CBSC Schools: ಕರ್ನಾಟಕದಲ್ಲಿರುವ ಟಾಪ್ 10 ಸಿಬಿಎಸ್‌ಇ ಶಾಲೆಗಳು; ಇಲ್ಲಿದೆ ಡೀಟೇಲ್ಸ್

ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯ ಉತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ರಾಜ್ಯವು 544,529 ಪ್ರಾಥಮಿಕ ಶಾಲೆಗಳನ್ನು 252,875 ಶಿಕ್ಷಕರು ಮತ್ತು 8.495 ಮಿಲಿಯನ್ ವಿದ್ಯಾರ್ಥಿಗಳನ್ನು ಹೊಂದಿದೆ. ಹೆಚ್ಚಿನ ಶಾಲೆಗಳಲ್ಲಿ, ಬೋಧನಾ ಮಾಧ್ಯಮವು ಇಂಗ್ಲಿಷ್ ಅಥವಾ ಕನ್ನಡವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:

ಬೆಂಗಳೂರಿನ ರಾಜಧಾನಿಯಾಗಿರುವ ಕರ್ನಾಟಕವನ್ನು (Karnataka) ಶಿಕ್ಷಣದ ಹರಿಕಾರ ಎಂದೇ ಸಂಬೋಧಿಸಲಾಗುತ್ತದೆ. ಅತ್ಯುತ್ತಮ ರಚನಾತ್ಮಕ ಶಿಕ್ಷಣವನ್ನು (Constructive education) ಒದಗಿಸುವ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದ ಸಾಕ್ಷರತೆ ಪ್ರಮಾಣವು 75.36% ರಷ್ಟಿದ್ದು, 82.47% ಪುರುಷರು ಮತ್ತು 68.08% ಮಹಿಳೆಯರು ಸಾಕ್ಷರರಾಗಿದ್ದಾರೆ. ಶಿಕ್ಷಣದ ಎಲ್ಲಾ ಹಂತಗಳಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು (Teachers) ನೇಮಿಸಿಕೊಳ್ಳಲು ರಾಜ್ಯವು ಹೆಸರುವಾಸಿಯಾಗಿದೆ. ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯ ಉತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ರಾಜ್ಯವು 544,529 ಪ್ರಾಥಮಿಕ ಶಾಲೆಗಳನ್ನು (Schools) 252,875 ಶಿಕ್ಷಕರು ಮತ್ತು 8.495 ಮಿಲಿಯನ್ ವಿದ್ಯಾರ್ಥಿಗಳನ್ನು ಹೊಂದಿದೆ. ಹೆಚ್ಚಿನ ಶಾಲೆಗಳಲ್ಲಿ, ಬೋಧನಾ ಮಾಧ್ಯಮವು ಇಂಗ್ಲಿಷ್ ಅಥವಾ ಕನ್ನಡವಾಗಿದೆ.


ಕರ್ನಾಟಕದಲ್ಲಿರುವ ಟಾಪ್ ಸಿಬಿಎಸ್‌ಇ ಶಾಲೆಗಳು


1) A. S. C. ಪಬ್ಲಿಕ್ ಸ್ಕೂಲ್
ಈ ಶಾಲೆಯನ್ನು 1950 ರಲ್ಲಿ ಸ್ಥಾಪಿಸಲಾಯಿತು, ಇದು ಬೆಂಗಳೂರಿನ ಅತ್ಯಂತ ಜನಪ್ರಿಯ ಶಾಲೆಯಾಗಿದೆ. ಸೇನೆಯು ಈ ಶಾಲೆಯನ್ನು ಸ್ಥಾಪಿಸಿತು. ಶಾಲೆಯು ಪ್ರಾಥಮಿಕ, ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಎಲ್ಲಾ ಹಂತಗಳಲ್ಲಿ ಮೂಲ ಭಾಷೆಯಾಗಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುತ್ತದೆ.
 • ವಿಳಾಸ: ವಿಕ್ಟೋರಿಯಾ ಲೇಔಟ್, ಅಗ್ರಮ್ ಪೋಸ್ಟ್ ಬೆಂಗಳೂರು 560007

 • ಇಮೇಲ್-ascps@hotmail.com

 • ಸಂಪರ್ಕ-08025550677


2) ದೆಹಲಿ ಪಬ್ಲಿಕ್ ಸ್ಕೂಲ್


ದೆಹಲಿ ಪಬ್ಲಿಕ್ ಶಾಲೆಯು ವಿದ್ಯಾರ್ಥಿಗಳಿಗೆ ಒತ್ತಡವಿರದೆ ಅರ್ಥಪೂರ್ಣ ಮತ್ತು ಸಂತೋಷದಾಯಕ ಕಲಿಕೆಯನ್ನು ಉತ್ತೇಜಿಸುವ ಸಂಸ್ಥೆಯಾಗಿದೆ. ಶೈಕ್ಷಣಿಕ ಹಾಗೂ ವಿದ್ಯಾರ್ಥಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ
 • ವಿಳಾಸ: ಸರ್ವೆ ಸಂಖ್ಯೆ 35/1A, ಸಾಥ್ನೂರು ಗ್ರಾಮ, ಬಾಗಲೂರು ಪೋಸ್ಟ್, ಬಳ್ಳಾರಿ ರಸ್ತೆ, ಬೆಂಗಳೂರು

 • ಇಮೇಲ್– principal @north.dpsbangalore.edu.in

 • ಸಂಪರ್ಕ- 080-29724861


3) ಏರ್ ಫೋರ್ಸ್ ಸ್ಕೂಲ್
ಈ ಶಾಲೆಯು ನಗರದ ಗಣ್ಯ ಶಿಕ್ಷಣ ಸಂಸ್ಥೆಗಳಲ್ಲಿ ಅತ್ಯುತ್ತಮವಾಗಿದೆ. ಶಾಲೆಯು ಪ್ರಾಥಮಿಕವಾಗಿ ವಾಯುಪಡೆಯ ಸಿಬ್ಬಂದಿಯ ಮಕ್ಕಳಿಗಾಗಿ ಉದ್ದೇಶಿಸಲಾಗಿದೆ. ಶಾಲೆಯು 12 ನೇ ತರಗತಿಯವರೆಗೆ ಶೈಕ್ಷಣಿಕ ಸೌಲಭ್ಯವನ್ನು ಒದಗಿಸುತ್ತದೆ.
 • ವಿಳಾಸ: ನ್ಯೂ ವಿಂಡ್ ರೋಡ್ ಬೆಂಗಳೂರು

 • ಇಮೇಲ್- afsaste@yahoo.co.in

 • ಸಂಪರ್ಕ- 080 25272332


ಇದನ್ನೂ ಓದಿ:  Top Engineering Colleges in Karnataka: ಕರ್ನಾಟಕದ ಟಾಪ್ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಇಲ್ಲಿದೆ

4) ಅಮೃತ ವಿದ್ಯಾಲಯಮ್
ಪ್ರತಿ ಕ್ಷೇತ್ರದ ಜ್ಞಾನದ ಜೊತೆಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಉದ್ದೇಶದಿಂದ ಶಾಲೆಯನ್ನು ಸ್ಥಾಪಿಸಲಾಗಿದೆ.
 • ವಿಳಾಸ: 136, ಎಮ್‌ಎಎಮ್ ರಸ್ತೆ, ಜನತಾಭಾರತ್ ಉಲ್ಲಾಳ ಉಪನಗರ್ ಬೆಂಗಳೂರು

 • ಇಮೇಲ್- av9bangalore@gmail.com

 • ಸಂಪರ್ಕ- 080-28486565


5) ಡ್ರೀಮ್ ವರ್ಲ್ಡ್ ಸ್ಕೂಲ್
ವಿಷಯಾಧಾರಿತ ಜ್ಞಾನ ಮತ್ತು ಕ್ರೀಡೆ, ಕಲೆ, ಸಂಸ್ಕೃತಿ, ಅಂತರಾಷ್ಟ್ರೀಯತೆ, ನಾಯಕತ್ವ, ತಂಡದ ಕೆಲಸ ಮುಂತಾದ ವ್ಯಕ್ತಿನಿಷ್ಠವಲ್ಲದ ಪರಿಣತಿಯನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಕೃಷ್ಟತೆಯನ್ನು ಅಭಿವೃದ್ಧಿಪಡಿಸುವಲ್ಲಿ ಶಾಲೆಯು ವಿದ್ಯಾರ್ಥಿಗಳಿಗೆ ನೆರವನ್ನೀಯುತ್ತದೆ.
 • ವಿಳಾಸ: ಕಪ್ಪಾಗಲ್ ರಸ್ತೆ, ಬಳ್ಳಾರಿ

 • ಇಮೇಲ್- strs2007@rediffmail.com

 • ಸಂಪರ್ಕ- 08392-257065


6) ಗುರು ನಾನಕ್ ಪಬ್ಲಿಕ್ ಶಾಲೆ
ಗುರುನಾನಕ್ ಪಬ್ಲಿಕ್ ಸ್ಕೂಲ್ 2014 ರಲ್ಲಿ ಸ್ಥಾಪಿಸಲಾದ ಇಂಗ್ಲಿಷ್ ಮಾಧ್ಯಮ ಶಾಲೆಯಾಗಿದೆ. ಶಾಲೆಯು 1 ರಿಂದ 10 ನೇ ತರಗತಿಗಳನ್ನು ಒಳಗೊಂಡಿದೆ.
 • ವಿಳಾಸ: ನೆಹರು ಕ್ರೀಡಾಂಗಣ ಗುರುದ್ವಾರದ ಹತ್ತಿರ ಶ್ರೀ ನಾನಕ್ ಜೀರಾ ಸಾಹೇಬ್ ಬೀದರ್ ಕರ್ನಾಟಕ

 • ಇಮೇಲ್-tanvir@satyam.net.in

 • ಸಂಪರ್ಕ-08482-25282


ಇದನ್ನೂ ಓದಿ:  Top 10 Medical Colleges in Karnataka: ಕರ್ನಾಟಕದ ಟಾಪ್‌ 10 ಮೆಡಿಕಲ್​ ಕಾಲೇಜುಗಳ ಪಟ್ಟಿ ಇಲ್ಲಿದೆ

7) HAL ಪಬ್ಲಿಕ್ ಸ್ಕೂಲ್
ಇದು ಕರ್ನಾಟಕದ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಶಾಲೆಯು ವಿದ್ಯಾರ್ಥಿಗಳ ಉತ್ತಮ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಕಾರಾತ್ಮಕ ವಾತಾವರಣವನ್ನು ಒದಗಿಸುತ್ತದೆ. ಕಾಲಕಾಲಕ್ಕೆ ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ, ಬದಲಾಗುತ್ತಿರುವ ಪರಿಸರದೊಂದಿಗೆ ಶಾಲೆಯು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತದೆ.
 • ವಿಳಾಸ: ಸುರಂಜನದಾಸ್ ರಸ್ತೆ OPP Hal ಸಿಬ್ಬಂದಿ ಕಾಲೇಜು ವಿಮಾನ ಪುರ ಬೆಂಗಳೂರು 56001

 • ಇಮೇಲ್– halpublicschool@rediffmail.com

 • ಸಂಪರ್ಕ- 080-25220762


8) ಜೆಎಸ್ಎಸ್ ಮಹಾವಿದ್ಯಾಪೀಠ


ಕರ್ನಾಟಕದ ಹಲವಾರು ಗಣ್ಯ ಶಾಲೆಗಳಲ್ಲಿ ಇದು ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಶಾಲೆಯು ತನ್ನ ವಿದ್ಯಾರ್ಥಿಗಳನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವಾಗಿಸಲು ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿದೆ
 • ವಿಳಾಸ:  ಡಾ. ಶಿವರಾತ್ರಿ ರಾಜೇಂದ್ರ ವೃತ್ತ ಮೈಸೂರು-570004, ಕರ್ನಾಟಕ

 • ಇಮೇಲ್- jss@jssonline.org

 • ಸಂಪರ್ಕ-0821 2548212


9) ಜವಾಹರ ನವೋದಯ ವಿದ್ಯಾಲಯ
ಶಾಲೆಯು ಜವಾಹರ್ ನವೋದಯ ವಿದ್ಯಾಲಯ ಸಮಿತಿ, ನವದೆಹಲಿಯಿಂದ ನಡೆಸಲ್ಪಡುತ್ತದೆ. ಶಾಲೆಯು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳ ಅಭಿವೃದ್ಧಿಯೊಂದಿಗೆ ಅತ್ಯುತ್ತಮ ಶಿಕ್ಷಣವನ್ನು ಒದಗಿಸುತ್ತದೆ.
 • ವಿಳಾಸ: ನಾರಾಯಣಪುರ, ತಾಲೂಕು ಬಸವಕಲ್ಯಾಣ ಜಿಲ್ಲೆ ಬೀದರ್, ಕರ್ನಾಟಕ-585327

 • ಇಮೇಲ್-  jnvbidar@gmail.com


ಇದನ್ನೂ ಓದಿ: Teachers Day: ರಾಜ್ಯ ಸರ್ಕಾರದ ಉತ್ತಮ ಶಿಕ್ಷಕ, ಶಿಕ್ಷಕಿಯರ ಪಟ್ಟಿ ಪ್ರಕಟ, ಇಲ್ಲಿದೆ ನೋಡಿ ಕಂಪ್ಲೀಟ್​ ಲಿಸ್ಟ್​

10) ಜಿಂದಾಲ್ ವಿದ್ಯಾ ಮಂದಿರ ಶಾಲೆ
ಜಿಂದಾಲ್ ವಿದ್ಯಾ ಮಂದಿರ ಶಾಲೆಯು ದೇಶದ ಜನಪ್ರಿಯ ಶಾಲೆಗಳಲ್ಲಿ ಒಂದಾಗಿದೆ. ಅತ್ಯುತ್ತಮ ಶೈಕ್ಷಣಿಕ ದಾಖಲೆಯೊಂದಿಗೆ ಕರ್ನಾಟಕದಲ್ಲಿ ಉನ್ನತ ದರ್ಜೆಯ ಶಾಲೆಗಳಲ್ಲೊಂದು ಎಂಬುದಾಗಿ ಶಾಲೆಯನ್ನು ಪರಿಗಣಿಸಲಾಗಿದೆ.
 • ವಿಳಾಸ: ವಿದ್ಯಾ ನಗರ ಸ್ಟೀಲ್ ಲಿಮಿಟೆಡ್ ಟೌನ್‌ಶಿಪ್, ವಿದ್ಯಾ ನಗರ, ಬಳ್ಳಾರಿ ಜಿಲ್ಲೆ, ಕರ್ನಾಟಕ

 • ಇಮೇಲ್- umesh.harbola@sw.in

 • ಸಂಪರ್ಕ-5246450

Published by:Ashwini Prabhu
First published: