• Home
  • »
  • News
  • »
  • education
  • »
  • Career In Salon Industry: ಸಲೂನ್‌ ಇಂಡಸ್ಟ್ರಿಯಲ್ಲಿ ವೃತ್ತಿ ಆರಂಭಿಸಬೇಕೇ? ಇಲ್ಲಿದೆ ಹಂತ ಹಂತದ ಮಾಹಿತಿ

Career In Salon Industry: ಸಲೂನ್‌ ಇಂಡಸ್ಟ್ರಿಯಲ್ಲಿ ವೃತ್ತಿ ಆರಂಭಿಸಬೇಕೇ? ಇಲ್ಲಿದೆ ಹಂತ ಹಂತದ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸೌಂದರ್ಯ ಉದ್ಯಮದಲ್ಲಿ ನೀವು ಆಸಕ್ತಿ ಹೊಂದಿದ್ದೀರಾ ಅಂತಾದ್ರೆ ನಿಮಗೆ ಸಾಗರದಷ್ಟು ಅವಕಾಶಗಳಿವೆ. ಅದಕ್ಕೆ ಹೆಚ್ಚೇನೂ ಓದಿರಬೇಕಾಗಿಲ್ಲ. ನೀವು ಕೇವಲ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರೆ ಸಾಕು. ಕಾಲೇಜಿನ ಕೊನೆಯ ವರ್ಷದಲ್ಲಿದ್ದರೂ ನಡೆಯುತ್ತೆ. ಆದ್ರೆ ಸೌಂದರ್ಯ ಉದ್ಯಮಕ್ಕೆ ಜಿಗಿಯುವ ಮೊದಲು, ವ್ಯಾಪಾರ ಯೋಜನೆ, ಸಲೂನ್‌ನ ಹೆಸರು, ಸ್ಥಳದ ಆಯ್ಕೆ ಹೀಗೆ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮುಂದೆ ಓದಿ ...
  • Share this:

ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಆಸಕ್ತಿ ಇರುತ್ತೆ. ಕೆಲವರು ಓದೋದ್ರಲ್ಲಿ ಜಾಣರಿದ್ದರೆ, ಇನ್ನೂ ಕೆಲವರು ವ್ಯವಹಾರದಲ್ಲಿ (Business) ಜಾಣರಾಗಿರ್ತಾರೆ. ಮತ್ತೆ ಕೆಲವರಿಗೆ ಕಲೆಯಲ್ಲಿ ಇಂಟೆರೆಸ್ಟ್.‌ ಹೀಗೆ ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಕುತೂಹಲ.. ಜಾಣ್ಮೆ ಇರುತ್ತೆ. ಅದರ ಮೂಲಕವೇ ಅವರು ಬದುಕು ಕಟ್ಟಿಕೊಳ್ತಾರೆ. ಮತ್ತೊಂದಿಷ್ಟು ಜನರಿಗೆ ಸೌಂದರ್ಯದ (Beauty) ಬಗ್ಗೆ ವಿಶೇಷ ಆಸಕ್ತಿ ಇರುತ್ತೆ. ಹೀಗೆ ಆಸಕ್ತಿ ಇರೋರಿಗೆ ಸಲೂನ್‌ ಇಂಡಸ್ಟ್ರಿಯಲ್ಲಿ (Salon industry) ಬೇಕಾದಷ್ಟು ಅವಕಾಶಗಳಿವೆ. ದೆಹಲಿ ಕೌಶಲ್ಯ ಮತ್ತು ವಾಣಿಜ್ಯೋದ್ಯಮ ವಿಶ್ವವಿದ್ಯಾಲಯದ (DSEU) ಉಪನ್ಯಾಸಕಿ ಗುಂಜನ್ ತನೇಜಾ ಅವರು ತಮ್ಮ ಪುಸ್ತಕದಲ್ಲಿ ಸೌಂದರ್ಯ ಉದ್ಯಮದಲ್ಲಿ ವೃತ್ತಿಜೀವನದ (Career) ರಹಸ್ಯವನ್ನು ತೆರೆದಿಟ್ಟಿದ್ದಾರೆ. 


“ಸ್ಟೆಪ್‌ ಬೈ ಸ್ಟೆಪ್‌ ಗೈಡ್‌ ಫಾರ್‌ ಸಲೂನ್ ಮ್ಯಾನೇಜ್‌ಮೆಂಟ್‌” ಪುಸ್ತಕದಲ್ಲಿ ಈ ಬಗ್ಗೆ ವಿವರಿಸಲಾಗಿದ್ದು, ಇದು ಸಲೂನ್ ನಿರ್ವಹಣೆಯ ಬಗೆಗಿನ ಭಾರತದ ಮೊದಲ ಪುಸ್ತಕವಾಗಿದೆ.


ಹೌದು, ಸೌಂದರ್ಯ ಉದ್ಯಮದಲ್ಲಿ ನೀವು ಆಸಕ್ತಿ ಹೊಂದಿದ್ದೀರಾ ಅಂತಾದ್ರೆ ನಿಮಗೆ ಸಾಗರದಷ್ಟು ಅವಕಾಶಗಳಿವೆ. ಅದಕ್ಕೆ ಹೆಚ್ಚೇನೂ ಓದಿರಬೇಕಾಗಿಲ್ಲ. ನೀವು ಕೇವಲ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರೆ ಸಾಕು. ಕಾಲೇಜಿನ ಕೊನೆಯ ವರ್ಷದಲ್ಲಿದ್ದರೂ ನಡೆಯುತ್ತೆ. ಆದ್ರೆ ಸೌಂದರ್ಯ ಉದ್ಯಮಕ್ಕೆ ಜಿಗಿಯುವ ಮೊದಲು, ವ್ಯಾಪಾರ ಯೋಜನೆ, ಸಲೂನ್‌ನ ಹೆಸರು, ಸ್ಥಳದ ಆಯ್ಕೆ ಹೀಗೆ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.


ಹಾಗಿದ್ರೆ ಸಲೂನ್‌ ಇಂಡಸ್ಟ್ರಿಯಲ್ಲಿ ಕಾಲಿಡಬೇಕೆಂದರೆ ಯಾವೆಲ್ಲ ವಿಷಯಗಳು ಮುಖ್ಯವಾಗುತ್ತವೆ ಅನ್ನೋದನ್ನು ನೋಡೋದಾದ್ರೆ,


ಸ್ಥಳದ ಆಯ್ಕೆ
ಸರಿಯಾದ ಸ್ಥಳವು ಯಶಸ್ವಿ ವ್ಯಾಪಾರಕ್ಕೆ ಮೊದಲ ಹೆಜ್ಜೆಯಾಗಿದೆ. ಪ್ರತಿಯೊಂದು ಉದ್ಯಮದಲ್ಲಿ ಸ್ಥಳವು ಮುಖ್ಯವಾಗಿದೆ. ಸ್ಥಳದ ಆಯ್ಕೆಗೆ ಹೋದಾಗ ಬೆಳಗಿನ ಹೊತ್ತು ಹಾಗೂ ಸಂಜೆಯ ಸಮಯದಲ್ಲಿ ಹೋಗಿ ಪರಿಶೀಲಿಸಿ. ಏಕೆಂದರೆ ಈ ಎರಡೂ ಸಮಯದಲ್ಲಿ ವ್ಯಾಪಾರ ಬದಲಾಗುತ್ತಿರುತ್ತದೆ. ಅಸ್ತವ್ಯಸ್ತಗೊಂಡಿರುವ ರಸ್ತೆಗಳು ನಿಮ್ಮ ವ್ಯಾಪಾರವನ್ನು ಕುಂದಿಸಬಹುದು. ಹಾಗಾಗಿ ನೀವು ಆಯ್ಕೆ ಮಾಡುವ ಸ್ಥಳವು ಗ್ರಾಹಕರು ಸುಲಭವಾಗಿ ಗುರುತಿಸುವಂತಿರಲಿ.


ಇದನ್ನೂ ಓದಿ: Medical College: ಅತೀ ಕಡಿಮೆ ಖರ್ಚಿನಲ್ಲಿ ಈ 4 ದೇಶಗಳಲ್ಲಿ ಮೆಡಿಕಲ್ ಓದಬಹುದು


ನೌಕರರನ್ನು ಪ್ರೇರೇಪಿಸಿ
ನೀವು ಯಾವಾಗಲೂ ಪ್ರತಿದಿನ ಬೆಳಿಗ್ಗೆ 15 ನಿಮಿಷಗಳ ತಂಡದ ಸಭೆ ಮಾಡಬೇಕು. ಅಲ್ಲಿ ಸಮಸ್ಯೆಗಳ ಬಗ್ಗೆ ಹಾಗೂ ಅದರ ಪರಿಹಾರದ ಬಗ್ಗೆ ಮಾತನಾಡಿ. ವಿಶೇಷವಾಗಿ ಯೋಚಿಸುವಂತೆ, ಮಾರುಕಟ್ಟೆಯಲ್ಲಿ ಭದ್ರವಾದ ಸ್ಥಾನ ಸಂಪಾದಿಸಲು ಅವರನ್ನು ಪ್ರೇರೇಪಿಸಬೇಕು.


ಖರ್ಚಿನ ಬಗ್ಗೆ ಗಮನವಹಿಸಿ
ಖರ್ಚು ವೆಚ್ಚಗಳ ಲೆಕ್ಕಾಚಾರದಿಂದ ನಿಮ್ಮ ವ್ಯಾಪಾರವು ಬೆಳೆಯುತ್ತಿದೆಯೇ ಅಥವಾ ಕುಗ್ಗುತ್ತಿದೆಯೇ ಎಂಬುದನ್ನು ನಿಖರವಾಗಿ ಹೇಳಬಹುದು. ಹೆಚ್ಚಿನ ಸಲೂನ್‌ಗಳು ಒಂದು ಅಥವಾ ಎರಡು ವರ್ಷಗಳ ನಂತರ ಮುಚ್ಚಿಹೋಗುತ್ತವೆ.


ಹಾಗಾಗಿ ವರ್ಷದ ಕೊನೆಯಲ್ಲಿ ಖರ್ಚು ವೆಚ್ಚ ಲೆಕ್ಕ ಹಾಕೋದಕ್ಕಿಂತ ದಿನಕ್ಕೊಮ್ಮೆ ಅಥವಾ ವಾರ, 15 ದಿನಗಳಿಗೊಮ್ಮೆ ಖರ್ಚು ವೆಚ್ಚಗಳನ್ನು ಲೆಕ್ಕ ಹಾಕುವ ಪದ್ಧತಿ ಇಟ್ಟುಕೊಳ್ಳಿ. ಈ ಟ್ರ್ಯಾಕಿಂಗ್ ಪಾಯಿಂಟ್‌ಗಳು ನಿಮ್ಮ ಕಂಪನಿಯನ್ನು ಅನಗತ್ಯ ನಷ್ಟದಿಂದ ರಕ್ಷಿಸಬಹುದು.


ಕೆಲಸದ ವಾತಾವರಣದ ಅಪಾಯ
ಸಲೂನ್‌ ಗಳಲ್ಲಿ ಹೆಚ್ಚಿನ ಸಮಯ ಅಥವಾ ಕೆಲವೊಮ್ಮೆ ದೀರ್ಘ ಸಮಯ ಕೆಲಸ ಮಾಡುವಾಗ ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತೇವೆ. ಅಲ್ಲದೇ ತಪ್ಪಾದ ಭಂಗಿಯಲ್ಲಿ ನಿಂತು ಕೆಲಸ ಮಾಡುತ್ತೇವೆ. ಇದರಿಂದ ಮೂಳೆ ಹಾಗೂ ಸ್ನಾಯುಗಳ ತೊಂದರೆ ಉಂಟಾಗಬಹುದು. ಹಾಗಾಗಿ ವೃತ್ತಿರಪರರು ಮೇಕಪ್‌ ಹಾಕುವಾಗ, ಹೇರ್‌ ಕಟ್‌, ನೇಲ್‌ ಆರ್ಟ್‌ ಮುಂತಾದ ಕೆಲಸಗಳನ್ನು ಮಾಡುವಾಗ ಸರಿಯಾದ ಭಂಗಿಯಲ್ಲಿ ನಿಂತು ಅಥವಾ ಕುಳಿತು ಕೆಲಸ ಮಾಡುವುದು ಮುಖ್ಯ.


ವ್ಯಾಪಾರ ತಂತ್ರಗಳು
ಎಲ್ಲರೂ ಮಾಡಿದ ಹಾಗೆಯೇ ಮಾಡುವ ಬದಲು ನಿಮ್ಮ ಸಾಮರ್ಥ್ಯ ಏನಿದೆ ಅದರಲ್ಲಿ ನೀವು ಮುನ್ನುಗ್ಗಿ. ಸೌಂದರ್ಯ ಕ್ಷೇತ್ರದಲ್ಲಿ, ಹಲವಾರು ಪರ್ಯಾಯಗಳಿವೆ. ಆದರೆ ನೀವು ಏನನ್ನು ಹುಡುಕುತ್ತಿದ್ದೀರಿ ಮತ್ತು ನಿಮ್ಮ ಪರಿಣತಿಯ ಕ್ಷೇತ್ರ ಯಾವುದು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಉದ್ಯಮಕ್ಕೆ ಪ್ರವೇಶಿಸುವ ಮೊದಲು, ನಿಮ್ಮ ಸಾಮರ್ಥ್ಯಗಳನ್ನು ಪರಿಗಣಿಸಿ ಮತ್ತು ಸ್ವಲ್ಪ ಸಂಶೋಧನೆ ಮಾಡಿ.


ಕೋರ್ಸ್
ದೆಹಲಿ ಕೌಶಲ್ಯ ಮತ್ತು ಉದ್ಯಮಶೀಲತಾ ವಿಶ್ವವಿದ್ಯಾಲಯವು 12 ಕಾಲೇಜುಗಳಲ್ಲಿ ಸಲೂನ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಅನೇಕ ಖಾಸಗಿ ಸಂಸ್ಥೆಗಳು ಸಲೂನ್ ನಿರ್ವಹಣೆಯಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ಒದಗಿಸುತ್ತವೆ. ಇದಕ್ಕೆ ಯಾವುದೇ ಅಧಿಕೃತ ಶೈಕ್ಷಣಿಕ ಸಂಸ್ಥೆಯಿಂದ 12 ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯಬಹುದು.


ಇದನ್ನೂ ಓದಿ:  Library: ಲೈಬ್ರರಿ ಸೈನ್ಸ್ ಪ್ರೋಗ್ರಾಂ ಬಗ್ಗೆ ಆಸಕ್ತಿ ಇದೆಯಾ? ಕೋರ್ಸ್‌ ಆಯ್ಕೆಗೆ ಮೊದಲು ಈ ಸ್ಟೋರಿ ಓದಿ


ಒಟ್ಟಾರೆ, ಸೌಂದರ್ಯ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಸರಿಯಾದ ಅಧ್ಯಯನ ಮಾಡಿ ಕೆಲಸ ಮಾಡಲು ಆರಂಭಿಸಿದರೆ ಒಳ್ಳೆಯ ಸುಭದ್ರ ಜೀವನ ಕಟ್ಟಿಕೊಳ್ಳಬಹುದು.

Published by:Ashwini Prabhu
First published: