• Home
  • »
  • News
  • »
  • education
  • »
  • Teachers Transfer: ಶಿಕ್ಷಕರ ವರ್ಗಾವಣೆಗೆ ಅಂಗೀಕಾರ, ಸಿಕ್ಕಿದೆ ಸಚಿವರ ಸಮ್ಮತಿ!

Teachers Transfer: ಶಿಕ್ಷಕರ ವರ್ಗಾವಣೆಗೆ ಅಂಗೀಕಾರ, ಸಿಕ್ಕಿದೆ ಸಚಿವರ ಸಮ್ಮತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೊಸ ತಿದ್ದುಪಡಿಗಳ ಪ್ರಕಾರ ಮಸೂದೆಯು ಈಗ ಘಟಕದ ಒಳಗೆ ಅಥವಾ ಹೊರಗೆ ಪರಸ್ಪರ ವರ್ಗಾವಣೆಯನ್ನು ಅನುಮತಿಸಿದೆ. ಆದರೆ ಇಬ್ಬರೂ ಶಿಕ್ಷಕರು ಕನಿಷ್ಠ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ ಮಾತ್ರ ಷರತ್ತಿನಡಿಯಲ್ಲಿ ಈ ವರ್ಗಾವಣೆಯನ್ನು ಮಾಡಬಹುದು.

  • News18 Kannada
  • Last Updated :
  • Karnataka, India
  • Share this:

ಶಿಕ್ಷಕರ ವರ್ಗಾವಣೆಗೆ (Teachers Transfer) ಸಂಬಂಧಿಸಿದಂತೆ ಇದೀಗ ಪರಿಶೀಲನೆಗೆ ಅನುಮೋದನೆ ದೊರೆತಿದೆ. ಶಿಕ್ಷಕರ ವರ್ಗಾವಣೆ ಕಾಯಿದೆಗೆ ಅನುಮತಿ ನೀಡಿರುವ ಸರಕಾರ (Government) ಶೀಘ್ರದಲ್ಲೇ ವರ್ಗಾವಣೆ ಕರಡು ನಿಯಮಗಳನ್ನು ರೂಪಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿ ಪರಿಶೀಲಿಸುವ ಸಾಧ್ಯತೆಗಳಿವೆ (Possibility).ಕಳೆದ ಬಾರಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಶಿಕ್ಷಕರ (Teacher) ವರ್ಗಾವಣೆ ಕಾಯಿದೆಗೆ ಅನುಮೋದನೆ ಪಡೆಯಲಾಯಿತು. ಕಾನೂನಿನ ಪ್ರಕಾರ ಇದಕ್ಕೆ ಸಚಿವರ ಒಪ್ಪಿಗೆ ಬೇಕಾಗಿದ್ದು, ಮಂಗಳವಾರ ಈ ಕುರಿತು ಅನುಮೋದನೆ ಸಿಕ್ಕಿದೆ.


ಮುಂದಿನ ದಿನಗಳಲ್ಲಿ ವರ್ಗಾವಣೆ ಕರಡು ನಿಯಮಗಳನ್ನು ರೂಪಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿದುಬಂದಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಿದ್ದು, ಆನಂತರ ಅಂತಿಮ ಅಧಿಸೂಚನೆ ಮತ್ತು ವೇಳಾಪಟ್ಟಿ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.


ಶಿಕ್ಷಕರ ಬೇಡಿಕೆಗೆ ಅವಕಾಶ
ಶಿಕ್ಷಕರು ಹಲವು ವರ್ಷಗಳಿಂದ ಸಲ್ಲಿಸಿದ ಬೇಡಿಕೆಯನ್ನು ಆಧರಿಸಿ ಶಿಕ್ಷಕರ ವರ್ಗಾವಣೆ ಕಾಯಿದೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಇದರಲ್ಲಿ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಎಂಬ ಮಿತಿಯನ್ನು ತೆಗೆದು ಹಾಕಲಾಗಿದೆ. ಹಲವು ವರ್ಷಗಳ ಬೇಡಿಕೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ, ಮಲೆನಾಡು ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕ್ಷೇತ್ರಗಳಿಗೆ ವರ್ಗಾವಣೆಯಾಗುವ ಶಿಕ್ಷಕರಿಗೆ ವರ್ಗಾವಣೆ ಮಿತಿ ಸಡಿಲಿಕೆ ಮಾಡಿದೆ. ಶೇ.25ಕ್ಕಿಂತ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವ ಕ್ಷೇತ್ರಗಳ ಒಳಗೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ.


ಮರು ವರ್ಗಾವಣೆ ಬಯಸುವವರಿಗೆ ಆದ್ಯತೆ
ಮರು ಹೊಂದಾಣಿಕೆ ಸಂದರ್ಭದಲ್ಲಿ ಶಿಕ್ಷಕರು ಹಿಂದಿನ ಶಾಲೆಗಳಲ್ಲಿಸಧಿಲ್ಲಿಧಿಸಿಧಿದ ಸೇವೆಯನ್ನು ಪರಿಗಣಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಪತಿ-ಪತ್ನಿಯರಿಗೆ ಸಂಬಂಧಿಸಿದಂತೆ ಶೈಕ್ಷಣಿಕ ತಾಲೂಕಿನಲ್ಲಿ ಹುದ್ದೆ ಖಾಲಿ ಇಲ್ಲದಿದ್ದರೆ ಆ ಜಿಲ್ಲೆಯ ಬೇರೆ ತಾಲೂಕಿನಲ್ಲೂ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುತ್ತದೆ. ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಶಾಲೆಗಳಿಗೆ ಮರು ವರ್ಗಾವಣೆ ಬಯಸುವವರಿಗೆ ಆದ್ಯತೆ ನೀಡಲಾಗುವುದು.


ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ, ರಾಷ್ಟ್ರಮಟ್ಟದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ರಿಜಿಸ್ಟರ್ ಮಾಡಿ


ಶೇ.25ಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇರುವ ಕ್ಷೇತ್ರಗಳಲ್ಲಿ ಒಂದೇ ಕಡೇ ಹತ್ತು ವರ್ಷ ನಿರಂತರ ಸೇವೆ ಮತ್ತು ಎಲ್ಲಾ ವೃಂದಗಳಲ್ಲಿ 15 ವರ್ಷ ನಿರಂತರ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಕ್ಷೇತ್ರದಿಂದ ಹೊರಗೆ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ.



15 ಸಾವಿರ ಶಾಲಾ ಶಿಕ್ಷಕರ ನೇಮಕ
ಈ ಮೇಲೆ  ತಿಳಿಸಿರುವಂತೆ 15 ಸಾವಿರ ಶಾಲಾ ಶಿಕ್ಷಕರ ನೇಮಕ ಸಂಬಂಧಿಸಿದ 1:1 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಈ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಹಿಂದೆ ದಾಖಲಾತಿ ಪರಿಶೀಲನೆಗೆ ಒಳಪಡಿಸಲಾಗಿತ್ತು. ಇದಾದ ನಂತರ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನಿಗದಿ ಮಾಡಿದ್ದು ಈ ವಾರದಲ್ಲಿ ಬಿಡುಗಡೆ ಮಾಡುವುದಾಗಿ ಶಿಕ್ಷಣ ಸಚಿವ ಬಿ.ನಾಗೇಶ್‌ ಟ್ಟೀಟ್​ನಲ್ಲಿ ತಿಳಿಸಿದ್ದಾರೆ.


ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೆ ಮೊದಲು ವರ್ಗಾವಣೆ
ಪ್ರತಿ ವರ್ಷ ಶಿಕ್ಷಕರ ವರ್ಗಾವಣೆಯನ್ನು ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೆ ಮೊದಲು ಆರಂಭಿಸಬೇಕು. ಹಾಗಾದಾಗ ಮಾತ್ರ ಶೈಕ್ಷಣಿಕ ವರ್ಷ ಆರಂಭದ ಸಮಯಕ್ಕೆ ಸರಿಯಾಗಿ ಶಿಕ್ಷಕರು ಶಾಲೆಗಳಿಗೆ ಹೋಗಿ ಸೇರಿಕೊಳ್ಳಬಹುದು. ಮತ್ತು ಪಾಠ ಆರಂಭ ಮಾಡಬಹುದು. ಈ ನಿಟ್ಟಿನಲ್ಲೇ ಶಿಕ್ಷಣ ಇಲಾಖೆಯು ಕಾರ್ಯಪ್ರವೃತ್ತವಾಗಿದ್ದು, ಈ ವರ್ಷದೊಳಗೆ ವರ್ಗಾವಣೆ ಪ್ರಧಿಕ್ರಿಯೆ ಆರಂಭಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಿದೆ.


ಪರಸ್ಪರ ವರ್ಗಾವಣೆಯನ್ನು ಅನುಮತಿಸಿದೆ
ಹೊಸ ತಿದ್ದುಪಡಿಗಳ ಪ್ರಕಾರ ಮಸೂದೆಯು ಈಗ ಘಟಕದ ಒಳಗೆ ಅಥವಾ ಹೊರಗೆ ಪರಸ್ಪರ ವರ್ಗಾವಣೆಯನ್ನು ಅನುಮತಿಸಿದೆ. ಆದರೆ ಇಬ್ಬರೂ ಶಿಕ್ಷಕರು ಕನಿಷ್ಠ 5 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ ಮಾತ್ರ ಷರತ್ತಿನಡಿಯಲ್ಲಿ ಈ ವರ್ಗಾವಣೆಯನ್ನು ಮಾಡಬಹುದು.

First published: