• Home
 • »
 • News
 • »
 • education
 • »
 • Success Story: ಸ್ವೀಟ್ ಮಾರುವವರ ಮಗ ಈಗ ಇಂಟರ್ ನ್ಯಾಷನಲ್ ಕ್ರೀಡಾಪಟು, 15ರ ಬಾಲಕನ ಸಾಧನೆ

Success Story: ಸ್ವೀಟ್ ಮಾರುವವರ ಮಗ ಈಗ ಇಂಟರ್ ನ್ಯಾಷನಲ್ ಕ್ರೀಡಾಪಟು, 15ರ ಬಾಲಕನ ಸಾಧನೆ

ಅರ್ಜುನ್

ಅರ್ಜುನ್

ದೆಹಲಿಯ ಅರ್ಜುನ್ ಅವರು ಶಾಲಿಮಾರ್ ಬಾಗ್ ನ ಮಾಡರ್ನ್ ಪಬ್ಲಿಕ್ ಸ್ಕೂಲ್ ನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. 15 ವರ್ಷದ ಈ ಅಥ್ಲೀಟ್ ಪ್ರಸ್ತುತ 18 ವರ್ಷದೊಳಗಿನ ಬಾಲಕರ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದಲ್ಲಿ ಮೊದಲನೇ, ಏಷ್ಯಾದಲ್ಲಿ ಮೂರನೇ ಮತ್ತು ವಿಶ್ವದಲ್ಲಿ 10ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದೆ ಓದಿ ...
 • Share this:

  ಎಲ್ಲಾ ಸೌಲಭ್ಯಗಳನ್ನು ನೀಡಿದ್ದರೂ ಸಹ ಎಷ್ಟೋ ಜನರಿಗೆ ಸಾಧನೆ (Achievement) ಎನ್ನುವುದು ತುಂಬಾನೇ ಎತ್ತರದ, ಮುಟ್ಟಲಾಗದ ಶಿಖರವಾಗಿರುತ್ತದೆ. ಅದೇ ಇನ್ನೂ ಕೆಲವು ಪ್ರತಿಭಾವಂತರು (Talented) ಯಾವುದೇ ಸೌಲಭ್ಯಗಳು ಇಲ್ಲದೆ ಹೋದರೂ ಸಹ ಕಠಿಣ ಪರಿಶ್ರಮದಿಂದ ಸಾಧನೆ ಮಾಡುವಲ್ಲಿ ಹಿಂದೆ ಬೀಳುವುದಿಲ್ಲ. ಇಲ್ಲೊಬ್ಬ ಯುವ ಅಥ್ಲೀಟ್ ಇದ್ದಾರೆ, ಅವರು ಈ ಮಾತಿಗೆ ಉದಾಹರಣೆಯಂತಿದ್ದಾರೆ ನೋಡಿ. ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ಖ್ಯಾತ ಅಥ್ಲೀಟ್ ಅರ್ಜುನ್, ಕುವೈತ್ ನಲ್ಲಿ ನಡೆದ 4ನೇ ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2022 (ಎವೈಎಸಿ) ನಲ್ಲಿ ಜಾವೆಲಿನ್ ಥ್ರೋನಲ್ಲಿ, ಜಾವೆಲಿನ್ ಅನ್ನು ಸುಮಾರು 70.98 ಮೀಟರ್ ದೂರಕ್ಕೆ ಎಸೆಯುವುದರ ಮೂಲಕ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.


  ದೆಹಲಿಯ ಅರ್ಜುನ್ ಮಾಡಿದ ಸಾಧನೆ ಎಂತದ್ದು ನೋಡಿ..


  ದೆಹಲಿಯ ಅರ್ಜುನ್ ಅವರು ಶಾಲಿಮಾರ್ ಬಾಗ್ ನ ಮಾಡರ್ನ್ ಪಬ್ಲಿಕ್ ಸ್ಕೂಲ್ ನಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. 15 ವರ್ಷದ ಈ ಅಥ್ಲೀಟ್ ಪ್ರಸ್ತುತ 18 ವರ್ಷದೊಳಗಿನ ಬಾಲಕರ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದಲ್ಲಿ ಮೊದಲನೇ ಮತ್ತು ಏಷ್ಯಾದಲ್ಲಿ ಮೂರನೇ ಮತ್ತು ವಿಶ್ವದಲ್ಲಿ 10ನೇ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.


  ಅವರು ಕಳೆದ ಎರಡು ವರ್ಷಗಳಿಂದ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ತರಬೇತಿ ಪಡೆಯುತ್ತಿದ್ದರು. 17ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2022 ರಲ್ಲಿ ಅರ್ಜುನ್ ಅವರ ಅತ್ಯುತ್ತಮ ಪ್ರದರ್ಶನವು ಅವರಿಗೆ ಚಿನ್ನದ ಪದಕವನ್ನು ಗೆದ್ದು ಕೊಟ್ಟಿತ್ತು ಮತ್ತು 4ನೇ ಎವೈಎಸಿ ಗಾಗಿನ ಭಾರತೀಯ ತಂಡದಲ್ಲಿ ಅವರ ಹೆಸರನ್ನು ದೃಢಪಡಿಸಿತು.


  ಅರ್ಜುನ್ ಅವರ ತಂದೆ ಸ್ವೀಟ್ ವೆಂಡರ್ ಆಗಿ ಕೆಲಸ ಮಾಡುತ್ತಾರೆ..


  ಅರ್ಜುನ್ ಅವರ ತಂದೆ ದೆಹಲಿಯಲ್ಲಿ ಒಬ್ಬ ಸ್ವೀಟ್ ವೆಂಡರ್, ಎಂದರೆ ಸಿಹಿ ತಿನಿಸುಗಳ ಮಾರಾಟಗಾರರಾಗಿದ್ದಾರೆ ಮತ್ತು ಅವರ ತಾಯಿ ಒಬ್ಬ ಗೃಹಿಣಿಯಾಗಿದ್ದಾರೆ. ತನ್ನ ತಂದೆ ಸಹ ಡಿಸ್ಕಸ್ ಥ್ರೋನ ಕ್ರೀಡಾಪಟುವಾಗಿದ್ದರು ಮತ್ತು ಅವರು ಅರ್ಜುನ್ ಅವರನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಿದರು ಎಂದು ಅರ್ಜುನ ಅವರು ಹೇಳುತ್ತಾರೆ. ತನ್ನ ಪೋಷಕರು ಯಾವಾಗಲೂ ಶೈಕ್ಷಣಿಕ ಮತ್ತು ಕ್ರೀಡೆಗಳೆರಡರಲ್ಲೂ ತನ್ನನ್ನು ಬೆಂಬಲಿಸಿದ್ದಾರೆ ಮತ್ತು ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಬೇಕೆಂದು ಬಯಸುತ್ತಾರೆ ಎಂದು ಅರ್ಜುನ್ ಅವರು ಹೇಳುತ್ತಾರೆ.


  ಇದನ್ನೂ ಓದಿ: Success Story: ಡಿಗ್ರಿಯಲ್ಲಿ ಅನೇಕ ಸಬ್ಜೆಕ್ಟ್ ಫೇಲ್ ಆಗಿದ್ದ ಹುಡ್ಗ IAS ಆದ ಸ್ಟೋರಿ ಇಲ್ಲಿದೆ


  "ನಾನು ಕಳೆದ ನಾಲ್ಕು ವರ್ಷಗಳಿಂದ ಜಾವೆಲಿನ್ ಥ್ರೋ ಅಭ್ಯಾಸ ಮಾಡುತ್ತಿದ್ದೇನೆ ಮತ್ತು ನನ್ನ ತರಬೇತುದಾರರಾದ ರಮಣ್ ಝಾ ನನ್ನ ತರಬೇತಿಯಲ್ಲಿ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ" ಎಂದು ಅರ್ಜುನ್ ಹೇಳಿದರು. ಅರ್ಜುನ್ ಇನ್ನೂ ಅತ್ತ್ಯುತ್ತಮವಾದ ತರಬೇತಿಯನ್ನು ಪಡೆಯಲು ಸರ್ಕಾರದಿಂದ ಸ್ವಲ್ಪ ಸಹಾಯವನ್ನು ಬಯಸಿದ್ದಾರೆ. ಅವರ ಶಾಲೆ ಇಲ್ಲಿಯವರೆಗೆ ಅವರ ಯಶಸ್ಸಿಗೆ ಏಕೈಕ ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.


  ಶಾಲಾ ಆಟದ ಮೈದಾನದಲ್ಲಿ ಶಾಲಾ ಸಮಯದಲ್ಲಿ ತರಬೇತಿ ನೀಡಲು ಅವರಿಗೆ ಅನುಮತಿಸಲಾಗಿದೆ ಮತ್ತು ಅವರು ಹೊರಗೆ ಬೇರೆ ಎಲ್ಲೂ ಸಹ ತರಬೇತಿಯನ್ನು ತೆಗೆದುಕೊಳ್ಳುವುದಿಲ್ಲ. ಶಾಲೆಯೇ ಅವರಿಗೆ ತರಬೇತಿಗಾಗಿ ಸಲಕರಣೆಗಳನ್ನು ಸಹ ಒದಗಿಸಿರುವುದಾಗಿ ತಿಳಿದುಬಂದಿದೆ.


  ಚಾಂಪಿಯನ್ಶಿಪ್ ಗಾಗಿ ಅರ್ಜುನ್ ಅವರ ತಯಾರಿ ಹೇಗಿತ್ತು?


  ಚಾಂಪಿಯನ್ಶಿಪ್ ಗಾಗಿ ತಮ್ಮನ್ನು ತಾವು ಹೇಗೆ ಸಿದ್ಧಪಡಿಸಿಕೊಂಡರು ಎಂದು ಕೇಳಿದಾಗ, ಅರ್ಜುನ್ ಅವರು "ನಾನು ಪ್ರತಿದಿನ ಕನಿಷ್ಠ ಮೂರರಿಂದ ನಾಲ್ಕು ಗಂಟೆಗಳ ಕಾಲ ಮೈದಾನದಲ್ಲಿ ಕಳೆದಿದ್ದೇನೆ ಮತ್ತು ಕೆಲವು ದಿನಗಳು ಶಾಲಾ ಸಮಯದ ನಂತರವೂ ಸಹ ನಾನು ಅಭ್ಯಾಸ ಮಾಡುತ್ತಿದ್ದೆ. ನನ್ನ ತರಗತಿಗಳ ಸಮಯಕ್ಕೆ ಧಕ್ಕೆಯಾಗದಂತೆ ಸಮಯವನ್ನು ಹೊಂದಿಸಿಕೊಂಡೆ, ಆದ್ದರಿಂದ ನಾನು ಕ್ರೀಡೆ ಮತ್ತು ಓದು ಎರಡನ್ನು ಒಟ್ಟಿಗೆ ನಿರ್ವಹಿಸಲು ಸಾಧ್ಯವಾಯಿತು" ಎಂದು ಅರ್ಜುನ್ ಅವರು ಹೇಳಿದರು.


  ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿದ ಅರ್ಜುನ್ ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ತಮ್ಮ ಆದರ್ಶವನ್ನಾಗಿ ನೋಡುತ್ತಾರೆ ಮತ್ತು ಒಂದು ದಿನ ಒಲಿಂಪಿಕ್ಸ್ ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಬಯಸುತ್ತಾರೆ ಎಂದು ಹೇಳಿದರು.


  ಕುವೈತ್ ನಲ್ಲಿ ಅಕ್ಟೋಬರ್ 16 ರಂದು ಮುಕ್ತಾಯಗೊಂಡ 4ನೇ ಎವೈಎಸಿಯಲ್ಲಿ ಏಷ್ಯಾದ 30 ದೇಶಗಳು ಭಾಗವಹಿಸಿದ್ದವು. ನಾಲ್ಕು ದಿನಗಳ ಕಾಲ ನಡೆದ ಚಾಂಪಿಯನ್ಶಿಪ್ ನಲ್ಲಿ ಭಾರತವು 6 ಚಿನ್ನ, 11 ಬೆಳ್ಳಿ ಮತ್ತು 7 ಕಂಚು ಸೇರಿದಂತೆ ಒಟ್ಟು 24 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

  Published by:Kavya V
  First published: