• Home
  • »
  • News
  • »
  • education
  • »
  • No Bag Day: ಶಾಲೆಗೆ ಹೋಗಲು ಈಗ ಬ್ಯಾಗ್​ ಬೇಡ! ವಿದ್ಯಾರ್ಥಿಗಳು ಫುಲ್​ ಖುಷ್!

No Bag Day: ಶಾಲೆಗೆ ಹೋಗಲು ಈಗ ಬ್ಯಾಗ್​ ಬೇಡ! ವಿದ್ಯಾರ್ಥಿಗಳು ಫುಲ್​ ಖುಷ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಿಂಗಳಿಗೆ ಒಂದು ದಿನವಾದರೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಮ್ಮ ಭಾರದ ಬ್ಯಾಗ್‌ಗಳನ್ನು ಮನೆಯಲ್ಲಿಯೇ ಇಟ್ಟು ಮೋಜಿನ ಕಲಿಕಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

  • News18 Kannada
  • Last Updated :
  • Karnataka, India
  • Share this:

ತಿಂಗಳಿಗೆ ಒಂದು ದಿನವಾದರೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ತಮ್ಮ ಭಾರದ ಬ್ಯಾಗ್‌ಗಳನ್ನು ಮನೆಯಲ್ಲಿಯೇ (Home) ಇಟ್ಟು ಮೋಜಿನ ಕಲಿಕಾ ಚಟುವಟಿಕೆಗಳಲ್ಲಿ (Activity) ಪಾಲ್ಗೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (DSERT) ಸಂತಸದ ಶನಿವಾರದ (Saturday) ಅಡಿಯಲ್ಲಿ ತಿಂಗಳಿಗೆ (Monthly) ಒಂದು ಶನಿವಾರದಂದು ಬ್ಯಾಗ್ ರಹಿತ ದಿನವನ್ನು ತರಲು ಆಲೋಚಿಸಿದೆ. ಮತ್ತು ಇದನ್ನು ಜಾರಿಗೆತರಲಾಗಿದೆ. 

ಕಲಿಕೆ ಜೊತೆಗೆ ಕೌಶಲ್ಯವೂ ರೂಢಿಯಾಗಲಿ ಎಂದು ಈ ಹೊಸ ನೀತಿಯನ್ನು ಜಾರಿಗೊಳಿಸಲಾಗಿದೆ. ಈ ವಿಚಾರ ಮಕ್ಕಳಿಗೂ ಸಂತೋಷ ನೀಡುತ್ತದೆ. ಮಕ್ಕಳು ಪ್ರತಿ ದಿನವೂ ತಮ್ಮ ಭಾರದ ಭ್ಯಾಗ್​ಗಳನ್ನು ಹೊತ್ತು ಶಾಲೆಗೆ ತೆರಳಲು ಕಷ್ಟಪಡುತ್ತಿದ್ದ ಮಕ್ಕಳಿಗೆ ಈ ಸುದ್ದಿ ಕೇಳಿ ತುಂಬಾ ಖುಷಿಯಾಗಲಿದೆ. ತಮ್ಮ ಭಾರದ ಬ್ಯಾಗ್​ಗಳಿಂದ ವಾರಕ್ಕೊಂದು ದಿನ ಬ್ಯಾಗ್​ ಮುಕ್ತವಾಗಿ ಶಾಲೆಗೆ ತೆರಳಬಹುದು.


ಇಲಾಖೆಯ ಪ್ರಕಾರ ಕಲಿಕಾ ಚೇತರಿಕೆ ಮತ್ತು ಸುಧಾರಣೆಯ ಪ್ರಕಾರ ಪ್ರತಿ ತಿಂಗಳ ಶನಿವಾರದಂದು  ನೋ ಬ್ಯಾಗ್​ ಡೇ ಮಾಡಲಾಗಿದೆ. ಶಿಕ್ಷಕರೂ ಕೂಡ ಮಕ್ಕಳ ಕೌಶಲ್ಯ ಹಾಗೂ ಆಸಕ್ತಿಯ ವಿಷಯಗಳಿಗೆ ಒತ್ತು ನೀಡಲು ಈ ದಿನವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಲಾಗಿದೆ.


ಇದನ್ನೂ ಓದಿ: ರಾಜ್ಯದ ಶಾಲಾ ಮಕ್ಕಳಿಗೆ ಗುಡ್​ ನ್ಯೂಸ್​; ಬಂತು ಬ್ಯಾಗ್​ ರಹಿತ ದಿನದ ಆಚರಣೆ


ಸರ್ಕಾರದ ನಿರ್ಧಾರ:


ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಪ್ರಕಾರ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ತಿಂಗಳ ಒಂದು ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲು ಸೂಚಿಸಲಾಗಿದೆ. ಈ ಶನಿವಾರವನ್ನು ಸಂಭ್ರಮದ ದಿನವನ್ನಾಗಿ ಆಚರಿಸಲು ಸುತ್ತೋಲೆಯಲ್ಲಿ ಹೇಳಲಾಗಿದೆ. ಮಕ್ಕಳಲ್ಲಿ ನಾಗರಿಕ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ವಿವಿಧ 10 ವಿಷಯಗಳಲ್ಲಿ ಸ್ವಯಂ ವಿವರಣಾತ್ಮಕ ಚಿತ್ರ ಸಹಿತ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಲಾಗುವುದು.


ಬ್ಯಾಗ್ ರಹಿತ ದಿನದಂದು ವಿದ್ಯಾರ್ಥಿಗಳು (DSERT) ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿದ ಚಟುವಟಿಕೆ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದೆ. ಉಪಕ್ರಮದ ಅಡಿಯಲ್ಲಿ ಶಿಕ್ಷಕರು ಡೌನ್‌ಲೋಡ್ ಮಾಡಬಹುದಾದ ಮತ್ತು ಮುದ್ರಿಸಬಹುದಾದ ಹಲವಾರು ನಾಗರಿಕ ವಿಷಯಗಳಿಗೆ ಸಂಬಂಧಿಸಿದ ವಿಷಯವನ್ನು DSERT ಅಪ್‌ಲೋಡ್ ಮಾಡಲಾಗಿದೆ.


ಈ ವೆಬ್​ಸೈಟ್​ನಲ್ಲಿ ನಮೂದಿಸಲಾದ ವಿಷಯಗಳೆಂದರೆ ಸುರಕ್ಷತೆ ಮತ್ತು ಭದ್ರತೆ, ಘನತ್ಯಾಜ್ಯ ನಿರ್ವಹಣೆ, ತಂತ್ರಜ್ಞಾನದ ಸುರಕ್ಷಿತ ಬಳಕೆ, ರಸ್ತೆ ಸುರಕ್ಷತೆ, ಲಿಂಗ ಸಮಾನತೆ, ವಿಕಲಾಂಗತೆಗಳು, ಆರೋಗ್ಯಕರ ಜೀವನಶೈಲಿ, ಸಾರ್ವಜನಿಕ ಸೇವೆಗಳು, ಪೋಷಣೆ ಮತ್ತು ಸ್ವಚ್ಛತೆ ಮತ್ತು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿಗೆ ಸಂಬಂಧಿಸಿದೆ. ಈ ಚಟುವಟಿಕೆ ಪುಸ್ತಕಗಳನ್ನು ಬಳಸಿಕೊಂಡು ಶಿಕ್ಷಕರು ಹೇಗೆ ಹೋಗಬಹುದು ಮತ್ತು ಮಕ್ಕಳಿಗೆ ಕಲಿಸಬಹುದು ಎಂಬ ಮಾರ್ಗದರ್ಶಿ ಪುಸ್ತಕವನ್ನು ಇಲಾಖೆಯು ಅಪ್‌ಲೋಡ್ ಮಾಡಿದೆ.


ಇದನ್ನೂ ಓದಿ: ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ! ತಕ್ಷಣ ಅಪ್ಲೈ ಮಾಡಿ


ಪಠ್ಯೇತರ ಚಟುವಟಿಕೆಗೂ ಆಧ್ಯತೆ ನೀಡಬೇಕು. ಮಕ್ಕಳಿಗೆ ಕಲಿಕೆ ಹೊರೆಯಾಗಬಾರದು ಸಂತೋಷದಿಂದ ಶಾಲೆಗೆ ಬರಬೇಕು ಎಂಬುದು ಇದರ ಆಶಯ. ಒಂದರಿಂದ ಹತ್ತನೇ ತರಗತಿ ಮಕ್ಕಳಿಗೆ ನೋ ಬ್ಯಾಗ್​ ಡೇ ಜಾರಿಗೆ ತರಲಾಗಿದೆ. ಪ್ರತಿ ತಿಂಗಳ ಒಂದು ಶನಿವಾರ ಇದನ್ನು ಜಾರಿಗೆ ತರಲಾಗಿದೆ. ಪ್ರತಿ ದಿನವೂ ಪಾಠ, ಪ್ರವಚನ ಬಿಟ್ಟು ಆಟ ಮತ್ತಿನ್ನಿತರ ಚಟುವಟಿಕೆಗೂ ಆಧ್ಯತೆ ನೀಡಬೇಕು ಎಂಬುದು ಇದರ ಆಶಯ. ಈ ಹಿಂದೆ ಯಡಿಯೂರಪ್ಪ ಅವರು ಈ ರೀತಿಯ ಆಲೋಚನೆಯನ್ನು ಜಾರಿಗೆ ತರಬೇಕು ಎಂದು ನಿರ್ಧರಿಸಿದ್ದರು ಆ ಕಲ್ಪನೆ ಇದೀಗ ಜಾರಿಯಾಗುತ್ತಿದೆ.

First published: