Online Classes: ಮತ್ತೆ ದೇಶಾದ್ಯಂತ ಶಾಲೆಗಳಲ್ಲಿ ಆನ್​​ಲೈನ್ ಕ್ಲಾಸ್​? ಕಾರಣ ಏನು ಗೊತ್ತಾ

ಎರಡೂವರೆ ವರ್ಷದಿಂದ ಜಗತ್ತಿನಾದ್ಯಂತ ಜನರು ಈ ಕೋವಿಡ್19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ತತ್ತರಿಸಿ ಹೋಗಿದ್ದರು. ಇದೀಗ ಅದರ ಹಾವಳಿ ಕಡಿಮೆ ಆಗಿದೆ ಅಂತ ಮಕ್ಕಳು ಶಾಲೆಗೆ ಹೋಗಲು ಶುರು ಮಾಡಿದರೆ ಮತ್ತೆ ಬೇರೆ ರೀತಿಯ ರೋಗಗಳು ಮಕ್ಕಳಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಮತ್ತೆ ಶಾಲೆಗಳು ಆನ್​ಲೈನ್ ಕ್ಲಾಸ್​​ನತ್ತ ಮುಖ ಮಾಡ್ತಿದೆ.

 ಆನ್‌ಲೈನ್ ತರಗತಿ

ಆನ್‌ಲೈನ್ ತರಗತಿ

  • Share this:
ಎರಡೂವರೆ ವರ್ಷದಿಂದ ಜಗತ್ತಿನಾದ್ಯಂತ ಜನರು ಈ ಕೋವಿಡ್19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ತತ್ತರಿಸಿ ಹೋಗಿದ್ದರು. ಇದೀಗ ಅದರ ಹಾವಳಿ ಕಡಿಮೆ ಆಗಿದೆ ಅಂತ ಮಕ್ಕಳು (Children) ಶಾಲೆಗೆ (School) ಹೋಗಲು ಶುರು ಮಾಡಿದರೆ ಮತ್ತೆ ಬೇರೆ ರೀತಿಯ ರೋಗಗಳ ಪ್ರಕರಣಗಳು ಈಗ ಶಾಲೆಗೆ ಹೋಗುವ ಮಕ್ಕಳಲ್ಲಿ ಹೆಚ್ಚಾಗುತ್ತಿರುವುದು ಪೋಷಕರು (Parents) ಮತ್ತೆ ಭಯ ಮತ್ತು ಆತಂಕ ಪಡುವಂತಾಗಿದೆ. ಇಷ್ಟಕ್ಕೂ ಅದ್ಯಾವ ರೋಗಗಳು (Diseases) ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿವೆ ಅಂತ ನೀವು ಕೇಳಬಹುದು. ಈಗಾಗಲೇ ದೇಶಾದ್ಯಂತ ಕೆಲವು ಶಾಲೆಗಳು ಮತ್ತೆ ಆನ್‌ಲೈನ್ ತರಗತಿಗಳಿಗೆ ಮರಳುವುದಾಗಿ ಹೇಳಿವೆ. ದೇಶಾದ್ಯಂತ ಕೆಲವು ರಾಜ್ಯಗಳು ಕೈ, ಕಾಲು ಮತ್ತು ಬಾಯಿ ರೋಗದ (Hand, foot and mouth disease) ಪ್ರಕರಣಗಳಲ್ಲಿ ಹೆಚ್ಚಳವನ್ನು ದಾಖಲಿಸಿದ ನಂತರ ಆನ್ಲೈನ್ ತರಗತಿಗಳನ್ನು ಆಯ್ಕೆ ಮಾಡಲು ಮುಂದಾಗಿವೆ. 

ದೆಹಲಿ ಮತ್ತು ಎನ್‌ಸಿಆರ್ ನ ಕೆಲವು ಶಾಲೆಗಳು 5 ರಿಂದ 10 ವರ್ಷದೊಳಗಿನ ಮಕ್ಕಳಲ್ಲಿ ಮತ್ತು ಮುಖ್ಯವಾಗಿ ಪ್ರಾಥಮಿಕ ತರಗತಿಗಳಲ್ಲಿ ವೇಗವಾಗಿ ಹರಡುತ್ತಿರುವ ವೈರಲ್ ಸೋಂಕಿನ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಈಗಾಗಲೇ ಸೂಚನೆಯನ್ನು ಹೊರಡಿಸಿದೆ.

ಶಾಲೆಗಳು ಹೊರಡಿಸಿದ ಸೂಚನೆಯಲ್ಲಿ ಏನಿದೆ?
ದೆಹಲಿಯ ಇಂಡಿಯನ್ ಸ್ಕೂಲ್ ತನ್ನ ವೆಬ್ಸೈಟ್ ನಲ್ಲಿ ಒಂದು ಸಲಹೆಯನ್ನು ನೀಡಿದೆ. "ದದ್ದು ಸಂಪೂರ್ಣವಾಗಿ ವಾಸಿಯಾಗುವವರೆಗೆ ಮತ್ತು ಕನಿಷ್ಠ 24 ಗಂಟೆಗಳವರೆಗೆ (ರೋಗಲಕ್ಷಣಗಳು ಪ್ರಾರಂಭವಾದ ಕನಿಷ್ಠ 7 ರಿಂದ 10 ದಿನಗಳು) ಯಾವುದೇ ಜ್ವರವು ಕಡಿಮೆಯಾಗುವವರೆಗೆ ಪೋಷಕರು ಮಗುವನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಬೇಕು" ಎಂದು ಹೇಳಿದೆ.

"ದದ್ದು ಹೊಂದಿರುವ ಯಾವುದೇ ಮಗುವು ತರಗತಿಗಳಿಗೆ ಬರುವ ಮೊದಲು ತನಗೆ ಸಾಂಕ್ರಾಮಿಕ ರೋಗವಿಲ್ಲ ಎಂದು ವೈದ್ಯರಿಂದ ಪ್ರಮಾಣ ಪತ್ರವನ್ನು ಪಡೆಯಬೇಕು" ಎಂದು ಸೂಚನೆಯಲ್ಲಿ ತಿಳಿಸಿದೆ. ನಗರದ ಪ್ರಮುಖ ಶಾಲೆಗಳಾದ ಸುಬ್ರತೋ ಪಾರ್ಕ್ ನಲ್ಲಿರುವ ಏರ್‌ಫೋರ್ಸ್ ಶಾಲೆ ಮತ್ತು ಸಂಸ್ಕೃತಿ ಶಾಲೆಗಳು ಡೆಂಗ್ಯೂ ಮತ್ತು ಮಲೇರಿಯಾದಂತಹ ರೋಗವಾಹಕ ಆಶ್ರಿತ ರೋಗಗಳ ಜೊತೆಗೆ ‘ಹ್ಯಾಂಡ್, ಫೂಟ್, ಮೌತ್ ಡಿಸಿಸಸ್’ (ಎಚ್‌ಎಫ್‌ಎಂಡಿ) ಮತ್ತು ಒಟ್ಟಾರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಸಲಹೆಗಳನ್ನು ನೀಡಿವೆ.

ಮಕ್ಕಳಲ್ಲಿ ಎಚ್ಎಫ್ಎಂಡಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಎನ್‌ಸಿಆರ್ ನಲ್ಲಿ ಈಗಾಗಲೇ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಖಾಸಗಿ ಮತ್ತು ಪ್ರಮುಖ ಶಾಲೆಗಳು ಶಾಲಾ ಆವರಣವನ್ನು ಸ್ಯಾನಿಟೈಸ್ ಮಾಡಲು ಮುನ್ನೆಚ್ಚರಿಕೆಗಳನ್ನು ತೆಗೆದು ಕೊಳ್ಳುತ್ತಿವೆ ಮತ್ತು ಸೋಂಕುಗಳು ಮತ್ತು ಅದರ ಹರಡುವಿಕೆಯ ಬಗ್ಗೆ ಪೋಷಕರ ಕಳವಳಗಳನ್ನು ಪರಿಹರಿಸುತ್ತಿವೆ. ಆದಾಗ್ಯೂ, ದೆಹಲಿ ಸರ್ಕಾರದ ಆರೋಗ್ಯ ಇಲಾಖೆ ಅಥವಾ ಉತ್ತರಪ್ರದೇಶ ಸರ್ಕಾರದ ಆರೋಗ್ಯ ಇಲಾಖೆ ಈ ವಿಷಯದ ಬಗ್ಗೆ ಯಾವುದೇ ಸಲಹೆಯನ್ನು ಇನ್ನುವರೆಗೂ ನೀಡಿಲ್ಲ.

ಈ ಮೂರು ನಗರಗಳ ಶಾಲೆಗಳು ಕೈಗೊಂಡ ಕ್ರಮಗಳೇನು?
ಚಂಡೀಗಢದ ಆರೋಗ್ಯ ಇಲಾಖೆ ಈಗಾಗಲೇ ಶಾಲೆಗಳಿಗೆ ಸಲಹೆ ನೀಡಿದೆ. ಸಾಂಕ್ರಾಮಿಕ ಕೈ, ಕಾಲು ಮತ್ತು ಬಾಯಿ ರೋಗದಿಂದಾಗಿ ಮುಚ್ಚಲ್ಪಟ್ಟಿದ್ದ ಚಂಡೀಗಢ, ಪಂಚಕುಲ ಮತ್ತು ಮೊಹಾಲಿಯ ಶಾಲೆಗಳು ಕಳೆದ ಎರಡು ವಾರಗಳಿಂದ ಸಾಮಾನ್ಯ ಸ್ಥಿತಿಗೆ ಮರಳಿವೆ.

ಇದನ್ನೂ ಓದಿ: Langya HenipaVirus: ಏನಿದು ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್? ಮನುಕುಲಕ್ಕೆ ವಿನಾಶಕಾರಿಯೇ 'ಲಾಂಗ್ಯಾ'?

ಕೆಲವು ಶಾಲೆಗಳು ಆಫ್ಲೈನ್ ಮೋಡ್ ನಲ್ಲಿ ಕಾರ್ಯ ನಿರ್ವಹಣೆಯನ್ನು ಮತ್ತೆ ತೆರೆಯಲು ನಿರ್ಧರಿಸಿವೆ. ಚಂಡೀಗಢದ ನಿವಾಸಿ ರಾಜೇಶ್ ಮಲಿಕ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡುತ್ತಾ “ಎರಡು ವಾರಗಳ ಹಿಂದೆ ಮೊಹಾಲಿ ಖಾಸಗಿ ಶಾಲೆಗಳಲ್ಲಿ ಕೆಲವು ಪ್ರಕರಣಗಳು ವರದಿಯಾಗಿದ್ದವು ಮತ್ತು ಅದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ, ಶಾಲೆಗಳನ್ನು ಮುಚ್ಚಲಾಗಿದ್ದವು ಮತ್ತು ಮತ್ತೊಮ್ಮೆ ಆನ್ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿತ್ತು, ಆದರೆ ಈಗ ಪರಿಸ್ಥಿತಿಗಳು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿವೆ” ಎಂದು ಹೇಳಿದರು.

ಎರಡು ವಾರಗಳ ಹಿಂದೆ, ಹೆಚ್ಚು ಸಾಂಕ್ರಾಮಿಕ ಕೈ, ಕಾಲು ಮತ್ತು ಬಾಯಿ ರೋಗದ (ಎಚ್ಎಫ್ಎಂಡಿ) ಸುಮಾರು 24 ಪ್ರಕರಣಗಳು ಈ ಮೂರು ನಗರಗಳಲ್ಲಿ ವರದಿಯಾಗಿದ್ದವು.

ಕರ್ನಾಟಕದಲ್ಲಿ ಹೇಗಿದೆ ಈ ರೋಗದ ಹಾವಳಿ?
ಕರ್ನಾಟಕದಲ್ಲೂ ಸಹ, ಎಚ್ಎಫ್ಎಂಡಿ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆಗಸ್ಟ್ 21 ರವರೆಗೆ ಶಾಲೆಯನ್ನು ಮುಚ್ಚಲು ಬೆಂಗಳೂರಿನ ಖಾಸಗಿ ಪ್ರಿಸ್ಕೂಲ್ ಸುತ್ತೋಲೆ ಹೊರಡಿಸಿದೆ. ಅನಾರೋಗ್ಯದ ಕಾರಣದಿಂದಾಗಿ ಹಾಜರಾತಿಯಲ್ಲಿ ಗಮನಾರ್ಹ ಕುಸಿತವಿರುವುದರಿಂದ ಕೆಲವು ಶಾಲೆಗಳು ಆನ್​ಲೈನ್ ತರಗತಿಗಳನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡಿವೆ.

ಮಂಕಿಪಾಕ್ಸ್, ಚಿಕನ್ ಪಾಕ್ಸ್ ಮತ್ತು ಕೋವಿಡ್ 19 ನಂತಹ ಇತರ ಅನೇಕ ವೈರಸ್ ಗಳು ಇರುವುದರಿಂದ ಆತಂಕವನ್ನು ತಪ್ಪಿಸಲು ಈ ರೋಗದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ ನೋಡಿ.

  • ಇದು ಮುಖ್ಯವಾಗಿ 7 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ.

  • ಕಾಕ್ಸಾಕಿವೈರಸ್ ಎ16 ಮತ್ತು ಎಂಟರೋವೈರಸ್ ಎ71 ಎಚ್ಎಫ್ಎಂಡಿಯೊಂದಿಗೆ ಹೆಚ್ಚಾಗಿ ಸಂಬಂಧ ಹೊಂದಿರುವ ಸೆರೋಟೈಪ್ ಗಳಾಗಿವೆ ಮತ್ತು ಇದು ಪ್ರಕರಣಗಳನ್ನು ಹೆಚ್ಚು ಮಾಡುತ್ತವೆ.


ಇದರ ಹರಡುವಿಕೆ
ಸೋಂಕಿತ ವ್ಯಕ್ತಿಗಳ ಜಠರಗರುಳಿನ ಅಥವಾ ಮೇಲ್ಭಾಗದ ಶ್ವಾಸನಾಳದಿಂದ ಹೊರ ಬರುವ ವೈರಸ್ ನ ಮೌಖಿಕ ಸೇವನೆಯ ನಂತರ ಹ್ಯೂಮನ್ ಎಂಟರೋವೈರಸ್ ಸೋಂಕು ಉಂಟಾಗುತ್ತದೆ. ವೆಸಿಕಲ್ ದ್ರವ ಅಥವಾ ಬಾಯಿ ಮತ್ತು ಉಸಿರಾಟದ ಸ್ರವಿಸುವಿಕೆಯೊಂದಿಗಿನ ಸಂಪರ್ಕದ ನಂತರ ಮಾನವ ಎಂಟೆರೋವೈರಸ್ ಸೋಂಕು ಸಹ ಸಂಭವಿಸಬಹುದು.

ಇದನ್ನೂ ಓದಿ:  Monkeypox ನಿಮ್ಮನ್ನು ದೈಹಿಕವಾಗಷ್ಟೇ ಅಲ್ಲ, ಮಾನಸಿಕವಾಗಿಯೂ ಕಾಡುತ್ತದೆಯಂತೆ!

ಕೆಲವೊಮ್ಮೆ ಬಾಯಿಯ ಕುಹರವು ಮಾತ್ರ ಒಳಗೊಂಡಿರುತ್ತದೆ, ಇದು ಹೈಪರ್ಯಾಂಗಿನಾದಿಂದ ಉಂಟಾಗಬಹುದು (ಹರ್ಪಾಂಗಿನಾ ಜ್ವರ ಮತ್ತು ನೋವಿನ ಪಪುಲೋ-ವೆಸಿಕುಲೊ-ಅಲ್ಸರೇಟಿವ್ ಓರಲ್ ಎನಾಂಥೆಮ್ ನಿಂದ ನಿರೂಪಿಸಲ್ಪಟ್ಟ ಒಂದು ನಿರುಪದ್ರವಿ ಕ್ಲಿನಿಕಲ್ ಸಿಂಡ್ರೋಮ್ ಆಗಿದೆ. ಇದನ್ನು ವೈದ್ಯಕೀಯವಾಗಿ ಎಚ್ಎಫ್ಎಂಡಿ ಮತ್ತು ಪ್ರಾಥಮಿಕ ಹರ್ಪೆಟಿಕ್ ಜಿಂಗಿವೊಸ್ಟೊಮಾಟೈಟಿಸ್ ನಿಂದ ಬೇರ್ಪಡಿಸಬಹುದು)

ಎಚ್ಎಫ್ಎಂಡಿ ಮತ್ತು ಹರ್ಪಂಗಿನಾ ಪ್ರಕರಣಗಳು ಈಗ ವಿಶ್ವಾದ್ಯಂತ ಕಂಡು ಬರುತ್ತಿವೆ. ಡೇಕೇರ್ ಕೇಂದ್ರಗಳು, ಶಾಲೆಗಳು, ಬೇಸಿಗೆ ಶಿಬಿರಗಳು, ಆಸ್ಪತ್ರೆ ವಾರ್ಡ್ ಗಳು, ಸಮುದಾಯಗಳು ಮತ್ತು ದೊಡ್ಡ ಭೌಗೋಳಿಕ ಪ್ರದೇಶಗಳಲ್ಲಿ ಈ ಪ್ರಕರಣಗಳು ಹೆಚ್ಚಾಗಿಯೇ ಕಂಡು ಬರುತ್ತಿವೆ. ಎಚ್ಎಫ್ಎಂಡಿ ರೋಗವು ಸಾಮಾನ್ಯವಾಗಿ ಮೂರರಿಂದ ಐದು ದಿನಗಳವರೆಗೆ ರೋಗಲಕ್ಷಣಗಳನ್ನು ತೋರಿಸುತ್ತದೆ. ಇದು ಎರಡು ದಿನಗಳಷ್ಟು ಕಡಿಮೆ ಮತ್ತು ಏಳು ದಿನಗಳವರೆಗೆ ಇರುತ್ತದೆ ಎಂದು ವರದಿಯಾಗಿದೆ.

ಈ ರೋಗ ಹೇಗೆ ಕಾಣಿಸಿಕೊಳ್ಳುತ್ತದೆ?
"ಎಚ್ಎಫ್ಎಂಡಿ ಸಾಮಾನ್ಯವಾಗಿ ಬಾಯಿ ಅಥವಾ ಗಂಟಲು ನೋವಿನ ಅಥವಾ ಆಹಾರ ತಿನ್ನಲು ಕಷ್ಟವಾಗುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಜ್ವರವು ಇದ್ದಲ್ಲಿ, ಸಾಮಾನ್ಯವಾಗಿ 101 ಡಿಗ್ರಿ ಫ್ಯಾರೆನ್ ಹೀಟ್ ಗಿಂತಲೂ ಕಡಿಮೆ ಇರುತ್ತದೆ. ದದ್ದುಗಳು ಬಾಯಿಯಲ್ಲಿ ಮಚ್ಚೆಗಳಾಗಿ ಪ್ರಾರಂಭವಾಗುತ್ತವೆ, ನಂತರ ಹುಣ್ಣು ಕಾಣಿಸಿಕೊಳ್ಳುತ್ತವೆ.

ಇವು ಸಾಮಾನ್ಯವಾಗಿ ನೋವಿನಿಂದ ಕೂಡಿರುತ್ತದೆ. ಚರ್ಮದ ದದ್ದು ಎಕ್ಸಾಂಥೆಮ್ ಸಾಮಾನ್ಯವಾಗಿ ಕೈಗಳು, ಪಾದಗಳು, ಪೃಷ್ಠಗಳು, ಕಾಲುಗಳು ಮತ್ತು ತೋಳುಗಳನ್ನು ಒಳಗೊಂಡಿರುತ್ತದೆ. ಅವು ಸಾಮಾನ್ಯವಾಗಿ ನೋವು ರಹಿತವಾಗಿರುತ್ತವೆ" ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಡಾ.ಧೀರೇನ್ ಗುಪ್ತಾ ಅವರು ಹೇಳುತ್ತಾರೆ.

ಇದರಿಂದಾಗಬಹುದಾದ ಗಂಭೀರ ಸಮಸ್ಯೆಗಳು
ಎಂಟರೋವೈರಸ್ 71 ರಿಂದ ಉಂಟಾಗುವ ಎಚ್ಎಫ್ಎಂಡಿಯನ್ನು ಹೊರತು ಪಡಿಸಿ, ಎಚ್ಎಫ್ಎಂಡಿಯ ಗಂಭೀರ ತೊಡಕುಗಳು ವಿರಳವಾಗಿ ಸಂಭವಿಸುತ್ತವೆ ಎಂದು ಡಾ. ಗುಪ್ತಾ ಹೇಳಿದರು.

ಚಿಕಿತ್ಸಾ ಕೋರ್ಸ್- ಎಚ್ಎಫ್ಎಂಡಿ ಸಾಮಾನ್ಯವಾಗಿ ಸೌಮ್ಯವಾದ ಸಿಂಡ್ರೋಮ್ ಆಗಿದೆ. ರೋಗಲಕ್ಷಣಗಳು ಮತ್ತು ಚಿಹ್ನೆಗಳ ಸಂಪೂರ್ಣ ಪರಿಹಾರವು ಸಾಮಾನ್ಯವಾಗಿ 7 ರಿಂದ 10 ದಿನಗಳಲ್ಲಿ ಸಂಭವಿಸುತ್ತದೆ.

ಇದನ್ನೂ ಓದಿ:  Stomach Cancer: ಹೊಟ್ಟೆಯ ಕ್ಯಾನ್ಸರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು! ನಿರ್ಲಕ್ಷಿಸಬೇಡಿ

ಎಚ್ಎಫ್ಎಂಡಿ ಹೊಂದಿರುವ ಶಂಕಿತ ರೋಗಿಯಲ್ಲಿ, ಮಗು ಆಲಸ್ಯ, ನಿರಂತರವಾಗಿ ವಾಂತಿ ಮಾಡುತ್ತಿದ್ದರೆ, ಮತ್ತು ಮೂರು ದಿನಗಳಿಗಿಂತ ಹೆಚ್ಚು ಕಾಲ 100 ಡಿಗ್ರಿ ಫ್ಯಾರೆನ್ ಹೀಟ್ ಗಿಂತ ಹೆಚ್ಚು ಜ್ವರವನ್ನು ಹೊಂದಿದ್ದರೆ, ಶಿಶುವಿಗೆ ಈ ರೋಗ ಬಂದಿದೆ ಅಂತ ಅರ್ಥ ಮಾಡಿಕೊಳ್ಳಬಹುದು.

ಈ ರೋಗದ ನಿರ್ವಹಣೆ ಹೇಗೆ ಮಾಡುವುದು?
"ಮುಖ್ಯವಾಗಿ ಈ ರೋಗಲಕ್ಷಣಗಳನ್ನು ಮತ್ತು ತೊಡಕುಗಳನ್ನು ಹೊಂದಿರುವ ಮಕ್ಕಳಿಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ಎಂಟರೋವೈರಸ್ ಗಳ ಚಿಕಿತ್ಸೆಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಥೆರಪಿ ಈಗಂತೂ ಲಭ್ಯವಿಲ್ಲ. ಎಂಟರೋವೈರಸ್ ಗಳ ಜೀನೋಮ್ ಅಸೈಕ್ಲೋವಿರ್ ಚಟುವಟಿಕೆಗೆ ಅಗತ್ಯವಾದ ಕಿಣ್ವವಾದ ಥೈಮಿಡಿನ್ ಕೈನೇಸ್ ಗಾಗಿ ಎನ್ ಕೋಡ್ ಮಾಡುವುದಿಲ್ಲ.

ಜ್ವರದಿಂದ ಉಂಟಾಗುವ ನೋವು ಮತ್ತು ಅಸ್ವಸ್ಥತೆಯನ್ನು ಇಬುಪ್ರೊಫೆನ್ ಅಥವಾ ಅಸಿಟಾಮಿನೊಫೆನ್ ನಿಂದ ನಿರ್ವಹಿಸಬಹುದು, ಆದಾಗ್ಯೂ ಇವುಗಳನ್ನು ನಿರ್ಜಲೀಕರಣದಿಂದ ಬಳಲುತ್ತಿರುವ ಮಕ್ಕಳ ಆರೋಗ್ಯದ ಮೇಲೆ ಬಳಸಬಾರದು. ತೀವ್ರ ಸಂದರ್ಭಗಳಲ್ಲಿ, ಮೌಖಿಕ ಓಪಿಯಾಡ್ ಗಳ ಅಗತ್ಯವಿರಬಹುದು" ಎಂದು ಡಾ ಗುಪ್ತಾ ಅವರು ವಿವರಿಸಿದ್ದಾರೆ.
Published by:Ashwini Prabhu
First published: