• Home
  • »
  • News
  • »
  • education
  • »
  • Career: ವಿದೇಶದಲ್ಲಿ ಕಲಿತವರು ವೃತ್ತಿ ಜೀವನದಲ್ಲಿ ಹೆಚ್ಚು ಯಶಸ್ವಿಯಾಗಲು ಕಾರಣ ಇಲ್ಲಿದೆ

Career: ವಿದೇಶದಲ್ಲಿ ಕಲಿತವರು ವೃತ್ತಿ ಜೀವನದಲ್ಲಿ ಹೆಚ್ಚು ಯಶಸ್ವಿಯಾಗಲು ಕಾರಣ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿದೇಶದಲ್ಲಿ ಅಧ್ಯಯನ ಮಾಡುವುದು, ವಾಸ್ತವವಾಗಿ, ಉದ್ಯೋಗ ಕೌಶಲ್ಯಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.

  • Trending Desk
  • Last Updated :
  • Karnataka, India
  • Share this:

ಶಿಕ್ಷಣ ಮತ್ತು ವೃತ್ತಿ ಪ್ರಯೋಜನಗಳಿಂದಾಗಿ (Benefit) ವಿದೇಶದಲ್ಲಿ ( ಅಧ್ಯಯನ ಮಾಡುವ ಪದ್ಧತಿ ಜನಪ್ರಿಯತೆಯನ್ನು ಗಳಿಸುತ್ತಿದೆ. ವಿದೇಶಿ ನೆಲದಲ್ಲಿ ಅಧ್ಯಯನ ಮಾಡುವುದು ವಿದ್ಯಾರ್ಥಿಯ (Student) ಕೌಶಲ್ಯಗಳನ್ನು (Skill) ಹೆಚ್ಚಿಸುತ್ತದೆ ಮತ್ತು ಯಶಸ್ವಿ ವೃತ್ತಿಜೀವನದ ಅವಕಾಶಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದು ಸಾಮಾನ್ಯವಾಗಿ ನಂಬಲಾಗಿರುವ ವಿಷಯವಾಗಿದೆ (Subject). ಇದಕ್ಕೆ ಸಾಕ್ಷಿ ಎಂಬಂತೆ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಎಜುಕೇಶನ್ (IIE) ಯ ವರದಿಯು ವಿದೇಶದಲ್ಲಿ ಅಧ್ಯಯನ ಮಾಡುವುದು, ವಾಸ್ತವವಾಗಿ, ಉದ್ಯೋಗ ಕೌಶಲ್ಯಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ ಎಂಬುದಾಗಿ ತಿಳಿಸಿದೆ.


21 ನೇ ಶತಮಾನದ ಕೌಶಲ್ಯಗಳು ಮತ್ತು ವೃತ್ತಿಜೀವನದ ಮೇಲೆ ಇರಿಸಿರುವ ನಿರೀಕ್ಷೆಗಳನ್ನು ಆಧರಿಸಿ ವಿದೇಶದಲ್ಲಿ ನಡೆಸುವ ಅಧ್ಯಯನದ ಪರಿಣಾಮ, ವಿದೇಶದಲ್ಲಿ ಅಧ್ಯಯನ ಕಾರ್ಯಕ್ರಮಗಳು ಮತ್ತು ಕೌಶಲ್ಯ ಅಭಿವೃದ್ಧಿಯ ನಡುವಿನ ಸಂಪರ್ಕವನ್ನು ಆಕರ್ಷಿಸುತ್ತದೆ ಮತ್ತು ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಹೆಚ್ಚು ಉದ್ಯೋಗಶೀಲರಾಗಿದ್ದಾರೆ ಎಂಬುದನ್ನು ದೃಢಪಡಿಸುತ್ತದೆ.


ವರದಿಯ ಪ್ರಕಾರ, ವಿದೇಶದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುವುದರಿಂದ ಕೌಶಲ್ಯಗಳ ಅಭಿವೃದ್ಧಿ, ಉತ್ತಮ ಸಂವಹನ, ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳು, ಆತ್ಮ ವಿಶ್ವಾಸ, ಅಂತರರಾಷ್ಟ್ರೀಯ ಮಾನ್ಯತೆ, ಭಾಷೆ ಮತ್ತು ಸ್ವಯಂ-ಅರಿವು ಮೊದಲಾದ ಅನುಭವಗಳನ್ನು ಪಡೆದುಕೊಳ್ಳಬಹುದಾಗಿದೆ.


ವಿದೇಶದಲ್ಲಿ ಅಧ್ಯಯನ ಮಾಡುವುದು ಶಿಕ್ಷಣದ ಪರೀಧಿಯನ್ನು ವಿಸ್ತರಿಸಿಸುತ್ತದೆ, ಅಂತೆಯೇ ವಿದ್ಯಾರ್ಥಿಗಳನ್ನು ಮಹತ್ವಾಕಾಂಕ್ಷೆಯ ಹೆಚ್ಚು ವೃತ್ತಿ-ಆಧಾರಿತರನ್ನಾಗಿ ಮಾಡಿದೆ ಎಂದು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಉಲ್ಲೇಖಿಸಿದ್ದಾರೆ.


ವಿದೇಶದಲ್ಲಿ ಓದುವುದರಿಂದ ದೊರೆಯುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.


ಇದನ್ನೂ ಓದಿ: ಪ್ರಸಾರ ಭಾರತಿಯಲ್ಲಿ ಉದ್ಯೋಗ ಬಯಸುವವರಿಗೆ ಇಲ್ಲಿದೆ ಸುವರ್ಣಾವಕಾಶ


ಅಂತರರಾಷ್ಟ್ರೀಯ ಮಾನ್ಯತೆ:


ಅಂತರರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಪ್ರಪಂಚದ ಎಲ್ಲಾ ಮೂಲೆಗಳಿಂದ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವ ಮೂಲಕ ವೈವಿಧ್ಯತೆಯನ್ನು ಉತ್ತೇಜಿಸುತ್ತವೆ, ಹೀಗಾಗಿ ವಿದ್ಯಾರ್ಥಿಗಳು ವಿವಿಧ ದೇಶಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗವನ್ನು ಕಂಡುಕೊಳ್ಳಬಹುದು.


ಭಾಷೆ ಮತ್ತು ಸಂವಹನ ಕೌಶಲ್ಯಗಳು:


ಬಹುಭಾಷಿಯಾಗಿರುವುದು ನಿರ್ಧಾರ-ಮಾಡುವಿಕೆ ಮತ್ತು ಗಮನದ ವ್ಯಾಪ್ತಿಯನ್ನು ಸುಧಾರಿಸುತ್ತದೆ ಎಂದು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡುಹಿಡಿದಿದೆ. ಅಲ್ಲದೆ, ಸಂವಹನ ಎಂಬುದು ಉತ್ತಮ ಕಲೆಯಾಗಿದ್ದು ಉದ್ಯೋಗದಾತರು ಬಯಸುವ ಕೌಶಲ್ಯವಾಗಿದೆ.


ಸವಾಲುಗಳನ್ನು ಎದುರಿಸುವ ಸಾಮರ್ಥ್ಯ:


ವಿದೇಶಕ್ಕೆ ಹೋಗುವುದು ಸವಾಲುಗಳನ್ನು ಹೊಂದಿರುತ್ತದೆ, ಅದಾಗ್ಯೂ ಇದು ಏನನ್ನಾದರೂ ಸಾಧಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಇರುವ ಅವಕಾಶವನ್ನು ಹೆಚ್ಚು ಬಳಸಿಕೊಳ್ಳುವುದು ಮತ್ತು ಬದಲಾವಣೆಯ ಸವಾಲುಗಳನ್ನು ಜಯಿಸುವುದು ನಿಮ್ಮ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸುತ್ತದೆ.


ಇದನ್ನೂ ಓದಿ: ಪ್ರವಾಸೋದ್ಯಮವನ್ನು ನೀವೀಗ ವೃತ್ತಿಯಾಗಿ ಆಯ್ದುಕೊಳ್ಳಬಹುದು!


ನೆಟ್‌ವರ್ಕಿಂಗ್:


ವಿದೇಶದಲ್ಲಿ ಅಧ್ಯಯನ ಮಾಡುವಾಗ, ಅವಕಾಶಗಳನ್ನು ಹುಡುಕಲು ಸಹಾಯ ಮಾಡುವ ಜಾಗತಿಕ ಸಂಪರ್ಕ ವಲಯವನ್ನು ನೀವು ನಿರ್ಮಿಸಿಕೊಳ್ಳುತ್ತೀರಿ. ಇದರಿಂದ ಉತ್ತಮ ಅವಕಾಶಗಳು ನಿಮಗೆ ಒದಗಿ ಬರಬಹುದು.


ಸಮಸ್ಯೆ-ಪರಿಹರಿಸುವುದು:


ಹೊಸ ನಿರ್ಧಾರವನ್ನು ತಾಳುವ ಸಾಮರ್ಥ್ಯದಿಂದ ಹಿಡಿದು, ಬಜೆಟ್‌ನಲ್ಲಿ ದಿನಸಿ ಖರೀದಿಸುವುದು, ಹೊಸ ಆಸಕ್ತಿಗಳನ್ನು ಅನ್ವೇಷಿಸಲು ಸ್ಥಳೀಯ ಪ್ರಯಾಣದ ಮಾರ್ಗಗಳನ್ನು ಕಂಡುಹಿಡಿಯುವುದು, ಮೊದಲಾದ ನೈತಿಕ ಜ್ಞಾನವನ್ನು ನೀವು ಪಡೆದುಕೊಳ್ಳುತ್ತೀರಿ. ವಿದೇಶದಲ್ಲಿ ಅಧ್ಯಯನ ಮಾಡುವುದು ಸವಾಲಿನ ಅತ್ಯಂತ ಕಠಿಣ ಸಂದರ್ಭವನ್ನು ನಿಮಗೆ ಒದಗಿಸುತ್ತದೆ ಹಾಗೂ ಸಮಸ್ಯೆ ನಿಭಾಯಿಸುವ ಛಾತಿಯನ್ನು ಕಲಿಸುತ್ತದೆ.


ಆತ್ಮವಿಶ್ವಾಸ:


ವಿದೇಶದಲ್ಲಿ ಅಧ್ಯಯನ ಮಾಡುವಾಗ ನೀವು ಎಲ್ಲಾ ರೀತಿಯ ಜನರು ಮತ್ತು ಸನ್ನಿವೇಶಗಳನ್ನು ನಿಮ್ಮದೇ ಆದ ರೀತಿಯಲ್ಲಿ ಎದುರಿಸಬೇಕಾಗುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ನಿಮ್ಮನ್ನು ಸ್ವಾವಲಂಬಿಯನ್ನಾಗಿಸುವ ಮತ್ತು ಚೇತರಿಸಿಕೊಳ್ಳುವ ಮೌಲ್ಯಯುತವಾದ ವೈಯಕ್ತಿಕ ಮತ್ತು ವೃತ್ತಿಪರ ಪಾಠಗಳನ್ನು ನೀವು ಕಲಿಯುತ್ತೀರಿ.


ಸಮಗ್ರ ವ್ಯಕ್ತಿತ್ವ ವಿಕಸನ:


ಹೊಸ ದೇಶದಲ್ಲಿ ಜೀವನ ನಿರ್ವಹಣೆ ಮಾಡುವುದು ನಿಸ್ಸಂದೇಹವಾಗಿ ನಿಮ್ಮ ಅಥವಾ ಜೀವನದ ಬಗ್ಗೆ ನೀವು ಹೊಂದಿರುವ ಧಾರಣೆಗಳನ್ನು ಬದಲಿಸುತ್ತದೆ. ಇದು ನಿಮ್ಮ ಸಮಗ್ರ ವ್ಯಕ್ತಿತ್ವ ಬೆಳವಣಿಗೆಗೆ ಕಾರಣವಾಗುತ್ತದೆ.


ಇವುಗಳಲ್ಲದೆ ವಿದೇಶದಲ್ಲಿ ಅಧ್ಯಯನ ನಡೆಸುವುದರಿಂದ ತಂಡವನ್ನು ಮುನ್ನಡೆಸುವ ಸಾಮರ್ಥ್ಯ, ನಾಯಕತ್ವ ಕೌಶಲ್ಯಗಳು, ಉದ್ಯೋಗ ನೀತಿಗಳನ್ನು ನೀವು ಕಲಿತುಕೊಳ್ಳುತ್ತೀರಿ. ಇದರಿಂದಾಗಿ, ವಿದೇಶದಲ್ಲಿ ಅಧ್ಯಯನ ಮಾಡುವುದು ಜೀವನದ ಗುರಿಯನ್ನು ಉತ್ತಮಗೊಳಿಸುವುದು ಮಾತ್ರವಲ್ಲದೆ ಕಾರ್ಯಸಾಧ್ಯ ಕೌಶಲ್ಯಗಳೊಂದಿಗೆ ನಿಮ್ಮನ್ನು ಸಮರ್ಥರನ್ನಾಗಿಸುತ್ತದೆ.

First published: