಯಂತ ಅಸಾಂಪ್ರದಾಯಿಕ ರೂಪವಾಗಿದೆ. ಮತ್ತು ಇದನ್ನು ಮಹಿಳೆಯರು ಮಾಡಬಹುದು ಎಂಬ ಸಂದೇಶವನ್ನು ಎಲ್ಲರಿಗೂ ನೀಡಲು ನಾವು ಬಯಸುತ್ತೆವೆ. ಹುಡುಗಿಯರು ದೊಡ್ಡ ಕನಸು ಕಾಣಬೇಕು ಮತ್ತು ಅವರು ಏನು ಮಾಡಲು ಬಯಸುವಿರೋ, ಅದನ್ನು ಧೈರ್ಯವಾಗಿ ಮಾಡಿ, ಅದೇ ನಿಮ್ಮ ಕನಸಿನ ಸಾಕಾರ ಆಗುತ್ತದೆ” ಎಂದು ಕಾವ್ಯ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಈ ಬಗ್ಗೆ ಪೂರ್ಣಾ ಅವರು ಏನು ಹೇಳಿದ್ದಾರೆ?

ಜೂನ್‌ನಲ್ಲಿ ಉತ್ತರ ಅಮೇರಿಕಾದಲ್ಲಿ ತನ್ನ ಕೊನೆಯ ಕ್ಲೈಂಬಿಂಗ್ ಪರ್ವತಾರೋಹಣವನ್ನು ಮುಗಿಸಿ ಹಿಂತಿರುಗಿರುವ ಪೂರ್ಣಾ, ಲಡಾಖ್‌ನಲ್ಲಿ ಈ ಮಿಷನ್‌ಗಾಗಿ ಎದುರು ನೋಡುತ್ತಿದ್ದಾರೆ. “ನಾನು ತುಂಬಾ ಉತ್ಸುಕಳಾಗಿದ್ದೇನೆ. ಇಲ್ಲಿಯವರೆಗೆ, ನಾನು ನನ್ನ ಉತ್ಸಾಹಕ್ಕಾಗಿ ಪರ್ವತಗಳನ್ನು ಏರಿದ್ದೇನೆ. ಈ ಬಾರಿ ನಾನು ಅದನ್ನು ಒಂದು ಉತ್ತಮ ಉದ್ದೇಶಕ್ಕಾಗಿ ಏರಲಿದ್ದೇನೆ” ಎಂದು ಪೂರ್ಣಾ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ: PSC Exam: ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಯಲ್ಲಿ ಒಟ್ಟಿಗೆ ಉತ್ತೀರ್ಣರಾದ ತಾಯಿ, ಮಗ!

ಹಿಮಾಚಲ ಪ್ರದೇಶದ ದಿವ್ಯಾ ಠಾಕೂರ್, ಕೇರಳದ ರೆನ್ಸಿ ಥಾಮಸ್, ವೀಡಿಯೋಗ್ರಾಫರ್ ಅಮಿತಾ ನೇಗಿ ಮತ್ತು ಸಂಪರ್ಕ ಅಧಿಕಾರಿ ಕಿಮಿ ಅವರನ್ನು ಒಳಗೊಂಡ ತಂಡವು ಈ ಪರ್ವತಾರೋಹಣ ಯಾತ್ರೆಯಲ್ಲಿ ಸೇರಿದೆ. ಪರ್ವತಾರೋಹಣ ಯಾತ್ರೆಗೆ ತರಬೇತಿ ಮತ್ತು ಲಾಜಿಸ್ಟಿಕ್ಸ್ ಒದಗಿಸುವಲ್ಲಿ ತೊಡಗಿರುವ ಭಾರತೀಯ ಕಂಪನಿಯಾದ ಟ್ರಾನ್ಸ್‌ಸೆಂಡ್ ಅಡ್ವೆಂಚರ್ಸ್ ಈ ಯಾತ್ರೆ, ತರಬೇತಿ ಮತ್ತು ಲಾಜಿಸ್ಟಿಕ್ಸ್ ಅನ್ನು ಬೆಂಬಲಿಸುತ್ತಿದೆ. ಯಾತ್ರೆಯು ಪೂರ್ಣಗೊಂಡ ನಂತರ, ಶಿಖರವನ್ನು ಅಧಿಕೃತವಾಗಿ ಹೆಸರಿಸಲು ಅನುವು ಮಾಡಿಕೊಡುವ ಅಗತ್ಯವಿರುವ ದಾಖಲಾತಿಗಳನ್ನು ಸಲ್ಲಿಸಲು ಯೋಜಿಸಿದ್ದಾರೆ.
Published by:Ashwini Prabhu
First published: