• Home
  • »
  • News
  • »
  • education
  • »
  • Memory Power: ಕಲಿತದ್ದು ಮರೆತು ಹೋಗಬಹುದು ಎಂಬ ಭಯವೇ? ಹಾಗಿದ್ದರೆ ಸುಲಭ ಕಲಿಕೆಗೆ ಈ ವಿಧಾನ ಬಳಸಿ

Memory Power: ಕಲಿತದ್ದು ಮರೆತು ಹೋಗಬಹುದು ಎಂಬ ಭಯವೇ? ಹಾಗಿದ್ದರೆ ಸುಲಭ ಕಲಿಕೆಗೆ ಈ ವಿಧಾನ ಬಳಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Memory Power: ಶಾನಾ ಅವರು ಅಂತರವಿಟ್ಟು ಕಲಿಯುವುದು ಸಣ್ಣ ಪ್ರಮಾಣದಲ್ಲಿ ಕಲಿಯುವ ತಂತ್ರವೆಂದು ವಿವರಿಸಿದ್ದಾರೆ. ಪರೀಕ್ಷೆಯ ಹಿಂದಿನ ರಾತ್ರಿ ವಿಶ್ರಾಂತಿ ಇಲ್ಲದೆ ಓದುವುದರಿಂದ ಯಾವುದೇ ಪ್ರಯೋಜನವಿಲ್ಲ.

  • Trending Desk
  • Last Updated :
  • Karnataka, India
  • Share this:

ಮಕ್ಕಳ ಕಲಿಕೆಯ ವಿಷಯದಲ್ಲಿ (Subject) ಎರಡು ತಂತ್ರಗಳಾದ ಅಂತರವಿಟ್ಟು ವಿಷಯವನ್ನು ಅಭ್ಯಸಿಸುವುದು ಹಾಗೂ ಕಲಿತಿರುವ ವಿಷಯವನ್ನು ಮನನ ಮಾಡಿಕೊಳ್ಳುವುದು ಇವೆರಡನ್ನೂ ಸಂಯೋಜಿಸುವುದರಿಂದ ಪರೀಕ್ಷೆಯಲ್ಲಿ (Exam) ಉತ್ತಮ ಅಂಕ (Marks) ಗಳಿಸಲು ಹಾಗೂ ಹವ್ಯಾಸಗಳನ್ನು ಅರಿತುಕೊಳ್ಳಲು ಸಾಧ್ಯವಿದೆ ಎಂದು ಸಂಶೋಧಕರು (Researchers) ಅಭಿಪ್ರಾಯಪಟ್ಟಿದ್ದಾರೆ.


100 ಕ್ಕಿಂತಲೂ ಅಧಿಕ ಸಂಶೋಧನೆಯ ಹಿನ್ನಲೆ


ಅಯೋವಾ ಸ್ಟೇಟ್ ಸೈಕಾಲಜಿ ಪ್ರೊಫೆಸರ್ ಶಾನಾ ಕಾರ್ಪೆಂಟರ್ ಈ ಅಧ್ಯಯನವನ್ನು ಕೈಗೆತ್ತಿಕೊಂಡಿದ್ದು, ಶಿಕ್ಷಣದ ಅಭ್ಯಾಸ ವಿಧಾನದ ಕುರಿತು 100 ವರ್ಷಗಳಿಗಿಂತಲೂ ಅಧಿಕ ಸಂಶೋಧನೆಯನ್ನು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.


ಲ್ಯಾಬ್‌ಗಳು, ತರಗತಿ ಕೊಠಡಿಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಅಧ್ಯಯನ ನಡೆಸುವಾಗ ಅಂತರವಿಟ್ಟು ಅಭ್ಯಸಿಸುವುದು ಅಂದರೆ ಈ ವಿಧಾನದ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಮಾಹಿತಿಯನ್ನು ಅಧ್ಯಯನ ಮಾಡುವುದಾಗಿದೆ. ಆದರೆ ಅಭ್ಯಾಸದ ಅವಧಿಗಳ ನಡುವೆ ಗಣನೀಯ ಸಮಯವನ್ನು ತ್ಯಜಿಸಿ ಅದನ್ನು ಮನನ ಮಾಡಿಕೊಳ್ಳುವ ವಿಧಾನವಾಗಿದೆ.


ಅಂತರ ಕಲಿಕೆ ಸಣ್ಣ ಪ್ರಮಾಣದಲ್ಲಿ ಓದುವ ವಿಧಾನವಾಗಿದೆ


ಶಾನಾ ಅವರು ಅಂತರವಿಟ್ಟು ಕಲಿಯುವುದು ಸಣ್ಣ ಪ್ರಮಾಣದಲ್ಲಿ ಕಲಿಯುವ ತಂತ್ರವೆಂದು ವಿವರಿಸಿದ್ದಾರೆ. ಪರೀಕ್ಷೆಯ ಹಿಂದಿನ ರಾತ್ರಿ ವಿಶ್ರಾಂತಿ ಇಲ್ಲದೆ ಓದುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಶಾನಾ ಅಭಿಪ್ರಾಯಪಟ್ಟಿದ್ದಾರೆ. ಈ ಎರಡೂ ತಂತ್ರಗಳನ್ನು ಜೊತೆಯಾಗಿ ಪ್ರಯೋಗಿಸಬೇಕು ಎಂಬುದು ಶಾನಾ ಅವರ ಸಲಹೆಯಾಗಿದೆ. ಹಾಗಿದ್ದಾಗ ಮಾತ್ರವೇ ಉತ್ತಮ ಅಂಕ ಗಳಿಸಲು ಸಾಧ್ಯ ಎಂಬುದು ಅವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಕೇಂದ್ರವಾಗಿ ಉಳಿಯದ ಅಮೆರಿಕ!


ಪುನರಾವರ್ತಿತ ಶಸ್ತ್ರಚಿಕಿತ್ಸೆಯ ತರಬೇತಿಯನ್ನು ಮೂರು ವಾರಗಳಿಗಿಂತ ಹೆಚ್ಚು ಕಾಲ ಪಡೆದ ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡಿದ್ದು, ಇದೇ ಅಧ್ಯಯನವನ್ನು ಒಂದು ವರ್ಷಗಳ ನಂತರ ಒಂದೇ ದಿನ ತರಬೇತಿ ಪಡೆದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೋಲಿಸಿದಾಗ ಅವರು ಅಷ್ಟೊಂದು ಕ್ಷಿಪ್ರವಾಗಿ ಪ್ರತಿಕ್ರಿಯೆ ನೀಡಿಲ್ಲ ಹಾಗೂ ನೀರಸ ಪ್ರತಿಕ್ರಿಯೆಯನ್ನು ನೀಡಿರುವುದು ವ್ಯಕ್ತವಾಗಿದೆ.


ಸಮಯ ನಿಗದಿಪಡಿಸಿ ಓದಬೇಕಾಗಿಲ್ಲ


ಯಾವುದೇ ಒಂದು ವಿಷಯವನ್ನು ಅಭ್ಯಾಸ ಮಾಡುವ ಸಮಯದಲ್ಲಿ ಎಷ್ಟು ಸಮಯವನ್ನು ನಿಗದಿಪಡಿಸಬೇಕು ಎಂಬುದಕ್ಕೆ ಯಾವುದೇ ನಿಯಮಗಳಿಲ್ಲ ಎಂದು ಶಾನಾ ಕಾರ್ಪೆಂಟರ್ ತಿಳಿಸಿದ್ದಾರೆ. ಕೆಲವೊಮ್ಮೆ ಮರೆತು ಹೋದ ವಿಷಯವನ್ನು ಪುನಃ ಮನನ ಮಾಡುವುದು ಮೂಲ ವಿಷಯವನ್ನು ಮರೆಯಿಸುವುದಿಲ್ಲ ಎಂದು ತಿಳಿಸಿದ್ದಾರೆ.


ಹಿಂದೆ ಕಲಿತದ್ದನ್ನು ಮನನ ಮಾಡಿಕೊಳ್ಳುವ ಅಭ್ಯಾಸದಿಂದ ಇಂದು ಕಲಿತಿರುವ ವಿಷಯಗಳು ಕೂಡ ನೆನಪಿನಲ್ಲಿರುತ್ತದೆ ಎಂದು ಶಾನಾ ತಿಳಿಸಿದ್ದಾರೆ. ಫ್ಲ್ಯಾಶ್‌ಕಾರ್ಡ್‌ಗಳನ್ನು ಬಳಸುವುದು, ಅಭ್ಯಾಸ ಪರೀಕ್ಷೆಗಳು ಹಾಗೂ ಮುಕ್ತ ಬರವಣಿಗೆಯ ಅಭ್ಯಾಸಗಳು ಸೇರಿದಂತೆ ಮನನ ಮಾಡುವುದು ಹಲವಾರು ವಿಧಾನಗಳನ್ನು ಒಳಗೊಂಡಿರಬಹುದು. ಇದರಿಂದ ಕಲಿಯುವವರಿಗೆ ಏನು ಕಲಿಯಬೇಕು ಹಾಗೂ ಏನನ್ನು ಕಲಿಯಬಾರದು ಎಂಬುದನ್ನು ತಿಳಿಸುತ್ತದೆ.


ಹೆಚ್ಚು ಸಮಯ ಮನನ ಮಾಡುವುದರಿಂದ ಏನು ಪ್ರಯೋಜನ?


ಸಾಮಾನ್ಯವಾಗಿ ಮನನ ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ವ್ಯಯಿಸುವುದರಿಂದ ಈ ವಿಧಾನ ಹೆಚ್ಚಿನ ಮಾಹಿತಿಯನ್ನು ಉಳಿಸಿಕೊಳ್ಳುವುದನ್ನು ತೋರಿಸುತ್ತವೆ ಎಂದು 200 ಕ್ಕೂ ಹೆಚ್ಚು ಅಧ್ಯಯನಗಳು ತೋರಿಸಿದೆ. ಅದು ಪುನಃ ಮನನ ಮಾಡಿಕೊಳ್ಳದ ಅಭ್ಯಾಸಗಳ ವಿಧಾನಗಳಿಗೆ ಹೋಲಿಸಿದಾಗ ಅಂದರೆ ಉದಾಹರಣೆಗೆ, ಪಠ್ಯಪುಸ್ತಕವನ್ನು ಮರು-ಓದುವುದು ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬುದು ತಿಳಿದು ಬಂದಿದೆ.


ಇದನ್ನೂ ಓದಿ: Reading Habit: ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸಲು ಇಲ್ಲಿದೆ ಸಲಹೆ


ಲೇಖಕರು ಓದುವ ಸಮಯದಲ್ಲಿ ಅಂತರವಿಟ್ಟುಕೊಂಡು ವಿಷಯವನ್ನು ಪುನಃ ಪುನಃ ಅಭ್ಯಾಸ ಮಾಡುವುದರಿಂದ ಹಾಗೂ ಈ ಹಿಂದೆ ಓದಿದ ವಿಷಯವನ್ನು ನೆನಪು ಮಾಡಿಕೊಳ್ಳುವುದು ಜನರಿಗೆ ಮಾಹಿತಿಯನ್ನು ನೆನಪಿಟ್ಟುಕೊಳ್ಳಲು ಉತ್ತಮ ಅವಕಾಶವನ್ನೊದಗಿಸುತ್ತದೆ ಎಂದು ವಾದಿಸಿದ್ದಾರೆ.


ಮರೆಗುಳಿಗಳಿಗೂ ಈ ವಿಧಾನ ಸಹಕಾರಿ


ವಿಷಯವನ್ನು ಮರೆಯುವುದು ಬಹಳ ಸಹಜವಾದ ವಿಷಯವಾಗಿದ್ದು, ಮರೆಯಬಾರದೆಂದು ನೀವು ಎಷ್ಟು ಪ್ರಯತ್ನಿಸಿದರೂ ಮರೆಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ, ಓದಿದ್ದನ್ನು ಮನನ ಮಾಡಿಕೊಳ್ಳುವುದು ಮತ್ತು ಅಂತರವನ್ನಿಟ್ಟುಕೊಂಡು ಪದೇಪದೇ ಒಂದು ವಿಷಯವನ್ನು ಓದುವುದು ಮರೆಯುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂದು ಕಾರ್ಪೆಂಟರ್ ತಿಳಿಸಿದ್ದಾರೆ.

First published: