• Home
  • »
  • News
  • »
  • education
  • »
  • Educational Institutions: ಶಿಕ್ಷಣ ಕ್ಷೇತ್ರದಲ್ಲಿ RSS ದಾಪುಗಾಲು; ದೇಶದ ವಿವಿಧೆಡೆ 5 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ನಿರ್ಧಾರ

Educational Institutions: ಶಿಕ್ಷಣ ಕ್ಷೇತ್ರದಲ್ಲಿ RSS ದಾಪುಗಾಲು; ದೇಶದ ವಿವಿಧೆಡೆ 5 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ನಿರ್ಧಾರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಿಕ್ಷಣದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಆರ್‌ ಎಸ್‌ ಎಸ್‌ ದೇಶದ ವಿವಿಧೆಡೆ 5 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈಗಾಗಲೇ ಆರ್‌ ಎಸ್‌ ಎಸ್‌ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಕೊಡುಗೆ ನೀಡುತ್ತಿದೆ. ಈಗಾಗಲೇ ದೇಶದ ವಿವಿಧೆಡೆ ಆರ್‌ ಎಸ್‌ ಎಸ್‌ ನಡೆಸುತ್ತಿರುವ ಪ್ರಾಥಮಿಕ ಹಾಗೂ ಹೈಸ್ಕೂಲ್‌ ಗಳಲ್ಲಿ ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ.

ಮುಂದೆ ಓದಿ ...
  • Share this:

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲಿ ಸಾಕಷ್ಟು ವಿದ್ಯಾಕೇಂದ್ರಗಳನ್ನು (Vidya Kendra) ನಡೆಸುತ್ತಿದೆ. ಇದೀಗ ಮತ್ತಷ್ಟು ಹೊಸ ಯೋಜನೆಗಳೊಂದಿಗೆ ಮತ್ತೊಂದು ಹೆಜ್ಜೆ ಇಟ್ಟಿದೆ. ಈಗಾಗಲೇ ಸಾಕಷ್ಟು ಮಕ್ಕಳಿಗೆ ಪ್ರಾಥಮಿಕ ಹಾಗೂ ಹೈಸ್ಕೂಲ್‌ ಹಂತದಲ್ಲಿ ಶಿಕ್ಷಣ ನೀಡುತ್ತಿರುವ ಆರ್‌ ಎಸ್‌ ಎಸ್‌ (RSS), ವಿಶ್ವವಿದ್ಯಾಲಯಗಳ (Universities) ಸ್ಥಾಪನೆಗೆ ಮುಂದಾಗಿದೆ. ಹೌದು ಶಿಕ್ಷಣದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಆರ್‌ ಎಸ್‌ ಎಸ್‌ ದೇಶದ ವಿವಿಧೆಡೆ 5 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈಗಾಗಲೇ ಆರ್‌ ಎಸ್‌ ಎಸ್‌ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಕೊಡುಗೆ ನೀಡುತ್ತಿದೆ. ಈಗಾಗಲೇ ದೇಶದ ವಿವಿಧೆಡೆ ಆರ್‌ ಎಸ್‌ ಎಸ್‌ ನಡೆಸುತ್ತಿರುವ ಪ್ರಾಥಮಿಕ ಹಾಗೂ ಹೈಸ್ಕೂಲ್‌ ಗಳಲ್ಲಿ ಮಕ್ಕಳು (Children) ವಿದ್ಯೆ ಕಲಿಯುತ್ತಿದ್ದಾರೆ.


ಇದೀಗ ಉಚ್ಛ ಶಿಕ್ಷಾ ಸಂಸ್ಥಾನ ಮೂಲಕ ಹೆಚ್ಚಿನ ಶಿಕ್ಷಣ ಕಲ್ಪಿಸಲು ಯೋಜಿಸಿದೆ. ಈ ವಿಷಯವನ್ನ ವಿದ್ಯಾ ಭಾರತಿ ಸಹ ಸಂಯೋಜಕ ಕಾರ್ಯದರ್ಶಿ ಯತೀಂದ್ರ ಶರ್ಮ ಸ್ಪಷ್ಟಪಡಿಸಿದ್ದಾರೆ. ಅವರು ಹರಿದ್ವಾರದ ಸರಸ್ವತಿ ವಿದ್ಯಾ ಮಂದಿರ ಇಂಟರ್‌ ಕಾಲೇಜಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಈ ವಿಷಯ ಹೇಳಿದ್ದಾರೆ.


ಬೆಂಗಳೂರಿನಲ್ಲಿ 125 ಎಕರೆ ಕ್ಯಾಂಪಸ್!
ವಿಶ್ವವಿದ್ಯಾಲಯಗಳ ಸ್ಥಾಪನೆಯ ಉದ್ದೇಶದ ಬಗ್ಗೆ ಸ್ಪಷ್ಟ ಪಡಿಸಿರುವ ಯತೀಂದ್ರ ಶರ್ಮ, ಶಿಕ್ಷಣದಲ್ಲಿ ಧನಾತ್ಮಕ ಬದಲಾವಣೆ ತರುವ ಉದ್ದೇಶದಿಂದ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ. ಇನ್ನು ಉಚ್ಛ ಶಿಕ್ಷಾ ಸಂಸ್ಥಾನ ಈಗಾಗಲೇ ಬೆಂಗಳೂರಿನಲ್ಲಿ ಚಾಣಾಕ್ಯ ಯುನಿವರ್ಸಿಟಿಯನ್ನ ಕಳೆದ ವರ್ಷವೇ ತೆರೆದಿದೆ. 125 ಎಕರೆಗಳಷ್ಟು ವಿಸ್ತಾರವಾದ ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ.


ಇದನ್ನೂ ಓದಿ: Real Hero: ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ಸ್ಕಾಲರ್‌ಶಿಪ್ ಮಾಸ್ಟರ್! ನಿವೃತ್ತ ಶಿಕ್ಷಕರ ಸಾಧನೆ ಕಥೆ ಇಲ್ಲಿದೆ ಓದಿ


ಮೊದಲ ಬ್ಯಾಚ್‌ ನಲ್ಲಿ ಸುಮಾರು 200 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆರ್‌ ಎಸ್‌ ಎಸ್‌ ವಿದ್ಯಾಸಂಸ್ಥೆಗಳಲ್ಲಿ ಕಲಿಯಲು ಎಲ್ಲರಿಗೂ ಮುಕ್ತ ಅವಕಾಶಗಳಿವೆ. ಯಾವುದೇ ಜಾತಿ, ಧರ್ಮ ಹಾಗೂ ವರ್ಗದವರು ಇಲ್ಲಿ ಕಲಿಯಬಹುದು.


ಆರ್‌ ಎಸ್‌ ಎಸ್‌ ಶಾಲೆಗಳಲ್ಲಿ 31 ಲಕ್ಷ ವಿದ್ಯಾರ್ಥಿಗಳು
ಇನ್ನು ಬೆಂಗಳೂರಿನ ಚಾಣಾಕ್ಯ ವಿಶ್ವ ವಿದ್ಯಾಲಯದ ವಿದ್ಯಾ ಭಾರತಿ ಶಾಲೆಯಲ್ಲಿ ಸದ್ಯ 50 ಜನ ಮೆರಿಟ್‌ ವಿದ್ಯಾರ್ಥಿಗಳು ಉಚಿತವಾಗಿ ಕಲಿಯುತ್ತಿದ್ದಾರೆ. ಇನ್ನು ಆರ್‌ ಎಸ್‌ ಎಸ್‌ ನಡೆಸುತ್ತಿರುವ 29000 ಶಾಲೆಗಳಲ್ಲಿ 31 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅವರಿಗೆ 1 ಲಕ್ಷ 50 ಸಾವಿರ ಶಿಕ್ಷಕರು ಕಲಿಸುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಮಕ್ಕಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೇ ಉತ್ತರಾಖಂಡ್‌ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಒಂದು ಮಾಡೆಲ್‌ ಸ್ಕೂಲ್‌ ಆರಂಭಿಸಲು ಯೋಜಿಸುತ್ತಿರುವುದಾಗಿ ಶರ್ಮ ಹೇಳಿದ್ದಾರೆ.


ಇನ್ನು ಇದೇ ವೇಳೆ ಮಾತನಾಡಿದ ಉತ್ತರಾಖಂಡದ ಶಿಕ್ಷಣ ಸಚಿವ ಧನ್‌ ಸಿಂಗ್‌ ರಾವತ್‌, ಪ್ಲೇಸ್ಕೂಲ್‌ ಹಂತದಲ್ಲಿ ನ್ಯಾಷನಲ್‌ ಎಜ್ಯುಕೇಶನ್‌ ಪಾಲಿಸಿಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ನಮ್ಮ ಉತ್ತರಾಖಂಡ ಎಂದರು. ಅಲ್ಲದೇ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಶಿಕ್ಷಣವೆಂಬುದು ವ್ಯಾಪಾರವಾಗಿ ಬದಲಾಗಿರುವ ಇಂದಿನ ಕಾಲದಲ್ಲಿ ಒಂದು ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸೋಕೆ ಲಕ್ಷ ಲಕ್ಷ ಹಣ ಬೇಕು. ಬಹುತೇಕ ಸರ್ಕಾರಿ ಶಾಲೆಗಳಲ್ಲಿರುವ ಅವ್ಯವಸ್ಥೆಯಿಂದಾಗಿ ಬಡವರೂ ಕೂಡ ಖಾಸಗಿ ಶಾಲೆಗೇ ಮಕ್ಕಳನ್ನು ಸೇರಿಸಬೇಕೆಂದು ಬಯಸ್ತಾರೆ.


ಇದನ್ನೂ ಓದಿ: Career in AI: ಎಐ ಮತ್ತು ಯಂತ್ರ ಕಲಿಕೆಯಲ್ಲಿ ವೃತ್ತಿಜೀವನ ಆಯ್ಕೆ ಮಾಡಲು ಇಲ್ಲಿವೆ ಟಿಪ್ಸ್


ಅಂಥದ್ದರಲ್ಲಿ ಆರ್‌ ಎಸ್‌ ಎಸ್‌ ಮಕ್ಕಳಿಗೆ ಕಡಿಮೆ ಶುಲ್ಕ ದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆಯೆಂದೇ ಹೇಳಬಹುದು. ಇದು ಕೇಸರಿ ಸಂಘಟನೆಯೆಂಬ ಹಣೆಪಟ್ಟಿ ಹೊತ್ತಿದ್ದರೂ ಇಲ್ಲಿ ಹಿಂದೂಗಳೊಂದೇ ಅಲ್ಲದೇ ಎಲ್ಲ ಜಾತಿಯವರು, ಧರ್ಮದವರೂ ಶಿಕ್ಷಣ ಪಡೆಯುತ್ತಿರುವುದು ಗಮನಾರ್ಹ.

Published by:Ashwini Prabhu
First published: