• Home
  • »
  • News
  • »
  • education
  • »
  • Kannada Love: ತಮಿಳುನಾಡಿನ ಶಾಲಾ ಮಕ್ಕಳಲ್ಲಿ ಕನ್ನಡ ಪ್ರೀತಿ, ಇವರು ಕನ್ನಡ ಶಾಲೆಗೇ ಹೋಗೋದು

Kannada Love: ತಮಿಳುನಾಡಿನ ಶಾಲಾ ಮಕ್ಕಳಲ್ಲಿ ಕನ್ನಡ ಪ್ರೀತಿ, ಇವರು ಕನ್ನಡ ಶಾಲೆಗೇ ಹೋಗೋದು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ತಮಿಳುನಾಡಿನ ಮಕ್ಕಳಲ್ಲಿ ಹೆಚ್ಚಿದ ಕನ್ನಡ ಪ್ರೀತಿ. ಹೊರ ರಾಜ್ಯದಿಂದ ಗಡಿಯಲ್ಲಿನ ಗ್ರಾಮಗಳಿಂದ ಕನ್ನಡ ಶಾಲೆಗೆ ಬರುವ ಮಕ್ಕಳು ಉತ್ಸಾಹದಿಂದ ಕನ್ನಡ ಕಲಿಯುತ್ತಿದ್ದಾರೆ.

  • News18 Kannada
  • Last Updated :
  • New Delhi, India
  • Share this:

ತಮಿಳು ನಾಡಿನ ಮಕ್ಕಳು ಕನ್ನಡ ಕಲಿಯಲು ಆಸಕ್ತಿ (Interest) ಹೊಂದಿದ್ದಾರೆ. ಎಷ್ಟೋ ಮಕ್ಕಳು ತಮಿಳಿನ ಶಾಲೆಗಳಿದ್ದರೂ ಸಹ ಕನ್ನಡ ಶಾಲೆಗೆ (Kannada School) ಆಗಮಿಸುತ್ತಿದ್ದಾರೆ. ಇದರಲ್ಲಿ ಮ್ಕಕಳಲ್ಲಿನ (Students) ಕನ್ನಡ ಪ್ರೀತಿ ಎದ್ದು ತೋರುತ್ತಿದೆ. ಮಾಲೂರು ತಾಲೂಕು ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಸಮನೆಗಳು ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ತಮಿಳುನಾಡಿನ (Tamilnadu) 5 ಮಂದಿ ಮಕ್ಕಳು ಕನ್ನಡ ಕಲಿಯಲು ಬರುತ್ತಿದ್ದು ತಮಿಳುನಾಡಿನ ಮಕ್ಕಳ ಕನ್ನಡ ಪ್ರೀತಿ, ಭಾಷಾಭಿಮಾನ ಹಾಗೂ ಭಾಷಾ ಸಾಮರಸ್ಯಕ್ಕೆ ಈ ಸರ್ಕಾರಿ ಶಾಲೆಯು ಸಾಕ್ಷಿಯಾಗಿದೆ.


ಮಾಲೂರು ತಾಲೂಕು ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಮ ಪಂಚಾಯ್ತಿ ಅಡಿಯಲ್ಲಿ ಹೊಸಮನೆಗಳು ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ತಮಿಳುನಾಡಿನ 5 ಮಂದಿ ಮಕ್ಕಳು ಕನ್ನಡ ಕಲಿಯಲು ಬರುತ್ತಿದ್ದು ತಮಿಳುನಾಡಿನ ಮಕ್ಕಳ ಕನ್ನಡ ಪ್ರೀತಿ ಹಾಗೂ ಭಾಷಾಭಿಮಾನ ಹಾಗೂ ಭಾಷಾ ಸಾಮರಸ್ಯಕ್ಕೆ ಈ ಸರ್ಕಾರಿ ಶಾಲೆಯು ಸಾಕ್ಷಿಯಾಗಿದೆ. ಹೊಸಮನೆ ಗ್ರಾಮದಲ್ಲಿ 24 ಮನೆಗಳಿದ್ದು ಬಹುತೇಕ ಕುಟುಂಬಗಳು ಕೂಲಿಯಿಂದ ಜೀವನ ನಡೆಸುತ್ತಿದೆ.


ಒಟ್ಟು 7 ಮಂದಿ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ
ಗ್ರಾಮದಲ್ಲಿನ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 7 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಗ್ರಾಮದ ಇಬ್ಬರು ಮಾತ್ರ ಶಾಲೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.  ಶಾಲೆಗೆ ತೀರ ಸಮೀಪದಲ್ಲಿರುವ  ನೆರೆಯ ತಮಿಳುನಾಡು ರಾಜ್ಯದ ಹಳ್ಳಿಯಿಂದ 5 ಮಂದಿ ವಿದ್ಯಾರ್ಥಿಗಳು ಗ್ರಾಮದ ಕನ್ನಡ ಶಾಲೆಗೆ ಸೇರಿ ಕನ್ನಡ ಕಲಿಯುತ್ತಿರುವುದು ಎರಡು ರಾಜ್ಯಗಳ ಬಾಂಧವ್ಯವನ್ನೂ ಕೂಡ ಹೆಚ್ಚಿಸಿದೆ. ಭಾಷಾ ಪ್ರೇಮವನ್ನೂ ಸಹ ಹೆಚ್ಚಿಸಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ.


ವಿದ್ಯಾರ್ಥಿಗಳ ವಿವರ
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಚಾಪರಪಲ್ಲಿ ಎಂಬ ಗ್ರಾಮದ ಐವರು ವಿದ್ಯಾರ್ಥಿಗಳು ತಮ್ಮ ಗ್ರಾಮದಲ್ಲಿ ತಮಿಳುನಾಡಿನ ಸರ್ಕಾರಿ ಶಾಲೆ ಇದ್ದರೂ ಕನ್ನಡ ಶಾಲೆಯಲ್ಲೇ ಕಲಿಯಬೇಕೆನ್ನುವ ದೃಷ್ಟಿಯಿಂದ ಇಲ್ಲಿಗೆ ಬರುತ್ತಿರುವುದು ವಿಷೇಶ.  ಒಂದನೇ ತರಗತಿಗೆ ಜಿ.ಕುಮಾರ್‌, ಎರಡನೇ ತರಗತಿಗೆ ಶಂಕರನ್‌ ಹಾಗೂ ಪ್ರಜ್ವಲ್‌, ಮೂರನೇ ತರಗತಿಗೆ ನಿತಿನ ಹಾಗೂ ಐದನೇ ತರಗತಿಗೆ ದೀಪಾ ಎಂಬ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ.


ಇದನ್ನೂ ಓದಿ: UPSC CSE ಪರೀಕ್ಷೆಗಳ ವೇಳಾಪಟ್ಟಿ ಇಲ್ಲಿದೆ ನೋಡಿ! ಫೆಬ್ರವರಿ 1 ರಿಂದ ಪ್ರಿಲಿಮ್ಸ್ ಪರೀಕ್ಷೆಗೆ ನೋಂದಾಯಿಸಿ


ಬರೆಯಲು ಮತ್ತು ಓದಲು ಕಲಿತ ಮಕ್ಕಳು
ಕನ್ನಡವನ್ನು ಸ್ಪಷ್ಟವಾಗಿ ಬರೆಯಲು ಮತ್ತು ಓದಲು ಕಲಿತಿದ್ದಾರೆ. ಪ್ರತಿದಿನ ಶಾಲೆಗೆ ಆಗಮಿಸುವ ಮಕ್ಕಳು ಕಲಿಯುತ್ತಿರುವುದು ಮಾತನಾಡುವುದು ವಿಶೇಷವಾಗಿದೆ. ಶಾಲೆಯ ಶಿಕ್ಷಕ ಸತ್ಯನಾರಾಯಣೆ ಹೇಳುವಂತೆ ತಮಿಳುನಾಡಿನಿಂಡ ಬರುವ ಐವರು ವಿದ್ಯಾರ್ಥಿಗಳು ಬಹಳ ಚೆನ್ನಾಗಿ ನಮ್ಮ ಶಾಲೆಯಲ್ಲಿ ಕನ್ನಡ ಕಲಿಯುತ್ತಿದ್ದಾರೆ. ಒಟ್ಟು 7 ಮಂದಿ ಇದ್ದು 5 ಮಂದಿ ನೆರೆಯ ರಾಜ್ಯದವರು ಇಬ್ಬರು ನಮ್ಮ ರಾಜ್ಯದವರು, ಎಲ್ಲಾ ಮಕ್ಕಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ . ಶಿಕ್ಷಕರು ಕೂಡ ಈ ಬಗ್ಗೆ ಒಳ್ಳೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.


ಗಡಿಯಲ್ಲಿನ ಗ್ರಾಮಗಳಿಂದ ಕನ್ನಡ ಶಾಲೆಗೆ
ಹೊರ ರಾಜ್ಯದಿಂದ ಗಡಿಯಲ್ಲಿನ ಗ್ರಾಮಗಳಿಂದ ಕನ್ನಡ ಶಾಲೆಗೆ ಬರುವ ಮಕ್ಕಳು ಉತ್ಸಾಹದಿಂದ ಕನ್ನಡ ಕಲಿಯುತ್ತಿದ್ದಾರೆ. ಹೀಗಿರುವಾಗ ಮಕ್ಕಳ ಕಲಿಕೆಗೆ ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ ಹಾಗಾಗಿ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತಿದೆ.


ಚಂದ್ರಕಲಾ, ಮಾಲೂರು ಬಿಇಒ ಹೊರ ರಾಜ್ಯದಿಂದ ಗಡಿ ಗ್ರಾಮಗಳಿಂದ ಕನ್ನಡ ಶಾಲೆಗೆ ಮಕ್ಕಳು ಬಂದು ಕನ್ನಡ ಕಲಿಯುತ್ತಿದ್ದಾರೆ ಇದರಿಂದ ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ ಇದು ನಮ್ಮ ಗುರಿ ಇಂತಹ ಸಮಯದಲ್ಲಿ ಶಾಲೆಗೆ ಮೂಲಸೌಲಭ್ಯಗಳನ್ನು ಒದಗಿಸಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ.

First published: