• Home
  • »
  • News
  • »
  • education
  • »
  • Story Telling Competition: ನಿಮ್ಮ ಮಗುವನ್ನು ಈ ಸ್ಪರ್ಧೆಗೆ ಕಳಿಸಿ, ಅವರಲ್ಲಿನ ಜ್ಞಾನ ಹೆಚ್ಚಿಸಿ

Story Telling Competition: ನಿಮ್ಮ ಮಗುವನ್ನು ಈ ಸ್ಪರ್ಧೆಗೆ ಕಳಿಸಿ, ಅವರಲ್ಲಿನ ಜ್ಞಾನ ಹೆಚ್ಚಿಸಿ

ಭಾಗವಹಿಸಿ

ಭಾಗವಹಿಸಿ

ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ಖಚಿತ. ಉತ್ತಮ ಪ್ರಸ್ತುತಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪೋಷಕ ಬಹುಮಾನಗಳೂ ಲಭ್ಯ.

  • News18 Kannada
  • Last Updated :
  • Karnataka, India
  • Share this:

ಮಕ್ಕಳಿಗೆ ಕಥೆ ಹೇಳುವುದು (Story Telling) . ಹೇಳಿ ಕೊಡುವುದು ಎರಡೂ ಕೂಡ ರೂಢಿಯಲ್ಲಿರಬೇಕಾದ ವಿಷಯ ಇದರಿಂದ ನಿಮ್ಮ ಮಕ್ಕಳಲ್ಲಿ ಜ್ಞಾನ ಹೆಚ್ಚುತ್ತದೆ. ವ್ಯಾಸವಿರಚಿತ ಮಹಾಭಾರತದ ಕಥೆಗಳ ಅನಾವರಣ-ಭಾರತ (India) ಕಥಾ ಕಥನ ಸ್ಪರ್ಧೆ (Competition) ನಡೆಯಲಿದ್ದು ಆನ್​ಲೈನ್​ (Online) ಮೂಲಕ ನಿಮ್ಮ ಮಕ್ಕಳೂ ಸಹ ಇದರಲ್ಲಿ ಭಾಗವಹಿಸಬಹುದು. ಇದೂ ಕಲಿಕೆಯ ಒಂದು ಭಾಗವಾಗಿರುತ್ತದೆ. ಸ್ಟೇಜ್ ಫಿಯರ್ (Stage Fear)​ ಹೋಗಲಾಡಿಸಿ ನಿಮ್ಮ ಮಕ್ಕಳಲ್ಲಿ ಉತ್ಸಾಹ ಹೆಚ್ಚಿಸಲು ನೀವು ಈ ಸ್ಪರ್ಧೆಗೆ ನಿಮ್ಮ ಮಕ್ಕಳನ್ನು ಭಾಗವಹಿಸುವಂತೆ ಮಾಡಿ. 


ಮಹಾಭಾರತವು ಆಖ್ಯಾನ-ಕಥಾನಕಗಳ ಆಗರ. ಇಲ್ಲಿಂದ ಯಾವುದಾದರೊಂದು ಕಥೆಯನ್ನು ಆರಿಸಿ ಮತ್ತು ನಿಮ್ಮ ಮಕ್ಕಳಿಗೆ ಅದನ್ನು ಹೇಳಿಕೊಡಿ ಅವರು ಕಥೆ ಕಲಿತ ನಂತರ ಪ್ರದರ್ಶಿಸಿ.


ಇದರ ಪ್ರಯೋಜನ
ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ಖಚಿತ. ಉತ್ತಮ ಪ್ರಸ್ತುತಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಪೋಷಕ ಬಹುಮಾನಗಳು. ಆಯ್ದ ವೀಡಿಯೋಗಳನ್ನು ಯೂಟ್ಯೂಬ್ ನಲ್ಲಿ ಪ್ರಸಾರಮಾಡಲಾಗುವುದು.


ಭಾಗವಹಿಸಲು ಹೀಗೆ ಮಾಡಿ
ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಿ
ಅರ್ಜಿ ಶುಲ್ಕ ಕೇವಲ 18 ರೂ
ನಿಮ್ಮ ಮಗು ಕಥೆ ಹೇಳಿದ ನಂತರ ಅರ್ಜಿ ಶುಲ್ಕವನ್ನೂ ಸಹ ಹಿಂದಿರುಗಿಸಲಾಗುತ್ತದೆ.


ನೀತಿ ಕಥೆ ಹೇಳಿ
ಮೊದಲಿಗೆ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೊಂದಾಯಿಸಿಕೊಂಡು, ಶುಲ್ಕ ಪಾವತಿಸಿ. ತಾವು ಆಯ್ಕೆ ಮಾಡಿದ ಕಥೆಯನ್ನು ತಿಳಿಸಿ, ಅದರ ಅನುಕ್ರಮ ಸಂಖ್ಯೆಯನ್ನು ಪಡೆಯಿರಿ. ಕಥೆಯನ್ನು ಓದಿ-ಅಭ್ಯಸಿಸಿ-ಸುಂದರವಾಗಿ ಪ್ರಸ್ತುತ ಪಡಿಸಿದ ವೀಡಿಯೋವನ್ನು ನಮಗೆ ಟೆಲಿಗ್ರಾಮ್ ನಲ್ಲಿ ಕಳುಹಿಸಿ. ಕಥೆಯ ಕೊನೆಗೆ ನೀತಿ ಇದ್ದರೆ ಉತ್ತಮ.


ವಿಡಿಯೋ ಹೀಗಿರಲಿ
ಹಿಂಭಾಗದಲ್ಲಿ ಕಡು ಬಣ್ಣದ ಬಟ್ಟೆ ಹಾಕಿ. ಬೆಳಕು ನಿಮ್ಮ ಮುಂದಿನಿಂದ ಇದ್ದು, ಮುಖದ ಮೇಲೆ ಇದ್ದರೆ ಚೆಂದ. ನೀವು ಸ್ಕ್ರೀನ್ ನ ಬಲ ಅಥವ ಎಡ ಭಾಗದಲ್ಲಿ ಕಾಣುವಂತೆ ಇದ್ದರೆ ಉತ್ತಮ. ಸಾಂಪ್ರದಾಯಿಕ ಉಡುಪು ಧರಿಸಿರಬೇಕು.


ಯಾವ ಭಾಷೆಯ ಕಥೆ?
ಮಾತೃ ಭಾಷೆ- ಕನ್ನಡ-ತುಳು-ಕೊಂಕಣಿ-ಹಿಂದಿ-ಆಂಗ್ಲ- ನಿಮ್ಮ ಇಷ್ಟದ ಯಾವುದೇ ಭಾಷೆಯಲ್ಲಿ ಪ್ರಸ್ತುತಪಡಿಸಬಹುದು.


ಯಾರು ಭಾಗವಹಿಸಬಹುದು?
ಮಾತು ಆಡಬಲ್ಲ ಚಿಕ್ಕ ಮಕ್ಕಳಿಂದ ಹದಿನೇಳು ವರ್ಷದ ಮಕ್ಕಳವರೆಗಿನವರಿಗೆ ಅವಕಾಶವಿದೆ. ಜಾತಿ-ಮತ-ಲಿಂಗ-ದೇಶ-ಭಾಷೆಯ ಭೇದವಿಲ್ಲದೆ ಎಲ್ಲರೂ ಭಾಗವಹಿಸಬಹುದು.


ಇದನ್ನೂ ಓದಿ: ಸರ್ಕಾರದಿಂದ KPSC, UPSC ಪರೀಕ್ಷೆಗೆ ಉಚಿತ ತರಬೇತಿ


ಕಥೆ ಹೇಳುವ ಸಮಯ
ಕನಿಷ್ಟ ಎರಡು ನಿಮಿಷದಿಂದ ಗರಿಷ್ಟ ಆರು ನಿಮಿಷಗಳನ್ನು ಬಳಸಿಕೊಳ್ಳಬಹುದು.


ನಿಯಮಗಳು
1. ಒಂದು ಕಥೆಯನ್ನು ಒಬ್ಬರು ಮಾತ್ರ ಹೇಳಬಹುದು. ಕಥೆಯನ್ನು ಆರಿಸಿ, ನೋಂದಣಿ ಮಾಡಿದ ಮೇಲೆ ಕಥೆ-ಕಥನಕಾರರನ್ನು ಬದಲಾಯಿಸುವಂತಿಲ್ಲ. ಬೇರೆಯವರು ಈ ಕಥೆಯನ್ನು ಹೇಳುವಂತಿಲ್ಲ.
2. ನೋಂದಣಿ ಮಾಡಿ ಕಥೆಯನ್ನು ಹೇಳದವರಿಗೆ ಅಥವಾ ಭಾಗವಹಿಸದವರಿಗೆ ನೋಂದಣಿ ಶುಲ್ಕ ಹಿಂದಿರುಗಿಸುವುದಿಲ್ಲ.
3. ಒಂದೇ ಮೊಬೈಲ್ ಸಂಖ್ಯೆಯಿಂದ ಅನೇಕ ಜನರು ನೋಂದಣಿ ಮಾಡಿಕೊಳ್ಳಬಹುದು.
4. ಕಥೆಯು ವೇದವ್ಯಾಸ ವಿರಚಿತ ಮಹಾಭಾರತದ ಭಾಗವಾಗಿರಬೇಕು. ನೀವು ಆರಿಸಿದ ಕಥೆ ಮೂಲದಲ್ಲಿದೆಯೇ ಎಂದು ಸಂದೇಹವಿದ್ದರೆ, ಸಂದೇಹ ಪರಿಹರಿಸುವಲ್ಲಿ ನಾವು ಸಹಾಯ ಮಾಡಲು ಪ್ರಯತ್ನಿಸುತ್ತೇವೆ.
5. ಮೊದಲು ಬಂದವರಿಗೆ ಮೊದಲ ಆದ್ಯತೆ
ಮೊದಲು ಬಂದವರ ಆಯ್ಕೆಯ ಕಥೆಯನ್ನು ಅವರ ಹೆಸರಿನಲ್ಲಿ ನೋಂದಣಿ ಮಾಡಲಾಗುವುದು. ಮತ್ತೆ ಬಂದವರು ಈಗಾಗಲೇ ನೋಂದಣಿ ಆಗಿರುವ ಕಥೆಯನ್ನು ಬಳಸಲು ಅವಕಾಶವಿಲ್ಲ.
6.ಕಥೆಯು ಮಹಾಭಾರತದ ಯಾವ ಭಾಗದಲ್ಲಿ ಬಂದಿದೆ ಮತ್ತು ಎಲ್ಲಿಂದ ಎಲ್ಲಿಯವರೆಗೆ ಹೇಳಲಿದ್ದೇವೆ ಎಂದು ನೋಂದಣಿಯಾಗುವಾಗಲೇ ತಿಳಿಸಬೇಕು. ಈ ಮಾಹಿತಿಯ ಮೇಲೆಯೇ ಆ ಕಥೆಯನ್ನು ಸಂಬಂಧಿಸಿದವರಿಗೆ ಮೀಸಲಾಗಿಡಲಾಗುವುದು.


ಕಥೆ ಹೇಳಿದ ಮಕ್ಕಳಿಗೆ ದೊಡ್ಡವರಾದ ನೀವು ಬಹುಮಾನ ಕೊಡಬೇಕು ಅಂತ ನಿಮಗೆ ಅನಿಸಿದರೆ ನೀವೂ ಪ್ರಾಯೋಜಕರಾಗಬಹುದು. ಅಥವ ಯಾವುದೇ ನಿರ್ದಿಷ್ಟ ಮಗುವಿಗೂ ನೀವೇ ಬಹುಮಾನ ಕೊಡಬಹುದು.


ಸಂಪರ್ಕ ಸಂಖ್ಯೆ:
9900500832 / 6360980096


ಕೊನೆ ದಿನಾಂಕ
30-11-2022

First published: