Top Engineering Colleges in Karnataka: ಕರ್ನಾಟಕದ ಟಾಪ್ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಇಲ್ಲಿದೆ

ಎಂಜಿನಿಯರಿಂಗ್‌ ಪದವಿ ಬಗ್ಗೆ ಹೇಳುವುದಾದರೆ ಈಗಿನ ಬಹುತೇಕ ಐಟಿ ಮತ್ತು ನಾನ್ ಐಟಿ ಸಂಸ್ಥೆಗಳು ಎಂಜಿನಿಯರಿಂಗ್ ಪದವಿ ಹೊಂದಿರುವ ವಿದ್ಯಾರ್ಥಿಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳೂ ಸಹ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ನೀವು ಸಹ ಉತ್ತಮ ಎಂಜಿನಿಯರಿಂಗ್‌ ಕಾಲೇಜುಗಳನ್ನು ಹುಡುಕುತ್ತಿದ್ದಾರೆ, ನಿಮಗೆ ಸಹಾಯ ಮಾಡಲು ನಾವು ಕರ್ನಾಟಕದಲ್ಲಿರುವ ಒಂದಿಷ್ಟು ಕಾಲೇಜುಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಹೊತ್ತು ತಂದಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜಗತ್ತು ಮುಂದುವರೆಯುತ್ತಿದ್ದಂತೆ ಉದ್ಯೋಗ (Employment) ರಂಗವು ತೆರೆದುಕೊಳ್ಳುತ್ತಿದೆ. ಸರಿಯಾದ ಉದ್ಯೋಗ, ವೃತ್ತಿ ಜೀವನ ಪ್ರಾರಂಭಿಸಲು ಮೊದಲಿಗೆ ವಿದ್ಯಾಭ್ಯಾಸದ (Education) ಅಡಿಪಾಯ ಉತ್ತಮವಾಗಿರಬೇಕು. ವೈದ್ಯಕೀಯ, ಎಂಜಿನಿಯರಿಂಗ್‌, ಶಿಕ್ಷಣ ಕ್ಷೇತ್ರ ಹೀಗೆ ಯಾವುದೇ ಆಗಲಿ ಉತ್ತಮ ಕಾಲೇಜು, ಉತ್ತಮ ವಿದ್ಯಾಭ್ಯಾಸ ಒದಗಿಸುವ ಸಂಸ್ಥೆಗಳ ಆಯ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಎಂಜಿನಿಯರಿಂಗ್‌ (Engineering) ಪದವಿ ಬಗ್ಗೆ ಹೇಳುವುದಾದರೆ ಈಗಿನ ಬಹುತೇಕ ಐಟಿ ಮತ್ತು ನಾನ್ ಐಟಿ ಸಂಸ್ಥೆಗಳು ಎಂಜಿನಿಯರಿಂಗ್ ಪದವಿ ಹೊಂದಿರುವ ವಿದ್ಯಾರ್ಥಿಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳೂ (Students) ಸಹ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ನೀವು ಸಹ ಉತ್ತಮ ಎಂಜಿನಿಯರಿಂಗ್‌ ಕಾಲೇಜುಗಳನ್ನು (College) ಹುಡುಕುತ್ತಿದ್ದಾರೆ, ನಿಮಗೆ ಸಹಾಯ ಮಾಡಲು ನಾವು ಕರ್ನಾಟಕದಲ್ಲಿರುವ ಒಂದಿಷ್ಟು ಕಾಲೇಜುಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಹೊತ್ತು ತಂದಿದ್ದೇವೆ.

ಮಾನವ ಅಭಿವೃದ್ಧಿ ಇಲಾಖೆಯ ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ರ್ಯಾಂಕಿಂಗ್ ಆಧಾರದ ಮೇಲೆ ಕಾಲೇಜುಗಳ ಬೋಧನೆ, ಕಲಿಕೆ, ಸಂಶೋಧನೆ ಮತ್ತು ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳು ಕಾಲೇಜನ್ನು ಆಯ್ಕೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ 2022ರ ರಾಜ್ಯದ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಇಲ್ಲಿದೆ.

ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ
ಇಲ್ಲಿ ಕರ್ನಾಟಕದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳ ಬಗ್ಗೆ ಪಟ್ಟಿ ನೀಡಲಾಗಿದ್ದು. ಈ ಪಟ್ಟಿಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) - ಸುರತ್ಕಲ್, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ) - ಬೆಂಗಳೂರು, ಮುಂತಾದ ಉನ್ನತ ಕಾಲೇಜುಗಳನ್ನು ಒಳಗೊಂಡಿದೆ.

ಕಾಲೇಜುಗಳನ್ನು ಹೇಗೆ ರೇಟ್‌ ಮಾಡಲಾಗಿದೆ?
ಈ ಸಂಸ್ಥೆಗಳನ್ನು ರೇಟಿಂಗ್ ಮಾಡುವಾಗ ಹಲವಾರು ಪ್ರಮುಖ ಅಂಶಗಳನ್ನು ಪರಿಗಣಿಸಲಾಗಿದೆ. ಶಿಕ್ಷಣದ ಗುಣಮಟ್ಟ, ಉದ್ಯೋಗ ಅಂಕಿಅಂಶ, ಕಾಲೇಜು ಮೂಲಸೌಕರ್ಯ, ವಿದ್ಯಾರ್ಥಿಗಳ ಆದ್ಯತೆಗಳು, ಕಾಲೇಜು ಅಂಗಸಂಸ್ಥೆ ಮತ್ತು ಅನುಮೋದನೆ, ಅಧ್ಯಾಪಕರ ಅನುಪಾತ, ಕಾಲೇಜುಗಳು ಮತ್ತು ಇತರ ಹಲವು ಸೌಲಭ್ಯಗಳ ಮೇಲೆ ಸಂಸ್ಥೆಗಳನ್ನು ರೇಟ್ ಮಾಡಲಾಗಿದೆ.

ಈ ಕೆಳಗೆ ಪಟ್ಟಿ ಮಾಡಲಾದ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಕಾಲೇಜುಗಳು ತಮ್ಮ ಹೆಚ್ಚಿನ ಪ್ಲೇಸ್‌ಮೆಂಟ್ ಪ್ಯಾಕೇಜ್‌ಗಳಿಗೆ ಹೆಸರುವಾಸಿಯಾಗಿದೆ. ವಿವಿಧ ನಿಯತಾಂಕಗಳ ಪ್ರಕಾರ ಈ ಕಾಲೇಜುಗಳು ಹೆಚ್ಚಾಗಿ ಉನ್ನತ ದರ್ಜೆಯನ್ನು ಹೊಂದಿವೆ.

ಪ್ರವೇಶ ವಿಧಾನ
ಬಿ.ಟೆಕ್ ಕೋರ್ಸ್‌ಗೆ ಪ್ರವೇಶ ನೀಡಲು ಕರ್ನಾಟಕದಲ್ಲಿ ಎರಡು ರಾಜ್ಯ ಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು KCET (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) ಅಥವಾ COMEDK UGET ಪರೀಕ್ಷೆಗಳ ಮೂಲಕ ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಪ್ರವೇಶವನ್ನು ಒದಗಿಸಲು JEE ಮುಖ್ಯ ಅಂಕಗಳನ್ನು ಸಹ ಪರಿಗಣಿಸಲಾಗುತ್ತದೆ. ಈ ಪ್ರವೇಶ ಪರೀಕ್ಷೆಗಳ ಅರ್ಜಿ ನಮೂನೆಯು ಆನ್‌ಲೈನ್ ಮೋಡ್ ಮೂಲಕ ಲಭ್ಯವಿರುತ್ತದೆ. ಎಂ.ಟೆಕ್ ಕಾರ್ಯಕ್ರಮದಲ್ಲಿ, ಗೇಟ್ ಪರೀಕ್ಷೆಯ ಮೂಲಕ ಪ್ರವೇಶ ಪಡೆಯಬಹುದು.

ಇದನ್ನೂ ಓದಿ: GATE 2023 Registration: ಗೇಟ್ ನೋಂದಣಿ ಶುರು: ಎಲ್ಲಿ, ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಎಂಜಿನಿಯರಿಂಗ್ ವಿಶೇಷ ವಿಭಾಗಗಳು
ಕರ್ನಾಟಕದಲ್ಲಿ, ವಿವಿಧ ಕಾಲೇಜುಗಳು ಮತ್ತು ಸಂಸ್ಥೆಗಳು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ವಿಭಿನ್ನ ವಿಭಾಗಗಳನ್ನು ನೀಡುತ್ತವೆ. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಲ್ಲಿ ಟ್ರೆಂಡಿಂಗ್ ಆಗಿರುವ ಕೆಲವು ವಿಷಯಗಳೆಂದರೆ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ ಮತ್ತು ಕೆಮಿಕಲ್ ಇಂಜಿನಿಯರಿಂಗ್.

ಕರ್ನಾಟಕದ ಉನ್ನತ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ

  • ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ - 1960, ಸ್ವಾಯತ್ತ

  • ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು - 1999, ಡೀಮ್ಡ್ ವಿಶ್ವವಿದ್ಯಾಲಯ

  • ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ - 1957, ಮಣಿಪಾಲ್ ವಿಶ್ವವಿದ್ಯಾಲಯ


ಇದನ್ನೂ ಓದಿ:  GK Capsule: ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳೇ ನೀವು ತಿಳಿದಿರಲೇಬೇಕಾದ ವಾರದ ಟಾಪ್ ಸುದ್ದಿಗಳು ಇಲ್ಲಿವೆ

  • R. V. ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು - 1963, ಸ್ವಾಯತ್ತ

  • ಪಿ ಇ ಎಸ್ ವಿಶ್ವವಿದ್ಯಾಲಯ, ಬೆಂಗಳೂರು - 1988, ಖಾಸಗಿ ವಿಶ್ವವಿದ್ಯಾಲಯ

  • BMS ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು - 1946, ವಿಟಿಯು (VTU)

  • MS ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು - 1962 ವಿಟಿಯು

  • ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು - 1969 ಡೀಮ್ಡ್

  • ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್‌ - 2013, ಖಾಸಗಿ ವಿಶ್ವವಿದ್ಯಾಲಯ

  • ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಬೆಂಗಳೂರು, 1979 ವಿಟಿಯು

  • ನ್ಯೂ ಹೊರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ - ಬೆಂಗಳೂರು, 2001 ವಿಟಿಯು

  • ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ - ಬೆಂಗಳೂರು, 1979 ವಿಟಿಯು

  • ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮೈಸೂರು - 1946 ವಿಟಿಯು

  • ಎನ್ ಎಂ ಎ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉಡುಪಿ - 1986 ವಿಟಿಯು

  • KLE ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹುಬ್ಬಳ್ಳಿ - 2008 ವಿಟಿಯು

  • KLS Gogte ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿ - 1979 ವಿಟಿಯು

  • BNM ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು - 2001 ವಿಟಿಯು

  • ರೇವಾ ವಿಶ್ವವಿದ್ಯಾಲಯ, ಬೆಂಗಳೂರು - 2002, ವಿಟಿಯು

  • ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ಮೈಸೂರು - 1963, ವಿಟಿಯು

  • CMR ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು -2000, ವಿಟಿಯು

  • ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರು - 1917, ಡೀಮ್ಡ್

  • ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಜೈನ್ ವಿಶ್ವವಿದ್ಯಾಲಯ, ಬೆಂಗಳೂರು - 1990, ಡೀಮ್ಡ್

  • ಸರ್ ಎಂ ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು - 1986 ವಿಟಿಯು

  • JSS ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಶನ್, ಬೆಂಗಳೂರು - 1997 ವಿಟಿಯು

  • ಅಲಯನ್ಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ವಿನ್ಯಾಸ, ಬೆಂಗಳೂರು - 2010, ಖಾಸಗಿ ವಿಶ್ವವಿದ್ಯಾಲಯ

  • BV ಭೂಮರಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಹುಬ್ಬಳ್ಳಿ - 1947 ವಿಟಿಯು

  • RNS ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು- 2001, ವಿಟಿಯು

  • MVJ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು - 1982, ವಿಟಿಯು

  • ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತುಮಕೂರು - 1963, ಖಾಸಗಿ ವಿಶ್ವವಿದ್ಯಾಲಯ

  • SDM ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಧಾರವಾಡ - 1979 , ವಿಟಿಯು

  • ಘೌಸಿಯಾ ಕಾಲೇಜ್ ಆಫ್ ಇಂಜಿನಿಯರಿಂಗ್, ರಾಮನಗರಂ - 1980, ವಿಟಿಯು

  • ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು - 1963 ಸ್ವಾಯತ್ತ

  • ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಮಂಡ್ಯ - 1948, ಸ್ವಾಯತ್ತ

  • GITAM ಸ್ಕೂಲ್ ಆಫ್ ಟೆಕ್ನಾಲಜಿ ಬೆಂಗಳೂರು ಕ್ಯಾಂಪಸ್ - 1980, ಖಾಸಗಿ ವಿಶ್ವವಿದ್ಯಾಲಯ


ಇದನ್ನೂ ಓದಿ:  Celeb Education: ಓದಿಗೂ ಸಾಧನೆಗೂ ನಿಜಕ್ಕೂ ಸಂಬಂಧ ಇಲ್ಲ: ಸದ್ಯದ ಹಾಟ್ ಟಾಪಿಕ್ ಪಾಂಡ್ಯ ಹಿನ್ನೆಲೆ ಗೊತ್ತೇ?

  • BLDEA's V.P.Dr.P.G.ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಬಿಜಾಪುರ - 1980, ವಿಟಿಯು

  • ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು - 2001, ವಿಟಿಯು

  • ಪಿಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮಂಗಳೂರು - 1999, ವಿಟಿಯು

  • ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜು ಬೀದರ್ - 1980, ವಿಟಿಯು

  • ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ - 2010, ಸಾರ್ವಜನಿಕ ವಿಶ್ವವಿದ್ಯಾಲಯ

  • ಪ್ರೌಡದೇವರಾಯ ಇನ್ಸ್ಟಿಟ್ಯೂಟ್ ಟೆಕ್ನಾಲಜಿ, ಬಳ್ಳಾರಿ - 1997 ವಿ.ಟಿ.ಯು

  • ನಾಡಗೀರ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಬೆಂಗಳೂರು - 2004, ವಿಟಿಯು

  • ACS ಕಾಲೇಜ್ ಆಫ್ ಇಂಜಿನಿಯರಿಂಗ್ ಬೆಂಗಳೂರು - 1999, ವಿಟಿಯು

  • ಸಪ್ತಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು - 2003 ವಿಟಿಯು

  • ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ದಾವಣಗೆರೆ - 1979, ವಿಟಿಯು

  • ವಿದ್ಯಾ ವರ್ಧಕ ಇಂಜಿನಿಯರಿಂಗ್ ಕಾಲೇಜು, ಮೈಸೂರು - 1997, ವಿ.ಟಿ.ಯು

  • ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಮಂಗಳೂರು - 2002, ವಿ.ಟಿ.ಯು

  • ಡಾ. ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು - 1979, ವಿಟಿಯು

  • ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್, ಶಿವಮೊಗ್ಗ - 1980 ವಿಟಿಯು.

Published by:Ashwini Prabhu
First published: